1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ:
85/2016 ಕಲಂ: 78 (3) Karnataka Police
ACT.
ಎಸ್.ಎಸ್.ಪಾಟೀಲ್ ಪಿಐ ಕೊಪ್ಪಳ ನಗರ ಪೊಲೀಸ್ ಠಾಣೆರವರು ದಿ: 20-05-2016 ರಂದು ರಾತ್ರಿ
9-00 ಗಂಟೆಗೆ ಕೊಪ್ಪಳ ನಗರದ ಬಸ್ ನಿಲ್ದಾಣದ ಹತ್ತಿರ ಏಕದಂತ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತನಾದ ಹನುಮಂತರಾಯ ತಂದೆ ದುರುಗಪ್ಪ ಪೂಜಾರ ವಯಾ: 34 ವರ್ಷ ಜಾ: ಕಬ್ಬೇರ ಉ: ಪಾನ್ ಶಾಪ್ ಅಂಗಡಿ
ಸಾ: ಹೆಮರೆಡ್ಡಿ ಮಲ್ಲಮ್ಮನ ಗುಡಿ ಹತ್ತಿರ ಭಾಗ್ಯನಗರ ಕೊಪ್ಪಳ ಇತನು ಜನರ ಗುಂಪಿನಲ್ಲಿ ನಿಂತುಕೊಂಡು
ಜನರಿಗೆ ಯಾರ ಅದೃಷ್ಟ ನಸೀಬದ ಜೂಜಾಟ 1-00 ರೂಪಾಯಿಗೆ 80-00 ರೂಪಾಯಿ ಬರುತ್ತದೆ ಅಂತಾ ಕೂಗುತ್ತಾ
ಹಣ ಪಡೆದುಕೊಳ್ಳುತ್ತಿದ್ದು, ಮಟಕಾ ನಂಬರಗಳ ಚೀಟಿ ಬರೆದುಕೊಡುತ್ತಿರುವ ಕಾಲಕ್ಕೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ
ರಾತ್ರಿ 09-00 ಗಂಟೆಯ ವೇಳೆಗೆ ದಾಳಿ ಮಾಡಿದಾಗ ಆರೋಪಿ ಹನುಮಂತರಾಯ ಪೂಜಾರ ಇತನು ಸಿಕ್ಕಿದ್ದು ಇತನಿಂದ
1] 650=00 ರೂ. ನಗದು ಹಣ. 2] ಒಂದು ಬಾಲ್ಪೆನ್. ಅಂಕಿ ಇಲ್ಲಾ. 3] ಒಂದು ಮಟಕಾ ಅಂಕಿ ಸಂಖ್ಯೆ ಬರೆದ
ಮಟಕಾ ಪಟ್ಟಿ ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು, ತಾನು ಬರೆದ ಮಟಕಾ ಚೀಟಿಯನ್ನು ಸುಧಾಕರ
ಹೊಸಮನಿ ಸಾ: ಸಜ್ಜಿಹೋಲ ಕೊಪ್ಪಳ ಇತನಿಗೆ ಕೊಡುವುದಾಗಿ ತಿಳಿಸಿರುತ್ತಾನೆ. ಸದರಿ ಆರೋಪಿತರ ಮೇಲೆ ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಫಿರ್ಯಾದಿಯೊಂದಿಗೆ ಆರೋಪಿ, ಮುದ್ದೇಮಾಲು, ಮೂಲ ಪಂಚನಾಮೆಯನ್ನು ಹಾಜರಪಡಿಸಿದ
ಮೇರೆಗೆ ಕೊಪ್ಪಳ ನಗರ ಪೊಲೀಸ್ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
100/2016 ಕಲಂ: 87 Karnataka Police ACT.
ಶ್ರೀ ಈ ಕಾಳಿಕೃಷ್ಣ
ಪಿ..ಐ.ನಗರ ಪೊಲೀಸ್ ಠಾಣೆ ಗಂಗಾವತಿ ರವರು ದಿನಾಂಕ: 20-05-2016 ರಂದು 19-45 ಗಂಟೆಗೆ ಗಂಗಾವತಿ ನಗರದ ಹೊಸಳ್ಳಿ ಬೈಪಾಸ್ ರಸ್ತೆಯಲ್ಲಿರುವ
ಬಾಲಕರ ವಸತಿ ನಿಲಯದ ಹತ್ತಿರದ
ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಇಸ್ಪೇಟ್ ಜೂಜಾಟ ಆಡುತ್ತಿರುವಾಗ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 09 ಜನ ಆರೋಪಿತರು 01]
ಶಿವಲಿಂಗಪ್ಪ ತಂದೆ ಲಿಂಗಪ್ಪ ದೇಸಾಯಿ ವಯಾ: 59 ವರ್ಷ ಜಾ: ಲಿಂಗಾಯತ ಉ: ಖಾಸಗಿ ಶಿಕ್ಷಕ ಸಾ:
ಹೊಸಳ್ಳಿ ಕ್ಯಾಂಪ, ಗಂಗಾವತಿ 02] ರವಿಕುಮಾರ ತಂದೆ
ಕೃಷ್ಣಮೂರ್ತಿ ದೇಸಪಾಂಡೆ ವಯಾ: 47 ವರ್ಷ ಜಾ: ಬ್ರಾಹ್ಮಣ ಉ: ಬ್ಯಾಂಕ್ ನೌಕರ ಸಾ: ರಾಯರ ಮಠದ
ಹತ್ತಿರ ಗಂಗಾವತಿ 03]
ಕನಕಪ್ಪ ತಂದೆ ಹನುಮಂತಪ್ಪ ಕಾಲೇದ ವಯಾ: 40 ವರ್ಷ ಜಾ: ಕಬ್ಬೇರ ಉ: ಒಕ್ಕಲುತನ ಸಾ: ಹೊಸಳ್ಳಿ.
ಗಂಗಾವತಿ. 04] ಲಿಂಗಪ್ಪ ತಂದೆ ಹೇಮಪ್ಪ ಉಪ್ಪಾರ ವಯಾ: 58
ವರ್ಷ ಜಾ: ಉಪ್ಪಾರ ಉ: ಖಾಸಗಿ ಗುಮಾಸ್ತ ಕೆಲಸ ಸಾ: ಗುಂಡಮ್ಮ ಕ್ಯಾಂಪ ಗಂಗಾವತಿ
05] ತಿಮ್ಮಣ್ಣ ತಂದೆ ಕುಮಾರೆಪ್ಪ ದಂಡಿನ ವಯಾ: 40 ವರ್ಷ
ಜಾ: ನೇಕಾರ ಉ: ಖಾಸಗಿ ಗುಮಾಸ್ತ ಕೆಲಸ ಸಾ: 25 ನೇ ವಾರ್ಡ ನೀಲಕಂಠೇಶ್ವರ ಕ್ಯಾಂಪ,
ಗಂಗಾವತಿ. 06] ರುದ್ರಯ್ಯ ಸ್ವಾಮಿ ತಂದೆ ಅಮರಯ್ಯ ಹಿರೇಮಠ
ವಯಾ: 53 ವರ್ಷ ಜಾ: ಜಂಗಮ ಉ: ವ್ಯವಸಾಯ ಸಾ: ಹೇರೂರು. ತಾ: ಗಂಗಾವತಿ 07] ಅಮೀದಸಾಬ ತಂದೆ ಖಾದರಬಾಷ ವಯಾ: 76 ವರ್ಷ ಜಾ:
ಮುಸ್ಲಿಂ. ಉ: ಖಾಸಗಿ ಕೆಲಸ ಸಾ: ಇಸ್ಲಾಂಪುರ ಗಂಗಾವತಿ 08] ವೆಂಕಟೇಶ
ತಂದೆ ರಾಜಪ್ಪ ವಯಾ: 47 ವರ್ಷ ಜಾ: ಜಾಡರ ಉ: ಮೇಸ್ತ್ರಿ ಕೆಲಸ ಸಾ: ಕೊಟ್ರೇಶ್ವರ ಕ್ಯಾಂಪ,
ಗಂಗಾವತಿ, 09] ಸುರೇಶ ತಂದೆ ವೀರಭದ್ರಪ್ಪ ಅಂಗಡಿ ವಯಾ: 44 ವರ್ಷ
ಜಾ: ಲಿಂಗಾಯತ ಉ: ಗುಮಾಸ್ತ ಕೆಲಸ ಸಾ: ಜುಲೈ ನಗರ ಗಂಗಾವತಿ ಇವರ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೇಟ್ ಜೂಜಾಟದ ಒಟ್ಟು ರೂ.
12,890-00 ನಗದು
ಹಣ ಹಾಗೂ 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಈ ಬಗ್ಗೆ ಪಂಚರ ಸಮಕ್ಷಮ 19-45 ಗಂಟೆಯಿಂದ 20-30 ಗಂಟೆಯವರೆಗೆ
ಪಂಚನಾಮೆ ಬರೆದುಕೊಂಡು ಬಂದು ಆರೋಪಿತರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 149/2016 ಕಲಂ: 279 ಐ.ಪಿ.ಸಿ.
ದಿನಾಂಕ:-
20-05-2016 ರಂದು ಸಂಜೆ 7:00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ರಾಜೇಶ್ವರ ರೆಡ್ಡಿ ತಂದೆ
ರಾಮರೆಡ್ಡಿ ವಯಸ್ಸು: 34 ವರ್ಷ ಜಾತಿ: ರೆಡ್ಡಿ, ಉ: ಟೋಲ್ ಪ್ಲಾಜಾ ಮ್ಯಾನೇಜರ, ಸಾ:
ಕೊತ್ತಕೋಟ ಪೋಸ್ಟ ತಾ: ಡೋನ್ ಜಿ: ಕರ್ನೂಲ್ ( ಆಂದ್ರಪ್ರದೇಶ ರಾಜ್ಯ) ಹಾ;ವ: ಜಯನಗರ
ಗಂಗಾವತಿ. ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು, ಅದರ
ಸಾರಾಂಶ ಈ ಪ್ರಕಾರ ಇದೆ. " ನಾನು ಸಿಂಧನೂರ-ಗಿಣಿಗೇರಾ ಮುಖ್ಯ ರಸ್ತೆಯ ಟೋಲ್ ಪ್ಲಾಜಾದಲ್ಲಿ
ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ಹೇಮಗುಡ್ಡ ಮತ್ತು ಮರಳಿ ಹತ್ತಿರ ನಮ್ಮ
ಎರಡು ಟೋಲ್ ಪ್ಲಾಜಾಗಳು ಇರುತ್ತದೆ. ಇಂದು ದಿನಾಂಕ: 20-05-2016 ರಂದು ಬೆಳಿಗ್ಗೆ
09:00 ಗಂಟೆಯ ಸುಮಾರಿಗೆ ನಮ್ಮ ಟೋಲ್ ರೂಟ್ ಪೆಟ್ರೋಲಿಂಗ್ ಕೆಲಸ ಮಾಡುವಂತಹ ಮಾರುತಿ ಇವರು ನನಗೆ
ಫೋನ್ ಮಾಡಿ ತಾವು ಪೆಟ್ರೋಲಿಂಗ್ ಕೆಲಸದಲ್ಲಿರುವಾಗ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ಚಿಕ್ಕ
ಬೆಣಕಲ್ ಗ್ರಾಮದ ಹತ್ತಿರ ರಸ್ತೆಯ ತಿರುವಿನಲ್ಲಿ ಒಂದು ಲಾರಿ ನಂಬರ್: ಎ.ಪಿ-02/ ಟಿಎ-8288
ನೇದ್ದು ಗಂಗಾವತಿಯಿಂದ ಹೋಗುವ ರಸ್ತೆಯ ಎಡಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಹಾಕಿರುವಂತಹ ಕ್ರ್ಯಾಶ್
ಬ್ಯಾರಿಯರ್ ಗೆ ಟಕ್ಕರ್ ಕೊಟ್ಟು ಅಪಘಾತವಾಗಿ ಪಲ್ಟಿಯಾಗಿ ಉರುಳಿ ಬಿದ್ದಿದೆ ಅಂತಾ
ತಿಳಿಸಿದನು. ನಂತರ ನಾನು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಲಾಗಿ ಲಾರಿಯು ಪಲ್ಟಿಯಾಗಿ
ಉರುಳಿ ಬಿದ್ದಿದ್ದು, ಕ್ರ್ಯಾಶ್ ಬ್ಯಾರಿಯರ್ ಜಖಂಗೊಂಡಿದ್ದು ಇರುತ್ತದೆ. ಅಲ್ಲಿದ್ದ ಲಾರಿ
ಚಾಲಕನಿಗೆ ವಿಚಾರಿಸಲು ಆತನ ಹೆಸರು ಸಾದಿಕ್ ವಲಿ. ಎಸ್ ತಂದೆ ಎಸ್. ಪೆದ್ದ ವನ್ನೂರ ಸಾಬ, ವಯಸ್ಸು 45
ವರ್ಷ, ಜಾತಿ: ಮುಸ್ಲೀಂ ಸಾ: ಪಡಮಟಗೇರಿ, ತಾ: ತಾಡಪತ್ರಿ
ಜಿಲ್ಲೆ: ಅನಂತಪುರಂ (ಎ.ಪಿ) ಅಂತಾ ತಿಳಿಸಿದ್ದು, ಲಾರಿಯಲ್ಲಿ
ಬಂಡಿಗಳನ್ನು ಲೋಡ್ ಮಾಡಿಕೊಂಡು ತಾಡಪತ್ರಿಯಿಂದ ಸಾಂಗ್ಲಿಗೆ ಹೋಗುತ್ತಿರುವಾಗ ಇಂದು ದಿನಾಂಕ:-
20-05-2016 ರಂದು ಬೆಳಿಗ್ಗೆ 03:00 ಗಂಟೆಯ ಸುಮಾರಿಗೆ ಅಪಘಾತವಾಗಿದೆ ಇದರಿಂದ ಯಾರಿಗೂ ಯಾವುದೇ
ಗಾಯಗಳಾಗಿರುವುದಿಲ್ಲಾ ಅಂತಾ ತಿಳಿಸಿದನು.ಲಾರಿ ನಂಬರ್: ಎ.ಪಿ-02/ ಟಿಎ-8288 ನೇದ್ದರ ಚಾಲಕ
ಸಾದಿಕ್ ವಲಿ ಈತನು ಗಂಗಾವತಿ ಕಡೆಯಿಂದ ತನ್ನ ಲಾರಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದಿದ್ದರಿಂದ ರಸ್ತೆ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ
ಪಕ್ಕದ ಕ್ರ್ಯಾಶ್ ಬ್ಯಾರಿಯರ್ ಟಕ್ಕರ್ ಕೊಟ್ಟು ಅಪಘಾತ ಮಾಡಿ ಲಾರಿ ಪಲ್ಟಿಯಾಗಿ ಉರುಳಿ
ಬಿದ್ದಿದ್ದು, ಕಾರಣ ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸಾದಿಕ್ ವಲಿ ಈತನ
ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ." ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 52/2016 ಕಲಂ: ಮನುಷ್ಯ ಕಾಣೆ.
ದಿನಾಂಕ 20-05-2016 ರಂದು ಮದ್ಯಾಹ್ನ 1-00 ಗಂಟೆಗೆ ಫಿರ್ಯಾಧಿದಾರ
ಶ್ರೀ ಮಲ್ಲರೆಡ್ಡೆಪ್ಪ ತಂದೆ ಶಂಕ್ರಪ್ಪ ಮೇಟಿ ವಯ : 47 ವರ್ಷ, ಜಾತಿ : ಲಿಂಗಾಯತ, ಉ : ಶಿಕ್ಷಕರು.
ಸ.ಕಿ.ಪ್ರಾ.ಶಾಲೆ ಹಡಗಲಿ. ಸಾ : ಸಾಸ್ವಿಹಾಳ. ತಾ : ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ
ಫಿರ್ಯಾಧಿಯನ್ನು ನೀಡಿದ್ದು ಸಾರಾಂಶವೆನೆಂದರೆ ತಾಮಗೆ ಎರಡು ಗಂಡು ಮಕ್ಕಳಿದ್ದು ಒಂದನೇಯವ ವಿಶ್ವನಾಥ
ಉ: ಬಿ.ಎ ಪ್ರಥಮ ವಿದ್ಯಾರ್ಥಿ ಇದ್ದು ಈತನು ಸ್ವಲ್ಪ ಮಾನಸಿಕ ದುರ್ಬಲ ವ್ಯಕ್ತಿಯಾಗಿದ್ದು ಹಾಗೂ ಎರಡನೇಯ
ಶಿವಶಂಕರ ಪಿ.ಯು.ಸಿ ವಿದ್ಯಾರ್ಥಿಯಾಗಿದ್ದು ಇಬ್ಬರು ತಾವರಗೇರಾದಲ್ಲಿಯೇ ವಿದ್ಯಾಬ್ಯಾಸ ಮಾಡಿಕೊಂಡಿದ್ದರು.
ದಿನಾಂಕ: 15-05-2016 ರಂದು ಫಿರ್ಯಾಧಿದಾರರು ತಮ್ಮ ಹೆಂಡತಿ ಮತ್ತು ಮಗ ಶಿವಶಂಕರ ಮೂವರು ಕೂಡಿ ಶ್ರೀಶೈಲಕ್ಕೆ
ಹೋಗಿದ್ದು ಮಗ ವಿಶ್ವನಾಥನನ್ನು ಆತನ ಪರೀಕ್ಷೆ ಇರುವ ಕಾರಣ ಮನೆಯಲ್ಲಿಯೇ ಫಿರ್ಯಾಧಿದಾರರ ಅಣ್ಣನ ಮಗನಾದ
ಪ್ರಕಾಶ, ರವರೊಂದಿಗೆ ಬಿಟ್ಟು ಹೋಗಿದ್ದರು. ದಿನಾಂಕ: 17-05-2016 ರಂದು ಪ್ರಕಾಶನು ಫಿರ್ಯಾಧಿದಾರರಿಗೆ
ರಾತ್ರಿ 9-00 ಗಂಟೆಗೆ ಫೋನ್ ಮಾಡಿ ವಿಶ್ವನಾಥನು ಮದ್ಯಾಹ್ನ 1-00 ಗಂಟೆಗೆ ಬುಕ್ ಸ್ಟಾಲ್ನಿಂದ ಮನೆಗೆ
ಊಟಕ್ಕೆಂದು ಹೇಳಿ ಹೊದವನು ವಾಪಾಸು ಬಂದಿರುವುದಿಲ್ಲ ಅಂತಾ ತಿಳಿಸಿದನು. ನಂತರ ಫಿರ್ಯಾಧಿದಾರರು ದಿನಾಂಕ:
18-05-2016 ರಂದು ತಾವರಗೇರಾಕ್ಕೆ ಬಂದು ತಮ್ಮ ಮಗನ ಬಗ್ಗೆ ಎಲ್ಲಾ ಕಡೆಗೆ ವಿಚಾರಿಸಿದಾಗ ಮಾಹಿತಿ
ದೊರೆತಿರುವುದಿಲ್ಲ. ತಮ್ಮ ಸಂಬಂಧಿಕರಲ್ಲಿ ಹಾಗೂ ಕಾರಟಗಿ. ಗಂಗಾವತಿ. ಕಡೆಗೆ ಹುಡುಕಾಡಲಾಗಿ ಯಾವುದೇ
ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ಆತನನ್ನು ಹುಡುಕಿಕೊಡಬೆಕೆಂದು ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾಧಿ
ನೀಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಲಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ
ತನಿಖೆ ಕೈಗೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
99/2016 ಕಲಂ: 108 ಸಿ.ಆರ್.ಪಿ.ಸಿ.
ದಿನಾಂಕ:20-05-2016 ರಂದು ಬೆಳಿಗ್ಗೆ 9-00 ಗಂಟೆಗೆ ನಾನು
ಈ.ಕಾಳಿಕೃಷ್ಣ. ಪಿ.ಐ ಗಂಗಾವತಿ
ನಗರ ಪೊಲೀಸ್ ಠಾಣೆ ಇದ್ದು ಸ್ವಂತ ಪಿರ್ಯಾದಿ ಮೇಲಿಂದ ಆರೋಪಿತನಾದ ಮಹ್ಮದ್ ಮಹೆಬೂಬ ತಂದೆ ಮಹ್ಮದ್ ಇಲಿಯಾಸ್ ಸಾ: ಇಲಾಹಿ
ಕಾಲೋನಿ ಗಂಗಾವತಿ ಇವನು ತನ್ನ
ಪೇಸ್ ಬುಕ್ ಮತ್ತು ವಾಟ್ಸಾಪ
ಫ್ರೋಪ್ರೈಲ್ ದಲ್ಲಿ ಹೈದ್ರಾಬಾದಿನ ಶಾಸಕರಾದ ಅಕ್ಬರುದ್ದೀನ್
ಓವೈಸಿಯ ಕಾಲಿಗೆ ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಮೊಬೈಲ್ ದಲ್ಲಿ ಎಡಿಟಿಂಗ್ ಮಾಡುವ ಮೂಲಕ ಅಕ್ಬರುದ್ದೀನ್
ವೈಓಸಿ ಇವರ ಕಾಲಿಗೆ ನಮಸ್ಕರಿಸುವಂತೆ ತಿರುಚಿ ತನ್ನ ಪೇಸ್ ಬುಕ್ ಪ್ರೋಪೈಲ್ ಗೆ ಅಪ್ ಲೋಡ್ ಮಾಡಿದ್ದು ಅದನ್ನು ನೋಡಿದ ಅವನ ಗ್ರೂಪಿನ
ಕೆಲವು ಸದಸ್ಯರು ಲೈಕ್ ಮಾಡಿದ್ದು ಮತ್ತು ಕೆಲವು ಸದಸ್ಯರು ಕಮೆಮಟ್ಸ ಮಾಡಿದ್ದು ಸದರಿಯವನ ಕೃತ್ಯದಿಂದ ದೇಶಾದ್ಯಂತ ಕಾನೂನು ಸುವ್ಯವಸ್ಥೆಯನ್ನು
ಹಾಳು ಮಾಡುವ ಉದ್ದೇಶದಿಂದ ಮತ್ತು ಕೋಮು ಭಾವನೆಗಳು ಏಳುವಂತೆ ಪ್ರೇರೇಪಿಸುವ ಉದ್ದೇಶದಿಂದ ಈ ರೀತಿ
ಪೋಟೋಗಳನ್ನು ತಯಾರಿಸಿ ಭಾರತ ದೇಶದ ಹಿಂದೂ ಮತ್ತು ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ತರುವ
ಉದ್ದೇಶದಿಂದ ಮತ್ತು ಆರೋಪಿತನು ರಾಜದ್ರೋಹಾತ್ಮಕ
ವಿಷಯವಳನ್ನು ಪ್ರಚಾರ ಮಾಡಲು ಪ್ರಯತ್ನಿಸಿರುವುದರಿಂದ ಆರೋಪಿತನ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 96/2016 ಕಲಂ:
153(ಎ) ಐ.ಪಿ.ಸಿ. ಅಡಿಯಲ್ಲಿ
ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣ
ತನಿಖೆಯಲ್ಲಿರುತ್ತದೆ. ನಂತರದಲ್ಲಿಯೂ ಸಹ ಆರೋಪಿತನು ಇದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಹೋದಲ್ಲಿ
ಸೂಕ್ಷ್ಮ ಪ್ರದೇಶವಾದ ಗಂಗಾವತಿ ನಗರದಲ್ಲಿ ಶಾಂತಿ, ಮತ್ತು ಕಾನೂನೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆ
ಇರುತ್ತದೆ. ಮತ್ತು ನಗರದಲ್ಲಿ
ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ, ಕೋಮು
ಸೌಹಾರ್ಧತೆಗೆ ಧಕ್ಕೆಯಾಗುವ ಕೃತ್ಯಗಳನ್ನು ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕ
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು
ನಡೆಯದಂತೆ ನೋಡಿಕೊಳ್ಳುವ ಕುರಿತು ಸದರಿಯವನಿಂದ ಶಾಂತಿ ಪಾಲನೆಗಾಗಿ ಮುಚ್ಚಳಿಕೆಯನ್ನು
ಬರೆಯಿಸಿಕೊಳ್ಳುವುದು ಅವಶ್ಯವಿದ್ದು,
ಸದರಿ ಆರೋಪಿತನ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:99/2016 ಕಲಂ 108 ಸಿ.ಆರ್.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
0 comments:
Post a Comment