1) ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 29/2016 ಕಲಂ:
341, 323, 324, 504, 506(2), 290 ಸಹಿತ 34 ಐ.ಪಿ.ಸಿ.
ದಿನಾಂಕ: 07-04-2016
ರಂದು ಮಧ್ಯಾಹ್ನ 15-00 ಗಂಟೆಗೆ ಫಿರ್ಯಾದಿದಾರರಾದ ರಾಜೇಸಾಬ ಬಸರಕೋಡ ಸಾ: ಹನಮಸಾಗರ ಇವರು
ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ತಮ್ಮ ಕಾಲೋನಿಯಲ್ಲಿ ಏಕಾಏಕಿ 4 ಜನ ಹುಡುಗರು
ಸುತ್ತಾಡುತ್ತಿದ್ದರು. ತಮ್ಮ ಮನೆ ಹತ್ತಿರ ಪದೇ ಪದೇ ತಿರುಗಾಡುತ್ತಿದ್ದರು. ಅವಾಚ್ಯವಾಗಿ
ಬೈದಾಡುತ್ತಾ ತಿರುಗುತ್ತಿದ್ದರಿಂದ ನಾನು ಯಾರಿಗೆ ಬೈದಾಡುತ್ತಿದ್ದೀರಿ ? ಎಂದು ಕೇಳಿದೆನು. ಆಗ
ನಿಮಗೆ ಯಾಕೆ ಬೇಕು ಲೇ ಬೋಸೂಡಿ ಮಗನೆ ಅಂತಾ ಬೈದರು.ಆಗ ಕಾಲೋನಿಯ ಎಲ್ಲ ಜನರು ಸೇರಿ ಅವರನ್ನು
ವಿಚಾರಿಸಿದೆವು. ನೀವು ಇಲ್ಲಿ ಯಾಕೆ ಬಂದದ್ದೀರಿ ? ಎಂದು ಕೇಳಿದೆವು. ಯಾವುದೇ ರೀತಿಯ ಸರಿಯಾದ
ಉತ್ತರ ನೀಡಲಿಲ್ಲಾ. ಕಾಲೋನಿಯಲ್ಲಿ ಬೈಕ್: ಕೆ.ಎ-25/ಇಬಿ-9798 ಮತ್ತು ಕೆ.ಎ-29/ಡಬ್ಲೂ-5664 ಈ
ಎರಡು ಬೈಕ ತೆಗೆದುಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಬಂದು ಬೈದಾಡುತ್ತಾ,
ದೌರ್ಜನ್ಯ ಮಾಡುತ್ತಾ, ಬಂದು ನನ್ನ ಎದೆ ಮೇಲಿನ ಅಂಗಿ ಹಿಡಿದು. ಜಗಳ ತೆಗೆದು ಕೈಯಿಂದ ಫಿರ್ಯಾದಿಯ
ಕಪಾಳಕ್ಕೆ ಬಡಿದು, ಮುಷ್ಟಿಯಿಂದ ಎದೆಗೆ ಗುದ್ದಿದರು. ಆಗ ಅಲ್ಲೆ ಇದ್ದ ಮುರ್ತುಜಾಸಾಬ, ಹನಮಂತ,
ಮತ್ತು ಹುಲ್ಲಪ್ಪ ಇವರು ಬಂದು ಜಗಳ ಬಿಡಿಸಿದರು. ನಂತರ ಸುರೇಶ ಕಾಂಬಳೆ ಇತನು ಮಂಜುನಾಥನಿಗೆ ನಮ್ಮ
ಮೇಲೆ ಯಾರ ಕೇಸ್ ಮಾಡುತ್ತಾರೆ ಅವರ ಮನೆಗೆ ಬೆಂಕಿ ಹಚ್ಚಿ ಸುಟ್ಟು ಬಿಡೋಣ ಮತ್ತು ನಾನು ಇಲಕಲ್
ನಿಂದ 20 ಜನ ಹುಡುಗರನ್ನು ಕರೆದುಕೊಂಡು ಬಂದು ಕೇಸ್ ಮಾಡಿದವರನ್ನು ಕೊಂದು ಬಿಡೋಣ ಎಂದು ಹೇಳಿ
ಜೀವದ ಬೆದರಿಕೆ ಹಾಕಿ ಎಲ್ಲರೂ ಓಡಿ ಹೋದರು. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ
ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2) ಬೇವೂರು ಪೊಲೀಸ್ ಠಾಣೆ ಗುನ್ನೆ ನಂ: 25/2016 ಕಲಂ. 279, 338 ಐ.ಪಿ.ಸಿ. ಹಾಗೂ 187
ಐ.ಎಂ.ವಿ. ಕಾಯ್ದೆ.
ದಿನಾಂಕ 06.04.2016 ರಂದು ರಾತ್ರಿ ಫಿರ್ಯಾದಿ ರಮೇಶ ಹಾಗೂ ಆರೋಪಿ ಆನಂದ ಇಬ್ಬರೂ ಸೇರಿ ಮೋಟಾರ್ ಸೈಕಲ್ ನಂ: KA35 L 2169 ನೇದ್ದರಲ್ಲಿ ತಮ್ಮೂರ ಚಿಕ್ಕಬೊಮ್ಮನಾಳ ಗ್ರಾಮದಿಂದ NH 50 ರಸ್ತೆ ಮುಖಾಂತರವಾಗಿ ಕುಷ್ಠಗಿಗೆ ಹೋಗುವ ಕಾಲಕ್ಕೆ ರಾತ್ರಿ 10:30 ಘಂಟೆ ಸುಮಾರಿಗೆ ಸದರಿ ಮೋಟಾರ್ ಸೈಕಲ್ ನಡೆಸುತ್ತಿದ್ದ ಆರೋಪಿ ಆನಂದ ಇವನು ಕುಷ್ಠಗಿ ಕಡೆಗೆ ಹೋಗುವ NH 50 ಒಮ್ಮುಖ ರಸ್ತೆ ಮೇಲೆ ಹೋಗದೆ ಅವನು ರಾಂಗ್ ಸೈಡ್ನಲ್ಲಿ ಎದುರುಗಡೆಗೆ ಬರುವ ವಾಹನಗಳ ರಸ್ತೆಯಲ್ಲಿ ಹೋಗಿ ಮೋಟಾರ್ ಸೈಕಲ್ನ್ನು ಅಡ್ಡಾದಿಡ್ಡಿಯಾಗಿ ಮತ್ತು ಅತೀ ವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರ ರೀತಿಯಲ್ಲಿ ನಡೆಸಿಕೊಂಡು ಹೋಗಿ ಹೊಸಪೇಟ್- ಕುಷ್ಠಗಿ NH 50 ರಸ್ತೆ ಮೇಲೆ ಪುಟಗಮರಿ ಸೀಮಾದಲ್ಲಿರುವ ಒಂದು ಬ್ರಿಡ್ಜಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದರಿಂದ ಹಿಂದೆ ಕುಳಿತ್ತಿದ್ದ ಫಿರ್ಯಾದಿ ರಮೇಶ ಇವನು ಮೋಟಾರ್ ಸೈಕಲ್ ಸಮೇತ್ ಬ್ರಿಡ್ಜನ ಕೆಳಗೆ ಬಲವಾಗಿ ಬಿದ್ದಾಗ ಸದರಿಯವನ ಮುಖಕ್ಕೆ ತೆರಚಿದ ನಮೂನೆಯ ಗಾಯಗಳಾಗಿ ಬಲಗಾಲ ತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದರಿಂದ ಇವನು ಮೂರ್ಚೆ ಬಂದು ಅಲ್ಲೆ ಮಲಗಿದಾಗ ಆರೋಪಿತನು ಈ ಅಪಘಾತದ ಬಗ್ಗೆ ಯಾರಿಗೂ ಮಾಹಿತಿ ತಿಳಿಸದೆ ಅಪಘಾತ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
3) ಕೂಕನೂರ ಪೊಲೀಸ್
ಠಾಣೆ ಗುನ್ನೆ ನಂ: 35/2016 ಕಲಂ. 447, 323, 504, 506 ಸಹಿತ 34 ಐಪಿಸಿ.
ದಿನಾಂಕ:07-04-2016 ರಂದು 5-30 ಪಿಎಂಕ್ಕೆ ಪಿರ್ಯಾದಿದಾರ
ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಣ ಮಾಡಿಸಿದ ಒಂದು ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ
ಸಾರಾಂಶವೇನೆಂದರೆ, ಈ ಹಿಂದೆ ಗುಡಿಯ ಮುಂದಿನ ಸಿ.ಸಿ. ರಸ್ತೆಯನ್ನು ಮಾಡಿಸಿದ್ದರಿಂದ, ಇಂದು
ಹಿರಿಯಮ್ಮದೇವಿ ಗುಡಿಗೆ ಬಂದ ವಾಹನಗಳು ತಮ್ಮ ಮನೆಯ ಮುಂದೆ ನಿಂತಿವೆ ಎನ್ನುವ ವೈಷಮ್ಯದಿಂದ
ಆರೋಪಿತರೆಲ್ಲರೂ ಸೇರಿ, ಪಿರ್ಯಾದಿದಾರನು ತನ್ನ ಮನೆಯ ಹತ್ತಿರ ಖುಲ್ಲಾ ಜಾಗೇಯಲ್ಲಿ ಕುಳಿತುಕೊಂಡಾಗ
ಆರೋಪಿತರೆಲ್ಲರೂ ಹೋಗಿ, ಪಿರ್ಯಾದಿದಾರನಿಗೆ ’ಲೇ ಬೋಸುಡಿ ಮಗನೆ ನೀನು ರೋಡ ಬೇಕು ಅಂತಾ
ಸಿ.ಸಿ. ರೋಡ ಮಾಡಿಸಿದೀ ಬೋಸುಡಿಕೆ ಈಗ ನೋಡು ಇವತ್ತು ಮನೆಯ ಮುಂದೆ ಗುಡಿಗೆ ಬರುವ ಎಲ್ಲಾ
ಗಾಡಿಗಳು ನಿಂತಿವೆ ನಮ್ಮ ಬಾಳುವೆ ಏನು ಆಗಬೇಕು. ನಿಮ್ಮಪ್ಪ ಬಂದು ಅವುಗಳನ್ನು
ತೆಗೆಯಿಸುತ್ತಾನೇನು ?‘’ಅಂತಾ ಆವಾಚ್ಯವಾಗಿ ಬೈಯ್ದಾಡಿ, ಕೈಯಿಂದ
ಬಡಿದಿದ್ದು ನೋಡಿದ ಸಾಕ್ಷಿದಾರರು ಬಿಡಿಸಿಕೊಂಡಾಗ ಆರೋಪಿತರೆಲ್ಲರೂ ಪಿರ್ಯಾದಿದಾರನಿಗೆ‘’ ಮಗನೇ
ಎಂದಾದರೂ ಒಂದು ದಿನ ನಿನ್ನ ಹೆಣ ನಮ್ಮ ಕೈಯಲ್ಲಿಯೆ ಬೀಳೊದು. ಇನ್ನೊಂದು ಸಾರಿ ಒಬ್ಬನೆ ಸಿಗು ಜೀವ
ಸಹಿತ ನಿನ್ನ ಮಣ್ಣಿನ್ಯಾಗ ಮುಚ್ಚುತ್ತೀವಿ‘’ ಜೀವದ ಬೆದರಿಕೆ ಹಾಕಿರುತ್ತಾರೆ
ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
4) ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ. 81/2016 ಕಲಂ.
323, 504, 307 gÉ/« 34 L¦¹
ದಿನಾಂಕ. 07-04-2016 ರಂದು 01-30 ಪಿ.ಎಂ.ಕ್ಕೆ ಫಿರ್ಯಾದಿದಾರನು ಹೆಚ್.ಆರ್.ಜಿ ಪ್ಯಾಕ್ಟರಿಯಿಂದ ಚಿಕ್ಕಬಗನಾಳ ಹತ್ತಿರ ಇರುವ ತಮ್ಮ ಹೊಲಕ್ಕೆ ಹೋಗುತ್ತಿರುವಾಗ ಕರಿಯಪ್ಪ ಗೂಗಲಮರಿ ಇವರ ಹೊಲದ ಹತ್ತಿರ ಕರಿಯಪ್ಪ ಇವರ ಸೊಸೆ ಶ್ರೀದೇವಿ ಮಾತನಾಡಿಸಿದ್ದರಿಂದ ಆಕೆಗೆ ಮಾತನಾಡಿಸಿ ಮುಂದೆ ಕೆರೆ ಹತ್ತಿರ ಹೋಗುತ್ತಿರುವಾಗ ಕರಿಯಪ್ಪ ಗೂಗಲಮರಿ ಮತ್ತು ಹನಮಂತಪ್ಪ ಗೂಗಲಮರಿ ಇವರು ಹಿಂಬಾಲಿಸಿಕೊಂಡು ಬಂದು ಫಿರ್ಯಾದಿಗೆ ಶ್ರೀದೇವಿ ಜತೆಗೆ ಅನೈತಿಕ ಸಂಬಂಧ ಹೊಂದಿರುತ್ತಾನೆಂದು ಸಂಶಯ ಪಟ್ಟು, ಕೊಲೆ ಮಾಡುವ ಉದ್ದೇಶದಿಂದ ನಮ್ಮ ಸೊಸೆಗೆ ಯಾಕೆ ಮಾತನಾಡಿಸಿದಿಲೇ ಸೂಳೆ ಮಗನೆ ಎಂದು ಅವಾಚ್ಯ ಬೈದು, ಕೈಯಿಂದ ಮತ್ತು ಕೊಡಲಿ ಕಾವಿನಿಂದ ತಲೆ ಹಿಂಬಾಗ, ತಲೆ ಮೇಲೆ ಮತ್ತು ಎಡಗಣ್ಣಿಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
5) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 82/2016 ಕಲಂ. 78(3) Karnataka Police Act
ದಿನಾಂಕ. 07-04-2016 ರಂದು 8-00 ಪಿ.ಎಂ.ಕ್ಕೆ ಆರೋಪಿತನಾದ ಶಫೀ ತಂದೆ ಗೌಸಖಾನ ಸಾ: ಹಳೇಬಂಡಿ ಹರ್ಲಾಪೂರ ಇತನು ಹೊಸಬಂಡಿಹರ್ಲಾಪುರ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಇದ್ದ ಪ್ರಕಾರ ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರೊಂದಿಗೆ ದಾಳಿ ಮಾಡಿ ಆರೋಪಿನಿಂದ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ನು ಹಾಗೂ ಜೂಜಾಟದ ನಗದು ಹಣ. 740-00 ರೂ.ಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಹಾಗೂ ಆರೋಪಿತನಿಗೆ ಪಟ್ಟಿಕೊಡುವ ಬಗ್ಗೆ ವಿಚಾರಿಸಿದಾಗ ಇಕ್ಬಾಲ್ ಸಾ. ಮುನಿರಾಬಾದ ಇವರಿಗೆ ಕೊಡುವದಾಗಿ ತಿಳಿಸಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 83/2016 ಕಲಂ. 379 ಐ.ಪಿ.ಸಿ.
ದಿನಾಂಕ: 07--04-2016 ರಂದು 11-00 ಪಿ.ಎಂ.ಕ್ಕೆ ಪಿರ್ಯಾದಿದಾರರು
ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾದಿದಾರರು
ದಿನಾಂಕ: 29-03-2016 ರಂದು ರಾಜಸ್ಥಾನದ ರಾಜ್ಯದ ಜೈಪೂರ ನಗರದಲ್ಲಿ Dehli-
Rajasthan ಎಂಬ ಟ್ರೋನ್ಸಪೋರ್ಟನಲ್ಲಿ ಲಾರಿ ನಂ.
ಆರ್.ಜೆ-06/ಜಿಸಿ-0151 ನೇದ್ದರಲ್ಲಿ
38,55,581.45 ರೂಪಾಯಿಗಳ
ಕಿಮ್ಮತ್ತಿನ ಟೆಕ್ಸಟೈಲ್ ಬಂಡಲಗಳನ್ನು ಲೋಡ ಮಾಡಿಕೊಂಡು ಜೈಪೂರ ಬಿಟ್ಟು ಕಿಶನಗಡ್, ಸೋಲಾಪೂರ, ಝಳಕಿ, ಬಿಜಾಪೂರ ಮಾರ್ಗವಾಗಿ ಬೆಂಗಳೂರು ಪಟ್ಟಣಕ್ಕೆ ದಿನಾಂಕ: 01-04-2016 ರಂದು
ಕುಷ್ಟಗಿ ಟೋಲಗೇಟ ದಾಟಿದ ನಂತರ ಟೋಲಗೇಟ ಹತ್ತಿರ ಇರುವ ಚಹದ ಅಂಗಡಿಯಲ್ಲಿ ಚಹ ಕುಡಿದು ಅಲ್ಲಿಂದ
ಹೊರಟು ಹೊಸನಿಂಗಾಪೂರ ಹತ್ತಿರ ಎನ್.ಹೆಚ್-50 ರಸ್ತೆಯಲ್ಲಿ ಹೋಗುತ್ತಿದ್ದಾಗ ದಿನಾಂಕ: 01-04-2016 ರಂದು
ಮಧ್ಯ ರಾತ್ರಿ 3-00 ಗಂಟೆಯಿಂದ
ಬೆಳಗಿನ ಜಾವ 4-30 ಗಂಟೆಯ
ಅವಧಿಯಲ್ಲಿ ಕುಷ್ಟಗಿ ಟೋಲ್ ಗೇಟದಿಂದ ನಿಂಗಾಪೂರ ಮಾರ್ಗ ಮಧ್ಯದಲ್ಲಿ ಯಾರೋ ಕಳ್ಳರು ಲಾರಿಯಲ್ಲಿನ ಅಂದಾಜು
2,00,000=00 ರಿಂದ 2,50,000=00 ರೂ.
ಕಿಮ್ಮತ್ತಿನ 17 ರಿಂದ 18 ಟೆಕ್ಸಟೈಲ್
ಬಂಡಲಗಳನ್ನು ಲೋಡಗೆ ಹೊದಿಕೆ ಮಾಡಿದ್ದ ತಾಡಪತ್ರಿಯನ್ನು ಮತ್ತು ತಂತಿ ಜಾಲರಿಯನ್ನು ಕಟ್ ಮಾಡಿ
ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ನನ್ನ ಲಾರಿಯಲ್ಲಿ ಟೆಕ್ಸಟೈಲ್ ಬಂಡಲಗಳನ್ನು
ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಎಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment