1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 89/2016 ಕಲಂ: 279, 337, 338, 304(ಎ) ಐ.ಪಿ.ಸಿ ಮತ್ತು 187
ಐ.ಎಂ.ವಿ. ಕಾಯ್ದೆ.
ದಿ:25.04.2016 ರಂದು ರಾತ್ರಿ 7.30 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ರಸ್ತೆ
ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಎಮ್.ಎಲ್.ಸಿ ಮಾಹಿತಿ
ಬಂದಿದ್ದರಿಂದ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಾತಿಮಾ ಗಂಡ ಶಫಿಸಾಬ
ಬೆದವಟ್ಟಿ, ವಯ:30 ವರ್ಷ, ಸಾ: ಕೆಮ್ಮಣ್ಣಕುಣಿ, ಕುಕನೂರ ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೆನೆಂದರೇ, ದಿ: 25.04.2016 ರಂದು ಬೆಳಿಗ್ಗೆ 07.00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮೂರಿನ 1]
ನಾಗವೇಣಿ ತಟ್ಟಿ, 2] ಕುಸುಮಾ ತಟ್ಟಿ, 3] ವೀರಪ್ಪ ವೀರಾಪುರ, 4] ನಿರಂಜನಿ ಹರಿಜನ 5] ಆಶಾಬೀ, 6] ಬೀಬಿಜಾನ @ ಬೀಬವ್ವ ಗಾದಿ 8]
ಸರೋಜಾ ಸಬರದ 9] ಗಂಗಮ್ಮ ಲಂಗಟಿ 10] ಅನ್ನಪೂರ್ಣ ಕೊಂಡಿಕಾರ 11] ಮಂಜುಳಾ ಹಿರೇಮನಿ, 12] ಲಕ್ಷ್ಮೀ ಮೆಣಸನಕೇರಿ, 13] ಶಕುಂತಲಾ ತಟ್ಟಿ, 14] ಅನ್ನಪೂರ್ಣ
ಬಡಿಗೇರ, 15] ನಿರ್ಮಲಾ ಶಿವಪುರ
ಎಲ್ಲರೂ ಕೂಡಿ ಶಿವಮೂರ್ತಿ ಹರಿಜನ ಸಾ: ರಾಜೂರ ಇವರ ಆಟೋ ನಂ: ಕೆ.ಎ-37/ಎ-4216 ನೇದ್ದರಲ್ಲಿ
ಕುಳಿತುಕೊಂಡು ಕೊಪ್ಪಳ ತಾಲೂಕಿನ ಹುಚ್ಚೀರೇಶ್ವರ ಕ್ಯಾಂಪದಲ್ಲಿದ್ದ ಇಂದರಗಿ ಬಂಧುಗಳ
ಮದುವೆ ಕಾರ್ಯಕ್ರಮದಲ್ಲಿ ಅಡುಗೆ ಬಡಿಸುವ ಕೂಲಿಕೆಲಸಕ್ಕೆಂದು ಹೋಗಿ ಅಡುಗೆ ಬಡಿಸುವ ಕೆಲಸ ಮುಗಿದ
ನಂತರ, ಅದೇ ಆಟೋದಲ್ಲಿ ನಾವೆಲ್ಲಾ
ಹತ್ತಿಕೊಂಡು ವಾಪಸ್ ನಮ್ಮ ಊರು ಕುಕನೂರಿಗೆ ಹೋಗಲು ಅಂತಾ ಕೊಪ್ಪಳ ಗದಗ ರಾ.ಹೆ-63 ರಸ್ತೆಯಲ್ಲಿ
ಹೊರಟು ಹಲಗೇರಿ ಸಮೀಪದ ಇನ್ನೂ ಮುಂದೆ ಒಂದು ಫರ್ಲಾಂಗ್ ಅಂತರದಲ್ಲಿ ನಮ್ಮ ಆಟೋವನ್ನು ಚಾಲಕನು
ನಿಧಾನಕ್ಕೆ ಓಡಿಸಿಕೊಂಡು ಹೋಗುತ್ತಿರುವಾಗ, ಅದೇವೇಳೆಗೆ ಎದುರುಗಡೆಯಿಂದ ಅಂದರೆ ಗದಗ ಕಡೆಯಿಂದ ಲಾರಿ ನಂ: ಕೆಎ-25/ಸಿ-939 ನೇದ್ದನ್ನು
ಅದರ ಚಾಲಕ ತನ್ನ ಲಾರಿಯನ್ನು ಅತೀ ಜೋರಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ
ರೀತಿಯಲ್ಲಿ ನಡೆಸಿಕೊಂಡು ಬಂದು ನಮ್ಮ ಆಟೋಕ್ಕೆ ಟಕ್ಕರ ಕೊಟ್ಟು ಅಪಘಾತಪಡಿಸಿ ಲಾರಿ ಚಾಲಕ ಓಡಿ
ಹೋಗಿದ್ದು ಇರುತ್ತದೆ. ಈ ಅಪಘಾತದಲ್ಲಿ ಆಟೋದಲ್ಲಿದ್ದ ನನಗೆ ಮತ್ತು ಲಕ್ಷ್ಮೀ ಮೆಣಸನಕೇರಿ, ಶಕುಂತಲಾ ತಟ್ಟಿ, ಅನ್ನಪೂರ್ಣ ಬಡಿಗೇರ, ನಿರ್ಮಲಾ ಶಿವಪುರ ಹಾಗೂ ಲಾರಿಯ ಕ್ಲೀನರ್ ದಾವಲಸಾಬ ಹುಬ್ಬಳ್ಳಿ ಇವರಿಗೆ ಸಾದಾ ಮತ್ತು ಭಾರಿ
ಸ್ವರೂಪದ ಗಾಯ ಮತ್ತು ಪೆಟ್ಟುಗಳಾಗಿದ್ದು ಮತ್ತು ನಮ್ಮ ಆಟೋದಲ್ಲಿದ್ದ 1] ನಾಗವೇಣಿ ತಟ್ಟಿ, 2] ಕುಸುಮಾ ತಟ್ಟಿ, 3] ವೀರಪ್ಪ ವೀರಾಪುರ, 4] ಆಶಾಬೀ, 5] ಬೀಬಿಜಾನ @ ಬೀಬವ್ವ ಗಾದಿ 6] ಸರೋಜಾ ಸಬರದ 7] ಗಂಗಮ್ಮ ಲಂಗಟಿ 8] ಅನ್ನಪೂರ್ಣ ಕೊಂಡಿಕಾರ 9]
ಮಂಜುಳಾ ಹಿರೇಮನಿ, ಅಟೋ ಚಾಲಕ 10] ಶಿವಮೂರ್ತಿ
ಹರಿಜನ ಇವರುಗಳಿಗೆ ಭಾರಿ ರಕ್ತಗಾಯಗಳಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ನಾವೆಲ್ಲರೂ 108 ಅಂಬುಲೆನ್ಸ ದಲ್ಲಿ
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಗೆ ಯಾಗಿದ್ದು ಇರುತ್ತದೆ. ಅಪಘಾತದಲ್ಲಿ
ತೀವ್ರ ಗಾಯಗೊಂಡಿದ್ದ ನಿರಂಜಿನಿ ಹರಿಜನ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ರಾತ್ರಿ 8.15
ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಕಾರಣ ಅಪಘಾತಪಡಿಸಿದ ಲಾರಿ ನಂ:
ಕೆಎ-25/ಸಿ-939 ನೇದ್ದರ ಚಾಲಕನನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ಕೋರಿದ ವಗೈರಾ ಹೇಳಿಕೆ
ಫಿರ್ಯಾದಿ ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ: 12/2016 ಕಲಂ: 279, 338 ಐ.ಪಿ.ಸಿ:
ದಿನಾಂಕ
25-04-2016 ರಂದು ಮದ್ಯಾನ್ನ 2-00 ಗಂಟೆ ಸುಮಾರು ಆರೋಪಿತನು ತನ್ನ ಹೆಂಡತಿಯಾದ ಗೌರಿ ವಯಸ್ಸು 20 ಇವಳು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಗಬರ್ಿಣಿ ಇರುವುದರಿಂದ ಇಲಾಜು ಮಾಡಿಸಿಕೊಂಡು ಇವಳನ್ನು ತನ್ನ ಟಿವಿಎಸ್ ಎಕ್ಸ ಎಲ್ ಸೂಪರ ಮೋ /ಸೈ ನಂ ಕೆ.ಎ. 27-ಎಚ್ 3019 ನೇದ್ದರ ಹಿಂದೆ ಕೂಡಿಸಿಕೊಂಡು ಮನೆಗೆ ವಾಪಸ್ಸು ಹೋಗುವಾಗ ಕೋರ್ಟ ಹತ್ತಿರ ಆರೋಪಿತನು ತನ್ನ ಮೋಟಾರು ಸೈಕಲ್ಲನ್ನು ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೊರಟು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಗೌರಿ ಇವಳು ಮೋಟಾರು ಸೈಕಲ್ಲ ಮೇಲಿಂದ ರಸ್ತೆ ಮೇಲೆ ಬಿದ್ದಾಗ ಅವಳ ತಲೆಯ ಹಿಂದೆ ಭಾರಿ ಒಳಪೆಟ್ಟು ಮತ್ತು ರಕ್ತಗಾಯವಾಗಿದ್ದು ಕಾರಣ ಸದರಿ ಆರೋಫಿತನ ವಿರುದ್ದ ಕಲಂ 279
338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3] ಹನುಮಸಾಗರ ಪೊಲೀಸ್
ಠಾಣೆ ಗುನ್ನೆ ನಂ. 34/2016 ಕಲಂ 341, 323, 324, 504,
506 ಸಹಿತ 34 ಐ.ಪಿ.ಸಿ
ಫಿರ್ಯಾದಿದಾರು ಹೊಲದಲ್ಲಿ ಎರಡು ಬೋರುಗಳಿದ್ದು ಅದರಲ್ಲಿ ಒಂದು ಬೋರಿನ ದುಡ್ಡು ತುಂಬಿ ಕಲೇಕ್ಷನ್
ಕೊಟ್ಟಿದ್ದು ಇನ್ನೊಂದು ಬೋರಿನ ಕರೆಂಟ ವೈಯರ ಎಳೆದು ಹಾಗೆ ಬಿಟ್ಟುದ್ದು ಅದನ್ನು ಆರೋಪಿ ಒಂದು ನೇದ್ದವನು
ಕಟ್ಟು ಮಾಡಿದ್ದನ್ನು ಫಿರ್ಯಾದಿ ನೋಡಿ ಯಾಕೆ ಕಟ್ಟ ಮಾಡಿದಿ ಅಂತಾ ಕೇಳಿದ್ದಕ್ಕೆ ಆರೋಪಿತನು ಅವಾಚ್ಯ
ಬೈದಾಡಿ ಫಿರ್ಯಾದಿಯ ಕೈ ಹಿಡಿದು ಮುಂದೆ ಹೋಗದಂತೆ ತಡೆದು ನಿಲ್ಲಿಸಿದಾಗ ಆರೋಪಿ 2 ಮತ್ತು 3 ರವರು
ಬಂದವರೆ ಫಿರ್ಯಾದಿಗೆ ಆರೋಪಿ ಪಡಿಯಪ್ಪ ಕೈಯಿಂದ ಹೊಡೆದಿದ್ದು ಆರೋಪಿ ಶಂಕ್ರಪ್ಪನು ಮೇವು ಹಿರಿಯುವ
ಬಿದರು ಕಾವು ಇರುವ ವಂಕಿ ಯಿಂದ ಫಿರ್ಯಾಧಿಯ ಎಡಗೈ ರೆಟ್ಟೆಗೆ ಹೊಡೆದು ರಕ್ತಗಾಯಮಾಡಿ ಮತ್ತೆ ಅದರಿಂದ
ಎಡಗಾಲ ಮೋಣಕಾಲ ಕೆಳಗೆ, ಎಡ ಪಕಡಿಗೆ ಹೊಡೆದು ಮೂಖ ಪೆಟ್ಟು ಮಾಡಿದ್ದು ಇರುತ್ತದೆ. ಫಿರ್ಯಾದಿ ಕೆಳಗೆ
ಬಿದ್ದಾಗ ಆರೋಪಿ ಪಡಿಯಪ್ಪನು ಕೈಯಿಂದ ಬಲ ಕಿವಿಯ ಹತ್ತಿರ ಹೊಡೆದಿದ್ದು ಇರುತ್ತದೆ ನಂತರ ಒಂದು ಖಾಸಗಿ
ವಾಹನದಲ್ಲಿ ಊರಿಗೆ ಬಂದು ಊರಲ್ಲಿ ಹಿರಿರನ್ನು ವಿಚಾರಿಸಿ ನಂತರ ತಡವಾಗಿ ಠಾಣೇಗೆ ಬಂದಿದ್ದು ಇರುತ್ತದೆ
ಸದರಿ ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಫಿರ್ಯಾಧಿ ಇರುತ್ತದೆ.
4] ಹನುಮಸಾಗರ ಪೊಲೀಸ್
ಠಾಣೆ ಗುನ್ನೆ ನಂ. 35/2016 ಕಲಂ 341, 323, 355, 324,
504, 506 ಸಹಿತ 34 ಐ.ಪಿ.ಸಿ
ಫಿರ್ಯಾದಿದಾರು ಹೊಲದಲ್ಲಿಯ ಕರೆಂಟ್ ಕಂಬಕ್ಕೆ ಆರೋಪಿತರ ಹೊಲದಿಂದ ಬೋರಿನ ಕರೆಂಟ್ ಕಲೆಕ್ಷನ
ಕೊಟ್ಟಿದ್ದು ವೈಯರ ಬಿದಿದ್ದು ಆರೋಪಿತರೆಲ್ಲಾ ಸೇರಿ
ಬಸ ನಿಲ್ದಾಣದ ಹತ್ತಿರ ನಿಂತಿದ್ದ ಫಿರ್ಯಾದಿಯನ್ನು ಆರೋಪಿ ಸಿಂದೂರಪ್ಪ ಗಟ್ಟಿಯಾಗಿ ಹಿಡಿದುಕೊಂಡಾಗ
ಆಗ ಮಲ್ಲಪ್ಪ ಕೈಯಿಂದ ಫಿರ್ಯಾಧಿ ಕಪಾಳಕ್ಕೆ ಹೊಡೆದಿದ್ದು. ಆರೋಪಿ ಸುಮಿತ್ರವ್ವ ತನ್ನ ಕಾಲಲ್ಲಿಯ ಚಪ್ಪಲಿಯಿಂದ
ಕಪಾಳಕ್ಕೆ ಹೊಡೆದಿದ್ದು ಆಗ ಶಂಕ್ರಪ್ಪನು ಬಿಡಿಸಲು ಬಂದಾಗ ಮಲ್ಲಪ್ಪ ಅಲ್ಲಿಯೇ ಬಿದಿದ್ದ ಒಂದು ಕಲ್ಲಿನಿಂದ
ಶಂಕ್ರಪ್ಪನ ಎದೆಗೆ ಹೊಗೆದು ಗಾಯಮಾಡಿದ್ದು ಇರುತ್ತದೆ. ಆಗ ಜನರು ಬಿಡಿಸುವಷ್ಟರಲ್ಲಿ. ಸಿಂದೂರಪ್ಪನು
ಲೇ ಮಕ್ಕಳ ಇವತ್ತು ನಿಮ್ಮ ತಾಯಿ ಹೊಟ್ಟಿ ತಣ್ಣಗೈತಿ ಉಳಕಂಡಿರೇಲೆ ಮಕ್ಕಳ ಇಲ್ಲಾಂದರ ನಿಮ್ಮ ಜೀವ ಸಹಿತ
ಉಳಿಸುತ್ತಿದ್ದಿಲ್ಲಾ. ಅಂತಾ ಜೀವದ ಬೇದರಿಕೆ ಹಾಕಿ ಹೋದಿದ್ದು ಇರುತ್ತದೆ. ನಂತರ ರಲ್ಲಿ ಹಿರಿರನ್ನು
ವಿಚಾರಿಸಿ ತಡವಾಗಿ ಠಾಣೆಗೆ ಬಂದು ಲಿಖಿತ ಫಿರ್ಯಾದಿ ನೀಡಿದ್ದು ಇರುತ್ತದೆ.
5] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ. 94/2016 ಕಲಂ 143, 147, 341, 323,
324, 504, 506 ಸಹಿತ 149 ಐ.ಪಿ.ಸಿ:.
ದಿ 25-04-16 ರಂದು ಮದ್ಯಾಹ್ನ
3-55 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಗಂಗಮ್ಮ ಗಂಡ ಆಂಜನೇಯಪ್ಪ ಆರ್.ಸಿ.ಸಿ ವಯಾ- 60 ವರ್ಷ, ಜಾ. ಉಪ್ಪಾರ ಉ-ಮನೆಕೆಲಸ ಸಾ. ಉಪ್ಪಾರ ಓಣಿ ಕಾರಟಗಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ನನಗೆ 7 ಜನ ಮಕ್ಕಳು ಇದ್ದು ಇದರಲ್ಲಿ ನನ್ನ ಮಗನಾದ ಮಾರುತಿ
ಈತನನ್ನು ಕಾರಗಟಿಯ ಪುರಸಭೆ ಚುನಾವಣೆ ವಾರ್ಡ ನಂ 2 ಕಾಂಗ್ರೇಸ್ ಪಕ್ಷದ ಅಭ್ಯಾರ್ಥಿಯಾಗಿ ನಿಂತುಕೊಂಡಿದ್ದನು ಅದೇ ರೀತಿಯಾಗಿ ನಮ್ಮ ಓಣಿಯಲ್ಲಿ ಮಾರುತಿ ಈಡಿಗೇರ ತಂದಿ ತಿಮ್ಮನೆಟ್ಟಪ್ಪ ಈಡಿಗೇರ ಈತನು ನಮ್ಮ ಮಗನ ವಿರುದ್ದ ಬಿಜೆ.ಪಿ ಪಕ್ಷದ ವತಿಯಿಂದ ಚುನಾವಣೆಯಲ್ಲಿ ನಿಂತುಕೊಂಡಿರುತ್ತಾರೆ ಸದರಿ ಮಾರುತಿ ಈಡಿಗೇರ ಇವರಿಗೆ ದಿನಾಂಕ:-23-04-2016
ರಂದು ಬೆಳಗಿನ ಜಾವ ಆತನ ಮೇಲೆ ಯಾರೋ ಮರಣಾಂತಿಕವಾಗಿ ಹಲ್ಲೇ ಮಾಡಿದ್ದರಿಂದ ಅವರು ಕಾರಟಗಿ ಪೊಲೀಸ ಠಾಣೆಯಲ್ಲಿ ಕೇಸ ಮಾಡಿಸಿರುತ್ತಾರೆ ಈ ಹಲ್ಲೆಯನ್ನು ನಮ್ಮ ಹುಡುಗರೆ ಮಾಡಿರುತ್ತಾರೆ ಅಂತಾ ನಮ್ಮ ಹುಡಗರ ಮೇಲೆ ದ್ವೇಷ ಸಾದಿಸುತ್ತಿದ್ದು ಇಂದು ದಿನಾಂಕ:-25-04-2016
ರಂದು ಮದ್ಯಾಹ್ನ
1-40 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಪ್ರಕಾಶ ನಮ್ಮ ಮನೆಯ ಮುಂದೆ ಮಾತನಾಡುತ್ತಾ ನಿಂತುಕೊಂಡಿದ್ದಾಗ್ಗೆ ಆರೋಪಿತರಲ್ಲರೂ ಸೇರಿಕೊಂಡು ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಬಂದು ನನಗೆ ಅವಚ್ಯವಾಗಿ ಬೈದಾಡಿ ನನ್ನ ಮೇಲೆ ಮರಣಾಂತಿಕ ಹಲ್ಲೇ ಮಾಡಿ ಊರಲ್ಲಿ ತಿರುಗಾಡುತ್ತಾರೆ ಅಂತಾ ನಮ್ಮ ಮನೆ ಮುಂದೆ ಬೈದಾಡತ್ತಿರುವಾಗ್ಗೆ ನಾನು ಈ ರೀತಿ ಯಾಕೆ ನಮ್ಮ ಮಕ್ಕಳ ಮೇಲೆ ಅನುಮಾನ ಪಡುತ್ತಿರಿ ಅಂತಾ ಅಂದಿದ್ದಕ್ಕೆ ದುರುಗಮ್ಮ, ಗಂಗಮ್ಮ, ರೇಣುಕಮ್ಮ ಇವರು ನನ್ನ ತಡೆದು ನಿಲ್ಲಿಸಿ ನನ್ನ ಎದೆಯ ಮೇಲಿನ ಸೀರೆ ಹಿಡಿದು ಎಳೆದಾಡಿ ಕೈಯಿಂದ ಹೊಡೆ ಬಡೆ ಮಾಡುತ್ತಿದ್ದರು ನನ್ನ ಮಗ ಪ್ರಕಾಶ ಮತ್ತು ಚೇತನ್ ಇವರು ಬಿಡಿಸಿಕೊಳ್ಳಲು ಬಂದಾಗ್ಗೆ ಆರೋಪಿತರೆಲ್ಲರೂ ಅವರಿಬ್ಬರು ಹಿಡಿದುಕೊಂಡು ಕಟ್ಟಿಗೆಯಿಂದ, ಕೈಯಿಂದ ಬಡೆದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಈ ಜಗಳದಲ್ಲಿ ಚೇತನಕುಮಾರ ಈತನ ಕೊರಳಲ್ಲಿ ಇದ್ದ ಬಂಗಾರದ ಸರ ಬಿದ್ದು ಹೋಗಿರುತ್ತದೆ ಮತ್ತು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
6] ಕಾರಟಗಿ ಪೊಲೀಸ್
ಠಾಣೆ ಗುನ್ನೆ ನಂ. 95/2016 ಕಲಂ 143, 147, 341, 323,
324, 504, 506 ಸಹಿತ 149 ಐ.ಪಿ.ಸಿ:.
ದಿ 25-04-16 ರಂದು ಮದ್ಯಾಹ್ನ
4-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಬೇರೆಗೆ ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದ ಮೇರೆಗೆ ಕೂಡಲೆ ಆಸ್ಪತ್ರೆಗೆ ಬೇಟಿಕೊಟ್ಟು
ಗಾಯಾಳು ಪಿರ್ಯಾದಿದಾರರಾದ ಶ್ರೀಮತಿ ಗಂಗಮ್ಮ ಗಂಡ ಮಾರುತಿ ಈಡಿಗೇರ ವಯಾ-35 ವರ್ಷ ಜಾ- ಈಡಿಗೇರ ಉ- ಮನೆಗೆಲಸ ಸಾ- 2ನೇ ವಾರ್ಡ ಕಾರಟಗಿ ತಾ- ಗಂಗಾವತಿ ಇವರಿಗೆ ವಿಚಾರ ಮಾಡಿದ್ದು ಸದರಿಯವರು ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರ ಗಂಡ ಶ್ರೀ ಮಾರುತಿ ಈಡಿಗೇರ ಈತನು ಕಾರಟಗಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷದಿಂದ ಸ್ಪರ್ದಿಸಿದ್ದರು ಇವರಿಗೆ ಎದುರಾಗಿ ಮಾರುತಿ ಆರ್.ಸಿ.ಸಿ ರವರು ಸ್ಪರ್ದೆ ಮಾಡಿದ್ದರು ದಿನಾಂಕ:-23-04-2016
ರಂದು ಬೆಳಗಿನ ಜಾವ 4-30 ಗಂಟೆಯ ಸುಮಾರಿಗೆ ಯಾರೋ 3 ಜನರು ಹಲ್ಲೆ ಮಾಡಿದ್ದರಿಂದ ನನ್ನ ಗಂಡ ಈ ಬಗ್ಗೆ ಕಾರಟಗಿ ಪೊಲೀಸ ಠಾಣೆಯಲ್ಲಿ ಕೇಸ ಮಾಡಿಸಿರುತ್ತಾನೆ. ನನ್ನ ಗಂಡನಿಗೆ ಆರಾಮ ಇಲ್ಲದ್ದರಿಂದ ಸರಕಾರಿ ಆಸ್ಪತ್ರೆಯಲ್ಲ ಚಿಕಿತ್ಸೆ ಪಡೆಯುತ್ತಿದ್ದರು ಇಂದು ದಿನಾಂಕ:-25-04-2016
ರಂದು ಮದ್ಯಾಹ್ನ
1-50 ಗಂಟೆಯ ಸುಮಾರಿಗೆ ನಾನು ನನ್ನ ನಾದಿನಿಯರಾದ ಲಕ್ಷ್ಮೀ ಗಂಡ ವೆಂಕಟೇಶ ಬೂದಿಹಾಳ ಕ್ಯಾಂಪ್ ಕೂಡಿಕೊಂಡು ನಮ್ಮ ಮನೆಗೆ ಹೋಗಲೆಂದು ಆರ್.ಸಿ.ಸಿಯವರ ಮನೆ ಮುಂದೆ ಹೋರಟಿದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಸಮಾನ ಉದ್ದೇಶದಿಂದ ಬಂದು ಈ ಬೀದಿ ಸೂಳೆಯವರು ಅಂತಾ ಮುಂತಾಗಿ ಅಶ್ಲೀಲವಾಗಿ ಬೈದಾಡಿ ಮತ್ತು ತಡೆದು ನಿಲ್ಲಿಸಿ ಬಡಿಗೆಯಿಂದ ಬಡೆದು ಲಕ್ಷ್ಮಿ ಮತ್ತು ವಿಜಯ ಲಕ್ಷ್ಮೀ ಇವರು ಸೀರೆ ಹಿಡಿದು ಎಳೆದಾಡಿ ಎಲ್ಲರೂ ಕೈಯಿಂದ ಬಡೆದು ಜೀವ ಬೆದರಿಕೆ ಹಾಕಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 83/2016 ಕಲಂ
143, 147, 448, 323, 354, 504 ಸಹಿತ 149:.
ದಿನಾಂಕ 25-04-2016 ರಂದು 19-30 ಗಂಟೆಗೆ ಅಮ್ಜದ
ಅನ್ಸಾರಿ ತಂದೆ ಎಂ.ಎಸ್. ಅನ್ಸಾರಿ ವಯಸ್ಸು 36 ವರ್ಷ ಜಾ: ಮುಸ್ಲಿಂ ಉ: ವ್ಯವಸಾಯ ಸಾ: ಬಂಬು ಬಜಾರ
ಇಸ್ಲಾಂಪುರ ಗಂಗಾವತಿ ಇವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 23-04-2016 ರಂದು
ರಾತ್ರಿ 01-00 ಎ.ಎಂ. ಸುಮಾರಿಗೆ ಆರೋಪಿತರಾದ ಜುಬೇರ ಹಾಗೂ ಇತರೆ 07 ಜನರು ಮತ್ತು ಕೌಸರ್ ಅನ್ಸಾರಿ
ಇವರು ಅಕ್ರಮ ಕೂಟ ರಚಿಸಿಕೊಂಡು ಗಂಗಾವತಿ ನಗರದ ಇಸ್ಲಾಂಪುರದ ಬಂಬು ಬಜಾರದಲ್ಲಿರುವ ಫಿರ್ಯಾದಿದಾರರ
ಮನೆಯೊಳಗೆ ಅತಿಕ್ರಮಣ ಪ್ರವೇಶ ಮಾಡಿ ಫಿರ್ಯಾದಿದಾರರ ಮೇಲೆ ಹಲ್ಲೆ ಮಾಡಿದ್ದು ಫಿರ್ಯಾದಿಯನ್ನು ಬಿಡಿಸಲು
ಬಂದ ಅವರ ಪತ್ನಿಯನ್ನು ದಬ್ಬಾಡಿ, ಎಳೆದಾಡಿದ್ದು ಫಿರ್ಯಾದಿಯು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು
ಮನೆಗೆ ಬಂದ ನಂತರವು ಸಹ ಆರೋಪಿತರು ಪುನ: ಹಲ್ಲೆ ಮಾಡಲು ಬಂದಿರುತ್ತಾರೆಂದು ವಗೈರೆ ಆಗಿ ನೀಡಿದ ಫಿರ್ಯಾದಿ
ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment