1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(3) Karnataka Police Act.
ಶ್ರೀ. ನಿಂಗಪ್ಪ ಪಿ.ಎಸ್. ಕಾರಟಗಿ ರವರಿಗೆ
ದಿನಾಂಕ 25-05-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ ಬಸವಣ್ಣ ಕ್ಯಾಂಪಿನ ಉಣ್ಣಿಬಸವೇಶ್ವರ
ದೇವಸ್ಥಾನದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ
ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಬಾತ್ಮಿ ಮೇರೆಗೆ ಆರೋಪಿ 1)
ವೆಂಕಟೇಶ್ವರರಾವ್ ತಂದಿ ರಾಮಮುರ್ತಿ ಈಡಿಗೇರ ವಯಾ- 60 ವರ್ಷ ಜಾ- ಈಡಿಗೇರ ಸಾ- ಬಸವಣ್ಣಕ್ಯಾಂಪ್
ಇವರ ಮೇಲೆ ದಾಳಿ ಮಾಡಲು ಹಿಡಿದು
ಈತನಿಂದ ರೂ. 1350=00 ಗಳನ್ನು ಮತ್ತು ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
104/2016 ಕಲಂ: 78(3) Karnataka Police Act.
ದಿನಾಂಕ 26-05-2016 ರಂದು 19-30 ಗಂಟೆಯ ಸುಮಾರಿಗೆ ಆರೋಪಿತನಾದ ಶಕ್ಷಾವಲಿ ತಂದೆ ಶೇಖ್ ಅಜೀಮಸಾಬ ವಯಸ್ಸು
45 ವರ್ಷ ಜಾ:ಮುಸ್ಲಿಂ ಉ: ರಗ್ಜಿನ್ ಕೆಲಸ ಸಾ: ಝಂಡಾಕಟ್ಟಿ ಮಹಿಬೂಬು ನಗರ, ಗಂಗಾವತಿ ಈತನು ಗಂಗಾವತಿ ನಗರದ ಬಿಲಾಲ್ ಮಸೀದಿ ರಸ್ತೆಯಲ್ಲಿಯ ಸಾರ್ವಜನಿಕ
ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು
ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ ಶ್ರೀ ಕಾಮಣ್ಣ ಎ.ಎಸ್.ಐ. (ಅ.ವಿ)
ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ಮಟಕಾ ಜೂಜಾಟದ ಹಣ
ನಗದು ಹಣ ರೂ. 1,430-00. [02] ಒಂದು ನೋಕಿಯಾ ಮೊಬೈಲ್. [03] ಒಂದು ಮಟಕ
ನಂಬರ ಬರೆದ ಪಟ್ಟಿ. [04]
01 ಬಾಲ್ ಪೆನ್ ಜಪ್ತಿ
ಪಡಿಸಿದ್ದು ಇರುತ್ತದೆ. ಆರೋಪಿತನಿಂದ ಜಪ್ತಿ ಪಡಿಸಿದ ಮುದ್ದೆಮಾಲನ್ನು ಪಂಚರ ಸಮಕ್ಷಮ
ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 56/2016 ಕಲಂ: 323, 324, 504, 506 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ
1989:.
ಪಿರ್ಯಾದಿದಾರನ ತಾಯಿಯ ಹೆಸರಿನಲ್ಲಿ ಹಾಗೂ ಇತರ 82 ಜನ ಫಲಾನುಭವಿಗಳಿಗೆ ಬಸವ ಯೋಜನೆ ಅಡಿಯಲ್ಲಿ
ಮನೆ ಮಂಜೂರಾಗಿದ್ದು, ಅದಕ್ಕೆ ಆರೋಪಿತನು ತಕರಾರು ಸಲ್ಲಿಸಿದ್ದಕ್ಕೆ ಪಿರ್ಯಾದಿದಾರನು ಈ ಮೊದಲು ಇತರರೊಂದಿಗೆ
ಹೋಗಿ ಶಂಕರೆಡ್ಡಿ ಈತನಿಗೆ ಬೇಡಿಕೊಂಡಿದ್ದು, ಅದರಂತೆ, ಇಂದು ದಿನಾಂಕ:26-05-2016 ರಂದು ಶಂಕರೆಡ್ಡಿ
ಈತನು ಊರಿಗೆ ಬಂದಿದ್ದು ಕೇಳಿ 5-00 ಪಿಎಂಕ್ಕೆ ಪಿರ್ಯಾದಿ ಮತ್ತು ಸೋಮಪ್ಪ ಅಳವುಂಡಿ, ಗಾಳೆಪ್ಪ ತಾಯಮ್ಮನವರ್,
ಮುದಿಯಪ್ಪ ಚಲವಾದಿ ಇವರೊಂದಿಗೆ ಶಂಕರೆಡ್ಡಿ ಇವರ ಗೋದಾಮಿನ ಹತ್ತಿರ ಹೋಗಿ, ಬಡವರಿಗೆ ಮನೆಗಳು ಮಂಜೂರಾಗಿವೆ
ತಕರಾರು ಮಾಡಬೇಡಿರಿ, ನಮ್ಮಂತ ಬಡವರಿಗೆ ತೊಂದರೆಯಾಗುತ್ತದೆ ಅಂತಾ ಕೇಳಿದಾಗ ಆರೋಪಿತನು ಪಿರ್ಯಾದಿಗೆ
ಮತ್ತು ಆತನ ಜೊತೆಗಿದ್ದವರಿಗೆ ಜಾತಿ ನಿಂದನೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈ ಗೊಂಡಿರುತ್ತಾರೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 37/2016 ಕಲಂ: 504, 326, 506 ಐ.ಪಿ.ಸಿ ಮತ್ತು 3(1)(10) ಎಸ್.ಸಿ/ಎಸ್.ಟಿ. ಕಾಯ್ದೆ
1989:.
ದಿನಾಂಕ: 24.05.2016 ರಂದು ಸಾಯಂಕಾಲ 6.00
ಗಂಟೆ ಸುಮಾರಿಗೆ ಪಿರ್ಯಾದಿದಾರನು ಆರೋಪಿತನ ಕಿರಾಣಿ ಅಂಗಡಿಗೆ ಹೋಗಿ ತನೆಗೆ ಎಲೆ ಅಡಿಕೆ ಮತ್ತು
ಒಂದು ಸೊಂಡಿಗೆ ಪಾಕೇಟ್ನ್ನು ತೆಗೆದುಕೊಂಡು ಅದರ ರೊಕ್ಕ ಕೊಡಲು ತನ್ನಲ್ಲಿದ್ದ 500 ರೂಪಾಯಿ ನೋಟನ್ನು ಕೊಟ್ಟಾಗ ಆರೋಪಿತನು ಪಿರ್ಯಾದಿದಾರನಗೆ
ಚಿಲ್ಲರೆ ಕೊಡು ಅಂತಾ ಅಂದಾಗ ಪಿರ್ಯಾದಿದಾರನು ನನ್ನ ಹತ್ತಿರ ಚಿಲ್ಲರೆ ಇರುವದಿಲ್ಲ ಅಂತಾ ಹೇಳಿದಾಗ
ಆರೋಪಿತನು ಪಿರ್ಯಾದಿದಾರನೊಂದಿಗೆ ವಿನಾ ಕಾರಣ ಜಗಳ ತೆಗೆಯುವ ಉದ್ದೇಶದಿಂದ ಒಮ್ಮಿಂದೊಮ್ಮಲೆ ಸಿಟ್ಟಿಗೆದ್ದು
ತನ್ನ ಅಂಗಡಿಯಿಂದ ಹೊರಗೆ ಬಂದವನೆ ಪಿಯರ್ಾದಿದಾರನಿಗೆ ಏನಲೇ ದಾಸ ಸೂಳೆ ಮಗನೆ ಅಂತಾ ಜಾತಿ ನಿಂದನೆ
ಮಾಡಿ ಬೈದಾಡಿ ಬೆಕಂತಲೆ ಚಿಲ್ಲರೆ ಇಲ್ಲಾ ಅಂತಿದಿ ನೀನು ನನ್ನ ಅಂಗಡಿಗೆ ಉದ್ರಿ ಸಾಮಾನು ತೆಗೆದುಕೊಳ್ಳಾಕೆ
ಬಂದಿದಿ ಮಗನೇ ಅಂತಾ ಬೈದಾಡಿ ಅಲ್ಲೆ ಇದ್ದ ಒಂದು ಬಿದುರು ಬಡಿಗೆಯಿಂದ ಪಿರ್ಯಾದಿದಾರನ ಬಲ ಮೊಣಕಾಲಿಗೆಎರಡು
ಸಲ ಹೊಡೆದು ಅವನಿಗೆ ಭಾರಿ ಒಳಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment