Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, April 17, 2016

1) ಕಾರಟಗಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 89/2016 ಕಲಂ. 171(H), 188 IPC. .  
ದಿನಾಂಕ:16-04-2016 ರಂದು  ಸಾಯಂಕಾಲ 5-00  ಗಂಟೆಯ ಸುಮಾರಿಗೆ  ಫಿರ್ಯಾದಿದಾರರಾದ ಶ್ರೀ  ಜಂಬಣ್ಣ ತಂದಿ  ಶಂಕ್ರಪ್ಪ  ಐಲಿ ವಯಾ- 57 ವರ್ಷ - ಸಾಹಾಯಕ ಕೃಷಿ ನಿರ್ದೇಶಕರು,  ಕೃಷಿ ಇಲಾಖೆ ಗಂಗಾವತಿ. ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ತಮಗೆ ಕಾರಟಗಿ ಪುರಸಭೆ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಗದಂತೆ ತಿವ್ರ ನಿಗಾವಹಿಸಿ ಎಮ್.ಸಿ.ಸಿ ತಂಡದ ಅಧಿಕಾರಿಗಳು ಅಂತಾ ಜಿಲ್ಲಾಧಿಕಾರಿಗಳು ಕಾರಟಗಿ ವಾರ್ಡ ನಂ 1 ರಿಂದ 11 ವರೆಗೆ ನೇಮಕ ಮಾಡಿದ್ದರ ಮೇರೆಗೆ ಇಂದು ದಿನಾಂಕ:-16-04-2016 ರಂದು ಕಾರಟಗಿ ವಾರ್ಡ ನಂ 4 ರಲ್ಲಿ ತಮ್ಮ ಜೀಪ್ ನಲ್ಲಿ ಬಂದಾಗ್ಗೆ ವಾರ್ಡ ನಂ 4 ರಲ್ಲಿ ಹೋದಾಗ್ಗೆ ವಾರ್ಡ ನಂ- 4ರಲ್ಲಿಯ  ಯಾವುದೋ ಪಕ್ಷದ ಅಭ್ಯರ್ಥಿಗಳು ಹಾಗೂ ಟ್ರ್ಯಾಕ್ಟರ್ ನಂ-ಕೆ.-37/ಟಿ.-7528 ನೇದ್ದರ ಚಾಲಕ ಬಸವರಾಜ ಸಾ- ಬಸವಣ್ಣಕ್ಯಾಂಪ್ ಹಾಗೂ ಟ್ರ್ಯಾಕ್ಟರ್ ನಂ- ಕೆ.-37/ಟಿ.ಬಿ-1135 ನೇದ್ದರ ಚಾಲಕ ಶಿವು ಸಾ-ಕಾರಟಗಿ ಇವರು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದಂತೆ  ಉಲ್ಲಂಘನೆ ಮಾಡಿ ಮತದಾರರನ್ನು ಸೆಳೆಯಲು ರಸ್ತೆ ಮಾಡುವ ಸಲುವಾಗಿ ಎರಡು ಟ್ರ್ಯಾಕ್ಟರ್ ಗಳ ಮುಖಾಂತರ ಮರಮ್ ನ್ನು ಏರುತ್ತಿದ್ದರಿಂದ ಎರಡು ಟ್ರ್ಯಾಕ್ಟರ್ ಗಳಲ್ಲಿ ಒಂದು ಟ್ರ್ಯಾಕ್ಟರ್ ನಂ ಟ್ರ್ಯಾಕ್ಟರ್ ನಂ- ಕೆ.-37/ಟಿ.ಬಿ-1135 ನೆದರ ಚಾಲಕ ಶೀವು ಟ್ರ್ಯಾಕ್ಟರ ತೆಗೆದುಕೊಂಡು ಓಡಿ ಹೋಗಿದ್ದು ಒಂದು ಟ್ರ್ಯಾಕ್ಟರ್ ನಂ-ಕೆ.-37/ಟಿ.-7528 ನೇದ್ದರ ಚಾಲಕ ಬಸವರಾಜ ಸಾ- ಬಸವಣ್ಣಕ್ಯಾಂಪ್ ಇತನಿಗೆ ಕರೆದುಕೊಂಡ ಬಂದು ಹಾಜರುಪಡಿಸಿ ನೀಡಿದ ದೂರಿನ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2) ಕಾರಟಗಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 90/2016 ಕಲಂ. 279, 338, 304(ಎ) ಐ.ಪಿ.ಸಿ.  
ದಿನಾಂಕ 16-04-2016 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ  ನೀಲಕಂಠಪ್ಪ ತಂದಿ ಮಲ್ಲಿಕಾರ್ಜುನ ಬಪ್ಪರ  ವಯಾ- 42 ವರ್ಷ ಜಾ- ಲಿಂಗಾಯತ ಸಾ- ಕಾರಟಗಿ ಇವರು ಠಾಣೆಗೆ ಹಾಜರಾಗಿ  ಆಲಿಖಿ  ಫಿರ್ಯದಿಯನ್ನ  ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,  ನಾನು ವ್ಯಾಪಾರ ಮಾಡಿಕೊಂಡು ಉಪಜೀವನ ಮಾಡುತ್ತೇನೆ.  ದಿನಾಂಕ  16-04-2016 ರಂದು ಸಿದ್ದಾಪೂರಕ್ಕೆ ಹೊಗಿದ್ದೇನು.  ನಮ್ಮ ಸಂಭಂದಿಕರಾದ  ವೀರಭದ್ರಗೌಡ ತಂದಿ ಸಿದ್ದನಗೌಡ ಸಾ- ಬಾದಹನಟ್ಟಿ ಹಾಗೂ ಆತನ ಹೆಂಡತಿ ಲಕ್ಷ್ಮೀದೇವಿ  ವಯಾ- 35 ವರ್ಷ ಇಬ್ಬರೂ ಕೂಡಿಕೊಂಡು  ತಮ್ಮ ಮಗಳು ಜ್ಯೋತಿ (ಕಲ್ಪನಾ) ಇಕೆಯ ಮದುವೆಯು ದಿನಾಂಕ : 29-04-2016 ರಂದು ಇದ್ದ ಪ್ರಯುಕ್ತ  ಮದುವೆ ಕಾರ್ಡ  ಕೊಡಲೆಂದು ತಮ್ಮ ಮೊಟಾರ್ ಸೈಕಲ್ ನಂಬರ್ – ಕೆ.ಎ- 34 – ಎಕ್ಸ- 3908 ನೇದ್ದರಲ್ಲಿ  ಸಿದ್ದಾಪೂರಕ್ಕೆ ಬಂದು ನಂತರ ವೀರಭದ್ರಗೌಡ ಇವರು ನನಗೆ ಮಾತನಾಡಿಸಿ ಕಾರಟಗಿ ಹಾಗೂ ಚನ್ನಳ್ಳಿ ಕಡೆಗೆ ಹೊಗುವದಾಗಿ ಹೇಳಿದರು ನಂತರ ನಾನು ಹಾಗೂ ವೀರಬ್ರದಗೌಡನಿಗೆ ಕಾರಟಗಿಗೆ ಬರುವದಾಗಿ ತಿಳಿಸಿದೇನು. ನಂತರ  ವೀರಭದ್ರಗೌಡ  ಇತನು ಮೊಟಾರ್ ಸೈಕಲ್ ಮೇಲೆ ತನ್ನ ಹೆಂಡತಿ ಲಕ್ಷ್ಮೀದೇವಿಯನ್ನು  ಕೂಡ್ರಿಸಿಕೊಂಡು ತನ್ನ ಮೊಟಾರ್ ಸೈಕಲ್ ಮೇಲೆ ಹೊರಟರು ನಾನು ಹಿಂದುಗಡೆಯಿಂದ ನನ್ನ ಮೊಟಾರ್ ಸೈಕಲ್ ಮೇಲೆ ಬರುತ್ತಿದ್ದೇನು.  ವೀರಭದ್ರಗೌಡ  ಇತನು ತನ್ನ ಸೈಡಿನಲ್ಲಿ ರವಿನಗರ ಹತ್ತಿರ ಹೊರಟಿದ್ದಾಗ್ಗೆ ಎದರುಗಡೆಯಿಂದ ಒಬ್ಬ  ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ರಸ್ತೆಯ ಮೇಲೆ  ಆಕಡೆ ಈಕಡೆ ಓಡಿಸುತ್ತಾ ರಾಂಗ್ ಸೈಡಿಗೆ ಬಂದು ವೀರಭದ್ರಗೌಡ  ಇತನ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು  ಅಪಘಾತಪಡಿಸಿದ್ದರಿಂದ  ವೀರಭದ್ರಗೌಡ ಇತನು ತನ್ನ ಮೊಟಾರ್ ಸೈಕಲ್ ಸಮೇತ  ಕೆಳಗೆ ಬಿದ್ದರು ಹಾಗೂ ಆತನ ಹಿಂದುಗಡೆ ಕುಳಿತಿದ್ದ ಲಕ್ಷ್ಮೀದೇವಿ ಕೂಡಾ ಕೆಳಗೆ ಬಿದ್ದಿದ್ದು,  ವೀರಭದ್ರಗೌಡನಿಗೆ  ತಲೆಗೆ  ಮುಖಕ್ಕೆ ಹೊಟ್ಟೆಗೆ  ಗಂಭೀರಗಾಯವಾಗಿದ್ದು  ಹಾಗೂ ಲಕ್ಷ್ಮೀದೇವಿ  ಇಕೆಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರಗಾಯವಾಗಿದ್ದು  ಅಪಘಾತಪಡಿಸಿದ ಲಾರಿ ನಂಬರ್- ಕೆ.ಎ-04 / ಎ-7461 ರ ಚಾಲಕನ ಬಗ್ಗೆ ವಿಚಾರಿಸಲಾಗಿ ಈರಪ್ಪ ತಂದಿ ಶಿವಪ್ಪ ಹೂಗಾರ ಸಾ- ಸಂಗನಾಳ  ಅಂತಾ ಗೊತ್ತಾಯಿತು. ಈ ಅಪಘಾತವಾದಾಗ್ಗೆ  ಮದ್ಯಾಹ್ನ 2-30 ಗಂಟೆಯಾಗಿತ್ತು.  ಅಪಘಾತವಾದ ನಂತರ  ಸ್ಥಳಕ್ಕೆ ಬಂದ 108 ಅಂಬುಲೇನ್ಸದಲ್ಲಿ ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಸೇರಿಕೆ ಮಾಡಿದ್ದು   ವೀರಭದ್ರಗೌಡ ಇತನು ಗುಣಮುಖನಾಗದೆ ಮದ್ಯಾಹ್ನ 4-35 ಗಂಟೆಗೆ ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು,  ಸದರಿ ಗಾಯಾಳು ಲಕ್ಷ್ಮೀದೇವಿಯನ್ನು ಬಳ್ಳಾರಿಗೆ ಕಳುಹಿಸಿಕೊಟ್ಟು  ಈಗ ತಮ್ಮಲ್ಲಿಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ.   ಈ ಘಟನೆಗೆ ಕಾರಣನಾದ ಲಾರಿ ಚಾಲಕನ ಮೇಲೆ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ: 419, 420, 468, ಐ.ಪಿ.ಸಿ.
ದಿನಾಂಕ: 16-04-2016 ರಂದು 04-15 ಪಿ.ಎಂ.ಕ್ಕೆ ಮಾನ್ಯ ನ್ಯಾಯಾಲಯ ಖಾಸಗಿ ಪಿರ್ಯಾದಿ ಸಂ:28/2016. ನೇದ್ದು ಅದರ ಸಂಗಡ  ಪಿರ್ಯಾದಿ ಶರಣಮ್ಮ ಗಂಡ ಹನುಮಪ್ಪ ತಳವಾರ ಸಾ:ಪರಸಾಪೂರ ಇವರು ಮೇಲ್ಕಾಣಿಸಿದ ಆರೋಪಿತ 1 ರಿಂದ 11 ನೇದ್ದರವರ ವಿರುಧ್ದ ಕೋರ್ಟನಲ್ಲಿ ಸಲ್ಲಿಸಿದ ದೂರು ವಸೂಲಾಗಿದ್ದು ಅದರ ಸಾರಾಂಶವೆನೆಂದರೆ, ಚಳಗೇರಾ ಗ್ರಾಮದ ಸೀಮಾ ಸರ್ವೇ ನಂ: 153 ಹಿಸ್ಸಾ 2 ಕ್ಷೇತ್ರ 1 ಎಕರೆ 20 ಗುಂಟೆ ಜಮೀನಿನ ಮಾಲಿಕಳು ಮತ್ತು ಕಬ್ಜದಾರಳು ಇರುತ್ತಾಳೆ. ಸದರಿ ಪಿರ್ಯಾದಿದಾರಳ ಗಂಡನು ದಿನಾಂಕ: 21-06-2013 ರಂದು ಮೃತಪಟ್ಟಿದ್ದು ಇರುತ್ತದೆ. ನಂತರ ದಿನಾಂಕ: 26-12-2014 ರಂದು ಆರೋಪಿ 1 ಮತ್ತು 2 ನೇದ್ದವರು ಸದರಿ ಜಮೀನು ನಮ್ಮ ಹೆಸರಿನಲ್ಲಿರುತ್ತದೆ. ಇದು ನಿಮಗೆ ಸಂಬಂದವಿಲ್ಲಾ ಅಂತಾ ಹೇಳಿದಾಗ ನಂತರ ಪಿರ್ಯಾದಿದಾರಳಿ ಮರುದಿನ ತಹಶೀಲ್ ಕಛೇರಿಗೆ ಬಂದು ಪಹಣಿ ಪತ್ರಿಕೆಗಳನ್ನು ಪರಿಶೀಲಿಸಿದಾಗ ಈ ಪಹಣಿಗೆ ಮೊಟೇಷನ್ ಪ್ರಗತಿಯಲ್ಲಿದೆ ಅಮತಾ ಕಂದಾಯ ಇಲಾಖೆಯವರು ತಿಳಿಸಿದಾಗ ತಕ್ಷಣ ದಿನಾಂಕ:29-12-2014 ರಂದು ಸದರಿ ಜಮೀನನ್ನು ವರ್ಗಾವಣೆ ಮಾಡಬಾರದೆಂದು ಕಂದಾಯ ಇಲಾಖೆಯಲ್ಲಿ ತಕರಾರು ಅರ್ಜಿ ನೀಡಿದ್ದು ಇರುತ್ತದೆ. ಆದರೂ ಸಹಿತ ದಿನಾಂಕ:25-10-2014 ರಂದು ಆರೋಪಿ 2 ನೇದ್ದವನು 1 ನೇ ಆರೋಪಿತನಿಗೆ  ದಕ್ಕ ಖರೀಧಿ ಪತ್ರದ ಮೂಲಕ ಹನುಮಪ್ಪ ತಳವಾರ ನಾನೆ ಅಂತಾ ಸುಳ್ಳು ಹೇಳಿ ಉಪನೊಂದಣಾಧೀಕಾರಿಗಳ ಕಛೇರಿ ಕಷ್ಟಗಿಯಲ್ಲಿ ನೊಂದಾಯಿಸುವ ಮೂಲಕ ವರ್ಗಾವಣೆ ಯನ್ನು ಮಾಡಿಸಿಕೊಂಡಿರುತ್ತಾರೆ. ಆರೋಪಿತರು ಪಿರ್ಯಾದಿದಾರಳಿಗೆ ಮೋಸ ಮಾಡುವ ಉದ್ದೇಶದಿಂದ ಖೊಟ್ಟಿ ದಸ್ತಾವೇಜುಗಳನ್ನು ತಯಾರಿಸಿ ಮತ್ತು ಮೃತ ಹನುಮಪ್ಪ ತಂದೆ ಯಲ್ಲಪ್ಪ ತಳವಾರ ಇತನು ಮರಣ ಹೊಂದಿದ್ದರು. ಆತನು ಬದುಕಿದ್ದಾನೆಂದು ಆತನ ಹೆಸರಿನಲ್ಲಿ ದಕ್ಕ ಖರೀದಿ ಪತ್ರವನ್ನು ಸೃಷ್ಟಿ ಮಾಡಿ ಸುಳ್ಳು ಕಾಗದ ಪತ್ರಗಳ ಮೂಲಕ ಪಹಣಿ ಪತ್ರಿಕೆಗಳನ್ನು ವರ್ಗಾವನೆ ಮಾಡಿಕೊಂಡು ಪಿರ್ಯಾದಿದಾರಳಿಗೆ ನಷ್ಟವುಂಟು ಮಾಡಿರುತ್ತಾರೆ ಅಂತಾ ಮುಂತಾಗಿ ಇದ್ದ  ಖಾಸಗಿ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
4) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 66/2016 ಕಲಂ. 307, 504, ಸಹಿತ 34 ಐ.ಪಿ.ಸಿ.

ದಿನಾಂಕ 16.04.2016 ರಂದು ಸಾಯಂಕಾಲ 6:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶರಣಪ್ಪ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ಕೊಪ್ಪಳದ ಭಾಗ್ಯ ನಗರದಲ್ಲಿರುವ ಹಳೇಯ ಸೀನೆಮಾ ಟಾಕೀಜ ಹತ್ತಿರ ಇರುವ ಗುಡಿಸಲಿನಲ್ಲಿ ಆರೋಪಿತರು ತಮ್ಮ 07 ವರ್ಷ ವಯಸ್ಸಿನ ಮಗಳಾದ ಸಾಯೀರಾ ಇವಳಿಗೆ ಕೊಲೆ ಮಾಡುವ ಉದ್ದೇಶದಿಂದ ಅವಾಚ್ಯ ಶಬ್ದಗಳಿಂದ ಬೈದು ಬೆಂಕಿಯಿಂದ ಮೈಕೈಗೆ ಮತ್ತು ಮುಖಕ್ಕೆ ಬರೆ ಎಳೆದಿದ್ದು ಇರುತ್ತದೆ. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008