1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ:
78(3) Karnataka Police Act
ದಿನಾಂಕ 18.04.2016 ರಂದು ಸಾಯಂಕಾಲ 7:40 ಗಂಟೆಗೆ ಕೊಪ್ಪಳ ನಗರದ ಗಾಂಧಿ ಸರ್ಕಲ್ ಕೆ.ಜಿ.ಎನ್.
ಬೇಕರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ 1] ಅಬ್ದುಲಶೂಕೂರ ತಂದೆ ಹಮೀದಸಾಬ ಹಂಪಸಾಗರ ಸಾ:
ವಿಜಯನಗರ ಬಡಾವಣೆ ಕೊಪ್ಪಳ ಇತನು 01 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಇದು ನಶೀಬದ ಆಟ ಅಂತಾ ಸಾರ್ವಜನಿಕರನ್ನು
ಕೂಗಿ ಕರೆಯುತ್ತಾ ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೇದ ಚೀಟಿಯನ್ನು ಬರೆದು ಕೊಡುತ್ತಿದ್ದಾಗ
ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಆರೋಪಿತನಿಂದ ನಗದು ಹಣ 520=00 ರೂ, ಮಟಕಾ ನಂಬರ ಬರೇದ ಚೀಟಿ,
ಒಂದು ಬಾಲ್ ಪೆನ್ ನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಮತ್ತು ಮಟಕಾ ಪಟ್ಟಿ ಪಡೆಯುವ ಬುಕ್ಕಿ ಅಕ್ಬರ್
ಬಾನಾಪೂರ ಇದ್ದು, ಸದರಿ ಆರೋಪಿತರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಫಿರ್ಯಾದಿಯ
ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 32/2016 ಕಲಂ:
498(ಎ), 323, 326, 504, 506, 109 ಸಹಿತ 34 ಐ.ಪಿ.ಸಿ
ಫಿರ್ಯಾದಿ ಸಂಗೀತಾ ಗಂಡ ಮಂಜುನಾಥ ಚವ್ಹಾಣ ವಯಾ: 25
ವರ್ಷ ಜಾ: ಲಂಬಾಣಿ ಉ: ಮನೆಗೆಲಸ ಸಾ: ಮಾವಿನಇಟಗಿ ತಾ: ಕುಷ್ಟಗಿ ಇವರಿಗೆ ದಿನಾಂಕ: 11-10-10 ರಂದು ಮಾವಿನಇಟಗಿ ಗ್ರಾಮದ ಮಂಜುನಾಥನಿಗೆ
ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ ನಂತರ 1 ವರ್ಷದ ವರಗೆ ಚೆನ್ನಾಗಿ ಇದ್ದು, ನಂತರ ಗಂಡನ
ತಾಯಿ ಹಾಗೂ ಗಂಡನ ಅಣ್ಣಂದಿರ ಮಾತು ಕೇಳಿಕೊಂಡು ಆರೋಪಿ ಮಂಜುನಾಥನು ದೈಹಿಕ ಹಾಗೂ ಮಾನಸಿಕ ಹಿಂಸೆ ಕೊಡುತ್ತಿದ್ದು,
ಸದರಿಯವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ನಂತರ ಫಿರ್ಯಾದಿದಾರಳ ಶೀಲದ ಬಗ್ಗೆ ಶಂಕಿಸುತ್ತಿದ್ದಾಗ,
ಫಿರ್ಯಾದಿದಾರಳು ತನ್ನ ಗಂಡನ ಮೇಲೆ ಜೀವನಾಂಶಕ ಮತ್ತು ಮದುವೆಯ ಬಿಡುಗಡೆ ಬಗ್ಗೆ ಮಾನ್ಯ ಹಿರಿಯ ಸಿವಿಲ್
ನ್ಯಾಯಾಲಯದಲ್ಲಿ ಕೇಸ್ ಮಾಡಿಸಿದ್ದು, ನಂತರ ಫಿರ್ಯಾದಿಯ ಗಂಡನು ಹಿರಿಯರ ಹತ್ತಿರ ಫಿರ್ಯಾದಿಯನ್ನು
ಬೈಯುವದಿಲ್ಲಾ, ಬಡೆಯುವದಿಲ್ಲಾ, ಸಂಶಯ ಮಾಡುವದಿಲ್ಲಾ ಅಂತಾ ಹೇಳಿ ಒಪ್ಪಿಕೊಂಡಿದ್ದರಿಂದ, ನಮ್ಮ ತಂದೆ
ತಾಯಿಯನ್ನು ಕರೆದುಕೊಂಡು ನ್ಯಾಯಾಲಯಕ್ಕೆ ಹೋಗಿ ನಾವು ರಾಜಿಯಾಗುತ್ತೇನೆ ಅಂತಾ ಹೇಳಿ ಬಂದು ಗಂಡನ ಸಂಗಡ
ಫಿರ್ಯಾದಿದಾರಳು ಗಂಡನ ಮನೆಗೆ ಹೋದಾಗ, ಆರೋಪಿ ಮಂಜುನಾಥನು 15 ದಿನಗಳವರಗೆ ಚೆನ್ನಾಗಿ ನೋಡಿಕೊಂಡು,
ನಂತರ ಉಡಪಿ ಕಡೆಗೆ ದುಡಿಯಲು ಕರೆದುಕೊಂಡು ಹೋಗಿ ಹೊಡಿ, ಬಡಿ ಮಾಡುತಿದ್ದನು. ನಂತರ ಮಾವಿನ ಇಟಗಿಗೆ
ಕರೆದುಕೊಂಡು ಬಂದನು. ನಂತರ ದಿನಾಂಕ: 10-04-16 ರಂದು ಆರೋಪಿತರೆಲ್ಲರೂ ಸೇರಿ ಫಿರ್ಯಾದಿಗೆ ಕಿರುಕುಳ
ಕೊಟ್ಟು ಹೊಡೆ, ಬಡೆ ಮಾಡಿದ್ದು ಆರೋಪಿ ಮಂಜುನಾಥನು ಪುನಃ ಫಿರ್ಯಾದಿದಾರಳ ಶೀಲದ ಬಗ್ಗೆ ಸಂಶಯ ಮಾಡಿ
ಫಿರ್ಯಾದಿಯ ಎಡಗಾಲು ಹಿಡಿದು ತಿರವಿ ಮುರಿದಿದ್ದು ಇರುತ್ತದೆ. ನಂತರ ಫಿರ್ಯಾದಿ ಗಂಡನು ದುಡಿಯಲು ಉಡಪಿಗೆ
ಹೋಗಿದ್ದು ಇರುತ್ತದೆ. ನಂತರ ಹಿರಿಯರು ಫಿರ್ಯಾದಿ ಕೊಡಬೇಡಾ ಮುಂದೆ ನಿನ್ನ ಬಾಳು ಸರಿ ಹೊಗಬಹುದು ಅಂತಾ
ಹೇಳಿದ್ದು ಇರುತ್ತದೆ. ನಂತರ ಫಿರ್ಯಾದಿ ತಂದೆ ತಾಯಿ ಖಾಸಗಿಯಾಗಿ ತೋರಿಸಿದ್ದು ಇರುತ್ತದೆ. ಫಿರ್ಯಾದಿದಾರರು
ಇಂದು ಕೌಟಂಬಿಕ ನ್ಯಾಯಾಲಯದಲ್ಲಿ ಕೇಸು ಹಾಕಿದ್ದು ಇಂದು ಫಿರ್ಯಾದಿ ಕೊಡಲು ತಿಳಿಸಿದ್ದರಿಂದ ತಡವಾಗಿ
ಠಾಣೆಗೆ ಬಂದು ಫಿರ್ಯಾಧಿ ಅರ್ಜಿ ನೀಡಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಠಗಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/2016 ಕಲಂ.
174 ಸಿ.ಆರ್.ಪಿ.ಸಿ.
ದಿನಾಂಕ. 18-04-2016 ರಂದು ಮುಂಜಾನೆ 9-15 ಗಂಟೆಗೆ ಪಿರ್ಯಾದಿದಾರರಾದ ಹನಮೇಶ ತಂದೆ ಶ್ರೀಧರಶೆಟ್ಟಿ
ಶೆಟ್ಟರ ವಯಾ: 35 ವರ್ಷ ಜಾತಿ: ವೈಶ್ಯ ಉ: ಒಕ್ಕಲುತನ ಸಾ: ಕಂದಕೂರು ತಾ: ಕುಷ್ಟಗಿ
ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿಯನ್ನು
ನೀಡಿದ್ದು ಅದರ ಸಾರಾಂಶವೆನೆಂದರೆ, ನನ್ನ ತಂದೆ ತಾಯಿಗೆ ನಾವು
ಇಬ್ಬರೂ ಗಂಡು ಮಕ್ಕಳಿದ್ದು ನಾನು ಮೊದಲನೆಯವನಾಗಿದ್ದು ನನಗಿಂತ ಚಿಕ್ಕವನಾದ ಪರುಶುರಾಮ ವಯಾ:
30 ವರ್ಷ ಅಂತಾ ಇದ್ದು ನಾನು ಒಕ್ಕಲುತನ ಮತ್ತು ಕಿರಾಣಿ ವ್ಯಾಪಾರ ಮಾಡಿಕೊಂಡು ಉಪ ಜೀವನ ಮಾಡುತ್ತೇನೆ.
ನನ್ನ ತಮ್ಮನಾದ ಪರುಶುರಾಮ ಈತನು ಈಗ್ಗೆ ಸುಮಾರು 7-8 ವರ್ಷಗಳಿಂದ ಮಾನಸಿಕ ಅಸ್ಥವ್ಯಸ್ಥನಾಗಿದ್ದು
ಅವನು ತನಗೆ ಮನ ಬಂದಂತೆ ಎಲ್ಲಿ ಬೇಕಾದರೂ ಅಲ್ಲಿ ತಿರುಗಾಡುವದು ಮಾಡುತ್ತಿದ್ದನು, ನಾವು ಅವನಿಗೆ ಖಾಸಗಿಯಾಗಿ
ಮತ್ತು ಆಸ್ಪತ್ರೆಗಳಲ್ಲಿ ತೋರಿಸಿದರೂ ಗುಣಮುಖವಾಗಿರಲಿಲ್ಲ. ಸದರಿಯವನು ನನಗೆ ಎಲ್ಲಿ ತೋರಿಸಿದರೂ ಗುಣವಾಗಲಿಲ್ಲ
ಅಂತಾ ಮನಸ್ಸಿಗೆ ಬೇಸರ ಮಾಡಿಕೊಂಡು ಸದರಿ ನನ್ನ ತಮ್ಮನಾದ ಪರುಶುರಾಮ ಇತನು ಇಂದು ದಿನಾಂಕ:
18-04-2016 ರಂದು ಬೆಳಿಗ್ಗೆ 5-30 ಗಂಟೆಯ ಸುಮಾರಿಗೆ ನಾವೆಲ್ಲರೂ ಬೆಸೀಗೆ ಇದ್ದರಿಂದ ಮನೆಯ ಹೊರಗೆ
ಮಲಗಿದ್ದಾಗ ಆತನು ತಾನು ಎಲ್ಲಿ ತೋರಿಸಿದರೂ ಗುಣಮುಖವಾಗಲಿಲ್ಲ ಅಂತಾ ಮಾನಸಿಕ ಮಾಡಿಕೊಂಡು ಮನೆಯಲ್ಲಿ
ಹೋಗಿ ಒಂದು ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು, ನಂತರ ನಾನು ಮತ್ತು ನಮ್ಮ
ತಂದೆಯವರು ಹೋಗಿ ನೋಡಲಾಗಿ ಸದರಿಯವನು ಮೃತಪಟ್ಟಿದ್ದು ನಿಜವಿತ್ತು. ಸದರಿಯವನ ಮರಣದಲ್ಲಿ ಯಾರ ಮೇಲೂ
ಯಾವುದೇ ಸಂಶಯ ವಗೈರಾ ಇರುವದಿಲ್ಲ. ಕಾರಣ ಮುಂದಿನ ಕ್ರಮ ಜರುಗಿಸಲು ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ಮುಂದಿನ ಕ್ರಮ ಕೈಕೊಂಡಿದ್ದು ಇರುತ್ತದೆ.
4] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 89/2016 ಕಲಂ. 279 ಐ.ಪಿ.ಸಿ.
ದಿನಾಂಕ.
18-03-2016 ರಂದು 10-00 ಎ.ಎಂ.ಕ್ಕೆ ಫಿರ್ಯಾದಿ ¤¸ÁìgÀ ¥ÁµÁvÀA/ ªÉÆâ£ï
SÁ£ï ¸Á: ªÀiÁ¤é ಇವರು ತಮ್ಮ ಕಾರ ನಂ. ಕೆ.ಎ.17/ಎನ್.7749 ನೇದ್ದನ್ನು ಚಲಾಯಿಸಿಕೊಂಡು
ಮಾನ್ವಿಯಿಂದ ಮುನಿರಾಬಾದಕ್ಕೆ ಬರುತ್ತಿರುವಾಗ ಕುಷ್ಟಗಿ ಹೊಸಪೇಟೆ ಎನ್.ಹೆಚ್. 13 ರಸ್ತೆಯ ಮೇಲ ಹಿಟ್ನಾಳ
ಟೋಲ್ ಗೇಟ ಮುಂದೆ ನಿಂತಿದ್ದ ಕಂಟೇನರ ಲಾರಿ ನಂ. ಹೆಚ್.ಆರ್.55/ಎನ್.5610 ನೇದ್ದರ ಹಿಂದೆ ನಿಲ್ಲಿಸಿದ್ದು
ಲಾರಿ ಚಾಲಕ ªÀÄÄSÉñÀ
PÀĪÀiÁgÀನು
ಯಾವುದೆ ಮುನ್ಸೂಚನೆ ನೀಡದೇ. ನಿರ್ಲಕ್ಷತನದಿಂದ ಲಾರಿ ಚಾಲು ಮಾಡಿಕೊಂಡು ರಿವರ್ಸ ತೆಗದುಕೊಂಡು ಫಿರ್ಯಾದಿ
ಕಾರಿಗೆ ಡಿಕ್ಕಿ ಕೊಟ್ಟು ಸುಮಾರು 50 ಅಡಿ ಹಿಂದೆ ಕಾರು ತಳ್ಳಿಕೊಂಡು ಹೋಗಿದ್ದರಿಂದ ಕಾರಿನ ಮುಂದಿನ
ಭಾಗ ಜಖಂಗೊಂಡಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
5] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 110/2016 ಕಲಂ. 498(ಎ), 323, 324, 504, 506, ಸಹಿತ 34 ಐ.ಪಿ.ಸಿ.
ದಿನಾಂಕ 16-04-2016 ರಂದು ಮದ್ಯಾನ್ಹ 2 ಗಂಟೆ ಸುಮಾರಿಗೆ ನಮ್ಮ
ಮನೆ ಬಾಜು ಇದ್ದ ಹಳೇ ಮನೆಯು ಬಿದ್ದು ಹೋಗಿದ್ದು, ಅದರ ಹಳೇ ಮಣ್ಣನ್ನು 4-5 ಪುಟ್ಟಿಗಳಷ್ಟು ತೆಗೆದುಕೊಂಡು
ನಮ್ಮ ಮನೆಯ ಕಂಪೌಂಡ್ ಕಟ್ಟಲು ನಮ್ಮ ಮನೆಯ ಮುಂದೆ ಹಾಕಿಕೊಂಡೆನು. ಇದೇ ವಿಷಯವನ್ನು ಕಾರಣವಾಗಿ ಇಟ್ಟುಕೊಂಡು
ನನ್ನ ಗಂಡ ನನ್ನ ಮೇಲೆ ಸಂಶಯ ಪಡುತ್ತಾ ಕುಡಿದುಬಂದು ಎನಲೇ ಸೂಳೆ ನನಗೆ ಹೇಳದೇ ಕೇಳದೇ ಎಲ್ಲಿಗೆ ಹೋಗಿದ್ದೆ,
ಯಾರನ್ನು ಕೇಳಿ ಮಣ್ಣು ತೆಗೆದುಕೊಂಡಿ ಬೋಸುಡೀ ಅಂತಾ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ ರಾತ್ರಿ
9-00 ಗಂಟೆ ಸುಮಾರಿಗೆ ಮನೆಯಲ್ಲಿ ಇದ್ದ ಕೊಡಲಿ ಕಾವು ತೆಗೆದುಕೊಂಡು ನನ್ನ ಎಡಗಾಲು ಮೋನಕಾಲು ಕೆಳೆಗೆ,
ಬಲಗಡೆ ಸೋಂಟಕ್ಕೆ, ಎಡಗೈ ರಟ್ಟಿಗೆ ಹೊಡೆದಿದ್ದು, ಇದರಿಂದ ನನ್ನ ಕಾಲು ಬಾವು ಬಂದಿದ್ದು, ಸೊಂಟ ಮತ್ತು
ಕೈಗೆ ರಕ್ತ ಹೆಪ್ಪುಗಟ್ಟಿದಂತೆ ಆಗಿದೆ. ನಿನಗೆ ಯಾವ ಮಿಂಡ್ಗಾರ ಇದ್ದಾನೆ ಭೋಸುಡೀ ಅಂತಾ ಆಶ್ಲೀಲವಾಗಿ
ಬೈದನು. ಮತ್ತು ನನ್ನ ಮೈದುನನಾದ ವೆಂಕಟೇಶ ತಂದೆ ಸಕ್ರಪ್ಪ ಇವನು ನನ್ನಗೆ ಕಾಲಿನಿಂದ ಎದೆಗೆ ಒದ್ದು
ಕೆಳಕ್ಕೆ ಕೆಡವಿದನು. ನನ್ನ ಅತ್ತೆಯಾದ ಚನ್ನವ್ವ ಗಂಡ ಸಕ್ರಪ್ಪ ಇವಳು ಕಾಲಿನಿಂದ ಗುಪ್ತಾಂಗಕ್ಕೆ ಒದ್ದಿದ್ದು
ರಕ್ತ ಬಂದಂತಾಗಿದೆ. ಮತ್ತು ನನ್ನ ಮೈದುನನ ಹೆಂಡತಿಯಾದ ಜೋತಿ ಗಂಡ ವೆಂಕಟೇಶ ಇವಳು ನನ್ನ ಕೂದಲು ಹಿಡಿದು
ಬೆನ್ನಿಗೆ ಗುದ್ದಿದಳು, ನಾನು ಕೇಳಗೆ ಬಿದ್ದು ಒದರಾಡುವುದುನ್ನು ಕೇಳಿ ಕೃಷ್ಣಪ್ಪ ತಂದೆ ಹನಮಪ್ಪ ರಾಠೋಡ,
ನನಗೆ ಬಡೆಯುವುದನ್ನು ಬಿಡಿಸಿ ಕಳುಹಿಸುವಾಗ ಈ ಸಲಾ ಉಳಿದಿಯೇಲೇ ಸೂಳೇ ಇನ್ನೊಮ್ಮೆ ಒಬ್ಬಳೇ ಸಿಗು ನಿನ್ನನ್ನು
ಜೀವ ತೆಗೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋದರು, ಈ ವಿಷಯವನ್ನು ನನ್ನ ತಂದೆ ಮತ್ತು ತಮ್ಮಂದಿರಿಗೆ
ಪೋನ್ ಮಾಡಿ ತಿಳಿಸಿದೇನು. ನನ್ನ ತಮ್ಮನಾದ ಸುರೇಶನು ನಮ್ಮ ಊರಿಗೆ ಬಂದನು. ಇದನ್ನು ಕಂಡು ನನ್ನ ಗಂಡ
ಮತ್ತು ಮೈದುನ ಇಬ್ಬರು ನಿನ್ನ ತಮ್ಮನ ಯಾಕೆ ಕರೆಸಿದೆ ಅಂತ ಹೇಳಿ ಇಂದು ದಿನಾಂಕ :-18/04/2016 ರಂದು
ಮುಂಜಾನೆ 07-00 ಗಂಟೆ ಸುಮಾರಿಗೆ ನನ್ನ ಗಂಡ ಕೈಯಿಂದ ನನ್ನ ಕಪಾಳಕ್ಕೆ ಹೊಡೆದನು. ಮತ್ತು ನನ್ನ ಮೈದುನ
ವೆಂಕಟೇಶ ಇವನು ಕಾಲಿನಿಂದ ಒದ್ದನು. ಇದನ್ನು ಕಂಡು ನಮ್ಮ ತಮ್ಮನಾದ ಸುರೇಶ ತಂದೆ ಹನುಮಪ್ಪ ಪಟ್ಟದಕಲ್ಲು
ಈತನು ಬಂದು ಜಗಳಾ ಬಿಡಿಸಿ ಬುದ್ದಿವಾದ ಹೇಳಿ ಕಳಿಸಿದನು. ಈ ವಿಷಯವನ್ನು ನಮ್ಮ ಕುಲದ ಗುರು-ಹಿರಿಯರಿಗೆ
ತಿಳಿಸಿ ಈ ದಿವಸ ನನ್ನ ತಂದೆಯೊಂದಿಗೆ ಠಾಣೆಗೆ ಬಂದು ದೂರು ಕೊಟ್ಟ ಸಾರಾಂಶದ ಮೇಲಿಂದ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment