1] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ:
112/2016 ಕಲಂ: 324, 504 ಐ.ಪಿ.ಸಿ.
ದಿನಾಂಕ 16-05-2016 ರಂದು 06-0 ಪಿಎಂ ಪಿರ್ಯಾದಿ ಚಾಮುಂಡೇಶ್ವರಿ
ಗಂಡ ತಂಗರಾಜ ವಯ: 50 ವರ್ಷ ಜಾ: ಬೋವಿ ಉ: ಮನೆಕೆಲಸ ಸಾ: ಶಿವಪೂರ ಇವರು ಆರೋಪಿ ಭಾಗ್ಯಲಕ್ಷೀ ಗಂಡ
ಷಣ್ಮೂಖ ಸಾ: ಶಿವಪೂರ ಇವಳಿಗೆ ನಮ್ಮ ಮನೆಯ ವಿಷಯವನ್ನು ಯಾಕೆ
ಬೇರೆಯವರ ಹತ್ತಿರ ಮಾತನಾಡಿಕೊಳ್ಳುತ್ತಿಯಾ ಎಂದು ಕೇಳಿದ್ದಕ್ಕೆ ಆರೋಪಿತಳು ನಾನೇಕೆ ನಿಮ್ಮ ಮನೆಯ
ವಿಷಯವನ್ನು ಮಾತನಾಡಲಿ ನಾನು ಮಾತನಾಡಿಲ್ಲಾ ಎಂದು ಹೇಳಿ ಪಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು
ಮನೆಯಲ್ಲಿದ್ದ ಕಟ್ಟಿಗೆ ಬ್ಯಾಟಿನಿಂದ ತಲೆಗೆ ಹೊಡೆದಿರುತ್ತಾಳೆ ಅಂತಾ ಮುಂತಾಗಿದ್ದ ಪಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ್ ಪೊಲೀಸ್ ಠಾಣೆ ಗುನ್ನೆ ನಂ: 113/2016 ಕಲಂ:
323,324,504,506 ಸಹಿತ 34 ಐ.ಪಿ.ಸಿ.
ದಿನಾಂಕ 17-05-2016 ರಂದು 09-30 ಪಿ.ಎಂ.ಸುಮಾರಿಗೆ ಪಿರ್ಯಾದು ಶೆಕ್ಷಾವಲಿ ತಂದೆ
ಗೋಕರಸಾಬ ವಯ: 25 ವರ್ಷ ಜಾ: ಮುಸ್ಲಿಂ ಸಾ: ಬಸಾಪೂರ ಇವರ ಮನೆಯ ಪಕ್ಕದಲ್ಲಿ ಅವರ ಚಿಕ್ಕಮನ ಮನೆಯ ಹಿತ್ತಲದಲ್ಲಿ ಅವಿತು ಕುಳಿತಿದ್ದು ಪಿರ್ಯಾದುದಾರರ
ಚಿಕ್ಕಮ್ಮಳು ಚಿರಾಡಲು ಪಿರ್ಯಾದುದಾರರು ಹೋಗಿ ನೋಡಲು ಆರೋಪಿ ಓಡಿಹೋಗಿದ್ದು ನಂತರ ಆತನಿಗೆ
ಓಣಿಯಲ್ಲದ್ದವರು ಕೂಡಿ ಹಿಡಿದು ವಿಚಾರಿಸಿ ಬೈದು ಕಳಿಹಿಸಿದ್ದು ನಂತರ ಆರೋಪಿತನು ತನ್ನ ಮಗ
ಶಕೀಲ ಈತನನ್ನು ಕರೆದುಕೊಂಡು ಬಂದಿದ್ದು ಆತನು ಯಾಕಲೇ ಸೂಳೆ ಮಗನೆ ನಮ್ಮ ತಂದೆಗೆ ಬೈಯುತ್ತಿಯಾ
ಅಂತಾ ಅವಾಚ್ಯವಾಗಿ ಬೈದು ಅಲ್ಲಿದ್ದ ಒಂದು ಕ್ಲಲಿನಿಂದ ಹೊಡೆದು ನನಿಗೆ ಜೀವ ಸಹಿತ ಬಿಡುವದಿಲ್ಲಾ
ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೂಕನೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ: 09/2016 ಕಲಂ: 174
ಸಿ.ಆರ್.ಪಿ.ಸಿ.
ದಿನಾಂಕ: 19-05-2016 ರಂದು
7-30 ಪಿಎಂ ಕ್ಕೆ ವರದಿದಾರ ಮಾರುತಿ ತಂದೆ ಸಂಜೀವಪ್ಪ ವೀರುಪಾಪೂರ
ವಯ 42 ವರ್ಷ, ಜಾ:ವಾಲ್ಮಕಿ, ಉ:ಒಕ್ಕಲುತನ ಸಾ:ಚಿಕ್ಕಬಿಡನಾಳ ಇವರು ಠಾಣೆಗೆ ಹಾಜರಾಗಿ ವರದಿಯನ್ನು
ನೀಡಿದ್ದು,
ಅದರ ಸಾರಾಂಶವೇನೆಂದರೆ, ವರದಿದಾರನು ತನ್ನ ಹೆಂಡತಿಯೊಂದಿಗೆ ಚಿಕ್ಕಬಿಡನಾಳದ ಮಾರುತಿ ದೇವಸ್ಥಾನಕ್ಕೆ ಹೋದಾಗ ಸಂಜೆ
5-00 ಗಂಟೆಯ ಸುಮಾರಿಗೆ ತನ್ನ ತಮ್ಮ ಯಮನೂರಪ್ಪನು ತನಗೆ ಪೋನ್ ಮಾಡಿ ತನ್ನ ಮಗ ಸಣ್ಣಕುಂಟೆಪ್ಪ
ತಂ.ಮಾರುತಿ ವೀರುಪಾಪೂರ ವಯಾ: 12 ವರ್ಷ : ವಿಧ್ಯಾರ್ಥಿ ಸಾ: ಚಿಕ್ಕಬಿಡನಾಳ ಇತನಿಗೆ ತೋಟದ ಗುಡಿಸಲಿನಲ್ಲಿ ಅಡಿ ಹಾಕಿದ್ದ ಮಾವಿನ ಹಣ್ಣನ್ನು ತೆಗೆದುಕೊಳ್ಳಲು ಹೋದಾಗ ಹಣ್ಣಿನ ಅಡಿ
ಪಕ್ಕದಲ್ಲಿರುವ ನಾಗರ ಹಾವು ಆತನ ಬಲಗಾಲದ ಪಾದದ ಮೇಲೆ ಕಚ್ಚಿದ್ದು ಅವನ ಸಂಗಡ ಹೋದ ಹುಡುಗರು ತನಗೆ
ವಿಷಯ ತಿಳಿಸಿದ್ದು ಇದೆ ಅಂತಾ ತಿಳಿಸಿದ ಮೇರೆಗೆ ತನ್ನ ತಮ್ಮ ಹಾಗೂ ಅಳಿಯ ಮಾರುತಿ ಪವಾಡಿ ಗೌಡ್ರ ರವರು
ತೋಟಕ್ಕೆ ಹೋಗಿ ನೋಡಲು ತನ್ನ ಮಗನಿಗೆ ಬಾಯಲ್ಲಿ ಬುರುಗು ಬರುತ್ತಿದ್ದು ಕೂಡಲೇ ಕುಕನೂರ ಸರಕಾರಿ ಆಸ್ಪತ್ರೆಗೆ
ಕರೆದುಕೊಂಡು ಬರುವಷ್ಟರಲ್ಲಿ ವಿಷವು ಮೈಗೆ ವ್ಯಾಪಿಸಿ 4-45 ಪಿಎಂ ಗೆ ತನ್ನ ಮಗ ಮೃತಪಟ್ಟಿರುತ್ತಾನೆ
ಅಂತಾ ತಿಳಿಸಿದ್ದು, ಕೂಡಲೇ ತಾನು ತನ್ನ ಹೆಂಡತಿಯೊಂದಿಗೆ ಕುಕನೂರ ಆಸ್ಪತ್ರೆಗೆ ಬಂದು ನೋಡಲು ವಿಷಯ
ನಿಜವಿದ್ದು ತನ್ನ ಮಗನು ಮೃತಪಟ್ಟಿದ್ದು ಕಂಡುಬಂದಿತು. ಕಾರಣ ತನ್ನ ಮಗ ಮಾವಿನ ಹಣ್ಣನ್ನು ತೆಗೆದುಕೊಳ್ಳಲು
ಹೋದಾಗ ಆಕಸ್ಮಿಕವಾಗಿ ಹಾವು ಬಲಗಾಲ ಪಾದದ ಮೇಲೆ ಕಚ್ಚಿದ್ದರಿಂದ ವಿಷವು ಮೈಗೆ ವ್ಯಾಪರಿಸಿಕೊಂಡು
ಮೃತಪಟ್ಟಿದ್ದು ಇರುತ್ತದೆ ಅಂತಾ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು
ಇರುತ್ತದೆ.
4) ಕುಷ್ಠಗಿ ಪೊಲೀಸ್
ಠಾಣೆ ಗುನ್ನೆ ನಂ. 144/2016 ಕಲಂ.
279, 337, 338 ಐ.ಪಿ.ಸಿ.
ದಿನಾಂಕ
:-19-05-2016 ರಂದು
ಸಂಜೆ 05-30 ಗಂಟೆಗೆ ಇಲಕಲ್
ಅಕ್ಕಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಬಸವರಾಜ
ತಂದೆ ಹುಸೇನಪ್ಪ ವಾಕ್ ಮೋಡೆ ಸದರಿ
ಹೇಳಿಕೆಯ ಪಿರ್ಯಾದಿಯ ಸಾರಾಂಶವೆನೆಂದರೆ ಇಂದು ದಿನಾಂಕ:
19-05-2016 ರಂದು ಕೋಡಿಹಾಳ ಗ್ರಾಮದಲ್ಲಿ ಜಾತ್ರಾ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರು ಕಡೆಗೆ
ಹೋಗುವ ಸಲುವಾಗಿ ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಕೋಡಿಹಾಳ ಗ್ರಾಮದಿಂದ ವಾಪಸ್ ಬೆಂಗಳೂರಿಗೆ ಹೋಗುತ್ತಿರುವಾಗ
ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಎನ್ ಹೆಚ್ 50 ರಸ್ತೆಯ ಕಡೆಕೊಪ್ಪ ಬ್ರಿಡ್ಜನಲ್ಲಿ ಕಾರ ನಂ ಕೆಎ-25-ಜೆಡ್-8472
ನೇದ್ದರ ಚಾಲಕನಾದ ರವಿ ತಂದೆ ಜಂಬಣ್ಣ ಸಿಂದೆ ಇತನು ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ
ಬ್ರಿಡ್ಜ್ ಹತ್ತಿರ ಸದರಿ ಕಾರಿನ್ನು ನಿಯಂತ್ರಿಸದೆ ರಸ್ತೆಯ ಬಲಗಡೆ ಬ್ರಿಡ್ಜ್ನ ತಡೆಗೊಡೆಗೆ ಟಕ್ಕರಕೊಟ್ಟಿದ್ದರಿಂದ
ಪಿರ್ಯಾದಿಗೆ ಮತ್ತು ಇತರೆ 05 ಜನರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಕಾರಣ ಕಾರ
ಚಾಲಕನಾದ ರವಿ ತಂದೆ ಜಂಬಣ್ಣ ಸಿಂದೆ ವಿರುದ್ದ ಸೂಕ್ತ ಕಾನೂನು
ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment