1) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 18/2016 ಕಲಂ. 279 ಐ.ಪಿ.ಸಿ.
ದಿನಾಂಕ 15-04-2016
ರಂದು ಸಂಜೆ 4-00 ಗಂಟೆಗೆ
ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ಫಿರ್ಯಾದಿಯನ್ನು ಹಾಜರಪಡಿಸಿದ್ದು ಅದರ
ಸಾರಾಂಶವೆನೆಂದೆ,
ದಿನಾಂಕ. 15-04-2016 ರಂದು ಸಂಜೆ 3-30
ಗಂಟೆಗೆ ಫಿರ್ಯಾದಿ ತನ್ನ ಕಾರ ನಂಬರ KA-37/M-9219 ನೆದ್ದರಲ್ಲಿ ತಮ್ಮ ಸಂಭಂದಿಕರನ್ನು ಕರೆದುಕೊಂಡು ಕೊಪ್ಪಳದಿಂದ ಕುಕನೂರಿಗೆ ಹೋಗಲು ಕಾರ
ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ನಗರ ಸಭೆಯ ಮುಂದೆ ಬಸ್ ನಿಲ್ದಾಣದ ಕಡೆಗೆ ಹೊಗುತ್ತಿರುವಾಗ, ಹಿಂದಿನಿಂದ ಒಬ್ಬ ಲಾರಿ ನಂ. AP-04/X-8104 ನೆದ್ದರ ಚಾಲಕನು ಮಧ್ಯ ಸೇವನೆಮಾಡಿ ತಾನು ಚಲಾಯಿಸುತ್ತಿರುವ ಲಾರಿಯನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಕಾರಿನ ಹಿಂದಿನ ಭಾಗಕ್ಕೆ ಟಕ್ಕರಮಾಡಿ
ಅಪಘಾತಮಾಡಿದ್ದರಿಂದ ಕಾರಿನ ಹಿಂದಿನ ಭಾಗ ಮತ್ತು ಮುಂದಿನ ಬಾಗ ಡ್ಯಾಮೇಜ ಆಗಿರುತ್ತದೆ
ಕಾರಿನಲ್ಲಿದ್ದವರಿಗೆ ಯಾವುದೇ ರಿತೀಯ ಗಾಯಗಳು ಆಗಿರುವುದಿಲ್ಲ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 31/2016 ಕಲಂ:
498(ಎ), 323, 504, 506 ಸಹಿತ 34 ಐ.ಪಿ.ಸಿ ಹಾಗೂ 3 & 4 ಡಿ.ಪಿ. ಕಾಯ್ದೆ.
ಫಿರ್ಯಾದಿ ಶ್ರೀಮತಿ ಸುಮಿತ್ರಾ ಗಂಡ ಮಲ್ಲಪ್ಪ ಬಲಕುಂದಿ,
ವಯಾ: 26 ವರ್ಷ, ಜಾ: ವಾಲ್ಮೀಕಿ, ಉ: ಕೂಲಿ ಸಾ: ಹುಲಗೇರಿ
ಹಾ:ವ: ಯರಿಗೋನಾಳ ತಾ: ಕುಷ್ಟಗಿ ಇವರಿಗೆ ಈಗ್ಗೆ 6-7 ವರ್ಷಗಳ ಹಿಂದೆ ಹುಲಗೇರಿ ಗ್ರಾಮದ ಮಲ್ಲಪ್ಪ ಬಲಕುಂದಿ ರವರ ಸಂಗಡ ಗುರುಹಿರಿಯರ
ಸಮಕ್ಷಮ ಮದುವೇಯಾಗಿದ್ದು ಗಂಡ ಹೆಂಡತಿ ಚೆನ್ನಾಗಿ 3-4 ವರ್ಷ ಸಂಸಾರ ಮಾಡಿ ಒಂದು ಗಂಡು ಒಂದು ಹೆಣ್ಣು
ಎರಡು ಮಕ್ಕಳಾಗಿದ್ದು ನಂತರ ಗಂಡನ ಮನೆಯವರಾದ 4 ಜನ ಆರೋಪಿತರು 50,000/- ರೂಪಾಯಿಗಳು ಮತ್ತು 5 ತೊಲೆ
ಬಂಗಾರ ತೆಗೆದುಕೊಂಡು ಬರ ಬೇಕು ಅಂತಾ ಪೀಡಿಸಿ ದೈಹಿಕ ಹಾಗೂ ಮಾನಸಿಕ ಹಿಂಶೆ ನೀಡಿ ಕೈಯಿಂದ ಹೊಡೆ ಬಡೆ,
ಮಾಡಿ ಮನೆಯಿಂದ ಹೊರಗೆ ಹಾಕಿ ನಂತರ ಫಿರ್ಯಾದಿ ತನ್ನ ತವರು ಮನೆಗೆ ಹೋಗಿದ್ದು, ನಂತರ ಫಿರ್ಯಾದಿ ಸುಮಿತ್ರಾಳ
ತಾಯಿ ಹಾಗೂ ಅಣ್ಣ ಸೇರಿ ಹೂಲಗೇರಿ ಗಂಡನ ಮನೆಗೆ ಹೋಗಿ ಬುದ್ದಿ ಹೇಳಲು ಹೋದಾಗ, 1] ಮಲ್ಲಪ್ಪ ತಂದೆ ಹನಮಂತಪ್ಪ ಬಲಕುಂದಿ 2] ಗಂಗವ್ವ ಗಂಡ ಹನಮಂತಪ್ಪ ಬಲಕುಂದಿ 3] ಹನಮಂಪ್ಪ
ತಂದೆ ಮಾಹಾಂತಪ್ಪ ಬಲಕುಂದಿ 4] ದ್ಯಾಮವ್ವ ಗಂಡ ಸಕ್ರಪ್ಪ ವಾಲ್ಮೀಕಿ ಎಲ್ಲರೂ ಸಾ: ಹುಲಗೇರಿ ತಾ: ಕುಷ್ಟಗಿ
ಆರೋಪಿತರೆಲ್ಲರೂ ಸೇರಿ ಕೈಯಿಂದ ಹೊಡೆದು, ಜೀವದ ಬೆದರಿಕೆ ಹಾಕಿದ್ದು, ಈ
ಬಗ್ಗೆ ಎಸ್.ಪಿ. ಸಾಹೇಬರು ಕೊಪ್ಪಳರವಲ್ಲಿ ಅರ್ಜಿ ಮಾಡಿ ನಂತರ ತಡವಾಗಿ ಠಾಣೆಗೆ ಬಂದು ಆರೋಪಿತರ ವಿರುದ್ದ
ಕಾನೂನು ಕ್ರಮ ಜರುಗಿಸುವಂತೆ ಲಿಖಿತ ಫಿರ್ಯಾದಿ ನೀಡಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
3) ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ: 75/2016 ಕಲಂ. 341, 504, 323, 506 ಐ.ಪಿ.ಸಿ.
ದಿನಾಂಕ 15-04-2016 ರಂದು 16-30 ಗಂಟೆಗೆ ಫಿರ್ಯಾದಿ ದೇವಪ್ಪ ತಂದೆ ಪಾಮಪ್ಪ ಕಾಮದೊಡ್ಡಿ ವಯಾ: 38 ವರ್ಷ, ಜಾ: ಪರಿಶಿಷ್ಟ ಜಾತಿ, ಉ:ವ್ಯವಸಾಯ, ಸಾ: ವಿರುಪಾಪುರ, ಗಂಗಾವತಿ. ರವರು ಠಾಣೆಗೆ ಬಂದು
ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಫಿರ್ಯಾಧಿರಾರರು ದಿನಾಂಕ: 15-04-2016 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಬಸ್ ಸ್ಟ್ಯಾಂಡ್ ರೋಡ್ ನಿಂದ ಕಾರಿನಲ್ಲಿ ಕೋರ್ಟ ಕಡೆ ಹೋಗುತ್ತಿದ್ದಾಗ ನಗರಸಭೆ ಹೊರಗುತ್ತಿಗೆ ಹೋರಾಟ ಮಾಡುತ್ತಿರುವ ಆರೋಪಿ ಸಿ.ಹೆಚ್. ನಾರಿನಾಳ ಮತ್ತಿತರರು ಫಿರ್ಯಾದಿ ಕಾರನ್ನು ತಡೆದು ನಿಲ್ಲಿಸಿದ್ದು, ಆಗ ಫಿರ್ಯಾದಿಯು ಕೆಳಗಿಳಿದು ನೋಡುತ್ತಿರುವಾಗ ಆರೋಪಿತರು ಏಕಾಏಕಿಯಾಗಿ ಫಿರ್ಯಾದಿಯ ಹತ್ತಿರ ಬಂದು ಲೇ ಸೂಳೇ ಮಗನೇ ತಾಯಿಗಂಡ ನನ್ನ ಮಗನೇ ಎಂದು ಮತ್ತು ಶಾಸಕ ಅನ್ಸಾರಿ ಮಾತು ಕೇಳಿ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲವೇನು ಎಂದು ಫಿರ್ಯಾದಿಯ ಬಟ್ಟೆಯನ್ನು ಹಿಡಿದು ಎಳೆದಾಡಿ ಹರಿದು ಕೈಯಿಂದ ಹೊಡೆಬಡೆ ಮಾಡಿ ನನಗೆ ಜಿಲ್ಲಾ ಮಂತ್ರಿಗಳ ಬೆಂಬಲವಿದೆ ನಾನು ಹೇಳಿದಂತೆ ಕೇಳಬೇಕು ನಗರಸಭೆಗೆ 141 ಜನರನ್ನು ಈ ಕೂಡಲೇ ಕೆಲಸಕ್ಕೆ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಿನ್ನನ್ನು ಜೀವಂತ ಸುಟ್ಟು ಹಾಕಿ ನಿನ್ನನ್ನು ಕೊಲೆ ಮಾಡಿಸುತ್ತೇನೆ ಅಂತಾ ಕೊಲೆ ಬೆದರಿಕೆ ಹಾಕಿದ ಸಿ.ಹೆಚ್ ನಾರಿನಾಳ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ: 76/2016 ಕಲಂ. 504, 506 ಐ.ಪಿ.ಸಿ.
ದಿನಾಂಕ 15-04-2016 ರಂದು 15-30 ಗಂಟೆಗೆ ಸಿ.ಎಚ್. ನಾರಿನಾಳ ಸಂಪಾದಕರು, ಸುದ್ದಿ ಚಿಂತನ
ಪಾಕ್ಷಿಕ ಪತ್ರಿಕೆ ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ಫಿರ್ಯಾದಿಯನ್ನು ನೀಡಿದ್ದು
ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ನಗರ ಸಭೆಯ ಪೌರ ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆಗಳ
ಈಡೇರಿಕೆಗಾಗಿ ಕಾನೂನು ಬದ್ದವಾಗಿ ಅನುಮತಿಯನ್ನು ಪಡೆದು ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಬಡ
ಕಾರ್ಮಿಕರಿಗೆ ಬೆಂಬಲಿಸುವ ಜನಪ್ರತಿನಿದಿಗಳ , ಪ್ರಗತಿಪರರ ಹಾಗೂ ಸಾಹಿತಿಗಳ ವಿರುದ್ದ ಅವಮಾನವೀಯ
ಹೇಳಿಕೆಯನ್ನು ನೀಡಿದ್ದು, ಅದಕ್ಕೆ ಉತ್ತರಿಸುವ ರೂಪದಲ್ಲಿ ಪತ್ರಿಕಾ ಗೋಷ್ಠಿಯನ್ನು ದಿನಾಂಕ:
15-04-2016 ರಂದು ಸಮಯ 1-30 ಗಂಟೆಗೆ ಕರೆಯಲಾಗಿದ್ದು , ಪತ್ರಿಕಾ ಗೋಷ್ಠಿ ನಡೆಯುತ್ತಿರುವಾಗ
ಸಿ.ಎಚ್. ನಾರಿನಾಳ ಮತ್ತು ಭಾರದ್ವಜ್ ರವರು ಹತ್ತಿರ ಬಂದು ದೇವಪ್ಪ ಕಾಮದೋಡ್ಡಿ “ ಏ ಸೂಳೇ ಮಕ್ಕಳೇ ಪತ್ರಿಕಾ ಗೋಷ್ಠಿಯಲ್ಲಿ
ಏನ್ಲೇ ಮಾತಾಡೂತ್ತೀರಿ, ನಿಮ್ಮನ್ನು ನೋಡಿಕೊಳ್ಳುತ್ತೇನೆ. ಜೀವ ಸಹಿತ ಬಿಡುವುದಿಲ್ಲಾ “ ಎಂದು ಬೆದರಿಕೆ ಹಾಕಿರುತ್ತಾನೆ. ಅಂತಾ
ಮುಂತಾಗಿ ಫಿರ್ಯಾದಿಯನ್ನು ನೀಡಿದ್ದು ಇರುತ್ತದೆ. ಸದರಿ ಅಫರಾದವು ಆಸಂಜ್ಞೆಯ ಅಪರಾಧ ಅಗಿದ್ದರಿಂದ
ಅರೋಪಿತರ ವಿರುದ್ದ ಕಲಂ: ಕಲಂ 504, 506 ಐ.ಪಿ.ಸಿ ಅಡಿಯಲ್ಲಿ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಇಂದು ದಿನಾಂಕ
15-04-2016 ರಂದು 18-30 ಗಂಟೆಗೆ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
5) ಗಂಗಾವತಿ ನಗರ ಪೊಲೀಸ್
ಠಾಣೆ ಗುನ್ನೆ ನಂ: 77/2016 ಕಲಂ. 504, 506 ಐ.ಪಿ.ಸಿ.
ದಿನಾಂಕ 15-04-2016 ರಂದು 19-00 ಗಂಟೆಗೆ ಫಿರ್ಯಾಧಿ
ಶ್ರೀ ಕಮ್ಲಿಬಾಬಾ ತಂದೆ ಮೆಹಬೂಬಸಾಬ್ ಉಪಾಧ್ಯಕ್ಷರು ನಗರ ಸಭೆ ಗಂಗಾವತಿ ರವರು ಠಾಣೆಗೆ
ಹಾಜರಾಗಿ ಒಂದು ಫಿರ್ಯಾದಿಯನ್ನು ನೀಡಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ, ನಾನು ನಗರ
ಸಭೆಯಲ್ಲಿ ಕುಳಿತುಕೊಂಡಿದ್ದಾಗ ನಗರ ಸಭೆಯ ಮುಂಬಾಗದಲ್ಲಿ ನಡೆಯುತ್ತಿದ್ದ ಪ್ರತಿಭಟನಾ
ಮೆರವನಿಗೆಯಲ್ಲಿ ಗಲಾಟೆ ನಡೆಯುತ್ತಿವುದನ್ನು ಕೇಳಿ ಫಿರ್ಯಾದಿಯು ಕೂಡಲೇ ಸ್ಥಳಕ್ಕೆ ಹೋಗಿ
ನೋಡಲಾಗಿ ಸಿ.ಹೆಚ್ ನಾರಿನಾಳ ಇವರು ಬಹಿರಂಗವಾಗಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹಾಗೂ
ಚುನಾಯಿತ ಪ್ರತಿನಿಧಿಗಳಾದ ಶ್ರೀ ಇಕ್ಬಾಲ್ ಅನ್ಸಾರಿ ಇವರಿಗೆ ಅವಾಚ್ಯ ಶಬ್ದಗಳಿಂದ ಮತ್ತು
ಏಕವಚನದಲ್ಲಿ ಮಾತನಾಡುತ್ತಾ ಕ್ರಾಂಗ್ರೇಸ್ ಬೂಟು ನೆಕ್ಕಿ ಬಿ.ಜೆ.ಪಿ ಹೋಗ್ಯಾನ, ಲೇ ಬೂಸುಡಿಕೆ,
ಲೇ ಅನ್ಸಾರಿ, ನಿನ್ನ ಹಲ್ ಕಟಗಿರಿ ಗೋತ್ತು ಅಂದು ಅರ್ದ ತೆಗ್ಗು ತೋಡಿದ್ದೇನೆ ನಿನ್ನ ಅದರಲ್ಲಿ
ದಫನ್ ಮಾಡುತ್ತೇನೆ ಹಾಗೂ ಶಾಸಕರು ಯಾವುದೇ ಕಾರ್ಯಾಕ್ರಮದಲ್ಲಿ ಭಾಗವಹಿಸಿದರೆ
ಬಿಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಕೂಡಲೇ ಸಿ.ಹೆಚ್. ನಾರಿನಾಳ ಸಾ:
ಗಂಗಾವತಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಫಿರ್ಯಾದಿಯನ್ನು ನೀಡಿದ್ದು
ಇರುತ್ತದೆ. ಸದರಿ ಅಫರಾದವು ಆಸಂಜ್ಞೆಯ ಅಪರಾಧ ಅಗಿದ್ದರಿಂದ ಅರೋಪಿತರ ವಿರುದ್ದ ಕಲಂ: ಕಲಂ 504,
506 ಐ.ಪಿ.ಸಿ ಅಡಿಯಲ್ಲಿ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು
ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment