1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 121/2016
ಕಲಂ: 78(3) Karnataka Police Act
ದಿನಾಂಕ: 19-04-2016 ರಂದು ರಾತ್ರಿ 7-45
ಗಂಟೆಗೆ ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ ರವರು
ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಪಿ.ಎಸ್.ಐ. ಠಾಣೆಯಲ್ಲಿದ್ದಾಗ ಸಂಜೆ
5-30 ಗಂಟೆಗೆ ಕುಷ್ಟಗಿ ಠಾಣಾ ವ್ಯಾಪ್ತಿಯ ಟೆಂಗುಂಟಿ
ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಮಟ್ಕಾ
ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಬಂದಿದ್ದು ಆಗ ಪಂಚರಾದ 1) ರಮೇಶ
ತಂದೆ ಹುಸೇನಪ್ಪ ಬಾಲಗವಿ ವಯ: 31 ವರ್ಷ, ಜಾ: ಸಮಗಾರ ಉ: ಚಪ್ಪಲಿ ವ್ಯಾಪಾರ ಸಾ: ತೆಗ್ಗಿನ ಓಣಿ ಕುಷ್ಟಗಿ 2] ಮಹ್ಮದ
ಸಾಬ ತಂದೆ ಖಾಸಿಂಸಾಬ ಗೈಬಣ್ಣನವರ ವಯಾ: 26 ವರ್ಷ ಜಾತಿ: ಮುಸ್ಲಿಂ ಉ: ಡ್ರೈವರ್ ಕೆಲಸ ಸಾ: ವಿದ್ಯಾನಗರ
ಕುಷ್ಟಗಿ ರವರನ್ನು ಠಾಣೆಗೆ
ಬರಮಾಡಿಕೊಂಡು ವಿಷಯ ತಿಳಿಸಿ ಹಾಗೂ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ-63, ಪಿ.ಸಿ-109,24 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಕೂಡಿ ಸರಕಾರಿ ಜೀಪನಲ್ಲಿ ಠಾಣೆಯಿಂದ 5-45
ಪಿ.ಎಂ ಗೆ ಟೆಂಗುಂಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ನೀರಿನ
ಟ್ಯಾಂಕ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ
ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ
ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ
ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ತುಳಜಣ್ಣಸಾ ತಂದೆ ದೊಡ್ಡುಸಾ ಮಸ್ಕಿನ್ ವಯಾ: 40
ವರ್ಷ ಜಾತಿ: ಸಾವಜಿ ಉ: ವ್ಯಾಪಾರ ಸಾ: ಟೆಂಗುಂಟಿ
ಅಂತಾ ಹೇಳಿದ್ದು ಹಾಗೂ ಸದರಿಯವರು ಜನರಿಂದ
ಹಣ ಪಡೆದು 1 ರೂಪಾಯಿಗೆ
80 ರೂಪಾಯಿ
ಕೊಡುವುದಾಗಿ ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ
ಮಾಡಿದಾಗ ಮಟಕಾ ಜೂಜಾಟದ ಹಣ 2100=00 ರೂಪಾಯಿ ನಗದು ಹಣ, ಒಂದು ಲಾವಾ ಕಂಪನಿಯ ಮೊಬೈಲ್ ಅಂ. ಕಿ.
300-00 ರೂ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಚೀಟಿ ಇವುಗಳನ್ನು ಜಪ್ತ
ಪಡಿಸಿದ್ದು. ಸದರಿ ಮಟಕಾ ಪಟ್ಟಿಯನ್ನು ನರಸಪ್ಪ ತಂದೆ ಶಿವಪ್ಪ ನೇಕಾರ
ವಯಾ: 42 ವರ್ಷ ಜಾತಿ : ನೇಕಾರ ಉ: ಬಿ.ಎಸ್.ಎನ್.ಎಲ್. ಆಪೀಸ್ ನಲ್ಲಿ ದಿನಗೂಲಿ ನೌಕರ ಸಾ: ಕಟ್ಟೆ
ದುರ್ಗಮ್ಮನ ಗುಡಿ ಹತ್ತಿರ ಕುಷ್ಟಗಿ ಇವರಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ. ಈ ಪಂಚನಾಮೆಯನ್ನು ದಿನಾಂಕ: 19-04-2016 ರಂದು ಸಂಜೆ
6-15 ರಿಂದ 7-00 ರವರೆಗೆ ಬರೆದು
ಮುಗಿಸಲಾಯಿತು. ನಂತರ
ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 30/2016 ಕಲಂ: 279, 337, 338 ಐ.ಪಿ.ಸಿ
ದಿನಾಂಕ: 19.04.2016 ರಂದು ಬೆಳಗಿನಜಾವ 04:30 ಗಂಟೆ ಸುಮಾರಿಗೆ ಹೊಸಪೆಟ-ಕುಷ್ಠಗಿ ಎನ್.ಹೆಚ್.50
ಒಮ್ಮುಖ ರಸ್ತೆ ಮೇಲೆ ಗುನ್ನಾಳ ಸೀಮಾದಲ್ಲಿ ಆರೋಪಿ ಶಿವಕುಮಾರ ತಂದೆ ಪಾಲಾಕ್ಷಪ್ಪ ಸಾ: ತರಿಕೇರೆ ಜಿ:
ಚಿಕ್ಕಮಂಗಲೂರು ಇತನು ತಾನು ನಡೆಸುತ್ತಿದ್ದ ಕಾರ್ ನಂ: ಕೆಎ 18 ಪಿ 4562 ನೇದ್ದನ್ನು ಹೊಸಪೇಟ್ ಕಡೆಯಿಂದ
ಕುಷ್ಠಗಿ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಹೋಗಿದ್ದರಿಂದ ಕಾರ್ ನಿಯಂತ್ರಣ
ತಪ್ಪಿ ಒಂದು ಬ್ರಿಡ್ಜ್ಗೆ ಟಕ್ಕರ್ ಮಾಡಿ ಸದರಿ ಬ್ರಿಡ್ಜ್ನ ಕೆಳಗಿ ಕಾರನ್ನು ಪಲ್ಟಿ ಮಾಡಿ ಅಪಘಾತ
ಮಾಡಿದ್ದು ಇರುತ್ತದೆ ಸದರಿ ಅಪಘಾತದಲ್ಲಿ ಕಾರಿನಲ್ಲಿದ್ದ ಫಿರ್ಯಾಧಿ ಹಾಗೂ ಆರೋಪಿತನಿಗೆ ಮತ್ತು ಇನ್ನೋಬ್ಬ
ಕಿರಣಕುಮಾರ ಎಂಬುವನಿಗೆ ಸಾದಾ ಹಾಗೂ ಭಾರಿ ಸ್ವರೂಪದ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿದ್ದು ಇರುತ್ತದೆ
ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ,
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/2016
ಕಲಂ. 174 ಸಿ.ಆರ್.ಪಿ.ಸಿ.
ದಿ:19-04-16 ರಂದು ಸಾಯಂಕಾಲ 5-45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶರಣಯ್ಯ ಬಗನಾಳ ಸಾ:ಮೆತಗಲ್ ಇವರು
ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೇಂದರೇ, ನನ್ನತಮ್ಮ ನಾಗಯ್ಯ ಬಗನಾಳ ವಯ: 30 ವರ್ಷ, ಈತನು ಮೆತಗಲ್ ಸೀಮಾದ ತನ್ನ ಹೊಲದಲ್ಲಿ ಶೇಂಗಾ ಮತ್ತು ಸೀಡ್ಸ ಬೆಳೆ ಬೆಳೆದಿದ್ದು ಸದರಿ
ಬೆಳೆಯ ಸಲುವಾಗಿ ಕುಕನಪಳ್ಳಿ ಕಾರ್ಪೋರೇಶನ್ ಬ್ಯಾಂಕ್ ಶಾಖೆಯಲ್ಲಿ ಸುಮಾರು ಒಂದುವರೇ ಲಕ್ಷ ರೂ.
ಸಾಲ ಮಾಡಿಕೊಂಡಿದ್ದು ಇರುತ್ತದೆ. ಬೆಳೆದ ಬೆಳೆ ಲುಕ್ಷಾನ ಆಗಿದ್ದರಿಂದ ಬೆಳೆಸಾಲ
ಕಟ್ಟುವದು ತ್ರಾಸ್ ಆಗುತ್ತದೆ ಅಂತಾ ಜಿಗುಪ್ಸೆಗೊಂಡು ಇಂದು ದಿ:19-04-16 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ತನ್ನ ಹೊಲದಲ್ಲಿ ಕ್ರಿಮಿನಾಶಕ ಔಷಧಿ ಸೇವನೆ ಮಾಡಿದ್ದರಿಂದ
ಅಸ್ವಸ್ಥಗೊಂಡಿದ್ದು ಇರುತ್ತದೆ. ಆತನಿಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿದಾಗ ಚಿಕಿತ್ಸೆ
ಫಲಿಸದೇ ಸಾಯಂಕಾಲ 5-20 ಗಂಟೆಗೆ ಮೃತಪಟ್ಟಿದ್ದು
ಇರುತ್ತದೆ. ಮೃತನ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲ. ಅಂತಾ ಮುಂತಾಗಿ ನೀಡಿದ ದೂರಿನ
ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 90/2016 ಕಲಂ. Man Missing.
ದಿನಾಂಕ. 08-04-2016 ರಂದಯ ರಾತ್ರಿ 10-00 ಗಂಟೆ ಸುಮಾರಿಗೆ ಕಾಣೆಯಾದ ಮನುಷ್ಯ ಇಂದ್ರಪ್ಪ ತಂದೆ ಹನಮಪ್ಪ ಗುತ್ತೂರು ಇತನು ತನ್ನ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಜಗಳ ಮಾಡಿಕೊಂಡು ಮನಸ್ಸಿಗೆ ಬೇಜಾರು ಮಾಡಿಕೊಂಡು ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಎಲ್ಲಿಯೋ ಕಾಣೆಯಾಗಿ ಹೋಗಿರುತ್ತಾನೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5] ಕೂಕನೂರು ಪೊಲೀಸ್ ಠಾಣೆ ಗುನ್ನೆ ನಂ: 39/2016 ಕಲಂ. 323, 354, 355, 504, 506 ಐಪಿಸಿ.
ದಿನಾಂಕ:19-04-2016
ರಂದು 11-30 ಪಿಎಂಕ್ಕೆ ಪಿರ್ಯಾದಿದಾರಳು ಠಾಣೆಗೆ ಹಾಜರಾಗಿ ತನ್ನ ಒಂದು ಕನ್ನಡದಲ್ಲಿ ಗಣಕೀಕರಣ ಮಾಡಿದ
ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ತನಗೆ ಈಗ್ಗೆ ಸುಮಾರು 15 ವರ್ಷಗಳ ಹಿಂದೆ
ಆರೋಪಿತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಆತನು ತೊಂದರೆ ಕೊಡುತ್ತಿದ್ದುದರಿಂದ ತಾನು ಬಂದು ತನ್ನ
ತವರುಮನೆಯಲ್ಲಿದ್ದಾಗ ಆರೋಪಿತನು ಪಿರ್ಯಾದಿದಾರಳ ಗೈರು ಹಾಜರಿಯಲ್ಲಿ ವಿವಾಹ ವಿಚ್ಛೇದನ ಆದೇಶವನ್ನು
ಮಾನ್ಯ ನ್ಯಾಯಾಲಯದಲ್ಲಿ ಮಾಡಿಸಿಕೊಂಡಿದ್ದು, ಆದರೆ, ವಿಷಯ ತಿಳಿದ ತಾನು ಪರಿಹಾರಕ್ಕಾಗಿ ಸಿವಿಲ್ ನ್ಯಾಯಾಲಯದಲ್ಲಿ
ದಾವೆ ಹಾಕಿದ್ದು, ಈಗ ಅದು ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅದನ್ನು ಹಿಂತೆಗೆದುಕೊಳ್ಳುವಂತೆ
ಆರೋಪಿತನು ದಿನಾಂಕ:18-04-2016 ರಂದು 2-00 ಪಿಎಂಕ್ಕೆ ಪಿರ್ಯಾದಿದಾರಳ ಮನೆಯ ಮುಂದೆ ಬಂದು ಅವಳ ಮರ್ಯಾದೆ
ಹೋಗುವ ಹಾಗೆ ಸೀರೆ ಮತ್ತು ತಲೆ ಕೂದಲು ಹಿಡಿದು ಜಗ್ಗಾಡಿ, ಕೈಯಿಂದ, ಚಪ್ಪಲಿಯಿಂದ ಬಡಿದು, ಆವಾಚ್ಯವಾಗಿ
ಬೈಯ್ದಾಡಿ, ಜೀವದ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6) ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ಕೊಪ್ಪಳ ಗುನ್ನೆ ನಂ: 122/2016, ಕಲಂ. 143, 147, 148, 323,
324, 395, 427, 504, 506 ಸಹಿತ 149 ಐ.ಪಿ.ಸಿ.
ದಿನಾಂಕ: 19-04-2016 ರಂದು ಬೆಳಿಗ್ಗೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಕರಿಯಪ್ಪ
ತಂದೆ ಮಲಿಯಪ್ಪ ಕರಡಿ, ವಯಸ್ಸು: 22 ವರ್ಷ ಜಾತಿ: ಕುರುಬರ, ಉ: ಟೋಲ್ ಕೆಲಕ್ಟರ್ ಸಾ: ವೆಂಕಟಗಿರಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ
ಮಾಡಿಸಿದ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ.ನಾನು ಸಪ್ಟಂಬರ್-2015 ರಿಂದ
ಹೇಮಗುಡ್ಡ ಟೋಲ್ ಪ್ಲಾಜಾದಲ್ಲಿ ಟೋಲ ಕಲೆಕ್ಟರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ
ದಿನಾಂಕ:-18-04-2016 ರಂದು ರಾತ್ರಿ 10:00 ರಿಂದ ಇಂದು ದಿನಾಂಕ: 19-04-2016 ರಂದು ಬೆಳಿಗ್ಗೆ
6:00 ಗಂಟೆಯವರೆಗೆ ನನ್ನ ಕರ್ತವ್ಯ ಇದ್ದು, ಅದರ ಪ್ರಕಾರ ಟೋಲ್ ನ ಪ್ಲಾಜಾದ ಲೈನ್ ನಂ: 1 ಕೆಲಸ ಮಾಡುತ್ತಿದ್ದಾಗ ಬೆಳಗಿನ ಜಾವ 00:10
ಗಂಟೆಯ ಸುಮಾರಿಗೆ ಕೊಪ್ಪಳ ಕಡೆಯಿಂದ ಸ್ವಿಪ್ಟ್ ಕಾರ್ ನಂ: ಕೆಎ-02/ಎಮ್.ಕೆ.-3377 ಮತ್ತು
ಕೆ.ಎ-37/ಎಂ-7822 ನೇದ್ದರಲ್ಲಿ ಸುಮಾರು 8-10 ಜನ ಕೂಡಿ ಬಂದು ಟೋಲ ಹಣ ಕೊಡುವದಿಲ್ಲಾ ಅಂತಾ
ಹೇಳಿ ಟೋಲ ಬಂದ್ ಮಾಡಬೇಕೆಂದು ಎಲ್ಲಾ ಲೈನಗಳನ್ನು ಬಂದ್ ಮಾಡಿದಾಗ ನಾನು ಗಂಗಾವತಿ ಕಡೆಯಿಂದ ಬಂದ
ಒಂದು ಟ್ರಕ್ ನ್ನು ಡೈಲಿ ಪಾಸ್ ಇದ್ದುದರಿಂದ ಅದನ್ನು ಬಿಟ್ಟಾಗ ಅವರು “ ಯಾಕಲೇ ಸೂಳೆ ಮಗನೇ ಟ್ರಕ್ ಬಿಟ್ಟಿದಿಯಾ ” ಅಂತಾ ಅವಾಚ್ಯವಾಗಿ ಬೈದಾಡುತ್ತಾ ಕೈಗಳಿಂದ ಹೊಡೆಬಡೆ ಮಾಡಿ ಕಾಲಿನಿಂದ
ಒದ್ದರು. ಆಗ ಪಕ್ಕದಲ್ಲಿಯೇ ಲೈನ ನಂ: 02 ರಲ್ಲಿ ಕೆಲಸ ಮಾಡುತ್ತಿದ್ದ ಮಹೇಶ ತಂದೆ ಹನುಮಂತಪ್ಪ
ಸಾ: ಮುಕ್ಕುಂಪಿ ಈತನಿಗೂ ಸಹ ಎಲ್ಲರೂ ಸೇರಿ ಕೈಗಳಿಂದ ಮತ್ತು ಕಟ್ಟಿಗೆ ಹಾಗೂ ಪೈಪಿನಿಂದ ಮುಖಕ್ಕೆ
ಬಲಗಾಲಿಗೆ ಹೊಡೆಬಡೆ ಮಾಡಿ ಗಾಯಗೊಳಿಸಿ ಎರಡು ಟೋಲ ಬೂತ ಹಾಗೂ ಲೈನ ಕ್ಯಾಮೆರಾಗಳನ್ನು ಡ್ಯಾಮೇಜ್
ಮಾಡಿ ನಂತರ ಕಂಟ್ರೋಲ ರೂಮಿಗೆ ಹೋಗಿ ಅದನ್ನು ಡ್ಯಾಮೇಜ್ ಮಾಡಿ ಸುಮಾರು 63,000/- ರೂ ಗಳಷ್ಟು ಲುಕ್ಸಾನ ಮಾಡಿ ಕಂಟ್ರೋಲ ರೂಮಿನಲ್ಲಿದ್ದ
ಏಡುಕೊಂಡಲು ತಂದೆ ಶ್ರೀನಿವಾಸ ಎಂಬುವರಿಗೂ ಸಹ ಹೊಡೆಬಡೆ ಮಾಡಿ ಅವರಲ್ಲಿದ್ದ ಟೋಲ ಸಂಗ್ರಹಿಸಿದ್ದ
ಹಣ 47,000/- ರೂಪಾಯಿಗಳನ್ನು ಸಹ
ತಗೆದುಕೊಂಡಿರುತ್ತಾರೆ. ನಂತರ ಸದರಿಯವರು “ ಇಂದಿನಿಂದ ಟೋಲಗಳನ್ನು ಬಂದ್ ಮಾಡಬೇಕು ಇಲ್ಲವಾದರೆ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇವೆ ” ಅಂತಾ ಬೆದರಿಕೆ ಹಾಕಿ ಹೊರಟು ಹೋದರು. ನಂತರ ಈ ಬಗ್ಗೆ ನಮ್ಮ ಶ್ರೀ
ವಂಶಿ ಚಂದ್ರಶೇಖರ ಹೆಚ್.ಆರ್.ಎ. ರವರಿಗೆ ಪೋನ್ ಮಾಡಿ ವಿಷಯ ತಿಳಿಸಲು ಅವರು ಬಂದು ಪರಿಶೀಲಿಸಿ
ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ. ನಮಗೆ ಹಲ್ಲೆ ಮಾಡಿದವರ ಬಗ್ಗೆ
ನಮ್ಮ ಟೋಲ ಅಂಬ್ಯುಲೆನ್ಸನಲ್ಲಿ ವೈದ್ಯರು ಅಂತಾ ಕೆಲಸ ಮಾಡುವ ಹೇರೂರು ಗ್ರಾಮದ ಯಮನೂರಪ್ಪ ಇವರಿಂದ
ನಮ್ಮ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳು ಹೇರೂರು ಗ್ರಾಮದ 1] ಅಮರೇಶ ತಂದೆ ಶಿವಪ್ಪ ಅಂಕಸದೊಡ್ಡಿ, 2] ಶರಣೇಗೌಡ ತಂದೆ ಶಂಕರಗೌಡ ಹಳೆಮನಿ (ಚಕೋಟಿ) 3] ಚನ್ನಬಸವ ತಂದೆ
ವಿರುಪಣ್ಣ ಬಾವಿಕಟ್ಟಿ, 4] ರವಿಚಂದ್ರಗೌಡ ತಂದೆ ಪಂಪನಗೌಡ 5] ಆನಂದ ತಂದೆ ದೇವೆಂದ್ರಗೌಡ 6] ಬಸವರಾಜ ಗೋನಾಳ ಹಾಗೂ
ಇತರರೂ ಸಾ: ಹೇರೂರು ಅಂತಾ ತಿಳಿಯಿತು. ಇವರು ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಂತಾ ತಿಳಿಸಿದರು.
ನಾನು ಚಿಕಿತ್ಸೆ ಪಡೆದುಕೊಂಡು ನಮ್ಮ ಟೋಲ್ ನವರೊಂದಿಗೆ ಚರ್ಚಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು
ಸಲ್ಲಿಸಿರುತ್ತೇನೆ. ಕಾರಣ ಬಗ್ಗೆ ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದು ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment