1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 88/2016 ಕಲಂ: 87 Karnataka Police Act.
ದಿ:24-04-16
ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಮುಂಡರಗಿ ಗ್ರಾಮದ ಶ್ರೀ
ಹನುಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್
ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ
ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 4560=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ
ಜಪ್ತ ಮಾಡಿಕೊಂಡಿದ್ದು 05 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ
ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 93/2016 ಕಲಂ:
171(ಎಫ್) ಐ.ಪಿ.ಸಿ:
ದಿನಾಂಕ: 24 04-2016 ರಂದು ಸಾಯಂಕಾಲ 6-10 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಮಾಹಾಂತಪ್ಪ ತಂದಿ
ಕಿರಿಟಪ್ಪ ಮರಕೊರೆ ವಯಾ-53 ವರ್ಷ ಜಾ- ಮೊಚಿ ಉ- ಹೆಚ್.ಎಮ್. ಜಿ.ಹೆಚ್.ಪಿ.ಎಸ್. ಚಿಕ್ಕಡಂಕನಕಲ್ಲ
ಹಾಗೂ ಕಾರಟಗಿ ಪುರಸಬೆ ಚುನಾವಣೆಯ ವಾರ್ಡ ನಂ-4 ಪ್ರೊಸಡಿಂಗ್ ಅಧೀಕಾರಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ಕಾರಟಗಿಯ ನಿವಾಸಿಯಾದ ಶ್ರೀ ಲಿಂಗಪ್ಪ ಸಾಲೋಣಿ ಅವರ ಮಗ ಶ್ರೀ ರಮೇಶ ಸಾಲೋಣಿ ಎಂಬುವವರು ಪೊಲೀಂಗ್ ಎಜೆಂಟರ್ ಗೆ ಒಪ್ಪಿಸಲಾಗುತ್ತಿರುವ ವ್ಯಕ್ತಿಯನ್ನು ಗುರುತಿಸಿ ಆಕ್ಷೇಪಿಸಿದ್ದಾರ. ಕಾರಟಗಿ ಪುರಸಭೆ 4 ನೇ ವಾರ್ಡಿನ ಚುನಾವಣೆ ಪಟ್ಟಿಯ 27 ಭಾಗದ 112 ನೇ ಕ್ರಮ ಸಂಖ್ಯೆಯಲ್ಲಿ ಇರುವ ನಂದ ಗಿಣಿವಾರ ತಂದಿ ಶೇಖರಪ್ಪ ಹೆಸರಿನ ಸಂಭಂದದಲ್ಲಿ ಈ ವ್ಯಕ್ತಿಯು ಮತ ಚಲಾಯಿಸಿದ್ದಾರೆ. ಈ ಮತದಾರರು ತಾವೆ ಎಂದು ಅವರಿಗೆ ರುಜುವಾತುಪಡಿಸಲು ಸಾದ್ಯವಾಗಿಲ್ಲ. ನನ್ನ ಅಭೀಪ್ರಾಯದಲ್ಲಿ ಇವರೊಬ್ಬ
ಮೊಸಗಾರ ನಿಸಿದ್ದಾರೆ ಇವರ ಬಗ್ಗೆ ಭಾರತೀಯ ದಂಡ ಸಂಹಿತೆಯ 171 (ಎಫ್) ಪ್ರಕರಣದ ಮೇರೆಗೆ ಅಗತ್ಯಪಡಿಸಿದಂತ
ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಕೋರಿರುತ್ತೇನೆ ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ದೂರಿನ
ಮೇರೆಗೆ ಕಾರಟಗಿ ಠಾಣೆ ಗುನ್ನೆ ನಂಬರ್- 93/ 2016 ಕಲಂ : 171 (ಎಫ್) ಐ.ಪಿ.ಸಿ. ಪ್ರಕಾರ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 39/2016 ಕಲಂ
279,337,338 ಐ.ಪಿ.ಸಿ
ದಿನಾಂಕ:
24-04-2016 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಪಿರ್ಯಾದಿದಾರ ತನ್ನ ಮೋಟಾರ ಸೈಕಲ ನಂ
ಕೆಎ37/ಆರ್-2555 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಚನ್ನಪ್ಪಗೌಡರ ತಂದೆ
ಪೀತ್ರಾಂಬ್ರಪ್ಪ ಇಳಿಗೇರ ಸಾ- ನೇಲಜೇರಿ ಇತನನ್ನು ತನ್ನ ನೋಟಾರ ಸೈಕಲ ಹಿಂದುಗಡೆ ಕುಳಿಸಿಕೊಂಡು
ಯಲಬುರ್ಗಾದಿಂದ ನೇಲಜೇರಿ ಗ್ರಾಮಕ್ಕೆ ನಡೆಯಿಸಿಕೊಂಡು ಯಲಬುರ್ಗಾ- ಮಲಕಸಮುದ್ರ ರಸ್ತೆ ಮೇಲೆ
ಮಲಕಸಮುದ್ರ ಸೀಮಾದಲ್ಲಿ ಬರುವ ಬೀರಪ್ಪ ಕುರಬರ ಇವರ ಹೊಲದ ಹತ್ತಿರ ರಸ್ತೆ ಎಡಮಗ್ಗಲು
ಹೋಗುತ್ತಿರುವಾಗ ಹಿಂದುಗಡೆಯಿಂದ ಅಂದರೆ ಯಲಬುರ್ಗಾ ಕಡೆಯಿಂದ ಟ್ರ್ಯಾಕ್ಟರ ಚಾಲಕನಾದ ಆರೋಪಿ
ಹನಮಂತಪ್ಪ ತಂದೆ ಲಿಂಬಪ್ಪ ರಾಠೋಡ ಸಾ- ಗೆದಗೇರಿ ತಾಂಡಾ ಇತನು ತಾನು ನಡೆಸುತ್ತಿದ್ದ
ಟ್ರ್ಯಾಕ್ಟರ ಇಂಜೀನ ನಂ ಕೆಎ-37/ಟಿ-8138 ಮತ್ತು ಟೇಲರ ನಂ ಕೆಎ-37/ಟಿ-8139 ನೇದ್ದನ್ನು
ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ ಸೈಕಲಿಗೆ ಅದರ ಮೇಲಿದ್ದ
ಇಬ್ಬರಿಗೂ ಜೋರಾಗಿ ಠಕ್ಕರ ಕೊಟ್ಟು ಅಪಘಾತ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತ ಇಬ್ಬರೂ ರಸ್ತೆ
ಮೇಲೆ ಬಿದ್ದಿದ್ದು ಇದರಿಂದ ಪಿರ್ಯಾದಿದಾರನಿಗೆ ಬಲಗಡೆ ತೆಲೆಗೆ, ಬಲಕಿವಿಯ ಹತ್ತಿರ
ತೆರಚಿದ ಗಾಯ, ಎಡ ಕೈಗೆ ಭಾರಿ ಸ್ವರೂಪದ ಪೆಟ್ಟು ಬಿದ್ದು ಮುರಿದಿದ್ದು, ಎಡಗಾಲ ಹೆಬ್ಬಟ್ಟಿಗೆ
ರಕ್ತಗಾಯ, ಎಡಗಾಲ ಮೋಣಕಾಲಿಗೆ ತೆರಚಿದ ಗಾಯವಾಗಿದ್ದು. ಮೋಟಾರ ಸೈಕಲ ಹಿಂದುಗಡೆ ಕುಳಿತು
ಕೊಂಡಿದ್ದ ಪಿರ್ಯಾದಿಯ ಅಣ್ಣನ ಮಗನಾದ ಚನ್ನಪ್ಪಗೌಡರ ಇಳಿಗೇರ ಇತನಿಗೆ ಬಲಹಣೆಗೆ ಬಾರಿ
ಸ್ವರೂಪದ ಒಳಪೆಟ್ಟು ಬಿದ್ದು ಮೂಗಿನಿಂದ ಮತ್ತು ಬಾಯಿಂದ ರಕ್ತ ಬರುತಿದ್ದು, ಬಲಗೈ ಮೋಣಕೈ
ಕೆಳಬಾಗದಲ್ಲಿ ತೆರಚಿದ ಗಾಯವಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ
ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್
ಠಾಣೆ ಗುನ್ನೆ ನಂ. 46/2016 ಕಲಂ 326,
447, 504, 506 ಸಹಿತ 34 ಐ.ಪಿ.ಸಿ
ದಿನಾಂಕ 24-04-2016 ರಂದು ಸಂಜೆ 7-00 ಗಂಟೆಗೆ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಎಂ.ಎಲ್.ಸಿ
ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪಿರ್ಯಾದಿದಾರರಾದ ಕುಮಾರ ಶಂಕ್ರಪ್ಪ ತಂದೆ ಛತ್ರಪ್ಪ ಹರಿಜನ, ವಯ : 16 ವರ್ಷ,
ಜಾತಿ : ಹರಿಜನ, ಉ : 10 ನೇ ತರಗತಿ ವಿದ್ಯಾಥರ್ಿ, ಸಾ : ಕನ್ನಾಳ. ತಾ : ಕುಷ್ಟಗಿ.ರವರ ಹೇಳಿಕೆಯನ್ನು
ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಇಂದು ದಿನಾಂಕ: 24-04-2016 ರಂದು ಮದ್ಯಾಹ್ನ 4-00 ಗಂಟೆಗೆ
ಫಿಯರ್ಾದಿದಾರರು ತಮ್ಮ ಹೊಲದಲ್ಲಿದ್ದಾಗ ಆರೋಪಿ ರಾಮಣ್ಣನು ಫಿಯರ್ಾದಿದಾರರ ಹೊಲದಲ್ಲಿ ಬಂದು ಟೆಂಗಿನ
ಕಾಯಿಯನ್ನು ಹರಿದುಕೊಂಡಿದ್ದು ಅದನ್ನು ಪಿರ್ಯಾದಿದಾರರ ಪ್ರಶ್ನಿಸಿದ್ದಕ್ಕೆ ಆರೋಪಿ ರಾಮಣ್ಣನು ಅವಾಚ್ಯ ಶಬ್ದಗಳಿಂದ ಬೈದು, ಹೊಲದಲ್ಲಿ ಬಿದ್ದಿದ್ದ
ಒಂದು ಬಡಿಗೆಯಿಂದ ಫಿಯರ್ಾದಿದಾರರ ಎಡ ರಟ್ಟೆಗೆ ಹೊಡೆದಿದ್ದು, ಇದರಿಂದ ಪಿರ್ಯಾದಿದಾರರ ಎಡ ರಟ್ಟೆ ಮುರಿದು ಭಾರಿ ಒಳಪೆಟ್ಟಗಿದ್ದು, ಅಲ್ಲದೆ ಆರೋಪಿತರಾದ
ಶ್ಯಾಮಣ್ಣ ಮತ್ತು ನಾಗರಾಜ ಇವರು ಬಂದು ಫಿಯರ್ಾದಿದಾರರಿಗೆ ಈ ವಿಷಯವನ್ನು ಯಾರ ಮುಂದೆಯಾದರು ಹೇಳಿದರೆ
ಜೀವ ತೆಗೆಯುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಪಿರ್ಯಾದಿಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
0 comments:
Post a Comment