Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, May 15, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ: 87 Karnataka Police Act.
ದಿ:14-05-2016 ರಂದು ಸಾಯಂಕಾಲ 06.20 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಟನಕನಕಲ್ಲ ಗ್ರಾಮದ ಬಸವಣ್ಣ ದೇವರ ಗುಡಿಯ ಕಟ್ಟೆ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ 07 ಜನ 1] ಹನಮಂತ ತಂದೆ ನೂರಂದಪ್ಪ ಹಾಬಲಕಟ್ಟಿ, ವಯ: 35 ವರ್ಷ, ಜಾ: ಗಂಗಾಮತ, ಉ: ಪಾನಶಾಪ್ ಸಾ: ಟನಕನಕಲ್ಲ 2] ಗಂಗಪ್ಪ ತಂದೆ ಹನಮಂತಪ್ಪ ಭಜಂತ್ರಿ ವಯ: 35 ವರ್ಷ, ಜಾ: ಭಜಂತ್ರಿ, ಸಾ: ಟನಕನಕಲ್ಲ 3] ರಾಜಪ್ಪ ತಂದೆ ಅಯ್ಯನಗೌಡ ಕಟಗಿಹಳ್ಳಿ ವಯ: 34 ವರ್ಷ, ಜಾ: ಗಾಣೆಗೇರ, ಉ:ಕೂಲಿಕೆಲಸ. ಸಾ: ನೆಲಜೇರಿ ತಾ: ಯಲಬುರ್ಗಾ 4] ನರಶಿಂಹಮೂರ್ತಿ ತಂದೆ ಪುಟ್ಟಯ್ಯ. ವಯ:43 ವರ್ಷ, ಜಾ: ನಾಯಕ, ಉ: ಟಿವಿ ರಿಪೇರಿ ಕೆಲಸ ಸಾ: ಬಸವನಗರ ಕೊಪ್ಪಳ 5] ವೆಂಕಟೇಶ ತಂದೆ ಹನಮಪ್ಪ ಸಣ್ಣಗೌಡರ ವಯ: 45 ವರ್ಷ, ಜಾ: ಗಮಗಾಮತ, ಉ: ಜವಾನ. ಸಾ: ಟನಕನಕಲ್ಲ 6] ಉಡಚಪ್ಪ ತಂದೆ ನಿಂಗಪ್ಪ ಹಂದ್ರಾಳ ವಯ: 60 ವರ್ಷ,ಜಾ: ಗಾಣಿಗೇರ, ಉ: ಒಕ್ಕುಲುತನ ಸಾ: ಟನಕನಕಲ್ಲ 7] ಈರಪ್ಪ ತಂದೆ ಫಕೀರಪ್ಪ ಲಕ್ಕುಂಡಿ ವಯ:70 ವರ್ಷ, ಜಾ: ಗಾಣಿಗೇರ, ಉ: ಒಕ್ಕಲುತನ ಸಾ: ಲಕ್ಕುಂಡಿ ಹಾ.ವ: ಟನಕನಕಲ್ಲ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 8160=00 ರೂ, ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 07 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 105/2016 ಕಲಂ: 87 Karnataka Police Act.
ದಿನಾಂಕ:-14-05-2016 ರಂದು ಸಾಯಂಕಾಲ 6-45 ಗಂಟೆಗೆ ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 14-05-2016 ರಂದು ಸಾಯಂಕಾಲ 6-30  ಗಂಟೆಯ ಸುಮಾರಿಗೆ ಕಾರಟಗಿಯ ನಜರ್ ಕಾಲೋನಿಯಲ್ಲಿಯ ಆಂಜನೇಯ ದೇವಸ್ಥಾನದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 4 ಜನ 1] ಗಣಿಸಾಬ ತಂದಿ ಅಬ್ದುಲಸಾಬ  ಮುಲ್ಲಾರ ವಯಾ- 48 ವರ್ಷ ಜಾ- ಮುಸ್ಲಿಂ ಉ- ಕೆ.ಜಿ.ಪಿ.ಎಲ್. ದಲ್ಲಿ ಕೆಲಸ ಸಾ- ನಜರ್ ಕಾಲೋನಿ ಕಾರಟಗಿ ತಾ- ಗಂಗಾವತಿ 2] ಶರಣಪ್ಪ ತಂದಿ ಶೇಖರಪ್ಪ  ಶೆಟ್ಟರ ವಯಾ- 37 ವರ್ಷ ಜಾ- ಶೆಟ್ಟರ ಉ- ಚಾಲಕ ಸಾ- ಜೆ.ಪಿ.ನಗರ ಕಾರಟಗಿ ತಾ- ಗಂಗಾವತಿ 3] ಅಮರೇಶ ತಂದಿ  ಕಲ್ಲನಗೌಡ  ಬಿಜಕಲ್ಲ ವಯಾ- 30 ವರ್ಷ ಜಾ- ಲಿಂಗಾಯತ ಉ- ಹೊಟೇಲ್ ಕೆಲಸ ಸಾ- ಸಾಲೋಣಿ ಕಾರಟಗಿ ತಾ- ಗಂಗಾವತಿ. 4] ಮಲ್ಲಪ್ಪ ತಂದಿ ಅಡಿವೇಪ್ಪ ಬಜಂತ್ರಿ ವಯಾ- 30 ವರ್ಷ ಜಾ- ಬಜಂತ್ರಿ ಉ- ಹಣ್ಣಿನ ವ್ಯಾಪಾರ ಸಾ- ನಜರ್  ಕಾಲೋನಿ ಕಾರಟಗಿ ತಾ- ಗಂಗಾವತಿ ಇವರು ಸಿಕ್ಕಿಬಿದ್ದಿದ್ದು,. ಸಿಕ್ಕಿ ಬಿದ್ದ ಆರೋಪಿತಕಡೆಯಿಂದ ರೂ. 3740=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳ ಜಪ್ತ ಮಾಡಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 139/2016 ಕಲಂ: 302, 201, ಸಹಿತ 34 ಐ.ಪಿ.ಸಿ.
ದಿನಾಂಕ: 14-05-2016 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಪಾರ್ವತೆವ್ವ ಗಂಡ ಮಲ್ಲಪ್ಪ ಮನ್ನೇರಿ ಸಾ: ಮಿಯ್ಯಾಪೂರ ತಾ:ಕುಷ್ಟಗಿ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ ಈಗ್ಗೆ ಸುಮಾರು 15 ದಿನಗಳ ಹಿಂದೆ ಸದರಿ ಆರೋಪಿ ಗಂಗಮ್ಮಳ ಮಗನಾದ ರಮೇಶ ಈತನ ಮದುವೆಯು ನಮ್ಮೂರ ಶರಣಬಸವೇಶ್ವರ ಜಾತ್ರೆಯ ವೇಳೆಯಲ್ಲಿ ಸಮೂಹಿಕ ವಿವಾಹದಲ್ಲಿ ಮದುವೆ ಆಗಿದ್ದು ಇರುತ್ತದೆ. ಆತನ ಹೆಂಡತಿ ಸಂಗೀತಾ ಲಿಂಗದಳ್ಳಿ ಗ್ರಾಮದವರು ಇರುತ್ತಾರೆ. ಸದರಿ ರಮೇಶನ ಲಗ್ನ ವಾದ ನಂತರವೂ ಸಹ ನನ್ನ ಗಂಡನು ರಾತ್ರಿ ಮಲಗಲು ಗಂಗಮ್ಮಳ ಮನೆಗೆ ಹೋಗುತ್ತಿದ್ದು ಆಗ ಸದರಿ ಗಂಗಮ್ಮ ಮತ್ತು ಆಕೆಯ ಮಗನಾದ ರಮೇಶ ರವರು ನೀನು ನಮ್ಮ ಮನೆಗೆ ಬರಬೇಡ ನಮಗೆ ಮರ್ಯಾದೆ ಪ್ರಶ್ನೆ ಇದೆ ಅಂತಾ ಹೇಳಿ ಆತನೊಂದಿಗೆ ಜಗಳಾ ಮಾಡಿ ಮನೆಯಿಂದ ಹೊರಗೆ ಕಳುಹಿಸಿದ್ದರು, ಆದರೆ ಕುಡಿಯುವ ಚಟ ಇದ್ದ ನನ್ನ ಗಂಡನು ಕುಡಿದ ನಿಶೆಯಲ್ಲಿ ಪುನಃ ಅವರ ಮನೆಗೆ ಹೋಗುತ್ತಿದ್ದನು. ದಿನಾಂಕ. 13-05-2016 ರಂದು ರಾತ್ರಿ 09-30 ಗಂಟೆ ಸುಮಾರು ನನ್ನ ಗಂಡ ಮಲ್ಲಪ್ಪ ತನು ನಮ್ಮ ಮನೆಯಲ್ಲಿ ಊಟ ಮಾಡಿ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಗಂಗಮ್ಮಳ ಮನೆಗೆ ಹೋದನು, ಆತನು ಈಗ್ಗೆ ಸುಮಾರು 20 ವರ್ಷಗಳಿಂದ ಆಕೆಯ ಮನೆಗೆ ಹೋಗುತ್ತಿದ್ದರಿಂದ ಬೆಳಿಗ್ಗೆ ಬರುತ್ತಾನೆ ಅಂತಾ ನಾನು ಸಹ ಸುಮ್ಮನಾದೇನು. ನಂತರ ಈ ದಿವಸ ದಿನಾಂಕ. 14-05-2015 ರಂದು ಬೆಳಿಗ್ಗೆ ನಾನು ತಂಬಿಗೆ ತೆಗೆದುಕೊಂಡು ಹೋದಾಗ ವಿಷಯ ಗೊತ್ತಾಗಿದ್ದೇನೆಂದರೆ ಗಂಗಮ್ಮಳ ಜನತಾ ಮನೆಯಲ್ಲಿ ಇಂದು ಬೆಳಿಗ್ಗೆ 06-30 ಗಂಟೆಯ ಸುಮಾರಿಗೆ ನನ್ನ ಗಂಡನಾದ ಮಲ್ಲಪ್ಪನು ಉರ್ಲು ಹಾಕಿ ಕೊಂಡು ಸತ್ತಿರುತ್ತಾನೆ ಅಂತಾ ವಿಷಯ ತಿಳಿದು ಕೂಡಲೇ ನಾನು ಅಲ್ಲಿಗೇ ಹೋಗಿ ನೋಡಲು ನನ್ನ ಗಂಡನು ಗಂಗಮ್ಮಳ  ಜನತಾ ಮನೆಯಲ್ಲಿ ಜಂತಿಯ ಅಂಗ್ಲಾರಿಗೆ ಉರ್ಲುಹಾಕಿಕೊಂಡಿದ್ದು ಕಂಡು ಬಂತು. ಆಗ ಸ್ವಲ್ಪ ಹೊತ್ತಿನಲ್ಲಿ ಗಂಗಮ್ಮಳ ಮಗನಾದ ರಮೇಶನು ಅಲ್ಲಿಗೆ ಬಂದು ಉರಲಿನ ಹಗ್ಗ ಕಟ್ ಮಾಡಿ ಹೆಣವನ್ನು ಕೆಳಗೆ ಹಾಕಿದನು, ನಂತರ ನೋಡಲು ನನ್ನ ಗಂಡನ ಬಲ ಎದೆಯ ಮೇಲೆ ಬಲವಾದ ಹೊಡೆತ ಇದ್ದು ಅದು ದುಂಡಾಗಿ ಆಳವಾಗಿ ಭಾರಿಗಾಯವಾಗಿದ್ದು, ಎಡಗಡೆಯ ಕಿವಿ ಕಟ್ಟಾಗಿದ್ದು, ಕೆಳಗಿನ ತುಟಿ ಸಹ ಕಟ್ಟಾಗಿದ್ದು,  ಮತ್ತು ಎಡಗಾಲು ಮೊಣಕಾಲು ಕೆಳಗೆ ಸಣ್ಣ ರಕ್ತಗಾಯವಾಗಿತ್ತು. ಈ ಬಗ್ಗೆ ಗಂಗಮ್ಮಳಿಗೆ ಮತ್ತು ರಮೇಶನಿಗೆ ಕೇಳಿದಾಗ ಅವರು ನಮಗೇನು ಗೊತ್ತಿಲ್ಲ ರಾತ್ರಿ ಮನೆಯಲ್ಲಿ ನಮ್ಮೊಂದಿಗೆ ಮಲಗಿದ್ದು, ಬೆಳಗಾಗೊದ್ರಲ್ಲಿ ಹೀಗಾಗಿದೆ ಅಂತಾ ಹೇಳಿದರು. ಸದರಿ ನನ್ನ ಗಂಡನಾದ ಮಲ್ಲಪ್ಪನನ್ನು  ನಮ್ಮೂರ ಗಂಗಮ್ಮ ಗಂಡ ಸಂಗಪ್ಪ ಹೂಲಗೇರಿ ವಯಾ 48 ವರ್ಷ ಮತ್ತು ಆಕೆಯ ಮಗ ರಮೇಶ ವಯಾ 24 ವರ್ಷ ಇವರಿಬ್ಬರೂ ಕೂಡಿ ನನ್ನ ಗಂಡನು ಗಂಗಮ್ಮಳೊಂದಿಗೆ ಇಟ್ಟುಕೊಂಡಿದ್ದ ಅನೈತಿಕ ಸಂಬಂಧವನ್ನು ಬಿಡದ ದ್ವೇಷದಿಂದ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಯಾವುದೋ ಒಂದು ಹರಿತವಾದ ಆಯುಧದಿಂದ ನನ್ನ ಗಂಡನ ಎದೆಗೆ, ತುಟಿಗೆ. ಕಿವಿಗೆ ಮತ್ತು ಕಾಲುಗಳಿಗೆ ಹೊಡೆದು ಕೊಲೆ ಮಾಡಿ ನಂತರ ಆತನ ಶವವನ್ನು ತಮ್ಮ ಜನತಾ ಮನೆಯ ಜಂತಿಯ ಅಂಗ್ಲಾರಿಗೆ ಉರ್ಲು ಹಾಕಿದ್ದು ಇರುತ್ತದೆ. ನಂತರ ನಾನು ನನ್ನ ಅಕ್ಕಳ ಮಗನಾದ ಬಸವರಾಜ ತಂದೆ ವಿರುಪಾಕ್ಷಪ್ಪ ಬನ್ನಟ್ಟಿ  ಇವರೊಂದಿಗೆ ಕುಷ್ಟಗಿ ಠಾಣೆಗೆ ಬಂದು ಇದ್ದ ವಿಷಯವನ್ನು ಆತನ ಕಡೆಯಿಂದ ಬರೆಯಿಸಿದ್ದು ಇರುತ್ತದೆ. ನಿನ್ನೆ ರಾತ್ರಿ 9-30 ಗಂಟೆಯಿಂದ ಈ ದಿನ ಬೆಳಗಿನ 06-30 ಗಂಟೆಯ ಅವಧಿಯಲ್ಲಿ ನನ್ನ ಗಂಡನು ಗಂಗಮ್ಮಳೊಂದಿಗೆ ಹೊಂದಿದ್ದ ಅನೈತಿಕ ಸಂಭಂಧ ಬಿಡದ ದ್ವೇಷದಿಂದ ಸದರಿ ನನ್ನ ಗಂಡನನ್ನು ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ ಗಂಗಮ್ಮ ಮತ್ತು ಆಕೆಯ ಮಗ ರಮೇಶ ಇಬ್ಬರೂ ಕೂಡಿ ಕೊಲೆ ಮಾಡಿದ್ದು ಸದರಿಯವರ ವಿರುದ್ದ ಕಾನೂನು ಕ್ರಮಕ್ಕಾಗಿ ವಿನಂತಿ ಇರುತ್ತದೆ. ಅಂತಾ ನೀಡಿದ ಲಿಖಿತ ಪಿರ್ಯಾದಿಯ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
4] ಕೂಕನೂರ ಪೊಲೀಸ್ ಠಾಣೆ ಗುನ್ನೆ ನಂ: 51/2016 ಕಲಂ: 110(ಇ)(ಜಿ) ಸಿ.ಅರ್.ಪಿ.ಸಿ. 

ದಿನಾಂಕ:14-05-2016 ರಂದು 8-45 ಎಎಂಕ್ಕೆ ಪೆಟ್ರೋಲಿಂಗ್ ಕರ್ತವ್ಯ ಕುರಿತು ಪಿಸಿ-345 ರವರೊಂದಿಗೆ ಹೋಗಿದ್ದು,  ಗುದ್ನೆಪ್ಪನಮಠದಲ್ಲಿ ಆರೋಪಿ ಸಂತೋಷ @ ಸಂತು ತಂದೆ ವೀರಯ್ಯ ಪೂಜಾರ, ವ:29ವರ್ಷ, ಜಾ:ಜಂಗಮ, ಉ:ಹೊಲಮನೆಕೆಲಸ ಸಾ:ಗುದ್ನೆಪ್ಪನಮಠ, ಕುಕನೂರ ತಾ:ಯಲಬುರ್ಗಾ ಇತನು ವಿನಾಕಾರಣ ಸಾರ್ವಜನಿಕರಿಗೆ ತನ್ನ ವೈಯಕ್ತಿಕ ವಿಷಯವಾಗಿ ತೊಂದರೆ ಕೊಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು, 9-00 ಎಎಂಕ್ಕೆ ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಸಾರ್ವಜನಿಕರಿಂದ ಮತ್ತು ಪೊಲೀಸ್ ಬಾತ್ಮೀದಾರರಿಂದ ತಿಳಿದು ಬಂದಿದ್ದೇನೆಂದರೆ, ಆರೋಪಿತನು ತನ್ನ ಮನೆತನದ ವಿಷಯವಾಗಿ ಊರಲ್ಲಿಯ ಸಾರ್ವಜನಿಕರಿಗೆ “ ನಾನು ಊರಲ್ಲಿ ಬೇಕಾದ್ದು ಮಾಡುತ್ತೇನೆ.  ನನ್ನನ್ನು ಯಾವನು ಕೇಳೋನು.ಯಾವ ಸೂಳೇ ಮಕ್ಕಳು ನನ್ನನ್ನು ಏನು ಹರಿದುಕೊಳ್ಳುವುದಿಲ್ಲಾ “ಅಂತಾ ವಿನಾಕಾರಣ ಒದರಾಡುತ್ತಾ, ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು, ಅವನಿಗೆ ಹಾಗೆಯೇ ಬಿಟ್ಟಲ್ಲಿ ಸಾರ್ವಜನಿಕ ಶಾಂತತೆಗೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆಯಾಗುವ ಸಾಧ್ಯತೆ ಕಂಡು ಬಂದಿದ್ದರಿಂದ ಕಂಡು ಬಂದಿದ್ದರಿಂದ ವಾಪಸ್ ಠಾಣೆಗೆ 9-15 ಎಎಂಕ್ಕೆ ಬಂದು ಸರ್ಕಾರೀ ತರ್ಫೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008