Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 21, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 91/2016 ಕಲಂ: 87 Karnataka Police Act
ದಿನಾಂಕ:-20-04-2016 ರಂದು ಸಾಯಂಕಾಲ 19-45 ಗಂಟೆಗೆ ಶ್ರಿ ಮಲ್ಲಪ್ಪ ಎ.ಎಸ್.ಐ ರವರು ಮೂಲ ಪಂಚನಾಮೆ ಮತ್ತು ಒಂದು ವರದಿಯನ್ನು ಮಾನ್ಯ ಪಿ.ಐ ಡಿ.ಸಿ.ಆರ್.ಬಿ ರವರ ಆದೇಶದ ಮೇರೆಗೆ ಹಾಜರುಪಡಿಸಿದ್ದು ಅದರ ಸಾರಾಂಶವೆನಂದರೆ ಇಂದು ದಿನಾಂಕ:-20-04-2016 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ಠಾಣಾ ವ್ಯಾಪ್ತಿಯ ಮೈಲಾಪೂರ ಗ್ರಾಮದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಐ ಡಿ.ಸಿ.ಆರ್.ಬಿ ರವರ ಉಪಸ್ಥಿತಿಯಲ್ಲಿ ಶ್ರೀ ಮಲ್ಲಪ್ಪ ಎ.ಎಸ್.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ 5 ಜನ ಆರೋಪಿತರನ್ನು ಹಿಡಿದುಕೊಂಡು ಆರೋಪಿತರಿಂದ ಮತ್ತು ಖಣದಲ್ಲಿ ಒಟ್ಟು ರೂ. 15000=00 ಗಳನ್ನು ಮತ್ತು ಇಸ್ಪೀಟ್ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ನೀಡಿದ ವರದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 124/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:- 20-04-2016 ರಂದು ಸಾಯಂಕಾಲ 5:00 ಗಂಟೆಗೆ ಫಿರ್ಯಾದಿ ಶ್ರೀ ಅಂದಪ್ಪ ತಂದೆ ಸಕ್ರಪ್ಪ ಒಡಕೇರಿ, 58 ವರ್ಷ, ಸಾ: 4ನೇ ವಾರ್ಡ-ಬಸಾಪಟ್ಟಣ. ತಾ: ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ." ಇಂದು ದಿನಾಂಕ: 20-04-2016 ರಂದು ನಮ್ಮ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಇದ್ದುದರಿಂದ ನನ್ನ ತಂಗಿಯ ಮಗನಾದ ಪರಶುರಾಮ ತಂದೆ ಈರಪ್ಪ ಕೊಪ್ಪದ, 16 ವರ್ಷ, ಸಾ: ಲಕ್ಕಲಕಟ್ಟಿ ತಾ: ರೋಣ ಹಾಗೂ ನನ್ನ ಮೊಮ್ಮಗನಾದ ಮಹಾಂತೇಶ ತಂದೆ ಗ್ಯಾನಪ್ಪ 5 ವರ್ಷ, ಸಾ: ಚಿಕ್ಕ ಮಾದಿನಾಳ ತಾ: ಗಂಗಾವತಿ ಇವರುಗಳು ನಮ್ಮ ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿ ಕಾರ್ಯಕ್ರಮದ ಗಲಾಟೆಯಲ್ಲಿ ಇದ್ದ ಸಮಯದಲ್ಲಿ ಪರಶುರಾಮನು ಮಹಾಂತೇಶನನ್ನು ಕರೆದುಕೊಂಡು ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಹೊಸ ಟಿ.ವಿ.ಎಸ್. ಎಕ್ಸೆಲ್ ಹೆವಿ ಡ್ಯೂಟಿ ಮೊಪೈಡ್ (ನಂಬರ್ ಇರುವುದಿಲ್ಲಾ) ನ್ನು ತೆಗೆದುಕೊಂಡು ನಮ್ಮ ಇಟ್ಟಂಗಿ ಭಟ್ಟಿಗೆ ಹೋಗಿದ್ದರು. ನಂತರ ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಬಸವರಾಜ ತಂದೆ ನಾಗಪ್ಪ ಸಾ: ಬಸಾಪಟ್ಟಣ ಈತನು ಫೋನ್ ಮಾಡಿ ತಿಳಿಸಿದ್ದೇನೆಂದರೆ, ಬಸಾಪಟ್ಟಣ ಸೀಮಾದ ಸ್ವಾಮೇರ ಹೊಲದ ಹತ್ತಿರ ಪರಶುರಾಮ ಮತ್ತು ಮಹಾಂತೇಶ ಇವರಿಗೆ ಟ್ರ್ಯಾಕ್ಟರ್ ಅಪಘಾತವಾಗಿ ಗಾಯಗೊಂಡಿರುತ್ತಾರೆ ಅಂತಾ ತಿಳಿಸಿದ್ದು, ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಪರಶುರಾಮನಿಗೆ ಗದ್ದಕ್ಕೆ ರಕ್ತಗಾಯ, ಎಡಗಡೆ ಮೊಣಕಾಲಿಗೆ ಒಳಪೆಟ್ಟು ಮತ್ತು ತಲೆಗೆ ಒಳಪೆಟ್ಟಾಗಿತ್ತು. ಮಹಾಂತೇಶನಿಗೆ ಹಣೆಗೆ ತೀವ್ರ ಗಾಯ, ಮೇಲಿನ ತುಟಿಗೆ ಗಾಯವಾಗಿತ್ತು. ನನ್ನ ಮೊಪೈಡ್ ಸ್ಥಳದಲ್ಲಿ ಬಿದ್ದಿದ್ದು, ಅಪಘಾತ ಮಾಡಿದ ಟ್ರ್ಯಾಕ್ಟರ್ ಸ್ಥಳದಲ್ಲಿ ನಿಂತಿತ್ತು. ಪರಶುರಾಮನಿಗೆ ವಿಚಾರಿಸಲು ತಿಳಿಸಿದ್ದೇನೆಂದರೆ, “ ಬೆಳಿಗ್ಗೆ 10:45 ಗಂಟೆಯ ಸುಮಾರಿಗೆ ತಾನು ಮತ್ತು ಮಹಾಂತೇಶ ಕೂಡಿ ಬಸಾಪಟ್ಟಣ ಸೀಮಾದ ಇಟ್ಟಂಗಿ ಭಟ್ಟಿಯಿಂದ ವಾಪಸ್ ಬಸಾಪಟ್ಟಣ ಕಡೆಗೆ ಮೊಪೈಡ್ ನಡೆಯಿಸಿಕೊಂಡು ಕೊಪ್ಪಳ-ಗಂಗಾವತಿ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಒಮ್ಮೆಲೇ ರಸ್ತೆಯ ಎಡಗಡೆ ಗದ್ದೆಯಿಂದ ರಸ್ತೆಯ ಕಡೆಗೆ ಟ್ರ್ಯಾಕ್ಟರ್ ಚಾಲಕನು ಟ್ರ್ಯಾಕ್ಟರ್ ನ್ನು ಜೋರಾಗಿ ನಡೆಯಿಸಿಕೊಂಡು ಬಂದು ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ತಾನು ಮತ್ತು ಮಹಾಂತೇಶ ಕೆಳಗೆ ಬಿದ್ದು ಗಾಯಗೊಂಡಿರುತ್ತೇವೆ. ಅಪಘಾತವಾದ ಕೂಡಲೇ ಅಲ್ಲಿಯೇ ಹೊರಟಿದ್ದ ಬಸವರಾಜ ವರು ತಮ್ಮನ್ನು ಎಬ್ಬಿಸಿ ಕೂಡಿಸಿ ನಿಮಗೆ ವಿಷಯ ತಿಳಿಸಿದ್ದಾರೆ. ಅಪಘಾತವಾದ ಕೂಡಲೇ ಟ್ರ್ಯಾಕ್ಟರ್ ಚಾಲಕ ವಾಹನ ಬಿಟ್ಟು ಓಡಿ ಹೋಗಿದ್ದಾನೆ” ಅಂತಾ ತಿಳಿಸಿದನು. ಸ್ಥಳದಲ್ಲಿದ್ದ ಟ್ರ್ಯಾಕ್ಟರ್ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ್ ನಂಬರ್: ಕೆ.ಎ-37/ ಟಿ.ಬಿ-1090 ಇದೆ ಅಂತಾ ಬಸವರಾಜನು ತಿಳಿಸಿದನು. ಗಾಯಗೊಂಡವರನ್ನು ಯಾವುದೋ ಒಂದು ಆಟೋದಲ್ಲಿ ಕರೆದುಕೊಂಡು ಬಂದು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ನಂತರ ಅಪಘಾತ ಮಾಡಿದ ಟ್ರ್ಯಾಕ್ಟರ್ ಚಾಲಕನ ಬಗ್ಗೆ ಹುಡುಕಾಡಿ ಅವನು ಸಿಗದೇ ಇದ್ದುರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಮಾನ್ಯರು ನನ್ನ ಟಿ.ವಿ.ಎಸ್. ಎಕ್ಸೆಲ್ ಹೆವಿ ಡ್ಯೂಟಿ ಮೊಪೈಡ್ ಮೇಲೆ ಬರುತ್ತಿದ್ದ ನನ್ನ ಅಳಿಯ ಮತ್ತು ಮೊಮ್ಮಗನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಓಡಿ ಹೋದ ಮಹಿಂದ್ರಾ ಟ್ರ್ಯಾಕ್ಟರ್ ನಂಬರ್: ಕೆ.ಎ-37/ ಟಿ.ಬಿ-1090 ನೇದ್ದರ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಹೇಳಿಕೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 70/2016 ಕಲಂ. 363 ಐ.ಪಿ.ಸಿ:.
¢: 19-04-2016 gÀAzÀÄ 9-30 ¦.JªÀiï. PÉÌ  ¦üAiÀiÁð¢zÁgÀgÁzÀ ²æà «ÃgÀ¨sÀzÀæUËqÀ ¥Ánî ¸Á: ªÀÄPÀ̽UÁV vÉgÉzÀ vÀAUÀÄzÁt J£ï.f.N. PÁ¯ÉÆä Q£Áß¼À gÀ¸ÉÛ  PÉÆ¥Àà¼À. EªÀgÀÄ oÁuÉUÉ ºÁdgÁV ¤ÃrzÀ °TvÀ zÀÆj£À ¸ÁgÁA±ÀªÉãÉAzÀgÉÃ,  ದಿ: 29-10-2015 ರಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮೀತಿ ಕೊಪ್ಪಳ ರವರು ಅಪ್ರಾಪ್ತ ಬಾಲಕ ಆಲಂಪಾಷಾ ತಂದೆ ಹುಸೇನಸಾಬ ವಯಾ: 13 ವರ್ಷ ಈತನಿಗೆ ಪೋಷಣೆಗಾಗಿ ತಂಗುದಾಣದಲ್ಲಿ ಹಾಜರುಪಡಿಸಿದ್ದು, ಬಾಲಕನಿಗೆ ತೆರೆದ ತಂಗುದಾಣದಲ್ಲಿ ಇಟ್ಟುಕೊಂಡಿದ್ದೆವು. ನಂತರ ದಿನಾಂಕ: 21-03-2016 ರಂದು ಬೆಳಗ್ಗೆ 7-00 ಗಂಟೆ ಸುಮಾರಿಗೆ ಕಿನ್ನಾಳ ರಸ್ತೆಯಲ್ಲಿರುವ ಮಕ್ಕಳಿಗಾಗಿ ತೆರೆದ ತಂಗುದಾಣದಿಂದ ಅಪ್ರಾಪ್ತ ಬಾಲಕ ಆಲಂಪಾಷಾ ತಂದೆ ಹುಸೇನಸಾಬ ವಯಾ: 13 ವರ್ಷ ಈತನಿಗೆ ಯಾರೋ ಅಪರಿಚಿತರು ಯಾವುದೋ ಉದ್ದೇಶಕ್ಕಾಗಿ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ಸಂಶಯ ಬಂದಿದ್ದು, ಕಾರಣ ಸದರಿ ಬಾಲಕ ಆಲಂಪಾಷಾ ಈತನಿಗೆ ಪತ್ತೆ ಮಾಡಿ, ಅಪಹರಣ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 125/2016 ಕಲಂ. 143, 147, 148, 323, 324, 354, 504, 506 ಐ.ಪಿ.ಸಿ:.
ದಿನಾಂಕ:- 20-04-2016 ರಂದು ರಾತ್ರಿ 10:15 ಗಂಟೆಗೆ ಫಿರ್ಯಾದಿ  ಶ್ರೀ ಅಂಜಿನಪ್ಪ ತಂದೆ ಯಂಕಪ್ಪ ದಂಡು, ವಯಸ್ಸು 40 ವರ್ಷ, ಜಾತಿ: ಕಬ್ಬೇರ ಉ: ಕೂಲಿ ಕೆಲಸ ಸಾ: ಜನತಾ ಕಾಲೋನಿ- ಅಂಜೂರಿ ಕ್ಯಾಂಪ್. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ." ನಾನು ಗಂಗಾವತಿ ತಾಲೂಕಿನ ಅಂಜೂರಿ ಕ್ಯಾಂಪ್  ಗ್ರಾಮದ ನಿವಾಸಿ ಇದ್ದು, ಕೂಲಿ ಕೆಲಸ ಮಾಡಿಕೊಂಡಿರುತ್ತೇನೆ.  ದಿನಾಂಕ:- 17-04-2016 ರಂದು ಮುಷ್ಟೂರು ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಸದಸ್ಯರ ಚುನಾವಣೆ ಇತ್ತು.  ಈ ಸಮಯದಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಮಲ ಶ್ರೀನಿವಾಸ ಸಾ: 10ನಂಬರ್ ಕೆನಾಲ್ ಕ್ಯಾಂಪ್ ಎಂಬುವವರಿಗೆ ಬೆಂಬಲವನ್ನು ನೀಡಿ ಪ್ರಚಾರದಲ್ಲಿ ತಿರುಗಾಡಿದ್ದೆನು. ನಾಮಲ ಶ್ರೀನಿವಾಸನಿಗೆ ಪ್ರತಿಸ್ಪರ್ಧಿಯಾಗಿ ಮಹ್ಮದ್ ಸಾ: ಜನತಾ ಕಾಲೋನಿ-ಅಂಜೂರಿ ಕ್ಯಾಂಪ್ ಈತನು ಸ್ಪರ್ಧಿಸಿದ್ದನು.  ಆದರೆ ನಾನು ಆತನಿಗೆ ಬೆಂಬಲ ನೀಡಿರಲಿಲ್ಲಾ.  ಇಂದು ದಿನಾಂಕ:- 20-04-2016 ರಂದು ಮತ ಎಣಿಕೆ ನಡೆದು ನಾಮಲ ಶ್ರೀನಿವಾಸನು ವಿಜೇತನಾಗಿದ್ದು, ಮಹ್ಮದ್ ನು ಸೋತನು. ಸಂಜೆ 5:30 ರಿಂದ 6:00 ಗಂಟೆಯ ಅವಧಿಯಲ್ಲಿ ನಾನು ಮನೆಯಲ್ಲಿರುವಾಗ (1) ಮಹ್ಮದ್ ಹಾಗೂ ಆತನ ಸಂಬಂಧಿಕರಾದ (2) ಹಸೇನ್ ತಂದೆ ಸಣ್ಣ ಬಾಬಿ (3) ಮೋನಿ ತಂದೆ ಸಣ್ಣ ಬಾಬಿ (4) ನಬೀಸಾಬ ತಂದೆ ಸಣ್ಣ ಬಾಬಿ ಎಲ್ಲರೂ ಸಾ: 10 ನಂಬರ್ ಕೆನಾಲ್ ಕ್ಯಾಂಪ್ (5) ದಾವಲ್ ಸಾ: ರಾಘವೇಂದ್ರ ಕಾಲೋನಿ-ಶ್ರೀರಾಮನಗರ ಇವರುಗಳು ಅಕ್ರಮಕೂಟ ರಚಿಸಿಕೊಂಡು ಸಮಾನ ಉದ್ದೇಶದಿಂದ ಕೂಡಿಕೊಂಡು ನಮ್ಮ ಮನೆಯ ಹತ್ತಿರ ಬಂದು ನನಗೆ “ ಲೇ ಅಂಜಿ ಸೂಳೇ ಮಗನೇ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡುವುದನ್ನು ಬಿಟ್ಟು ಶ್ರೀನಿವಾಸನಿಗೆ ಬೆಂಬಲ ನೀಡುತ್ತೀಯನೇಲೇ, ನಿನಗೆ ಎಷ್ಟು ಸೊಕ್ಕು ಇವತ್ತು ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲಾ ” ಅಂತಾ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆಯನ್ನು ಹಾಕಿ ಮಹ್ಮದ್ ಇವನು ಕಲ್ಲಿನಿಂದ ಮತ್ತು ಹಸೇನ್ ಇವನು ಕಟ್ಟಿಗೆಯಿಂದ ಹೊಡಿ-ಬಡಿ ಮಾಡಿದ್ದು, ಉಳಿದವರು ಕೈಗಳಿಂದ ಬಡಿದು ನೆಲಕ್ಕೆ ಹಾಕಿ ಕಾಲಿನಿಂದ ಒದ್ದರು.  ಆಗ ನನ್ನ ಹೆಂಡತಿ ನೀಲಮ್ಮ ವಯಸ್ಸು 35 ವರ್ಷ ಇವರು ಬಿಡಿಸಲು ಬಂದಾಗ ಅವಳಿಗೂ ಸಹ ಮೈ ಕೈ ಮುಟ್ಟಿ, ಕುಬ್ಬಸ, ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಬಡಿದು ಮಾನಭಂಗ ಮಾಡಿದರು. ಇದರಿಂದ ನಮ್ಮಿಬ್ಬರಿಗೆ ಒಳಪೆಟ್ಟಾದವು. ಆಗ  ಈ ಜಗಳನವನ್ನು ನೋಡಿ ನಮ್ಮ ಕಾಲೋನಿಯ ಲಕ್ಷ್ಮಣ ತಂದೆ ಯಮನಪ್ಪ ಲಮಾಣಿ, 36 ವರ್ಷ, ಹನುಮೇಶ ತಂದೆ ಭೀಮಪ್ಪ, ಲಮಾಣಿ, 27 ವರ್ಷ ಇವರುಗಳು ಬಂದು ಬಡಿಯುವುದನ್ನು ಬಿಡಿಸಿಕೊಂಡರು. ನಂತರ ನಾನು ಮತ್ತು ನನ್ನ ಹೆಂಡತಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು, ನಾನು ಚಿಕಿತ್ಸೆ ಪಡೆದುಕೊಂಡು ಬಂದು ಈಗ ತಡವಾಗಿ ಠಾಣೆಗೆ ಬಂದು ಈ ದೂರನ್ನು ನೀಡಿರುತ್ತೇನೆ. ಮಹ್ಮದ್ ಇವನು ಗುಂಡಾಗಿರಿ ಮಾಡುವ ಪ್ರವೃತ್ತಿಯುಳ್ಳವನಾಗಿದ್ದು, ಅಮಾಯಕ ಜನರ ಮೇಲೆ ವಿನಾ ಕಾರಣ ದೌರ್ಜನ್ಯ ಮಾಡುತ್ತಾನೆ, ಅವನು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸುತ್ತಾನೆ. ಕಾರಣ   ನಮಗೆ ಹೊಡಿ-ಬಡಿ ಮಾಡಿದಂತಹ ಮೇಲ್ಕಂಡ 5 ಜನರ ವಿರುದ್ಧ  ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ." ಅಂತಾ ನೀಡಿದ ಹೇಳಿಕೆಯ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.  

    

0 comments:

 
Will Smith Visitors
Since 01/02/2008