1] ಯಲಬುರ್ಗಾ ಪೊಲೀಸ್ ಠಾಣೆ
ಗುನ್ನೆ ನಂ: 38/2016 ಕಲಂ: 78(3) Karnataka Police Act
ದಿನಾಂಕ: 21-04-2016 ರಂದು ಮಧ್ಯಾಹ್ನ 3-00 ಗಂಟೆಗೆ ಯಲಬುಗರ್ಾ ಪಟ್ಟಣದಲ್ಲಿ ಬರುವ ಮೊಗಿ ಬಸವೇಶ್ವರ ದೇವಸ್ಥಾನದ ಹಿಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನಾದ ಈರಪ್ಪ ತಂದೆ ಸಿದ್ದಪ್ಪ ಹೊಸಳ್ಳಿ ಸಾ: ಯಲಬುಗರ್ಾ ಇತನು 01 ರೂಪಾಯಿಗೆ 80 ರೂಪಾಯಿ ಬರುತ್ತವೆೆ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಂಬರಗಳನ್ನು ಬರೆದುಕೊಡುತಿದ್ದ್ದಾಗ ಮಧ್ಯಾಹ್ನ 3-05 ಗಂಟೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರಾದ ವೆಂಕಟೇಶ ಪಿಸಿ-311, ರವಿಶಂಕರ ಪಿಸಿ-133, ಮಂಜುನಾಥ ಪಿಸಿ-137 ರವರೊಂದಿಗೆ ಧಾಳಿ ಮಾಡಿದ ಕಾಲಕ್ಕೆ ಆರೋಪಿತನು ಸಿಕ್ಕಿ ಬಿದ್ದಿದ್ದು ಇರುತ್ತದೆ. ಸದರಿ ಆರೋಪಿತನ ಹತ್ತಿರ ಮಟಕಾ ಜೂಜಾಟದ ನಗದು ಹಣ 650/- ರೂಪಾಯಿ. ಹಾಗೂ ಮಟಕಾ ಜೂಜಾಟದ ಸಾಮಾಗ್ರ್ರಿಗಳಾದ ಎರಡು ಓ.ಸಿ. ಮಟಕಾ ಬರೆದ ಹಾಳೆಗಳು, ಒಂದು ಓಸಿ ಮಟಕಾ ಚಾರ್ಟ, ಒಂದು ಓಸಿ ಮಟಕಾ ನಂಬರ್ ಬರೆದ ನೋಟ್ಬುಕ್, ಒಂದು ಬಾಲ ಪೆನ್ನು ಅಂ.ಕಿ. ಇಲ್ಲ ನೇದ್ದವುಗಳನ್ನು ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸುವಂತೆ ವರದಿ ನೀಡಿದ್ದು ಇರುತ್ತದೆ. ಸದರಿ ವರದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 40/2016 ಕಲಂ:
279, 338, 304(ಎ) ಐ.ಪಿ.ಸಿ:.
ದಿನಾಂಕ:21-04-2016 ರಂದು 6-00 ಪಿಎಂಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ ರಸ್ತೆ ಅಪಘಾತದ
ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದಿದ್ದು, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ 6.45 ಪಿ.ಎಂ.ಕ್ಕೆ ಬೇಟಿ
ನೀಡಿ, ಗಾಯಾಳು ಮತ್ತು ಮೃತನನ್ನು ಪರಿಶೀಲಿಸಿ ಮೃತನ ತಮ್ಮನಾದ ಪಂಪಣ್ಣನ ಹೇಳಿಕೆಯನ್ನು
7.00 ಪಿ.ಎಂ.ದಿಂದ 8.00 ಪಿ.ಎಂದವರೆಗೆ ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿಯ ಅಣ್ಣ
ಸುಭಾಸನು ತನ್ನ ಸಂಬಂದಿಕನ ಮಗ ಬಸವರಾಜನಿಗೆ ಕನ್ಯೆ ನೋಡಲು ಕೊಪ್ಪಳದಿಂದ ಕುಕನೂರಿಗೆ ಹೋಗಲು ಅಂತಾ
ಬಸವರಾಜನು ನಡೆಸುತ್ತಿದ್ದ ಹೊಂಡಾ ಸಿ.ಬಿ,ಶೈನ್ ಮೋಟಾರ್ ಸೈಕಲ್ ನಂ.ಕೆ.ಎ.37 ಇಎ 7234 ನೇದ್ದರ ಮೇಲೆ
ಹಿಂದೆ ಕುಳಿತು ಹೊರಟಾಗ ಮಸಬಹಂಚಿನಾಳ ಸೀಮಾದಲ್ಲಿ ಮೋಟಾರ್ ಸೈಕಲ್ ನಡೆಸುತ್ತಿದ್ದ ಬಸವರಾಜನು ಮೋಟಾರ್
ಸೈಕಲ್ ನ್ನು ಅತೀವೇಗವಾಗಿ ರಸ್ತೆಯಲ್ಲಿ ಬರುವ ಹೋಗುವ ವಾಹನ ಮತ್ತು ಪ್ರಾಣಿಗಳನ್ನು ಲೆಕ್ಕಿಸದೇ
ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಹೊರಟಾಗ 4.00 ಪಿ.ಎಂ. ಸುಮಾರು ರಸ್ತೆಯಲ್ಲಿ ಒಮ್ಮೆಲೇ ಜಿಂಕೆಯು
ಅಡ್ಡ ಬಂದಾಗ ತನ್ನ ಮೋಟಾರ್ ಸೈಕಲ್ ನ್ನು ನಿಯಂತ್ರಿಸಲಾರದೇ ಜಿಂಕೆಗೆ ಟಕ್ಕರು ಕೊಟ್ಟು ಮೋಟಾರ್ ಸೈಕಲ್
ಅಪಘಾತಪಡಿಸಿದ್ದರಿಂದ ಇಬ್ಬರು ಬೈಕ್ ಸಮೇತ ಕೆಳಗೆ ಬಿದ್ದಿದ್ದು ಆಗ ತನ್ನ ಅಣ್ಣ ಸುಭಾಸನಿಗೆ ತಲೆಗೆ,ಕಿವಿಗೆ
ರಕ್ತಗಾಯ, ಎಡ ಕಣ್ಣಿಗೆ ಪೆಟ್ಟಾಗಿ, ಭಾರಿ ರಕ್ತಗಾಯವಾಗಿದ್ದು ಮತ್ತು ಮೋಟಾರ್ ಸೈಕಲ್ ನಡೆಸುತ್ತಿದ್ದ
ಬಸವರಾಜನಿಗೆ ಬಲಗೈ ಮೊಣಕೈ ಹತ್ತಿರ ಬಾರೀ ತೆರಚಿದ ಗಾಯ, ಬಲಪಕ್ಕಡಿಗೆ ರಕ್ತಗಾಯ ಹಾಗೂ ಎರಡೂ ಮೊಣಕಾಲಿಗೆ
ಒಳಪೆಟ್ಟು ಮತ್ತು ತೆರಚಿದ ಗಾಯವಾಗಿದ್ದು, ಅಲ್ಲದೇ, ಜಿಂಕೆ ಸ್ಥಳದಲ್ಲಿಯೇ ಮೃತಪಟ್ಟಿತು. ಆಗ
ರಸ್ತೆಯಲ್ಲಿ ಹೊರಟ ಕುಕನೂರಿನ ಶ್ರೀಕಾಂತ ಚಲವಾದಿ, ರವಿಕಾಂತ ಚಿಕೇನಕೊಪ್ಪ, ಹಾಗೂ ಶಾಂತಪ್ಪ ಗೌಡ ಸಾ:ಮಂಗಳಾಪೂರ
ಇವರು ಘಟನೆಯನ್ನು ನೋಡಿ 108 ವಾಹನಕ್ಕೆ ಪೋನ್ ಮಾಡಿ ಕರೆಸಿಕೊಂಡು ಗಾಯಗೊಂಡ ಇಬ್ಬರನ್ನು ಚಿಕಿತ್ಸೆ
ಕುರಿತು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿ, ಈಬಗ್ಗೆ ತನಗೆ ಮಾಹಿತಿ ತಿಳಿಸಿದ್ದರಿಂದ ತಾನು ತನ್ನ
ಸಂಬಂದಿಕರೊಂದಿಗೆ ಆಸ್ಪತ್ರೆಗೆ ಬಂದು ಗಾಯಾಳುಗಳನ್ನು ಪರಿಶೀಲಿಸಿದ್ದು ಗಾಯಗೊಂಡ ತನ್ನ ಅಣ್ಣ ಸುಭಾಸನು
ಅಪಘಾತದಲ್ಲಾದ ಭಾರಿಗಾಯಗಳಿಂದ 6.30 ಪಿ.ಎಂ.ಕ್ಕೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು
ಸದರಿ ಘಟನೆಗೆ ಬಸವರಾಜನ ಈತನ ಅತೀ ವೇಗ ಮತ್ತು ಅಲಕ್ಷ್ಯತನದ ಚಾಲನೆಯೇ ಕಾರಣ ಇರುತ್ತದೆ. ಕಾರಣ, ಬಸವರಾಜನ
ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ್ದ ಹೇಳಿಕೆ ಫಿರ್ಯಾದಿಯನ್ನು
ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು,
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 85/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿ: 21-04-16 ರಂದು ರಾತ್ರಿ 9-15 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳು ಫಿರ್ಯಾದಿ ಯಂಕಪ್ಪ
ಯಾದವ ಸಾ: ಚಾಮಲಾಪೂರ. ಇವರು ನೀಡಿದ ಹೇಳಿಕೆ ದೂರಿನ ಸಾರಾಂಶವೇನೆಂದರೇ, ಇಂದು ದಿ:21-04-16 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರಿನ ಹನುಮಪ್ಪ ಉಪ್ಪಾರ, ಹಾಗೂ ಮಾರುತಿ ಕರಡಿ ಕೂಡಿಕೊಂಡು ಟಾಟಾ ಮ್ಯಾಜಿಕ್ ನಂ: ಕೆಎ-37/ಎ-4971 ನೇದ್ದರಲ್ಲಿ ಕುಳಿತು ಇರಕಲ್ ಗಡಾದಿಂದಾ ವಾಪಾಸ್ ಊರಿಗೆ ಹೋಗಲು ಅಂತಾ ಹೊರಟಿದ್ದಾಗ ಕೊಡದಾಳ
ಕ್ರಾಸ್ ಹತ್ತಿರ ಎದುರುಗಡೆ ಅಂದರೇ ಕುಷ್ಟಗಿ ಕಡೆಯಿಂದ ಒಂದು ಟ್ರ್ಯಾಕ್ಟರ್ ಇಂಜನ್ ನಂ: CO5552117RI ಹಾಗೂ ಕೆಂಪು ಬಣ್ಣದ ಟ್ರೇಲರ್ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಓಡಿಸಿಕೊಂಡು ಮಾನವ ಜೀವಕ್ಕೆ ಅಪಾಯಕರವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ
ನಮ್ಮ ವಾಹನಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿ ಟ್ರ್ಯಾಕ್ಟರ್ ಚಾಲಕನು ಓಡಿ ಹೋಗಿದ್ದು ಇರುತ್ತದೆ.
ಈ ಅಪಘಾತದಲ್ಲಿ ನನಗೆ ಸಾದಾ ಸ್ವರೂಪದ ಪೆಟ್ಟಾಗಿದ್ದು, ಮತ್ತು ನಮ್ಮ ವಾಹನದಲ್ಲಿದ್ದ ಹನುಮಪ್ಪ ಉಪ್ಪಾರ ಇತನಿಗೆ ತೀವ್ರ
ಸ್ವರೂಪದ ಪೆಟ್ಟುಗಳಾಗಿವೆ. ಕಾರಣ ಸದರಿ ಅಪಘಾತ ಮಾಡಿದ ಟ್ರ್ಯಾಕ್ಟರ್ ಚಾಲಕನನ್ನು ಪತ್ತೆ ಮಾಡಿ
ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರನ್ನು ಪಡೆದುಕೊಂಡು ವಾಪಾಸ್
ಠಾಣೆಗೆ ರಾತ್ರಿ 9-45 ಗಂಟೆಗೆ ಬಂದು ಸದರಿ ದೂರಿನ
ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 71/2016 ಕಲಂ. ಮನುಷ್ಯ
ಕಾಣೆ:.
ದಿನಾಂಕ : 21-04-2016 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಶಾಂತಾ
ಕಟ್ಟಿಮನಿ. ಸಾ : ಶಾಂತಿನಿಕೇತ ಬಡಾವಣೆ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು
ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ : 14-04-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ
ನನ್ನ ಮಗ ಉದಯಕುಮಾರ ವಯಾ: 20 ವರ್ಷ, ಇತನು ಬಾಗಲಕೋಟಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು.
ಬಾಗಲಕೋಟಿಗೆ ಹೋಗದೇ ಮನೆಗೆ ವಾಪಸ್ ಬರದೆ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾನೆ. ಕಾರಣ ನನ್ನ ಮಗ ಉದಯಕುಮಾರ
ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ.
71/2016 ಕಲಂ ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈ ಗೊಂಡಿದ್ದು ಇರುತ್ತದೆ.
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 126/2016 ಕಲಂ. 379 ಐ.ಪಿ.ಸಿ:.
ದಿನಾಂಕ:- 21-04-2016 ರಂದು ಮಧ್ಯಾಹ್ನ 12:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಲಿಂಗಪ್ಪ ತಂದೆ ಕರಿಯಪ್ಪ, ವಯಸ್ಸು 42 ವರ್ಷ, ಜಾತಿ: ಈಡಿಗರು ಉ: ಚಹಾ
ಹೋಟಲ್ ಸಾ: ಹನುಮನಹಳ್ಳಿ ತಾ: ಗಂಗಾವತಿ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು
ಹಾಜರಪಡಿಸಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ.
" ನಾನು ಸನ್ 2016 ನೇ ಸಾಲಿನ ಜನವರಿ ತಿಂಗಳಲ್ಲಿ ಒಂದು ಹಸಿರು ಬಣ್ಣದ ಟಿ.ವಿ.ಎಸ್. ಎಕ್ಸೆಲ್ ಹೆವಿ ಡ್ಯೂಟಿ
ಮೊಪೈಡ್ ಖರೀದಿಸಿದ್ದು, ಅದರ ನಂಬರ್: ಕೆ.ಎ-37/ ಇಎ-9743 ಅಂತಾ ಇರುತ್ತದೆ. ಅದರ ಚಾಸ್ಸಿ ನಂಬರ್: MD621BD14G1A55748 ಇಂಜಿನ್ ನಂಬರ್: OD1AG1767131 ಅಂತಾ ಇರುತ್ತವೆ.
ದಿನಾಂಕ:- 31-03-2016 ರ ರಾತ್ರಿ 10:00 ಗಂಟೆಯ ಸುಮಾರಿಗೆ ನಾನು ನನ್ನ ಮೊಪೈಡನ್ನು ಮನೆಯ ಮುಂದೆ ನಿಲ್ಲಿಸಿ
ಸಿಂಧನೂರಿಗೆ ಹೋಗಿದ್ದೆನು. ಮನೆಯಲ್ಲಿ ನನ್ನ ಹೆಂಡತಿಯಾದ ಫಕೀರಮ್ಮ ಇವರು ಇದ್ದರು. ನಂತರ ಮರು
ದಿವಸ ದಿನಾಂಕ: 01-04-2016 ರಂದು ಬೆಳಿಗ್ಗೆ 06:00 ಗಂಟೆಗೆ ನನ್ನ ಹೆಂಡತಿ ಎದ್ದು ನೋಡಿದಾಗ ನನ್ನ ಮೊಪೈಡ್ ಮನೆಯ ಮುಂದೆ
ಇರಲಿಲ್ಲಾ. ಅಕ್ಕ ಪಕ್ಕದವರನ್ನು ವಿಚಾರಿಸಿ ಹುಡುಕಾಡಲು ಮೊಪೈಡ್ ಕಾಣಲಿಲ್ಲಾ. ಅದನ್ನು ಯಾರೋ
ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು. ನಾನು ಎರಡು ದಿವಸಗಳ ನಂತರ ವಾಪಸ್ ಮನೆಗೆ ಬಂದಾಗ ನನ್ನ
ಹೆಂಡತಿ ಮೊಪೈಡ್ ಕಳುವಾದ ವಿಷಯವನ್ನು ತಿಳಿಸಿದಳು. ನಂತರ ನಾನು ಗಂಗಾವತಿ, ಕಂಪ್ಲಿ, ಹೊಸಪೇಟೆ, ಕೊಪ್ಪಳ ಹಾಗೂ ಹಂಪಿ
ಕಡೆಗಳಲ್ಲಿ ತಿರುಗಾಡಿ ಹುಡುಕಾಡಿದೆನು. ಆದರೆ ನನ್ನ ಮೊಪೈಡ್ ಎಲ್ಲಿಯೂ ಸಿಗಲಿಲ್ಲಾ. ಕಾರಣ ಇಂದು
ತಡವಾಗಿ ಪೊಲೀಸ್ ಠಾಣೆಗೆ ಹಾಜರಾಗಿ ಈ ದೂರು ಸಲ್ಲಿಸಿರುತ್ತೇನೆ. ನನ್ನ ಮೊಪೈಡನ ಅಂದಾಜು
ಕಿಮ್ಮತ್ತು ರೂ. 18,000-00 ಆಗಬಹುದು. ದಿ:- 31-03-2016 ಮತ್ತು 01-04-2016
ರ ಮಧ್ಯ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನನ್ನ ಮನೆಯ ಮುಂದೆ
ನಿಲ್ಲಿಸಿದ್ದ ನನ್ನ ಮೊಪೈಡನ್ನು ಕಳವು ಮಾಡಿಕೊಂಡು ಹೋಗಿದ್ದು, ಕಾರಣ ಈ ಬಗ್ಗೆ ಕಾನೂನು ಕ್ರಮ ಜರುಗಿಸಿ ಕಳುವಾಗಿರುವ ನನ್ನ ಮೊಪೈಡನ್ನು ಪತ್ತೆ
ಮಾಡಿಕೊಡಲು ವಿನಂತಿ ಇರುತ್ತದೆ." ಅಂತಾ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
6] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 127/2016 ಕಲಂ. 323, 355, 354, 504, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 21-04-2016 ರಂದು ರಾತ್ರಿ 9:00 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಹುಸೇನಬೀ ಗಂಡ ಮಹ್ಮದ ರಫಿ ವಯಸ್ಸು: 30 ವರ್ಷ ಜಾತಿ: ಮುಸ್ಲಿಂ,
ಉ: ಮನೆಕೆಲಸ ಸಾ: ಜನತಾ ಕ್ಯಾಂಪ್ ತಾ: ಗಂಗಾವತಿ. ಇವರು ಠಾಣೆಗೆ
ಹಾಜರಾಗಿ ಲಿಖಿತ ಫಿರ್ಯಾದಿಯನ್ನು ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. ನಿನ್ನೆ ದಿನಾಂಕ: 20-04-2016 ರಂದು ಸಂಜೆ 6:00 ಗಂಟೆಯ ಸುಮಾರಿಗೆ ಆಂಜನೇಯಪ್ಪ ತಂದೆ ಯಂಕಪ್ಪ
ಹಾಗೂ ಆತನ ಹೆಂಡತಿ ನೀಲಮ್ಮ ಗಂಡ ಆಂಜನೇಯ ಇಬ್ಬರೂ ಸೇರಿಕೊಂಡು ಏಕಾಏಕಿಯಾಗಿ ನಮ್ಮ ಮನೆಗೆ ಬಂದು ನನ್ನ
ಗಂಡನಾದ ಮಹ್ಮದ್ ರಪಿಗೆ ಲೇ ಸೂಳೆ ಮಗನೇ ಎನ್.ಆರ್.ಇ.ಜಿ. ಪುಸ್ತಕ ನಿನ್ನ ಹತ್ತಿರ ಇಟ್ಟುಕೊಂಡು ನಮಗೆ
ಇಲ್ಲಾ ಅಂತಾ ಸುಳ್ಳು ಹೇಳುತ್ತಿಯನಲೇ ಎಂದು ಇಬ್ಬರೂ ಸೇರಿ ನನ್ನ ಗಂಡನ ಅಂಗಿ ಹಿಡಿದು ಎಳೆದಾಡಿ ಕಾಲಿನ
ಚಪ್ಪಲಿ ತಗೆದುಕೊಂಡು ಮನೆ ಮುಂದೆ ಬಡಿಯಲು ಪ್ರಾರಂಬಿಸಿದರು. ನಾನು ಬಿಡಿಸಲು ಹೋದಾಗ ಲೇ ಬೊಸುಡಿ ಸೂಳೆ
ನೀನೇನು ಹೇಳುತ್ತಿದ್ದಿಯಾ ಎಂದು ನನ್ನ ಸೀರೆ ಹಿಡಿದು ಎಳೆದಾಡಿ ತಲೆ ಕೂದಲು ಹಿಡಿದು ನೆಲದ ಮೇಲೆ ಕೆಡವಿ
ಕಾಲಿನಿಂದ ಒದ್ದರು. ಲೇ ಸೂಳೆ ಮಕ್ಕಳೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲಾ ಅಂತಾ ಬೈದು ಬೆದರಿಕೆ
ಹಾಕಿದರು. ಕಾರಣ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಲಿಖಿತ ದೂರಿನ
ಆದಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment