Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 13, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 454, 457, 380 ಐ.ಪಿ.ಸಿ:
ದಿ:12.05.2016 ರಂದು ಸಂಜೆ 04.00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಜಶೇಖರ ಕೊಡ್ಲಿ, ಪ್ರಾಚಾರ್ಯರು, ಗುಳಗಣ್ಣವರ ಪಾಲಿಟೆಕ್ನಿಕ್ ಕಾಲೇಜ ದದೇಗಲ್. ಸಾ : ನಿಂಗಾಪೂರ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ದಿ: 11.05.16 ರಂದು ಸಂಜೆ 05 ಗಂಟೆಯಿಂದ ದಿ: 12.05.16 ರಂದು ಮುಂಜಾನೆ 10 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಗುಳಗಣ್ಣವರ ಪಾಲಿಟೆಕ್ನಿಕ್ ಕಾಲೇಜ ಕೊಠಡಿಗಳ ಬಾಗಿಲು ಮತ್ತು ಬೀಗ ಮುರಿದು ಒಳಪ್ರವೇಶ ಮಾಡಿ ಕಾಲೇಜ ಡಳಿತಾಧಿಕಾರಿಗಳ ಮತ್ತು ಮೆಕ್ಯಾನಿಕಲ್ ಕಂಪ್ಯೂಟರ್ ಲ್ಯಾಬ್ ಕೊಠಡಿಯಲ್ಲಿದ್ದ 1] ಒಂದು ಹೈಯರ್ ಕಂಪನಿಯ ಎಲ್.ಇ.ಡಿ ಟಿ.ವಿ ಅಂ.ಕಿ-8000 2] ಒಂದು ಸಿ.ಸಿ.ಕ್ಯಾಮರಾ ಡಿ.ವಿ.ಆರ್ ಅಂ.ಕಿ-6500 3] ಒಂದು ಬ್ರದರ್ ಕಂಪನಿಯ ಜರಾಕ್ಸ್ ಮಷೀನ್ ಅಂ.ಕಿ-2500 ಸಾಮಾನುಗಳು ಹಾಗೂ ಮೆಕ್ಯಾನಿಕಲ್ ಕಂಪ್ಯೂಟರ್ ಲ್ಯಾಬ್ ಕೊಠಡಿಯಲ್ಲಿದ್ದ 4] 8 ಹೆಚ್.ಸಿ.ಎಲ್ ಕಂಪ್ಯೂಟರ್ ಮಾನಿಟರ್ ಅಂ.ಕಿ-8000 5] ಕಂಪ್ಯೂಟರ್ ಸಿಪಿಯು ಹಾರ್ಡಡಿಸ್ಕ ಅಂ.ಕಿ-10000 6] ಒಂದು ಯುಪಿಎಸ್ ಇನವರ್ಟರ್ ಅಂ.ಕಿ-6500 ಹಾಗೂ ಕಾಲೇಜ ಕಟ್ಟಡದ ಮೇಲೆ ಹಾಕಲಾಗಿದ್ದ 7] ಒಂದು ಸೋಲಾರ್ ಸಿಸ್ಟಮ್ ಪ್ಯಾನಲ್ ಅಂ.ಕಿ-8000 ಒಟ್ಟು ಅಂ.ಕಿ.ರೂ:49500 ಬೆಲೆ ಬಾಳುವ ಸಾಮಗ್ರಿಗಳನ್ನು ಮತ್ತು ಕಳ್ಳತನ ಮಾಡಿದ ಯಾರೋ ಕಳ್ಳರನ್ನು ಪತ್ತೆ ಮಾಡಿ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ವಗೈರಾ ಫಿರ್ಯಾದಿಯ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 136/2016 ಕಲಂ: 87 Karnataka Police Act.
ದಿನಾಂಕ 12-05-2016 ರಂದು ಸಾಯಂಕಾಲ 4-45  ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಮಲಕಾಪೂರ ಗ್ರಾಮದ ಮಾರುತೇಶ್ವರ ಗುಡಿಯ ಮುಂದೆ ಇರುವ ಬಸರಿ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-108, ಪಿ.ಸಿ-116,117,124, 161, 24 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 6 ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 9900=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 138/2016 ಕಲಂ: 87 Karnataka Police Act.
ದಿನಾಂಕ 12-05-2016 ರಂದು ರಾತ್ರಿ 8-45  ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಪಟ್ಟಣದ ಸರಕಾರಿ ಡಿಪ್ಲೋಮೊ ಕಾಲೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-108, ಪಿ.ಸಿ-116,24,393 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 5 ಜನ ಆರೋಪಿತರಲ್ಲಿ 3 ಜನರ ಆರೋಪಿತರು ಸಿಕ್ಕಿದ್ದು ಇನ್ನೂ ಇಬ್ಬ ರೂ ಆರೋಪಿತರು ಪರಾರಿ ಇರುತ್ತಾರೆ. ಹಾಗೂ ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 3500=00 ರೂ, ಹಾಗೂ 52 ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆ ನ್ಯೂಸ್ ಪೇಪರರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 99/2016 ಕಲಂ: 87 Karnataka Police Act.
ದಿ:12-05-2016 ರಂದು ಸಾಯಂಕಾಲ 5-30 ಗಂಟೆಯ ಸುಮಾರಿಗೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಕುಣಿಕೇರಿ ತಾಂಡಾದ ಶ್ರೀ ಹನುಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 08 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಸಿಪಿಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜೂಜಾಟಕ್ಕೆ ಉಪಯೋಗಿಸಿ ನಗದು ಹಣ 10,650=00 ರೂ, ನಗದುಹಣ ಮತ್ತು 52 ಇಸ್ಪೇಟ್ ಎಲೆಗಳನ್ನು ಹಾಗೂ ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು 08 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಹೀಗೆ ಸದರಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ.
5] ಕೊಪ್ಪಳ ನಗರ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 81/2016 ಕಲಂ: 78(3) Karnataka Police Act.
ದಿನಾಂಕ: 12-05-2016 ರಂದು ರಾತ್ರಿ 10-00 ಗಂಟೆಗೆ ಶ್ರೀ ಸತೀಶ ಪಾಟೀಲ ಪಿ.. ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ದಿ: 12-05-2016 ರಂದು ರಾತ್ರಿ 8-30 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯ, ಭಾಗ್ಯನಗರದ ಶಂಕರಾಚಾರ್ಯ ಮಠದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ: 01 ನೇದ್ದವನು ಬರ ಹೋಗುವ ಸಾರ್ವಜನಿಕರಿಗೆ ಕರೆದು ಇದು ನಶೀಬದ ಆಟ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ, ಯಾರ ಅದೃಷ್ಟ ಅಂತಾ ಕೂಗುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಿ. ರವರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 510=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ಹಾಜರುಪಡಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
6] ಕುಕನೂರ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 50/2016 ಕಲಂ: 279,337, 338,304(ಎ) ಐಪಿಸಿ ಸಹಿತ 187 ಐಎಂವಿ ಅಕ್ಟ್:.

ದಿನಾಂಕ:12-05-2016 ರಂದು 8-00 ಪಿಎಂಕ್ಕೆ ಸಮುದಾಯ ಆರೋಗ್ಯ ಕೇಂದ್ರ, ಕುಕನೂರದಿಂದ ಫೋನ್ ಮುಖಾಂತರ ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಫೋನ್ ಮುಖಾಂತರ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನು ಪರಿಶೀಲಿಸಿ, ಪಿರ್ಯಾದಿದಾರರ ಹೇಳಿಕೆ ಪಿರ್ಯಾದಿಯನ್ನು 8-10 ಪಿಎಂದಿಂದ 8-40 ಪಿಎಂದವರೆಗೆ ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನು ತಾನು ಕುಕನೂರಿನಿಂದ ಕೋನಾಪುರಕ್ಕೆ ಚಾಲಕ ಶರಣಪ್ಪ ಬಾರಕೇರ ಈತನ ಟಾಂಟಾಂ ನಂ:ಕೆಎ:37/4675 ನೇದ್ದರಲ್ಲಿ ತನ್ನ ಮಗಳು ನಾಗರತ್ನಾ, ಮಗ ಬಸವರಾಜ ಹಾಗೂ ತಮ್ಮೂರ ಚೌಡಮ್ಮ ಅರಕೇರಿ, ದೇವಮ್ಮ ಅರಕೇರಿ ಹಾಗೂ ಬಳಗೇರಿಯ ಕಳಕಪ್ಪ ಚಾಕರಿ, ಹಂಚ್ಯಾಳಪ್ಪ ದೇವರ, ಕಾಳಪ್ಪ ಬಡಿಗೇರ, ಬಸವ್ವ ಗಂಡ ಹುಚ್ಚೀರಪ್ಪ ಹಿರೇಮನಿ ಮತ್ತು ಆಕೆಯ ಎರಡು ಮಕ್ಕಳಾದ ಸಂಗೀತಾ, ಗವಿಶಿದ್ದಪ್ಪ ಇವರೊಂದಿಗೆ ಹೋಗುತ್ತಿರುವಾಗ ಎದುರುಗಡೆಯಿಂದ ಟ್ರ್ಯಾಕ್ಟರ್ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನು ಕುಳಿತ ಟಾಂಟಾಂ ವಾಹನಕ್ಕೆ ತನ್ನ ಟ್ರ್ಯಾಲಿಯಿಂದ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ ಅದರಲ್ಲಿ ಕುಳಿತ ತನಗೆ ಮತ್ತು ಇತರರಿಗೆ ಸಾದಾ ಮತ್ತು ಭಾರೀ ಸ್ವರೂಪದ ಗಾಯಗಳಾಗಿದ್ದು, ಆದರೆ, ಬಸವ್ವ ಈಕೆಯು ತಲೆಗೆ ಮತ್ತು ಸೊಂಟಕ್ಕೆ ಭಾರೀ ರಕ್ತಗಾಯವಾಗಿ ಮೃತಪಟ್ಟಿದ್ದು, ಟ್ರ್ಯಾಕ್ಟರ್ ಚಾಲಕ ಅಪಘಾತಪಡಿಸಿದ ನಂತರ, ಟ್ರ್ಯಾಕ್ಟರ್ ತೆಗೆದುಕೊಂಡು ಮುಂದೆ ಹೋಗಿ, ಟ್ರ್ಯಾಕ್ಟರ್ ಬಿಟ್ಟು ಓಡಿಹೋಗಿದ್ದು, ಅವನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ದೂರನ್ನು ಪಡೆದುಕೊಂಡು ವಾಪಸ್ ಠಾಣೆಗೆ 9-00 ಪಿಎಂಕ್ಕೆ ಬಂದು ಅದರ ಸಾರಾಂಶದ ಮೇಲಿಂದ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008