1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 142/2016 ಕಲಂ: 302 ಐ.ಪಿ.ಸಿ:.
ಆರೋಪಿತನಾದ ಹನಮಪ್ಪ ಇವನು
ಈ ಮೊದಲು ತನ್ನ ಅಕ್ಕನ ಮಗಳನ್ನು ಮದುವೆಯಾಗಿದ್ದು ಅವಳು ತೀರಿಕೊಂಡ ನಂತರ ಫಿರ್ಯಾದಿದಾರನು ತನ್ನ ಮಗಳಾದ
ಶಿವಲೀಲಾ @ ರೇಣುಕಮ್ಮ ಇವಳನ್ನು ದಿನಾಂಕ:
27-11-2015 ರಂದು ಕುಷ್ಟಗಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಸದರಿ ಆರೋಪಿ ಹನಮಪ್ಪ ಇವನೊಂದಿಗೆ 2 ನೇ ಮದುವೆ ಮಾಡಿಕೊಟ್ಟಿದ್ದು ನಂತರ ಈಗ್ಗೆ ಸುಮಾರು 2
ತಿಂಗಳ ಹಿಂದೆ ಆರೋಪಿತನು ಮೂರನೇ ಮದುವೆಯಾಗಿದ್ದು
ಈ ವಿಷಯ ಫಿರ್ಯಾದಿದಾರರಿಗೆ ಗೊತ್ತಾಗಿ ಈಗ್ಗೆ ಸುಮಾರು 1 ½ ತಿಂಗಳದ ಹಿಂದೆ ಫಿರ್ಯಾದಿದಾರರು ಹಿರಿಯರ ಸಮಕ್ಷಮದಲ್ಲಿ
ಲಿಂಗದಳ್ಳಿ ಗ್ರಾಮಕ್ಕೆ ಹೋಗಿ ಆರೋಪಿತನ ಮೂರನೇ ಮದುವೆಯಾದ ಬಗ್ಗೆ ಚರ್ಚಿಸಿ ಆ ವೇಳೆಯಲ್ಲಿ ಫಿರ್ಯಾದಿದಾರರ
ಮಗಳಿಗೆ 5 ಎಕರೆ ಹೊಲ ಮತ್ತು ಒಂದು ಮನೆ ಕೊಡುವ ಬಗ್ಗೆ ಮಾತು ಕತೆ ಮಾಡಿಕೊಂಡು ಬಂದಿದ್ದು ಇರುತ್ತದೆ.
ಸದರಿ ಫಿರ್ಯಾದಿದಾರರ ಮಗಳು ಮೊದಲನೇ ಐದು ತಿಂಗಳ ಗರ್ಭಿಣಿ ಇದ್ದುದರಿಂದ ಈಗ್ಗೆ 1 ತಿಂಗಳ ಹಿಂದೆ ಫಿರ್ಯಾದಿದಾರರು
ತಮ್ಮ ಮಗಳ ಗಂಡನ ಮನೆಯಾದ ಲಿಂಗದಳ್ಳಿ ಗ್ರಾಮಕ್ಕೆ
ಹೋಗಿ ಬುತ್ತಿ ಕೊಡುವ ಕಾರ್ಯಕ್ರಮ ಮಾಡಿಕೊಂಡು ತಮ್ಮ ಮಗಳನ್ನು ತವರು ಮನೆಗೆ ಕರೆದುಕೊಂಡು ಬಂದಿದ್ದು
ನಂತರ ಫಿರ್ಯಾದಿದಾರರ ಮಗಳು ತವರು ಮನೆಯಲ್ಲಿದ್ದಾಗ
ಆರೋಪಿತನು 2 ಬಾರಿ ಇಲ್ಲಿಗೆ ಬಂದು ಫಿರ್ಯಾದಿದಾರಳ
ಮಗಳಿಗೆ ನಮ್ಮ ಹೊಲ ಮನೆಯನ್ನು ನಿನ್ನ ಹೆಸರಿಗೆ ಮಾಡಿಕೊಡುವ ಬಗ್ಗೆ ನಿಮ್ಮ ಮನೆಯವರು ನಮ್ಮ ಊರಿಗೆ
ಬಂದು ಮಾತುಕತೆ ಮಾಡಿಕೊಂಡು ಬಂದಿದ್ದು ನಿನ್ನ ಜೀವ ಸಹಿತ ಇದ್ದರೆ ಹೊಲ ಮನೆ ತೆಗೆದುಕೊ ಅಂತಾ ಜಗಳ
ಮಾಡಿ ಹೋಗಿದ್ದು ಇತ್ತು . ನಂತರ ಆರೋಪಿತನು ಫಿರ್ರ್ಯಾದಿದಾರರ ಮಗಳಿಗೆ ಆಸ್ತಿಯನ್ನು ಕೊಡಬೇಕಾಗುತ್ತದೆ
ಅಂತಾ ಸಿಟ್ಟಿನಿಂದ ಆಕೆಯನ್ನು ಕೊಲೆ ಮಾಡಬೇಕು ಅಂತಾ ದಿನಾಂಕ: 15-05-2016 ರಂದು ರಾತ್ರಿ 10-00
ಗಂಟೆ ಸುಮಾರಿಗೆ ಆರೋಪಿತನು ಫಿರ್ಯಾದಿದಾರನ ಮನೆಗೆ ಬಂದು ರಾತ್ರಿ ಫಿರ್ಯಾದಿದಾರರ ಮಗಳ ಜೊತೆ ಅಂದರೆ
ತನ್ನ ಹೆಂಡತಿ ಜೊತೆ ಮಲಗಿಕೊಂಡು, ದಿನಾಂಕ: 16-05-2016 ರಂದು ಬೆಳಗಿನ ಜಾವ 01-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಮಗಳು ಮಲಗಿದ ಸಮಯದಲ್ಲಿ ಅವಳ ಮುಖಕ್ಕೆ ತಲೆ
ದಿಂಬಿನಿಂದ ಬಲವಾಗಿ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಅವಳ ಮೈಮೇಲೆ
ಜೋಳದ ಚೀಲಗಳನ್ನು ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
95/2016 ಕಲಂ: 323, 324, 307, 504, 506 ಐ.ಪಿ.ಸಿ ಮತ್ತು 3(1)(10)
ಎಸ್.ಸಿ./ಎಸ್.ಟಿ. ಪಿ.ಎ. ಕಾಯ್ದೆ 1989:.
ದಿನಾಂಕ 16-05-2016 ರಂದು
ಬೆಳಿಗ್ಗೆ 9-00 ಗಂಟೆಗೆ ಶರಣಪ್ಪ ತಾಯಿ ಮರಿಯಮ್ಮ @ ಗಿಡ್ಡಮ್ಮ ಕಂಠಿ, ವಯಸ್ಸು 26 ವರ್ಷ, ಜಾ: ಚಲವಾದಿ,
ಉ: ಗೌಂಡಿಕೆಲಸ, ಸಾ: 28ನೇ ವಾರ್ಡ, ಚಲವಾದಿ ಓಣಿ, ಹಿರೇಜಂತಕಲ್, ಗಂಗಾವತಿ ಇವರು ಠಾಣೆಗೆ ಬಂದು ತಮ್ಮದೊಂದು
ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ನಿನ್ನೆ ದಿನಾಂಕ 15-05-2016 ರಂದು ಸಂಜೆ 5-30 ಗಂಟೆ
ಸುಮಾರಿಗೆ ಫಿರ್ಯಾದಿಯು ತನ್ನ ಮೊಬೈಲಿಗೆ ಕರೆನ್ಸಿ ಹಾಕಿಸಲು ದಾದಾಪೀರ್ ಪಾನ್ ಶಾಪ್ ಗೆ ಹೋಗಿದ್ದು,
ಆಗ ಅಲ್ಲಿಯೇ ಇದ್ದ ಆರೋಪಿ ಶೆಕ್ಷಾವಲಿ ಇವನು ನೀರನ್ನು ಕುಡಿದು ಖಾಲಿ ಪಾಕೇಟನ್ನು ಏಕಾಏಕಿ ಫಿರ್ಯಾದಿಯ
ಮುಖಕ್ಕೆ ಎಸೆದಿದ್ದು, ಅದಕ್ಕೆ ಫಿರ್ಯಾದಿಯು ಯಾಕೆಂದು ಕೇಳಿದಾಗ “ಲೇ ನಿಮ್ಮೌನ್
ಬ್ಯಾಗಾರ ಸೂಳೇಮಗನೇ ಬ್ಯಾಗಾರ ಮಂದಿದು ಇಲ್ಲಿ ಭಾಳ ಆಗೈತೀ” ಅಂತಾ ಜಾತಿ ಎತ್ತಿ ಬೈಯುತ್ತಾ ಕೈಯಿಂದ
ಹೊಡೆಬಡೆ ಮಾಡಿದ್ದು ಅಲ್ಲದೇ ಅಲ್ಲಿಯೇ ಇದ್ದ ಖಾಲಿ ಸೋಡಾ ಬಾಟಲಿಯನ್ನು ತೆಗೆದುಕೊಂಡು ಒಡೆದು “ನಿಮ್ಮೌನ್
ಇವತ್ ನಿನ್ನ ಮುಗಿಸಿಬಿಡ್ತಿನಿ” ಅಂತಾ ಅನ್ನುತ್ತಾ ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿಯ ತಲೆಗೆ
ಹೊಡೆದು ರಕ್ತ ಗಾಯ ಮಾಡಿದ್ದು ಇರುತ್ತದೆ. ಕಾರಣ ಮಾನ್ಯರು ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ
ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಾಡಿ ಜಾತಿ ನಿಂದನೆ ಮಾಡಿ ಜೀವದ ಬೆದರಿಕೆ
ಹಾಕಿದ ಶೆಕ್ಷಾವಲಿ ತಂದೆ ಖಾಜಾಸಾಬ ಕಟಗರ ಸಾ: ಹಿರೇಜಂತಕಲ್ ಇವನ ವಿರುದ್ದ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ:
145/2016 ಕಲಂ: 87 Karnataka
Police Act.
ದಿನಾಂಕ:-16-05-2016 ರಂದು ಸಂಜೆ 5:00 ಗಂಟೆಗೆ ಶ್ರೀ ಟಿ.ಜಿ. ನಾಗರಾಜ ಎ.ಎಸ್.ಐ.
ಗಂಗಾವತಿ ಗ್ರಾಮೀಣ ಠಾಣೆ ರವರು ಮೂಲ ವರದಿಯೊಂದಿಗೆ ಮೂಲ ಪಂಚನಾಮೆ, ಇಸ್ಪೀಟ್ ಜೂಜಾಟಕ್ಕೆ ಸಂಭಂದಿಸಿದಂತಹ ಮುದ್ದೆಮಾಲು ಹಾಗೂ ಏಳು ಜನ ಆರೋಪಿತರನ್ನು
ಹಾಜರಪಡಿಸಿದ್ದು ಅದರ ಸಾರಾಂಶ ಈ ಪ್ರಕಾರ ಇದೆ. ಇಂದು ದಿನಾಂಕ: 16-05-2016 ರಂದು ಮಧ್ಯಾಹ್ನ
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಹಾಳ ಗ್ರಾಮದ ಆಂಜನೇಯ ಗುಡಿ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ
ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಹಾಗೂ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ನಾನು
ಸಿಬ್ಬಂದಿಯವರಾದ ಹೆಚ್.ಸಿ. 68 ಪಿ.ಸಿ. 335, 323, 287, 429, 363, 361, ಹಾಗೂ ಸರಕಾರಿ ಜೀಪ ನಂ ಕೆ.ಎ-37/ ಜಿ-307 ನೇದ್ದರ ಜೀಪ ಚಾಲಕ
ಎ.ಪಿ.ಸಿ. ಕನಕಪ್ಪ ರವರೊಂದಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಸರಕಾರಿ ಜೀಪ್ ಹಾಗೂ
ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲನಲ್ಲಿ ಗಂಗಾವತಿಯಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟೆವು.
ಆರ್ಹಾಳ ಊರ ಮುಂದೆ ಜೀಪ ಹಾಗೂ ಮೋಟಾರ ಸೈಕಲಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಆಂಜನೇಯ
ಗುಡಿ ಹತ್ತಿರ ಸ್ವಲ್ಪ ದೂರದಲ್ಲಿ ನಿಂತು ನೋಡಲು ಗುಡಿ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಸುಮಾರು
ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್
ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ
ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 7 ಜನರು ಸಿಕ್ಕಿ ಬಿದ್ದಿದ್ದು, ಒಬ್ಬನು ಅಲ್ಲಿಂದ ಓಡಿ ಹೋದನು. ಸಿಕ್ಕವರ ಹೆಸರನ್ನು ವಿಚಾರಿಸಲು (1)
ಖಾಜಾಹುಸೇನ ತಂದೆ ದೊರೆಸಾಬ ತೆಕ್ಕಲಕೋಟೆ, ವಯಸ್ಸು: 45 ವರ್ಷ ಜಾತಿ: ಕೂಲಿಕೆಲಸ ಸಾ: ಮುಸ್ಲಿಂ, ಸಾ: ಆರ್ಹಾಳ (2) ನಿಂಗಪ್ಪ ತಂದೆ ಈರಪ್ಪ ಈಡಿಗರು, ವಯಸ್ಸು: 60 ವರ್ಷ ಜಾತಿ: ಈಡಿಗರು, ಉ: ವ್ಯವಸಾಯ, ಸಾ: ಆರ್ಹಾಳ (3) ಬಸಣ್ಣ
ತಂದೆ ಚೆನ್ನಪ್ಪ ಮಾದಿನಾಳ, ವಯಸ್ಸು: 36 ವರ್ಷ ಜಾತಿ: ಲಿಂಗಾಯತ, ಉ: ವ್ಯವಸಾಯ, ಸಾ: ಆರ್ಹಾಳ (4) ದುರುಗೇಶ
ತಂದೆ ರುದ್ರಪ್ಪ ಭೋವಿ, ವಯಸ್ಸು: 28 ವರ್ಷ
ಜಾತಿ: ಭೋವಿ, ಉ: ಕೂಲಿಕೆಲಸ ಸಾ: ಆರ್ಹಾಳ
(5) ಶೇಖರ ತಂದೆ ಕುಂಟೆಪ್ಪ ಮುಕ್ಕಲಕುಂಟಿ, ವಯಸ್ಸು: 38 ವರ್ಷ ಜಾತಿ: ನಾಯಕ, ಉ: ಕೂಲಿಕೆಲಸ ಸಾ: ಆರ್ಹಾಳ (6) ಶಿವಮೂರ್ತಿ ತಂದೆ ಸಿದ್ದಪ್ಪ ತಳವಾರ, ವಯಸ್ಸು: 34 ವರ್ಷ ಜಾತಿ: ನಾಯಕ, ಉ: ಚಾಲಕ ಸಾ: ಆರ್ಹಾಳ (7) ದುರುಗಣ್ಣ ತಂದೆ ಭೀಮಣ್ಣ ಭೋವಿ, ವಯಸ್ಸು: 34 ವರ್ಷ ಜಾತಿ: ಭೋವಿ, ಉ: ಕೂಲಿಕೆಲಸ ಸಾ: ಆರ್ಹಾಳ ತಾ: ಗಂಗಾವತಿ ಅಂತಾ ತಿಳಿಸಿದ್ದು ಓಡಿ ಹೋದವನ ಹೆಸರು
ವಿಚಾರಿಸಲು ಅವನ ಹೆಸರು (8) ಗೋವಿಂದ ತಂದೆ ಹನುಮಂತಪ್ಪ ಭೋವಿ, ಸಾ: ಆರ್ಹಾಳ ಅಂತಾ ತಿಳಿದುಬಂದಿದ್ದು ದಾಳಿಯಲ್ಲಿ ಸಿಕ್ಕವರ ಹತ್ತಿರ ಹಾಗೂ ಸ್ಥಳದಿಂದ
ಜೂಜಾಟದ ನಗದು ಹಣ 1,050/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
4) ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 50/2016 ಕಲಂ. 279, 304(ಎ) ಐ.ಪಿ.ಸಿ:.
ದಿನಾಂಕ: 16-05-2016
ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಆರೋಪಿತನು ಮೃತ ಶಾಂತವ್ವ ರಾಮಶೆಟ್ಟಿ ಈಕೆಯನ್ನು
ಆಸ್ಪತ್ರೆಗೆ ತೋರಿಸಿಕೊಂಡು ಬರಲು ಸಂಕನೂರು ಸೀಮಾದಲ್ಲಿಯ ಅವರ ತೋಟದ ಹೋಲದಿಂದ ಹಿರೇಮ್ಯಾಗೇರಿಗೆ
ಆಸ್ಪತ್ರೆಗೆ ಮೋಟಾರ್ ಸೈಕಲ್ ಚೆಸ್ಸಿ ನಂ. ME4JC627BST048360 ನೇದ್ದರ ಮೇಲೆ ಹಿಂದುಗಡೆ ಕುಳಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ
ಸಂಕನೂರು ಕ್ರಾಸ್ – ಹಿರೇಮ್ಯಾಗೇರಿ ರಸ್ತೆಯ ಮೇಲೆ ಹುಚ್ಚುಸಾಬ ಅಮರಾವತಿ ಇವರ ಹೋಲದ ಹತ್ತಿರ
ಚಲಾಯಿಸಿಕೊಂಡು ಹೋಗುತ್ತಿರುವಾಗ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಒಮ್ಮಿಂದೊಮ್ಮೇಲೆ ಬ್ರೇಕ್
ಹಾಕಿದಾಗ ಹಿಂದೆ ಕುಳಿತಿದ್ದ ಶಾಂತವ್ವಳು ಕೆಳಗೆ ಬಿದ್ದಿದ್ದು, ಇದರಿಂದಾಗಿ ಆಕೆಯ ತಲೆಗೆ ಭಾರಿ
ಒಳಪೆಟ್ಟಾಗಿ ಎಡಕೀವಿಯಿಂದ ರಕ್ತ ಬಂದಿದ್ದು ಇರುತ್ತದೆ. ನಂತರ ಹೆಚ್ಚಿನ ಚಿಕಿತ್ಸೆ ಕುರಿತು 108
ವಾಹನದಲ್ಲಿ ಗಾಯಾಳುವನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋರಟಾಗ ಶ್ರೀ ವಿವೇಕಾನಂದ ಆಸ್ಪತ್ರೆ
ಹತ್ತಿರ ಸಾಯಂಕಾಲ 5-10 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಸದರಿ ಮೋಟಾರ ಸೈಕಲ್ ಸವಾರನಾದ
ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment