1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:
147/2016 ಕಲಂ: 78(3) Karnataka Police Act.
ದಿನಾಂಕ:- 18-05-2016 ರಂದು ಬೆಳಿಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ವ್ಯಾಪ್ತಿಯ ದಾಸನಾಳ ಗ್ರಾಮದಲ್ಲಿ ಜಿಲಾನಿ ಎಂಬುವವನು ತನ್ನ ಮನೆಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟ ನಡೆಯಿಸಿದ್ದಾನೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಪಿ.ಸಿ.287, 323, ಎ.ಪಿ.ಸಿ.
77 ಹಾಗೂ ಇಬ್ಬರು ಪಂಚರ ಸಮೇತ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದವನು ಸಿಕ್ಕಿ
ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಸಿಕ್ಕಿಬಿದ್ದವನನ್ನು ವಿಚಾರಿಸಲಾಗಿ
ಅವನು ತನ್ನ ಹೆಸರು ಜಿಲಾನಿ ತಂದೆ ಮಹ್ಮದ್ ಖಾನ್, ವಯಸ್ಸು 60 ವರ್ಷ, ಜಾತಿ:
ಮುಸ್ಲೀಂ ಉ: ಕೂಲಿ ಕೆಲಸ ಸಾ: ದಾಸನಾಳ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ
ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 510/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು
ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿ ತನಿಖೆ
ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
98/2016 ಕಲಂ: 379 ಐ.ಪಿ.ಸಿ:.
ದಿನಾಂಕ 18-05-2016 ರಂದು 13-30 ಗಂಟೆಗೆ ಶ್ರೀ ಶರಬೇಂದ್ರ ತಂದೆ ಲಿಂಗಪ್ಪ
ಅಂಗಡಿ. ವಯಾ 37 ವರ್ಷ ಸಾ: ವಿಜಯ ನಗರ ಕಾಲೋನಿ ಗಂಗಾವತಿ ರವರು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 10-05-2016 ರಂದು 12-15 ಗಂಟೆಯಿಂದ 12-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು
ಗಂಗಾವತಿ ನಗರದ ಎ.ಪಿ.ಎಂ.ಸಿ ಯ ಗಂಜನಲ್ಲಿರುವ ಭುವನೇಶ್ವರಿ ಬ್ಯಾಂಕನ
ಮುಂಭಾಗದಲ್ಲಿ ನಿಲ್ಲಿಸಿದ
ಫಿರ್ಯಾದಿದಾರರ ಹೀರೋ ಹೊಂಡಾ ಸಿಡಿ-100 ಮೋಟಾರ ಸೈಕಲ್ ನಂ ಕೆ.ಎ 37/ಹೆಚ್ 9501, ಚಾಸ್ಸಿ ನಂ 00EBF02254, ಇಂಜಿನ್ ನಂ:00EBE03314, ಸಿಲ್ವರ್ ಬಣ್ಣದ್ದು ಅಂ.ಕಿಮ್ಮತ್ತು ರೂ. 15,000-00
ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 20/2016 ಕಲಂ. 279 ಐ.ಪಿ.ಸಿ ಮತ್ತು
185 ಐ.ಎಂ.ವಿ. ಕಾಯ್ದೆ:.
ದಿನಾಂಕ 18-05-2016 ರಂದು ಮದ್ಯಾಹ್ನ 1-30 ಗಂಟೆಗೆ ಫಿರ್ಯಾದಿದಾರರು ಫಿರ್ಯಾದಿಯನ್ನು
ಹಾಜರಪಡಿಸಿದ್ದು ನಿನ್ನೆ ದಿನಾಂಕ. 17-05-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ತನ್ನ ಕಾರ
ನಂಬರ KA-37/M-3186 ನೆದ್ದನ್ನು ಚಲಾಯಿಸಿಕೊಂಡು ಮಾಲಿಕರ ಮನೆಗೆ ಹೊಗಲು ಕೊಪ್ಪಳ ನಗರದ ಗದಗ-ಹೊಸಪೇಟೆ
ಎನ್.ಹೆಚ್-63 ರಸ್ತೆಯ ಮೇಲೆ ಬಿಗ್ ಬಜಾರ ಮುಂದೆ ಹೊಗುತ್ತಿರುವಾಗ ಹಿಂದಿನಿಂದ ಲಾರಿ ನಂಬರ. KA-31//3772 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ಲಾರಿಯನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒವರಟೇಕಮಾಡುವಾಗ ನಿರ್ಲಕ್ಷ್ಯತನದಿಂದ ಎಡಗಡೆಗೆ
ತೆಗೆದುಕೊಂಡು ಫಿರ್ಯಾದಿಯ ಕಾರಿನ ಬಲಗಡೆಯ ಬಾಗಕ್ಕೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಕಾರಿನ
ಬಲಗಡೆಯ ಹಿಂದಿನ ಡೋರ ಮತ್ತು ಬಂಪರ ಡ್ಯಾಮೇಜ ಆಗಿರುತ್ತದೆ ಕಾರಿನಲ್ಲಿದ್ದ ಫಿರ್ಯಾದಿಗೆ ಯಾವುದೇ
ರಿತೀಯ ಗಾಯಗಳು ಆಗಿರುವುದಿಲ್ಲ ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment