1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 72/2016 ಕಲಂ: 379 ಐ.ಪಿ.ಸಿ:
ದಿನಾಂಕ 23-04-2016 ರಂದು ಸಂಜೆ 7-00 ಗಂಟೆಗೆ ಫಿರ್ಯಾಧಿದಾರರಾದ ಗವಿಸಿದ್ದಪ್ಪ ತಂದೆ
ಮುದುಕಪ್ಪ ಮುರಡಿ ಸಾ-ಯತ್ನಟ್ಟಿ ರೋಡ್ ಭಾಗ್ಯನಗರ ಕೊಪ್ಪಳರವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ
ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೆ. ದಿನಾಂಕ 08-02-2016 ರಂದು ರಾತ್ರಿ 08-00
ಗಂಟೆಗೆ ತಮ್ಮ ಹೆಸರಿನಲ್ಲಿರುವ ತಮ್ಮ ಬಜಾಜ್ ಪ್ಲಾಟಿನಾ ಮೋಟಾರ ಸೈಕಲ್ ನಂ KA 37/EA 7303 ಅಂ.ಕಿ.ರೂ 30,000-00 ಬೆಲೆಬಾಳುವುದನ್ನು ಕೊಪ್ಪಳ ನಗರದ ಗವಿಮಠದ
ಮುಂದೆ ಇರುವ ನೀರಿನ ಟ್ಯಾಂಕಿನ ಹತ್ತಿರ ಹ್ಯಾಂಡ್ ಲಾಕ್ ಮಾಡಿ ನಿಲ್ಲಿಸಿ ದೇವರ ದರ್ಶನಕ್ಕೆ
ಹೋಗಿದ್ದು ಹೋಗುವಾಗ ತನ್ನ ಮೋಟಾರ್ ಸೈಕಲನ ಡೈಡ್ ಬ್ಯಾಗಿನಲ್ಲಿ ಆಕ್ಸಿಸ್ ಬ್ಯಾಂಕಿನ ಎ.ಟಿ.ಎಮ್
ಕಾರ್ಡ ನಂ 914010057525999 ಅಂಕಿರೂ ಇಲ್ಲಾ ಹಾಗೂ ಪಾನ್ ಕಾರ್ಡ ನಂ BNTPG7186G ಅಂಕಿರೂ ಇಲ್ಲಾ ವಾಪಸ ರಾತ್ರಿ 9-00 ಗಂಟೆಗೆ ಬಂದು ನೋಡಿದಾಗ ತನ್ನ
ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ಗಾಬರಿಯಾಗಿ ತಾನು ಗವಿಮಠದ ಸುತ್ತಾಮುತ್ತಾ ಮತ್ತ ಬಸ್
ನಿಲ್ದಾಣ, ಜವಾಹರ ರೋಡ್ ಮುಂತಾದ
ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಢಿಕೊಂಡು ಹೋಗಿದ್ದು, ಕಾರಣ ಮಾನ್ಯರವರು ಕಳ್ಳತನ ಮಾಢಿದ ಕಳ್ಳರನ್ನು ಪತ್ತೇ ಮಾಡಿ ಯರೋ ಕಳ್ಳರ ಮೇಲೆ ಸುಕ್ತ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇರುವ ಫಿರ್ಯಾದಿಯ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 279, 337, 338 ಐ.ಪಿ.ಸಿ:.
ದಿ: 23-04-16 ರಂದು ರಾತ್ರಿ 10-10 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಬಗ್ಗೆ ಎಮ್.ಎಲ್.ಸಿ ಬಂದಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪ್ರಕಾಶ ತಂದೆ ಈಶ್ವರಪ್ಪ
ದಿನ್ನಿ ಸಾ: ಕೊಪ್ಪಳ ಇವರ ಹೇಳಿಕೆ ಫಿರ್ಯಾದಿ ಪಡೆದುಕೊಂಡಿದ್ದು ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:23-04-16 ರಂದು ಸಾಯಂಕಾಲ ನಾನು ನನ್ನ ಸ್ನೇಹಿತ ರವಿ ಸಾ:
ಅಗಳಕೇರಿ ಇಬ್ಬರೂ ಕೂಡಿ ನಮ್ಮ ಮೋಟಾರ ಸೈಕಲ್ ತೆಗೆದುಕೊಂಡು ಕೊಪ್ಪಳದಿಂದಾ ವದಗನಹಾಳ ಗ್ರಾಮದಲ್ಲಿ
ಜಾತ್ರೆಗೆ ಹೋಗಿದ್ದೆವು. ನಂತರ ಅಲ್ಲಿಂದ ವಾಪಾಸ್ ಬರುವಾಗ ನಮ್ಮ ಮೋಟಾರ ಸೈಕಲ್ ನಂ:
ಕೆಎ-37/ಎಕ್ಸ-7949 ನೇದ್ದನ್ನು ರವಿ ಇತನು ಓಡಿಸಿಕೊಂಡು ಬರುವಾಗ ದದೇಗಲ್ ಬಸ್ಟ್ಯಾಂಡ್ ಹತ್ತಿರ
ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೆ ವಾಹನ ನಿಯಂತ್ರಿಸದೇ ಸ್ಕಿಡ್ ಮಾಡಿ
ಅಪಘಾತ ಪಡಿಸಿದ್ದು ಇರುತ್ತದೆ, ಈ ಅಪಘಾತದಲ್ಲಿ ನನಗೆ ಸಾದಾ ಗಾಯವಾಗಿದ್ದು, ಮತ್ತು ಚಾಲಕ ರವಿ ಇತನಿಗೆ ಭಾರಿ ಪೆಟ್ಟಾಗಿದ್ದು ಇರುತ್ತದೆ. ಕಾರಣ ಸದರಿ ಅಪಘಾತ ಮಾಡಿದ
ಮೋಟಾರ ಸೈಕಲ್ ಚಾಲಕ ರವಿ ತಂದೆ ಸೋಮಶೇಖರ ಸಾ: ಅಗಳಕೇರಿ ಇತನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸುವಂತೆ ಮುಂತಾಗಿ ನೀಡಿದ ದೂರನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 92/2016 ಕಲಂ:
324, 307, 506, 34 ಐ.ಪಿ.ಸಿ:.
ದಿ 23-04-16 ರಂದು ಬೆಳಿಗ್ಗೆ 6-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ದಾಖಲಾಗಿದ್ದ ಮಾರುತಿ ತಂದಿ ತಿಮ್ಮನೆಟಪ್ಪ ಈಡಿಗೇರ ವಯಾ- 43 ವರ್ಷ, ಜಾ. ಈಡಿಗೇರ, ಒಕ್ಕಲುತನ ಸಾ. 2 ನೇ ವಾರ್ಡ ಕಾರಟಗಿ ಇವರಿಗೆ ವಿಚಾರಿಸಿದ್ದು ಸದರಿಯವರು ತಮ್ಮದೊಂದು ದೂರು ಬರೆಯಿಸಿಕೊಟ್ಟಿದ್ದು ಸದರಿ ದೂರಿನ ಸಾರಾಂಶವೆನಂದರೆ. ನಾನು ಕಾರಟಗಿಯಲ್ಲಿ ಹೊಸದಾಗಿ ರಚಿತವಾದ ಪುರಸಭೆಯ ಸದಸ್ಯತ್ವಕ್ಕಾಗಿ ಕಾರಟಗಿ 2 ನೇ ವಾರ್ಡಿನಿಂದ ಬಿ.ಜೆ.ಪಿ ಅಭ್ಯಾರ್ಥಿಯಾಗಿ ಸ್ಪರ್ದೆ ಮಾಡಿದ್ದು ದಿನಾಂಕ:-24-04-2016 ರಂದು ಚುನಾವಣೆ ಇರುತ್ತದೆ ಇಂದು ಬೆಳಗ್ಗೆ 4-30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಮಲಗಿದ್ದಾಗ್ಗೆ ನಮ್ಮ ಮನೆಯ ಹೊರಗಡೆ ಯಾರೋ ಮೋಟಾರ್ ಸೈಕಲ ಮೇಲೆ ಓಡಾಡುವ ಶಬ್ದ ಕೇಳಿ ಹೊರಗಡೆ ಬಂದು ನೋಡುತ್ತಿದ್ದಂತೆ ಯಾರೂ 3 ಜನರು ಒಂದು ಮೋಟಾರ್ ಸೈಕಲ ಮೇಲೆ ಕಾರಟಗಿ ಉಪ್ಪಾರ ಓಣಿಯ ಮೂರು ಮೂಲೆ ಕಟ್ಟೆಯ ಕಡೆಗೆ ಹೋಗಿದ್ದರಿಂದ ನಾನು ಅವರ್ಯಾರು ಅಂತಾ ನೋಡಲು ನನ್ನ ಮೋಟಾರ್ ಸೈಕಲ್ ತೆಗೆದುಕೊಂಡು ಮೂರು ಮೂಲೆ ಕಟ್ಟೆಯ ಕಡೆಗೆ ಹೋಗಿ ನೋಡಲು ಅವರ ಯಲ್ಲೋ ಮರೆಯಾಗಿ ನಂತರ ನನ್ನ ಹಿಂದಿನಿಂದ ಒಂದೆ ಮೋಟಾರ್ ಸೈಕಲ್ ಮೇಲೆ ಮೂರು ಜನರು ಬಂದು ಬಾಟಲಿಯಿಂದ ನನ್ನ ಕುತ್ತಿಗೆಯ ಹಿಂಭಾಗಕ್ಕೆ ಮತ್ತು ತಲೆಗೆ ಹೋಡೆದು ಹೋಗಿದ್ದು ನನಗೆ ಮೋರ್ಚೆ ಹೋಗಿ ಬಿದ್ದಿದ್ದು ನಾನು ಅವರನ್ನು ನೋಡಿದ್ದು ಸರಿಯಾಗಿ ಗುರ್ತು ಸಿಕ್ಕಿರುವುದಿಲ್ಲಾ ನಂತರ ನೆಲಕ್ಕೆ ಬಿದ್ದ ನನಗೆ ರಾರಾಯಪ್ಪ ಪರಕಿ ಈತನು ಬಂದು ಎಬ್ಬಿಸಿ ನಮ್ಮ ಮನೆಯವರಿಗೆ ವಿಷಯ ತಿಳಿಸಿ ಮನೆಗೆ ಕರೆದುಕೊಂಡು ಹೋಗಿ ನನಗೆ ಉಪಚರಿಸಿ ನಂತರ ನಮ್ಮ ಮನೆಯವರು ಕಾರಟಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ ಯಾರೋ ಮೂರು ಜನರು ನಾನು ಚುನಾವಣೆಗೆ ಬಿಜೆ.ಪಿ ಕಡೆಯಿಂದ ಸ್ಪರ್ದೆ ಮಾಡಿದ್ದರ ಹಿನ್ನೆಲೆಯಲ್ಲಿ ನನಗೆ ಕೊಲೆ ಮಾಡುವ ಉದ್ದೇಶದಿಂದಲೇ ನನಗೆ ಬಾಟಲಿಯಿಂದ ಹೊಡೆದು ಹಲ್ಲೇ ಮಾಡಿ ತಿವ್ರವಾದ ಗಾಯಗೊಳಿಸಿರುತ್ತಾರೆ ಆ ಮೂರು ಅಪರಿಚತರನ್ನು ಪತ್ತೆ ಮಾಡಿ ಅವರಿಂದ ನನಗೆ ಜೀವ ಭಯವಿದ್ದು ನನಗೆ ರಕ್ಷಣೆ ಕೊಡಲು ವಿನಂತಿ ಅಂತಾ ಮುಂತಾಗಿ ಬರೆಯಿಸಿಕೊಟ್ಟ ಪಿರ್ಯಾದಿಯನ್ನು ಸ್ವೀಕರಿಸಿಕೊಂಡು ವಾಪಾಸ ಠಾಣೆಗೆ ಬೆಳಿಗ್ಗೆ 9-15 ಗಂಟೆಗೆ ಬಂದು ಸದರಿ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
0 comments:
Post a Comment