1) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 27/2016 ಕಲಂ. 143, 147,
148. 323, 324. 504, 506, R/W 149.IPC
and 3(1), (10) (11) SC/ST PA ACT -1989.
ದಿನಾಂಕ: 13.04.2016 ರಂದು ರಾತ್ರಿ ಶಿಡ್ಲಭಾವಿ ಗ್ರಾಮದಲ್ಲಿ ದೊಡ್ಡಾಟ ಹಮ್ಮಿಕೊಂಡಿದ್ದು
ಇದನ್ನು ನೋಡಲು ಫಿರ್ಯಾಧಿ ಲಕ್ಷ್ಮವ್ವ ಗಂಡ ಗೋವಿಂದಗೌಡ ಪೊಲೀಸ್ ಪಾಟೀಲ್ ವಯ: 28 ವರ್ಷ ಜಾ: ಬೇಡರ
ಸಾ: ಶಿಡ್ಲಬಾವಿ ಹೋದಾಗ 1)ಈರಪ್ಪ ತಂದೆ ಅಂದಪ್ಪ ತಲ್ಲೂರ 2) ಗುಂಡಪ್ಪ ತಂದೆ ಅಂದಪ್ಪ ತಲ್ಲೂರ 3)
ಹನುಮೇಶ ತಂದೆ ಅಂದಪ್ಪ ತಲ್ಲೂರ 4) ಯಮನಪ್ಪ ತಂದೆ ಪರಸಪ್ಪ ತಲ್ಲೂರ 5) ಅಂದಪ್ಪ ತಂದೆ ಈರಪ್ಪ ತಲ್ಲೂರ 6) ಯಮನೂರಪ್ಪ ತಂದೆ ಬೀರಪ್ಪ ಕುಷ್ಟಗಿ 7) ಬೀರಪ್ಪ ಕುಷ್ಟಗಿ
8) ಯಲ್ಲವ್ವ ಗಂಡ ಅಂದಪ್ಪ ತಲ್ಲೂರ 9) ನಾಗಮ್ಮ ಗಂಡ ನೀಲಪ್ಪ 10) ಪಾರವ್ವ ಗಂಡ ನಿಂಗಪ್ಪ 11) ಶರಣಮ್ಮ
ಗಂಡ ಹನಮೇಶ ತಲ್ಲೂರ 12) ಗೌರಮ್ಮ ಗಂಡ ಈರಪ್ಪ ತಲ್ಲೂರ ಹಾಗೂ ಇತರರು ಆರೋಪಿತರೆಲ್ಲರೂ ವಿನಾಕಾರಣ ಫಿರ್ಯಾಧಿ
ಹಾಗೂ ಇವರ ಮನೆಯವರಾದ ಶರಣಪ್ಪ, ದಾನನಗೌಡ, ಜಯರಾಮ
ಹಾಗೂ ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿ ನಿಂದನೆ ಮಾಡಿದ್ದು ಅಲ್ಲದೇ ಆರೋಪಿತರೆಲ್ಲರೂ ಪಿಯರ್ಾದಿದಾರರ
ಮನೆಯವರೆಗೂ ಓಡಿಸಿಕೊಂಡು ಹೋಗಿ ಕೊಡಲಿ, ಕೂಡಗೊಲು, ದೊಣ್ಣೆಗಳನ್ನು ಬಳಸಿ ಕೊಲೆಗೆ ಯತ್ನಿಸಿದ್ದು ಅಲ್ಲದೆ
ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ
ಫಿರ್ಯಧಿ ಸಾರಾಂಶ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 28/2016 ಕಲಂ. 143, 147, 148, 323, 324, 354, 355, 504, 506, ಸಹಿತ
149 ಐ.ಪಿ.ಸಿ.
ದಿನಾಂಕ: 13.04.2016 ರಂದು ರಾತ್ರಿ 11:30 ಗಂಟೆ ಸುಮಾರಿಗೆ ಫಿರ್ಯಾಧಿ ಗುಂಡಪ್ಪ ತಂದೆ
ಅಂದಪ್ಪ ತಲ್ಲೂರ ವಯ:26 ಜಾ: ಕುರಬರ ಉ: ಒಕ್ಕಲುತನ ಸಾ: ಶಿಡ್ಲಭಾವಿ ಹಾಗೂ ತಮ್ಮ ಸಂಬಂದಿಕರೆಲ್ಲರೂ
ತಮ್ಮೂರ ಶಿಡ್ಲಭಾವಿ ಗ್ರಾಮದಲ್ಲಿ ಕುರುಕ್ಷೇತ್ರ ಎಂಬ ಬಯಲಾಟ ನೋಡುತ್ತಾ ಕುಳಿತುಕೊಂಡಿದ್ದಾಗ 1) ಶಂಕ್ರಪ್ಪ ತಂದೆ ಹನಮಪ್ಪ ಅಡವಿಭಾವಿ 2) ಪಾರ್ವತಿ ಗಂಡ ಶಂಕ್ರಪ್ಪ ಅಡವಿಭಾವಿ
3) ಶರಣಪ್ಪ ತಂದೆ ಯಲ್ಲಪ್ಪ ಶಿಡ್ನಳ್ಳಿ 4)ಯಮನೂರಪ್ಪ ತಂ/ರಾಚನಗೌಡ ಪೊಲೀಸ ಪಾಟೀಲ 5)ರಂಗನಗೌಡ ತಂದೆ
ಹನಮಗೌಡ ಪೊಲೀಸ ಪಾಟೀಲ 6)ದಾನನಗೌಡ ತಂದೆ ಹನಮಗೌಡ ಪೊಲೀಸ ಪಾಟೀಲ 7)ಯಂಕನಗೌಡ ತಂ/ಹನಮಗೌಡ ಪೊಲೀಸ ಪಾಟೀಲ
8) ಹನಮಪ್ಪ ತಂದೆ ಹನಮಪ್ಪ ಅಡವಿಭಾಗಿ 9)ಯಲ್ಲಪ್ಪ ತಂದೆ ಕನಕಪ್ಪ ಶಿಡ್ನಳ್ಳಿ 10)ಹನಮವ್ವ ಗಂಡ ಹನಮಪ್ಪ
ಅಡವಿಭಾವಿ 11)ಲಕ್ಷ್ಮವ್ವ ಗಂಡ ಗೋವಿಂದಗೌಡ ಪೊಲೀಸ ಪಾಟೀಲ 12)ಹೊಳಿಯಮ್ಮ ಗಂಡ ರಮೇಶ ತಾಳಕೇರಿ ಸಾ:
ಎಲ್ಲರೂ ಶಿಡ್ಲಭಾವಿ ಆರೋಪಿತರು ಹಾಗೂ ಅವರ ಪೈಕಿ ಶರಣಪ್ಪ ಶಿಡ್ನಳ್ಳಿ ಎಂಬುವನು ಪಟಾಕಿಯನ್ನು ಹಚ್ಚಿ
ಒಗೆದಾಗ ಅದು ಫಿರ್ಯಾಧಿದಾರನ ಅಕ್ಕ ನಾಗಮ್ಮಳ ಹತ್ತಿರ ಬಿದ್ದಾಗ ಅಲ್ಲೆ ಇದ್ದ ಫಿರ್ಯಾಧಿದಾರನು ಸದರಿ
ಶರಣಪ್ಪನಿಗೆ ಪಟಾಕಿಯನ್ನು ಹಚ್ಚಿ ನಮ್ಮ ಅಕ್ಕನ ಹತ್ತಿರ ಯಾಕೆ ಒಗೆದಿ ಜನರು ಇಲ್ಲದ ಕಡೆಗೆ ಪಟಾಕಿಯನ್ನು
ಹಚ್ಚಬೇಕಾಗಿತ್ತು ಅಂತಾ ಅಂದಾಗ ಆರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದಾಡಿ
ಫಿರ್ಯಾಧಿದಾರನಿಗೆ ಮತ್ತು ಜಗಳ ಬಡಿಸಲು ಬಂದ ಪಿಯರ್ಾದಿಯ
ಮಾವ ನಿಂಗಪ್ಪ, ಫಿರ್ಯಾಧಿಯ ಅಕ್ಕ ನಾಗಮ್ಮ, ಫಿರ್ಯಾಧಿಯ ಅಳಿಯಂದಿರಾದ ಯಮನೂರ ತಂದೆ ಪರಸಪ್ಪ ಜರಗಡ್ಡಿ,
ಯಮನೂರಪ್ಪ ತಂದೆ ಬೀರಪ್ಪ ಜರಗಡ್ಡಿ ಇವರೆಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಯಿಂದ ಬಡಿಗೆಯಿಂದ,
ಚಪ್ಪಲಿಯಿಂದ ಹೊಡೆ ಬಡಿ ಮಾಡಿದ್ದು ಅಲ್ಲದೆ ಫಿರ್ಯಾಧಿದಾರಳ ಅಕ್ಕ ನಾಗಮ್ಮಳಿಗೆ ಸೀರೆ ಸೆರಗು ಹಿಡಿದು
ಎಳೆದಾಡಿ ಮಯರ್ಾದೆಗೆ ಧಕ್ಕೆವುಂಟು ಮಾಡಿ ಜೀವದ ಬೇದಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾಧಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ತಾವರಗೇರಾ ಪೊಲೀಸ್
ಠಾಣೆ ಗುನ್ನೆ ನಂ: 36/2016 ಕಲಂ. 457, 380 ಐ.ಪಿ.ಸಿ.
ದಿನಾಂಕ 14-04-2016 ರಂದು ಬೆಳಿಗ್ಗೆ 7-30 ಗಂಟೆಗೆ ಫಿರ್ಯಾಧಿದಾರರಾದ
ಶ್ರೀ ಅಯ್ಯನಗೌಡ ತಂದೆ ಪಂಪನಗೌಡ ಮಾಲಿಪಾಟೀಲ. ವಯ : 60 ವರ್ಷ ಜಾತಿ : ಲಿಂಗಾಯತ. ಉ : ವ್ಯಾಪಾರ ಸಾ
: ತಾವರಗೇರಾ ತಾ : ಕುಷ್ಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಫಿರ್ಯಾಧಿ ನೀಡಿದ್ದು ಸಾರಾಂಶವೇನೆಂದರೆ
ತಾವರಗೇರಾ ಗ್ರಾಮದ ಮೇಘಾ ಬಾರ್ ಹಿಂದೆ ಇರುವ ಫಿರ್ಯಾಧಿದಾರರ ಮದ್ಯದ ಗೋಡಾನ್ನಲ್ಲಿ ಇಟ್ಟಿದ್ದ 48
ಓಲ್ಡ್ ಟಾವರೇನ್ ಮದ್ಯದ ಬಾಕ್ಸಗಳು ಅಂದಾಜು ಕಿಮ್ಮತ್ತು 1,28,640=00 ರೂ.ಗಳು ಬಾಳುವದನ್ನು ಯಾರೋ
ಕಳ್ಳರು ನಿನ್ನೆ ದಿನಾಂಕ: 13-04-2016 ರ ರಾತ್ರಿ 10-00 ಗಂಟೆಯಿಂದ ದಿನಾಂಕ: 14-04-2016 ರ ಬೆಳಗಿನ
6-00 ಗಂಟೆಯ ಅವಧಿಯಲ್ಲಿ ಕಳುವು ಮಾಡಿಕೊಂಡು ಹೋಗಿದ್ದು ಕಾರಣ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ
ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
4) ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 61/2016 ಕಲಂ. 87 Karnataka Police Act.
ಫಿರ್ಯಾಧಿದಾರರಾದ ಶ್ರೀ ಪ್ರಕಾಶ ಮಾಳಿ ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಮತ್ತು
ಪಂಚರು ಕೂಡಿಕೊಂಡು ಇಂದು ದಿನಾಂಕ: 14-04-2016 ರಂದು ಸಾಯಂಕಾಲ 5-00 ಗಂಟೆಗೆ ಠಾಣಾ ವ್ಯಾಪ್ತಿಯ
ಅಳವಂಡಿ ಸೀಮಾದ ಸುರೇಶ ಒಳಗುಂದಿ ಇವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಹಣವನ್ನು
ಕಟ್ಟಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟವನ್ನು ಆಡುತ್ತಿರುವಾಗ ದಾಳಿ ಮಾಡಿದಾಗ 02 ಜನ ಆರೋಪಿತರು
ಸಿಕ್ಕಿದ್ದು, ಒಬ್ಬ ಆರೋಪಿತರು ಓಡಿ ಹೋಗಿದ್ದು ಇರುತ್ತದೆ. ಸಿಕ್ಕ ಆರೋಪಿತರಿಂದ ಜೂಜಾಟಕ್ಕೆ ಬಳಸಿದ
ನಗದು ಹಣ ರೂ. 1,250=00 ಗಳನ್ನು, 52 ಇಸ್ಪೇಟ್ ಎಲೆಗಳನ್ನು, ಹಾಗೂ ಒಂದು ಪ್ಲಾಸ್ಟೀಕ್ ಬರ್ಖಾವನ್ನು
ಜಪ್ತ ಮಾಡಿ ಸ್ಥಳದಲ್ಲಿ ಪಂಚನಾಮೆಯನ್ನು ತಯಾರಿಸಿ ವಾಪಾಸ್ ಠಾಣೆಗೆ ಸಂಜೆ 6-45 ಗಂಟೆಗೆ ಬಂದು ಒಂದು
ವರದಿಯನ್ನು, ಮೂಲ ಪಂಚನಾಮೆ ಮತ್ತು ಮುದ್ದೇಮಾಲನ್ನು ಹಾಗೂ ಆರೋಪಿತರನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು,
ಸದರ ವರದಿಯ ಮತ್ತು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
5) ಗಂಗಾವತಿ
ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ:119/2016 ಕಲಂ. 279, 337, 338 ಐ.ಪಿ.ಸಿ.
ದಿನಾಂಕ:- 14-04-2016 ರಂದು ಬೆಳಿಗ್ಗೆ 10:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಹುಲುಗಪ್ಪ
ತಂದೆ ನಿಂಗಪ್ಪ ಹೊಸಕೇರಾ, ವಯಸ್ಸು 23 ವರ್ಷ, ಜಾತಿ: ಮಾದಿಗ ಉ: ಗೌಂಡಿ ಕೆಲಸ ಸಾ: 3ನೇ ವಾರ್ಡ-ಪ್ರಗತಿನಗರ. ತಾ: ಗಂಗಾವತಿ. ಇವರು ಠಾಣೆಗೆ
ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ನಾನು ಪ್ರಗತಿನಗರ ಗ್ರಾಮದ
ನಿವಾಸಿ ಇದ್ದು ಗೌಂಡಿಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ: 13-04-2016 ರಂದು
ರಾತ್ರಿ 8:30 ಗಂಟೆಯ ಸುಮಾರಿಗೆ ನಾನು, ನನ್ನ ಗೆಳೆಯನಾದ ಸೋಮ ಇವನನ್ನು ನೋಡಲು ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯ ಕಡೆಗೆ
ಬಂದಿದ್ದೆನು. ನಾನು ನಮ್ಮೂರು ಬ್ರಾಂಡಿ ಶಾಪ್ ಹತ್ತಿರ ರಸ್ತೆಯ ಎಡಗಡೆ ನಡೆದುಕೊಂಡು
ಹೋಗುತ್ತಿರುವಾಗ ನನ್ನ ಹಿಂದುಗಡೆ ಅಂದರೆ ಸಿಂಧನೂರು ಕಡೆಯಿಂದ ಒಬ್ಬ ಮೋಟಾರ ಸೈಕಲ್ ಚಾಲಕನು ತನ್ನ
ಮೋಟಾರ ಸೈಕಲ್ ನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ವೇಗ
ನಿಯಂತ್ರಿಸಲು ಆಗದೇ ನನಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನಾನು ಕೆಳಗೆ ಬಿದ್ದು, ನನ್ನ ಬಲಗಡೆ ಹಣೆಗೆ, ಬಲ ಭುಜಕ್ಕೆ, ಬಲಗಾಲಿಗೆ
ಗಾಯಗಳಾದವು. ಅಪಘಾತ ಮಾಡಿದ ಮೋಟಾರ ಸೈಕಲ್ ಚಾಲಕನು ಸಹ ಕೆಳಗೆ ಬಿದ್ದು, ತಲೆ ಹಿಂಭಾಗ ತೀವ್ರ ರಕ್ತ ಗಾಯವಾಗಿ ಬಲಗಡೆ ಕಿವಿ ಕಟ್ಟಾಗಿ ಆತನು
ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಆತನ ಮೋಟಾರ ಸೈಕಲ್ ಹೀರೋ ಹೆಚ್.ಎಫ್.
ಡೀಲಕ್ಸ್ ನಂಬರ್: ಕೆ.ಎ-37/ವೈ-0712 ಅಂತಾ ಇತ್ತು. ಈ ಅಪಘಾತವನ್ನು ನೋಡಿ ಅಲ್ಲಿಯೇ
ಹೊರಟಿದ್ದ ನಾಗರಾಜ ತಂದೆ ರಾಚಪ್ಪ ವಯಸ್ಸು: 28 ವರ್ಷ ಸಾ: ಶ್ರೀರಾಮನಗರ ಎಂಬುವವರು ಬಂದು ನೋಡಿ
ಗಾಯಾಳು ತನ್ನ ಪರಿಚಯಸ್ಥನಿದ್ದು, ಆತನ ಹೆಸರು ಎಂ. ಶಂಭುಲಿಂಗ ತಂದೆ ಎಂ. ನಿಂಗಪ್ಪ ವಯಸ್ಸು: 25 ವರ್ಷ ಜಾತಿ: ಲಿಂಗಾಯತ, ಉ: ಕಾರ್ ಡ್ರೈವರ್ ಸಾ: 5 ನೇ ವಾರ್ಡ-ಶ್ರೀರಾಮನಗರ ಅಂತಾ ಇರುತ್ತದೆ
ಅಂತಾ ತಿಳಿಸಿದನು. ನಂತರ ಗಾಯಾಳು ಶಂಭುಲಿಂಗನನ್ನು 108 ಅಂಬ್ಯುಲೆನ್ಸ್ ವಾಹನಕ್ಕೆ ಪೋನ್
ಮಾಡಿ ಅಂಬ್ಯುಲೆನ್ಸ ಕರೆಯಿಸಿ ಚಿಕಿತ್ಸೆ ಕುರಿತು ಗಂಗಾವತಿ ಕರೆದುಕೊಂಡು
ಹೋದರು. ನಾನು ಮನೆಯಲ್ಲಿಯೇ ವಿಶ್ರಾಂತಿ ಪಡೆದು ಈಗ ತಡವಾಗಿ ಠಾಣೆಗೆ ಬಂದು ಈ ಹೇಳಿಕೆ
ಫಿರ್ಯಾದಿ ನೀಡಿರುತ್ತೇನೆ. ಸದರಿ ಗಾಯಾಳು ಶಂಭುಲಿಂಗನನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಿಂದ
ಹೆಚ್ಚಿನ ಚಿಕಿತ್ಸೆ ಕುರಿತು ಹುಬ್ಬಳ್ಳಿಗೆ ಕರೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಯಿತು. ಕಾರಣ ನನಗೆ ಅಪಘಾತ ಮಾಡಿದ
ಹೀರೋ ಹೆಚ್.ಎಫ್. ಡೀಲಕ್ಸ್ ಮೋಟಾರ ಸೈಕಲ್ ನಂಬರ್: ಕೆ.ಎ-37/ವೈ-0712 ನೇದ್ದರ
ಚಾಲಕ ಶಂಭುಲಿಂಗ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ ನನಗೆ ಚಿಕಿತ್ಸೆ ಕುರಿತು ಕಳುಹಿಸಲು
ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
6) ಗಂಗಾವತಿ
ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 120/2016 ಕಲಂ. 04 ಕರ್ನಾಟಕ ಮಿತಿ ಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ
ಕಾಯ್ದೆ ಮತ್ತು 354, 504 ಐ.ಪಿ.ಸಿ.
ದಿನಾಂಕ: 14-04-2016 ರಂದು ಮಧ್ಯಾಹ್ನ 1:00 ಗಂಟೆಗೆ ಫಿರ್ಯಾದಿದಾರಾದ ಶ್ರೀಮತಿ
ಕಸ್ತೂರೆಮ್ಮ ಗಂಡ ನಾಗಪ್ಪ ಮಡಿವಾಳರ, ವಯಸ್ಸು: 42 ವರ್ಷ ಜಾತಿ: ಮಡಿವಾಳರ, ಉ: ಹೊಲ ಮನೆಕೆಲಸ ಸಾ: 3ನೇ ವಾರ್ಡ ಬಸಾಪಟ್ಟಣ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ
ಗಣಕೀಕರಣ ಮಾಡಿಸಿದ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ನಾನು ಹಾಗೂ ನನ್ನ
ಗಂಡನಾದ ನಾಗಪ್ಪ ತಂದೆ ಬಸಲಿಂಗಪ್ಪ ವಯಸ್ಸು: 48 ವರ್ಷ ಇಬ್ಬರೂ ಕೂಡಿಕೊಂಡು ಮನೆಯ ಅಡಚಣೆ
ಸಲುವಾಗಿ ನಮ್ಮೂರ ಮಂಜುನಾಥ ತಂದೆ ಗೋವಿಂದಪ್ಪ ವಡ್ಡರಹಟ್ಟಿ, 32 ವರ್ಷ ಈತನ ಕಡೆಯಿಂದ ಸುಮಾರು 7-8 ತಿಂಗಳದ ಹಿಂದೆ ರೂ 55,000/- ಗಳನ್ನು ಸಾಲವನ್ನು
ತಿಂಗಳಿಗೆ ರೂಪಾಯಿ 3 ರ ಬಡ್ಡಿಯಂತೆ ಪಡೆದುಕೊಂಡಿದ್ದು ಈ ಸಮಯದಲ್ಲಿ ಮಂಜುನಾಥನು ನಮ್ಮಿಂದ ಒಂದು
ಖಾಲಿ ಪ್ರಾಮಿಸರಿ ನೋಟಿನ ಸಹಿ ಮಾಡಿಕೊಂಡಿದ್ದನು. ನಾವು ಪ್ರತಿ ತಿಂಗಳ ಬಡ್ಡಿ ಕಟ್ಟುತ್ತಾ
ಬಂದಿದ್ದು ನಂತರ ದಿನಾಂಕ: 19-02-2016 ರಂದು ನನ್ನ ತಮ್ಮನಾದ ರಮೇಶ ತಂದೆ ಲಿಂಗಪ್ಪ 32 ವರ್ಷ
ಈತನೊಂದಿಗೆ ಹೋಗಿ ಈ ಮುಂಚೆ ನೀಡಿದ ಬಡ್ಡಿ ಹಣ ರೂ 38,000/- ಗಳನ್ನು ಹೊರತುಪಡಿಸಿ ರೂ 65,000/-
ಗಳನ್ನು ಮಂಜುನಾಥನಿಗೆ ಕೊಟ್ಟು ಬಂದಿದ್ದು ಆದರೆ ಆತನು ಪುನ: ನಮಗೆ ಹೆಚ್ಚಿನ ಬಡ್ಡಿ ಆಸೆಗಾಗಿ
ಇನ್ನೂ 51,000/- ರೂ ಗಳನ್ನು ಕೊಡಬೇಕೆಂದು ನಮ್ಮೊಂದಿಗೆ ಪದೇಪದೇ ಜಗಳ ಮಾಡಲು ಬೆದರಿಸಲು
ಪ್ರಾರಂಬಿಸಿದನು. ದಿನಾಂಕ: 10-04-2016 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮನೆಯ ಹತ್ತಿರ ಬಂದು ನನ್ನ
ಗಂಡನಿಂದ ಇಲ್ಲಿಯೇ ಹೋಗಿ ಬರುವದಾಗಿ ಹೇಳಿ ಸ್ವಲ್ಪ ಹೊತ್ತು ಗಾಡಿ ಕೊಡು ಅಂತಾ ಕೇಳಿ ನನ್ನ ಮಗನ
ಹೆಸರಿನಲ್ಲಿರುವ ಬಜಾಜ ಪಲ್ಸರ್ ಮೋಟಾರ ಸೈಕಲ ನಂ: ಕೆ.ಎ.-37/ವೈ-3741 ನೇದ್ದನ್ನು ತಗೆದುಕೊಂಡು
ಹೋದನು. ಆದರೆ ನಂತರ ಗಾಡಿಯನ್ನು ವಾಪಸ್ಸು ತಂದು ಕೊಡದೇ ಇದ್ದು ನಿನ್ನೆ ದಿನಾಂಕ: 13-04-2016
ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮಂಜುನಾಥ ಈತನು ನಮ್ಮ ಮನೆಯ ಹತ್ತಿರ ಬಂದು ಬಡ್ಡಿ ಹಣ
ಕೊಡಬೇಕೆಂದು ಒತ್ತಾಯಿಸಿ ಬಾಯಿಗೆ ಬಂದಂತೆ ಲೇ ಸೂಳೆ ಮಕ್ಕಳಾ ಸಾಲ ತಗೆದುಕೊಂಡು ವಾಪಸ್ಸು ಕೊಡಲು
ಆಗುವದಿಲ್ಲವೇನು ಅಂತಾ ಅವಾಚ್ಯವಾಗಿ ಬೈದಿದ್ದು ಅದಕ್ಕೆ ನಾನು ಎಲ್ಲಾ ಸಾಲವನ್ನು ವಾಪಸ್ಸು
ಕೊಟ್ಟರೂ ಗಾಡಿಯನ್ನು ತಗೆದುಕೊಂಡು ಹೋಗಿದ್ದಿಯಾ ಗಾಡಿಯನ್ನು ವಾಪಸ್ಸು ಕೊಡು ಅಂತಾ ಹೇಳಿದ್ದಕ್ಕೆ
ಲೇ ಬೊಸುಡೀ ಅದನ್ನೇನು ಕೇಳುತ್ತಿಯಾ ಅಂತಾ ಬೈದು ನನ್ನ ಕೂದಲು ಹಿಡಿದು ಎಳೆದಾಡಿ ಮೈಕೈ ಮುಟ್ಟಿ
ಮಾನಬಂಗ ಮಾಡಿರುತ್ತಾನೆ. ಆಗ ಅಲ್ಲಿಯೇ ಇದ್ದ ನನ್ನ ಗಂಡ ಮಗ ರಾಜಶೇಖರ, ಮಹಿಬೂಬ ತಂದೆ ಬುಡನಸಾಬ ಮಣ್ಣೂರ ಇವರುಗಳು ಬಂದು ಆತನಿಗೆ ಬುದ್ದಿವಾದ ಹೇಳಿ ಕಳುಹಿಸಿದರು. ಈ
ಬಗ್ಗೆ ಮನೆಯಲ್ಲಿ ಚೆಚರ್ಿಸಿ ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು
ಸಲ್ಲಿಸಿರುತ್ತೇನೆ. ಕಾರಣ ಹೆಚ್ಚಿನ ಬಡ್ಡಿ ಆಸೆಗಾಗಿ ನಮ್ಮೊಂದಿಗೆ ಜಗಳ ಮಾಡಿ ಮೋಟಾರ ಸೈಕಲ
ತಗೆದುಕೊಂಡು ಹೋದಾಗ ಕೇಳಿದ್ದಕ್ಕೆ ಅವಾಚ್ಯವಾಗಿ ಬೈದಾಡಿ ಮೈಕೈ ಮುಟ್ಟಿ ಮಾನಭಂಗ ಮಾಡಿದ
ಮಂಜುನಾಥನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
7) ಗಂಗಾವತಿ
ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂ: 121/2016 ಕಲಂ. 279, 338 ಐ.ಪಿ.ಸಿ.
ದಿನಾಂಕ:- 14-04-2016 ರಂದು ಸಂಜೆ 7:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ
ವಿಚಾರಣೆ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಲ್ಲಿಕಾರ್ಜುನ ತಂದೆ ಸಿದ್ರಾಮಪ್ಪ, ವಾಗಮೋಡೆ, ವಯಸ್ಸು 40 ವರ್ಷ, ಜಾತಿ: ಮರಾಠ ಉ: ಬಾಂಡೆ ಸಾಮಾನು ವ್ಯಾಪಾರ ಸಾ: ಜಾನೂರು ರೋಡ್, ಕಂಪ್ಲಿ ತಾ: ಹೊಸಪೇಟೆ ಇವರ ನುಡಿ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ." ಇಂದು ದಿನಾಂಕ:- 14-04-2016 ರಂದು ನಾನು ಆಟೋದಲ್ಲಿ ಕಂಪ್ಲಿಯಿಂದ
ಗಂಗಾವತಿ ಬರುತ್ತಿರುವಾಗ ದಾರಿಯಲ್ಲಿ ಸಂಜೆ 6:15 ಗಂಟೆಯ ಸುಮಾರಿಗೆ ವಿನೋಭನಗರದಲ್ಲಿ ಆಟೋದಲ್ಲಿ ನನ್ನ ಪಕ್ಕ ಕುಳಿತುಕೊಂಡಿದ್ದ ಒಬ್ಬ ಪ್ರಯಾಣಿಕ ಆಟೋದಿಂದ
ಇಳಿಯುತ್ತಿರುವಾಗ ನಾನು ಅವರಿಗೆ ದಾರಿ ಬಿಡಲು ಆಟೋದಿಂದ ಇಳಿದು ಕೆಳಗೆ ನಿಂತಾಗ ನಮ್ಮ ಹಿಂದೆ
ಕಂಪ್ಲಿ ಕಡೆಯಿಂದ ಬರುತ್ತಿದ್ದ ಹಿರೋಹೋಂಡಾ ಸ್ಪ್ಲೆಂಡರ್ + ಮೋಟಾರ ಸೈಕಲ್ ನಂ: ಕೆ.ಎ-37/ ಎಸ್-6555 ನೇದ್ದನ್ನು ಅದರ ಚಾಲಕ ವಿರುಪಾಕ್ಷಿ ಗೌಡ ತಂದೆ ಜಂಬುಲಿಂಗನಗೌಡ ಸಾ: ಹಿರೇಜಂತಕಲ್, ಗಂಗಾವತಿ ಇತನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದು ಒಮ್ಮೆಲೇ ನನಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ನನ್ನ ಎಡಗಾಲ
ಮೊಣಕಾಲ ಕೆಳಗೆ ಎಲುಬು ಮುರಿದು ತೀವ್ರ ಒಳಪೆಟ್ಟಾಯಿತು. ನಂತರ ನಾನು ಬಂದಿದ್ದ ಆಟೋ ಚಾಲಕ ಬಷೀರ್ ಸಾ: ಕಂಪ್ಲಿ ಈತನು ನನ್ನನ್ನು ಅದೇ ಆಟೋದಲ್ಲಿಯೇ ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದನು. ಕಾರಣ ಈ ಅಪಘಾತ ಮಾಡಿದ ಮೋ.ಸೈ. ಚಾಲಕ ವಿರುಪಾಕ್ಷಿಗೌಡನ
ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ನೀಡಿದ ಹೇಳಿಕೆ ಪಡೆದು ರಾತ್ರಿ 8:00 ಗಂಟೆಗೆ ಠಾಣೆಗೆ ಬಂದು ಹೇಳಿಕೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
8) ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ: 87/2016 ಕಲಂ. 406, 408, 468, 417, 420 ಐ.ಪಿ.ಸಿ.
ಆರೊಪಿತ ಚಿನ್ನ ಓಬಳೇಶ ಈತನು ಮುನಿರಾಬಾದ ಶ್ರೀ ಲಕ್ಷ್ಮಿ ಮೊಟಾರ ಸರ್ವಿಸ್ ಪ್ರೈ.ಲೀ ಐಚರ ಅಥರೈಜ್ಡ ಡಿಲರ್ಸ ಕಂಪನಿಯಲ್ಲಿ ಕ್ಯಾಶೀಯರ ಅಂತಾ ಕೆಲಸ ಮಾಡುತ್ತಿದ್ದು ಸದರ ಆರೋಪಿತನು ಕಂಪನಿಯಲ್ಲಿ ಯಾವುದೇ ದಾಖಲಾತಿಗಳನ್ನು ಮತ್ತು ಬಿಲ್ಲುಗಳನ್ನು ಸರಿಯಗಿ ನಿರ್ವಹಿಸದೆ ಕೆಲವೊಂದು ಬಿಲ್ಲುಗಳಿಗೆ ಕಂಪನಿಯಲ್ಲಿನ ನೌಕರರು ಸಹಿ ಮಾಡಿದಂತೆ ತಾನೆ ಬಿಲ್ಲಿಗೆ ಪೊರ್ಜರಿ ಸಹಿ ಮಾಡಿ ಮತ್ತು ಕೆಲವೊಂದು ಸುಳ್ಳು ಬಿಲ್ಲುಗಳನ್ನು ತಯಾರಿಸಿ ಹಣ ಲಪಟಾಯಿಸಿದ್ದು ಅಲ್ಲದೆ ವಾಹನಗಳಿಗೆ ಇಂಧನ ಖರಿದಿಸಿದಾ? ಬಂಕ ಬಿಲ್ಲುಗಳನ್ನು ತಿದ್ದುಪಡಿ ಮಾಡಿದ್ದು ಮತ್ತು ವಾಹನದ ಬಿಡಿಬಾಗಗಳನ್ನು ಕಂಪನಿ ಬೆಲೆಯನ್ನು ತಿದ್ದು ಪಡಿ ಬಿಲ್ಲು ನಿಡಿ ವ್ಯತ್ಯಾಸದ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ಒಟ್ಟು ರೂ, 12,39,830-00 ಗಳನ್ನು ಆರೋಪಿತನು ಕಂಪನಿಗೆ ಅಪರಾಧ ನಂಬಿಕೆ ದ್ರೋಹ ಮಾಡಿ ಸ್ವಂತಕ್ಕೆ ಬಳಸಿಕೊಂಡು ಕಂಪನಿಗೆ ಮೋಸ ಮಾಡಿರುತ್ತಾರೆ ಅಂತಾ ಮುಂತಾಗಿ ಫಿರ್ಯಾಧಿ ಸಾರಾಂಶದ
ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
9) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 74/2016 ಕಲಂ.
498 (ಎ), ಐ.ಪಿ.ಸಿ. & 03 & 04 ಡಿ.ಪಿ. ಆಕ್ಟ್ 1961.
ದಿನಾಂಕ 14-04-2016 ರಂದು 13-30 ಗಂಟೆಗೆ ಶ್ರೀಮತಿ ಚಂದನಾ @ ರಜನಿ ಗಂಡ ಈ.ಎನ್. ಬೈರೇಶ ವಯಾ: 24 ವರ್ಷ ಜಾ: ಈಡಿಗ ಉ: ಮನೆ ಕೆಲಸ ಸಾ: ದಾವಣಗೇರಿ ಹಾ:ವ : ಎಸ್.ಬಿ.ಹೆಚ್. ಕಾಲೋನಿ, ಗಂಗಾವತಿ ರವರು ಠಾಣೆಗೆ ಬಂದು
ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಈಗ್ಗೆ ಸುಮಾರು 05 ವರ್ಷಗಳಿಂದ ಫಿರ್ಯಾದಿದಾರಳ ಮದುವೆಯು ಇ.ಎನ್.ಭೈರೇಶ ತಂದೆ ಎ.,ಇ.ನರಸಪ್ಪ
ಇವರೊಂದಿಗೆ ಆಗಿರುತ್ತದೆ. ಮದುವೆ ನಂತರ ಫಿರ್ಯಾದಿದಾರಳು ಸಂಸಾರ ಮಾಡಲು ವಿದ್ಯಾನಗರ
ದಾವಣಗೆರೆಯಲ್ಲಿರುವ ಗಂಡನ ಮನೆಗೆ ಹೋಗಿದ್ದು, ಗಂಡನ ಮನೆಯಲ್ಲಿ ಸುಮಾರು ಒಂದುವರೆ ವರ್ಷದವರೆಗೆ
ಫಿರ್ಯಾದಿಯನ್ನು ಚೆನ್ನಾಗಿ ನೋಡಿಕೊಂಡಿದ್ದು, ನಂತರ ಫಿರ್ಯಾದಿದಾರಳ ಮಗುವನ್ನು ನಾದಿನಿ
ಲಕ್ಷ್ಮಿದೇವಿ ಇಕೆಗೆ ದತ್ತಕ್ಕೆ ಕೊಡಬೇಕೆಂದು ಹೇಳಿದ್ದು ಫಿರ್ಯಾದಿಯು ಇದಕ್ಕೆ ಒಪ್ಪದಿದ್ದಕ್ಕೆ
ಆರೋಪಿತರಾದ ಫಿರ್ಯಾದಿದಾರಳ ಗಂಡ ಇ.ಎನ್.ಭೈರೇಶ, ಮಾವ ಎ.ಇ.ನರಸಪ್ಪ, ಅತ್ತೆ ನಾಗರತ್ನ, ನಾದಿನಿ
ಲಕ್ಷ್ಮಿದೇವಿ ಮತ್ತು ಮೈದುನ ಶ್ರೀನಿಧಿ ಇವರೆಲ್ಲರೂ ಕೂಡಿಕೊಂಡು ವಿನಾ:ಕಾರಣವಾಗಿ
ಫಿರ್ಯಾದಿದಾರಳಿಗೆ ನಿನಗೆ ಮನೆಗೆಲಸ ಮಾಡಲು ಬರುವುದಿಲ್ಲ ತವರು ಮನೆಯಿಂದ ಏನು
ತಂದಿರುವುದಿಲ್ಲವೆಂದು ತವರು ಮನೆಗೆ ಹೋಗಿ ಬಂಗಾರದ ಬಟ್ಟಲು, ಚಮಚ, ಗ್ಲಾಸ್ ತರಬೇಕೆಂದು
ಒತ್ತಾಯಿಸುತ್ತಾ ಅವಾಚ್ಯವಾಗಿ ಬೈದಾಡುತ್ತಾ ಹೊಡಿ-ಬಡಿ ಮಾಡಿದ್ದು ಅಲ್ಲದೇ ಆರೋಪಿತರ ಕಿರುಕುಳ
ತಾಳಲಾರದೆ ಫಿರ್ಯಾದಿಯು ಒಂದು ಸಾರಿ 50,000-00 ರೂ. ಗಳನ್ನು ಕೊಟ್ಟಿದ್ದು ಇರುತ್ತದೆ.
ದಿನಾಂಕ 21-02-2016 ರಂದು ಫಿರ್ಯಾದಿಯನ್ನು ಅವರ ತಂದೆ-ತಾಯಿ ಕರೆಯಲು ದಾಗ ಅವರೊಂದಿಗೆ
ಕಳುಹಿಸಿಕೊಡದೆ ಜಗಳ ಮಾಡಿ ಕಳಿಸಿ ಫಿರ್ಯಾದಿಯನ್ನು ಮನೆಯಲ್ಲಿಯೇ ಒಂದು ರೂಮಿನಲ್ಲಿ ಕೂಡಿ
ಹಾಕಿದ್ದು, ನಂತರ ದಿನಾಂಕ 28-02-2016 ರಂದು ಪುನ: ಫಿರ್ಯಾದಿಯ ತಂದೆ-ತಾಯಿ ಹಾಗೂ ಸಂಬಂಧಿಕರು
ದಾವಣಗೆರೆಯಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಪೊಲೀಸರ ಸಹಾಯದಿಂದ ಫಿರ್ಯಾದಿಯನ್ನು ಮತ್ತು
ಫಿರ್ಯಾದಿಯ ಮಗನನ್ನು ಕರೆದುಕೊಂಡು ಬಂದಿರುತ್ತಾರೆ. ಆರೋಪಿತರೆಲ್ಲರೂ ಕೂಡಿಕೊಂಡು
ಫಿರ್ಯಾದಿಯ ಮಗುವನ್ನು ದತ್ತಕ್ಕೆ ಕೊಡುವಂತೆ ಹಾಗೂ ತವರು ಮನೆಯಿಂದ ಬಂಗಾರ ಬಟ್ಟಲು, ಚಮಚ,
ಗ್ಲಾಸ್ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಾ ಹೊಡಿ-ಬಡಿ ಮಾಡಿದ್ದರಿಂದ ಸದರಿಯವರ ಮೇಲೆ
ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
10) ಯಲಬುರ್ಗಾ ಪೊಲೀಸ್
ಠಾಣೆ ಗುನ್ನೆ ನಂ: 36/2016 ಕಲಂ. 279, 337, 338 ಐ.ಪಿ.ಸಿ.
ದಿನಾಂಕ: 14-04-2016 ರಂದು ರಾತ್ರಿ 7-50 ಗಂಟೆ
ಸುಮಾರಿಗೆ ಪಿರ್ಯಾದಿದಾರರು ತಮ್ಮ ಮೋಟಾರ ಸೈಕಲ ನಂ ಕೆ.ಎ-26/ಕೆ-6778 ನೇದ್ದರಲ್ಲಿ ತೋಟಯ್ಯ
ವಿರಕ್ತಮಠರವರೊಂದಿಗೆ ಕರಮುಡಿ ಗ್ರಾಮದಿಂದ ಶ್ರೀ ಗವಿಸಿದ್ದೇಶ್ವರ ಸ್ವಾಮಿಜಿಯವರ ಆದ್ಯಾತ್ಮಿಕ
ಪ್ರವಚನ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಕರಮುಡಿ ಗ್ರಾಮದಿಂದ ಮುಧೋಳ ಮಾರ್ಗವಾಗಿ ಸಂಗನಾಳ
ಗ್ರಾಮಕ್ಕೆ ಮುಧೋಳ ಯಲಬುರ್ಗಾ ರಸ್ತೆಯ ಮೇಲೆ ಮುಧೋಳ ಸೀಮಾದಲ್ಲಿ ಚಂದಮ್ಮ ನದಾಫ ಇವರ ಹೊಲದ
ಹತ್ತಿರ ಬರುತ್ತಿರುವಾಗ ಅದೇ ಸಮಯಕ್ಕೆ ಯಲಬುರ್ಗಾ ಕಡೆಯಿಂದ ಮುಧೊಳ ಕಡೆಗೆ ಆರೋಪಿತನಾದ ಮಲ್ಲಪ್ಪ
ತಂದೆ ಬಸಪ್ಪ ಕುಂಬಾರ ಸಾ: ಹಿರೇಗೊಣ್ಣಾಗರ ತಾ: ಕುಷ್ಟಗಿ ಈತನು ತಾನು ನಡೆಸುತ್ತಿದ್ದ ಮೋಟಾರ್
ಸೈಕಲ ನಂ ಕೆ.ಎ-37/ಈಎ-1190 ನೇದ್ದನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು
ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ (ಸ್ಕಿಡ್ ಆಗಿ) ರಸ್ತೆಯ ಮೇಲೆ ಬಿದ್ದಿದ್ದು, ಇದರಿಂದ ಆರೋಪಿತನ
ತಲೆಗೆ ಒಳಪೆಟ್ಟಾಗಿದ್ದು, ಬಲ ಹಣೆಯ ಮೇಲೆ, ತೆರಚಿದ ನಮೂನೆಯ ಗಾಯ,
ಗದ್ದಕ್ಕೆ ಭಾರಿ ಸ್ವರೂಪದ ಗಾಯವಾಗಿದ್ದು, ಎಡಗೈ ಮೊಣಕೈ ಕೆಳಗೆ, ಎರಡೂ ಮೊಣಕಾಲ ಚಿಪ್ಪಿನ ಹತ್ತಿರ
ತೆರಚಿದ ನಮೂನೆಯ ಗಾಯವಾಗಿರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
11) ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ: 118/2016 ಕಲಂ. 279, 337, 304(ಎ)
ಐ.ಪಿ.ಸಿ.
ದಿನಾಂಕ:14-04-2016 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಪಿರ್ಯಾದಿದಾರನಾದ ನಿರೂಪಾದಪ್ಪ
ತಂದೆ ಕುಂಟೆಪ್ಪ ಯಲಿಗಾರ ವಯಾ 26 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಬೋದೂರ ಈತನು
ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರಿ ಸಾರಾಂಶವೆನೆಂದರೆ ಇಂದು ದಿನಾಂಕ:14-04-2016
ರಂದು ನಮ್ಮ ಅಳಿಯನಾದ ಅಂದರೆ ನನ್ನ ಹೆಂಡತಿಯಾದ ಶರಣಮ್ಮಳ ತಮ್ಮನಾದ ಹೊಳಿಯಪ್ಪ ಬಿಂಗಿ ಈತನು ಹೊಸೂರ
ಗ್ರಾಮದಿಂದ ನಮ್ಮೂರ ಬೋದೂರ ಗ್ರಾಮಕ್ಕೆ ಸಾಯಂಕಾಲ ತನ್ನ ಮೋ.ಸೈ.ನಲ್ಲಿ ಬಂದು ನಮಗೆ ತನ್ನ ಮದುವೆಯು
ದಿನಾಂಕ:17-04-2016 ರಂದು ಇದೆ ಕಾರಣ ಮದುವೆಗೆ ತನ್ನ ಅಕ್ಕಳಾದ ಶರಣಮ್ಮ ರವರನ್ನು ತನ್ನ ಮೋಟಾರ ಸೈಕಲ್
ಮೇಲೆ ಕರೆದುಕೊಂಡು ಹೋಗುತ್ತೇನೆ ಅಂತಾ ಹೇಳಿ ಸಂಜೆ 06-00 ಗಂಟೆಯ ಸುಮಾರಿಗೆ ಕುಷ್ಟಗಿ ಮಾರ್ಗವಾಗಿ
ನನ್ನ ಹೆಂಡತಿ ಶರಣಮ್ಮ ಮತ್ತು ನನ್ನ ಮಗ ಕುಮಾರನನ್ನು ಕರೆದುಕೊಂಡು ಹೋದನು. ನಂತರ ಪೋನ್ ಮುಖಾಂತರ
ನನ್ನ ಅಳಿಯನಾದ ಹೊಳಿಯಪ್ಪ ಈತನು ನನಗೆ ವಿಷಯ ತಿಳಿಸಿದ್ದೇನೆಂದರೆ, ಸದರಿಯವರು ಬೋದೂರ ದಿಂದ ಕುಷ್ಟಗಿಗೆ
ಬಂದು ಕೆಲವು ಮದುವೆ ಸಾಮಾನು ಖರೀದಿಸಿ ನಂತರ ಕುಷ್ಟಗಿ ಯಿಂದ ಹೊಸೂರು ಕಡೆಗೆ ಹೋಗುವಾಗ ಸರ್ಕ್ಯೂಟ
ಹೌಸ ಹತ್ತಿರ ರಾತ್ರಿ 07-30 ಗಂಟೆಯ ಸುಮಾರಿಗೆ ಬೈಕಿನಿಂದ ಪುಟಿದು ಬಿದ್ದು ಅಪಘಾತವಾಗಿದ್ದು ಶರಣಮ್ಮಳಿಗೆ
ಬಲ ತಲೆಗೆ ಭಾರಿ ರಕ್ತಗಾಯವಾಗಿ ಬಾಯಿ ಮತ್ತು ಮೂಗಿನಿಂದ ರಕ್ತ ಬಂದಿದ್ದು. ಬಲ ಹಣೆಗೆ ತರಚಿದ
ಗಾಯ, ಬಲಗೈ ಮುಂಗೈಗೆ ತರಚಿದ ಗಾಯ, ಮೊಣಕೈಗೆ ತರಚಿದ ಗಾಯ, ಭುಜಕ್ಕೆ ತರಚಿದ ಗಾಯ, ಎರಡೂ ಮೊಣಕಾಲುಗಳಿಗೆ
ತರಚಿದ ಗಾಯ, ಎಡಗಾಲ ಉಂಗುರ ಬೆರಳಿಗೆ ತರಚಿದ ಗಾಯ, ಎಡ ಬೆನ್ನಿಗೆ ತರಚಿದ ಗಾಯಗಳಾಗಿದ್ದು ಮತ್ತು ಕುಮಾರನಿಗೆ
ಬಲ ಹಣೆಗೆ ಮತ್ತು ಎರಡೂ ಮೊಣಕೈ ಗಳಿಗೆ ತರಚಿದ ಗಾಯಗಳಾಗಿದ್ದು, ಸದರಿಯವರನ್ನು ಚಿಕಿತ್ಸೆ ಕುರಿತು
ಕುಷ್ಟಗಿ ಸರಕಾರಿ ಆಸ್ಪತ್ರೆ ಗೆ ಕರೆದುಕೊಂಡು ಬಂದಿದ್ದು, ಸದರಿ ಶರಣಮ್ಮಳು ಚಿಕಿತ್ಸೆ ಫಲಕಾರಿ ಯಾಗದೇ
ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ನಮ್ಮ ತಾಯಿ ಶಂಕ್ರಮ್ಮ ಮತ್ತು ನನ್ನ ಅಣ್ಣನಾದ
ರಮೇಶ ಕೂಡಿಕೊಂಡು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ನೋಡಿ ವಿಚಾರಿಸಲಾಗಿ ವಿಷಯ ನಿಜ ಇರುತ್ತದೆ.ಸದರಿ
ನನ್ನ ಅಳಿಯನಾದ ಹೊಳಿಯಪ್ಪ ಈತನು ತಮ್ಮ ಹಿರೋ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ ನಂ: ಕೆ.ಎ.37/ಡಬ್ಲೂ-7141
ನೇದ್ದರಲ್ಲಿ ಕುಷ್ಟಗಿ ದಿಂದ ಹೊಸೂರ ಕಡೆಗೆ ಹೋಗುವಾಗ ಕುಷ್ಟಗಿಯ ಸರ್ಕಿಟ್ ಹೌಸ್ ಹತ್ತಿರ ಅತಿವೇಗವಾಗಿ
ಮತ್ತು ಅಲಕ್ಷತನದಿಂದ ಮೋ.ಸೈ. ನಡೆಯಿಸಿ ರಸ್ತೆಯಲ್ಲಿನ ಯಾವುದೋ ಒಂದು ಕಲ್ಲಿನ ಮೇಲೆ ಅಥವಾ ಸಣ್ಣ ತಗ್ಗಿನಲ್ಲಿ
ನಡೆಯಿಸಿ ಗಲಕಿ ಮಾಡಿದ್ದರಿಂದ ನನ್ನ ಹೆಂಡತಿಯಾದ ಶರಣಮ್ಮ ಮತ್ತು ನನ್ನ ಮಗನಾದ ಕುಮಾರ ರವರು ಮೋ.ಸೈ.
ಮೇಲಿಂದ ಪುಟಿದು ಕೆಳಗೆ ಬಿದ್ದಿದ್ದು ಅದರಿಂದ ಶರಣಮ್ಮಳು ತೀವ್ರ ಗಾಯಗೊಂಡು ಮೃತಪಟ್ಟಿದ್ದು ಹಾಗೂ
ನನ್ನ ಮಗನಾದ ಕುಮಾರನು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಕಾರಣ ಸದರಿ ಹೊಳಿಯಪ್ಪನ ವಿರುದ್ದ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
12) ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ: 80/2016 ಕಲಂ. 279, 304(ಎ) ಐ.ಪಿ.ಸಿ.
ದಿ:15.04.2016
ರಂದು ರಾತ್ರಿ
02.30 ಎ.ಎಂ ಕ್ಕೆ ಫಿರ್ಯಾದಿದಾರರಾದ ಶ್ರೀಮತಿ
ವಿಶಾಲಾಕ್ಷಿ ಗಂಡ ಶರಣಪ್ಪ ಉಳ್ಳಾಗಡ್ಡಿ ಸಾ: ವೀರಾಪುರ ಹಾ:ವ: ಬಿ.ಟಿ.ಪಾಟೀಲ್ ನಗರ, ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:14.04.2016 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಫಿರ್ಯಾದಿದಾರರ ಗಂಡ ಮೃತ ಶರಣಪ್ಪ ಉಳ್ಳಾಗಡ್ಡಿ
ಈತನು ತನ್ನ ಅಳಿಯ ಶಿವರಾಜ ಈತನ ಮದುವೆ ಕಾರ್ಡನ್ನು ಕೊಡಲು ಸಂಬಂಧಿಕರ ಊರಿಗೆ ಹೋಗಿ ವಾಪಸ್ ಊರಿಗೆ
ಅಂತಾ ತನ್ನ ಮೋಟಾರ ಸೈಕಲ್ ನಂ: ಕೆಎ-36/ಕೆ-5535 ನೇದ್ದನ್ನು ಓಡಿಸಿಕೊಂಡು ಕೊಪ್ಪಳ ಗದಗ ರಸ್ತೆಯಲ್ಲಿ ಹಲಗೇರಿ
ದಾಟಿ ಕೊಪ್ಪಳ ಕಡೆಗೆ ಗುಳಗಣ್ಣವರ ಕಾಲೇಜ ಹತ್ತಿರ ಬರುವಾಗ ದುರುಗಡೆಯಿಂದ ಅಂದರೆ ಕೊಪ್ಪಳ ಕಡೆಯಿಂದ
ಲಾರಿ ನಂ: ಕೆಎ-30/ಎ1055 ನೇದ್ದರ ಚಾಲಕ ಸೈಯದ್ ಗೌಸ್ ತಂದೆ ಸೈಯದ್ ಹೈದರಅಲಿ ಸಾ:
ಅಂಕೋಲಾ ಈತನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಮೃತ ಶರಣಪ್ಪ ಉಳ್ಳಾಗಡ್ಡಿ ಈತನ ಮೋಟಾರ
ಸೈಕಲ್ಲಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಶರಣಪ್ಪನಿಗೆ ತಲೆಗೆ ಮತ್ತು
ಎಡಕಣ್ಣ ಹತ್ತಿರ ಮತ್ತು ಹಣೆಗೆ ಭಾರಿ ರಕ್ತಗಾಯ ಮತ್ತು ಮೈಕೈಗೆ ಅಲ್ಲಲ್ಲಿ ಒಳಪೆಟ್ಟಾಗಿ
ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಕಾರಣ ಸದರಿ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment