1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ:
88/2016 ಕಲಂ: 78(6) Karnataka Police Act.
ದಿ: 25-05-2016 ರಂದು ರಾತ್ರಿ
10-30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಗುಂಡಪ್ಪ ಉಡಗಿ ಪಿ.ಐ. ನಗರ ಠಾಣೆ ಕೊಪ್ಪಳ ರವರು ಆರೋಪಿ ಸಮೇತ
ತಮ್ಮ ಗಣಕೀಕೃತ ಫಿರ್ಯಾದಿಯನ್ನು ಹಾಜರುಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸುವ ಬಗ್ಗೆ ಮಾನ್ಯ ಸಿ.ಜೆ.ಎಂ. ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ರಾತ್ರಿ 11-30 ಗಂಟೆಗೆ
ಪ್ರಕರಣ ದಾಖಲು ಮಾಡಿದ್ದು, ಸದರಿ ಫಿರ್ಯಾದಿಯಲ್ಲಿ ದಿ: 25-05-2016 ರಂದು ರಾತ್ರಿ 9-00
ಗಂಟೆಗೆ ಕೊಪ್ಪಳ ನಗರದ ಎನ್.ಎಚ್.-63 ರಸ್ತೆಯ ಪಾರ್ಥಾ ಇಂಟರ್ ನ್ಯಾಶನಲ್ ಹೊಟೇಲ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ನಮೂದು ಆರೋಪಿತರು ಕೂಡಿಕೊಂಡು ಈಗ ನಡೆಯುತ್ತಿರುವ ಐಪಿಎಲ್-2016 ಕ್ರಿಕೇಟ ಪಂದ್ಯಾವಳಿಗಳಲ್ಲಿ
ಕಲ್ಕತ್ತಾ ನೈಟ್ ರೈಡರ್ಸ ಮತ್ತು ಹೈದ್ರಾಬಾದ್ ಸನ್ ರೈಜರ್ಸ ಟೀಮ್ ನಡುವಣ ಪಂದ್ಯದ ಮೇಲೆ ಹಣವನ್ನು
ಬಿಡ್ ಮಾಡಿ ಕ್ರಿಕೇಟ್ ಬೆಟ್ಟಿಂಗ್ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು, ದಾಳಿಯ ಕಾಲಕ್ಕೆ
ಸದರಿ ಆರೋಪಿತರಿಂದ ಪಂಚರ ಸಮಕ್ಷಮ ಕ್ರಿಕ ಬೆಟ್ಟಿಂಗ್ ನಗದು ಹಣ 20,600/- ರೂ ಹಾಗೂ 06 ಮೊಬೈಲ್ ಪೋನಗಳನ್ನು,
ಒಂದು ವಿಡಿಯೋಕಾನ್ ಟಿ.ವಿ. ಬೆಟ್ಟಿಂಗ್ ಚೀಟಿ, 03 ಬಾಲಪೆನ್ನು ಜಪ್ತ ಮಾಡಿಕೊಂಡು ಬಂದು ಸದರಿ ಆರೋಪಿತರ
ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 54/2016 ಕಲಂ: 3 ಸಹಿತ 25 ಆಯುಧ
ಕಾಯ್ದೆ-1959 ಹಾಗೂ 9, 39, 51(ಬಿ) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972.
ದಿನಾಂಕ:25-05-2016 ರಂದು 9-00 ಎಎಂಕ್ಕೆ ಪಿರ್ಯಾದಿದಾರಾದ ವಿಶ್ವನಾಥ ಹಿರೇಗೌಡರ, ಪಿ.ಎಸ್.ಐ.
ಕುಕನೂರ ಠಾಣೆರವರು ಖಚಿತ ಬಾತ್ಮೀಮೇರೆಗೆ ಸಿಬ್ಬಂದಿ
ಹಾಗೂ ಪಂಚರೊಂದಿಗೆ ಸರ್ಕಾರದಿಂದ ಯಾವುದೇ ಲೈಸನ್ಸ್ ದಾಖಲಾತಿ ಹೊಂದದೇ ಆಯುಧ ಹೊಂದಿ, ವನ್ಯಜೀವಗಳನ್ನು
ಕೊಂದು, ಅದರ ಮಾಂಸ ತಿಂದು ಚರ್ಮವನ್ನು ಮಾರಾಟ ಮಾಡುತ್ತಿದ್ದ ಏಳು ಜನ ಆರೋಪಿತರ ಮೇಲೆ ಬೆಣಕಲ್ ಸೀಮಾಂತರದ
ಕೆರೆಯಲ್ಲಿ ದಾಳಿ ಮಾಡಿ, ಸದರಿಯವರಿಂದ 1) ಒಂದು ನಾಡ ಬಂದೂಕು, 2) 20 ಚರ್ರಿ ಗುಂಡುಗಳು, 3) ಎರಡು
ಮೋಟಾರ್ ಸೈಕಲ್ ಗಳು ಅಂ.ಕಿ. 20,000-00 ರೂ. 4) ಒಂದು ಜಿಂಕೆ ಚರ್ಮ, 5) ಮದ್ಯದಒಡೆದ ಬಾಟಲಿ ತುಂಡುಗಳನ್ನು, ನೀರಿನ ಬಾಟಲಿಗಳನ್ನು,
ಗುಟಖಾ ಚೀಟ್, 6) ಸ್ವಲ್ಪ ಮದ್ದು ಇರುವ ಒಂದು ಡಬ್ಬಿ, ನಾಲ್ಕು ಅಟಾಂ ಪಟಾಕಿಗಳು, ನಾಲ್ಕು ಸಣ್ಣ ಪಟಾಕಿಗಳನ್ನು
ಜಪ್ತ ಮಾಡಿಕೊಂಡಿದ್ದು, ಈ ಬಗ್ಗೆ ದಾಳಿ ಪಂಚನಾಮೆಯನ್ನು ಸಹ ಪೂರೈಸಿಕೊಂಡು ಬಂದಿದ್ದು, ಕಾರಣ,
ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:
106/2016 ಕಲಂ: 279, 337, 338 ಐ.ಪಿ.ಸಿ:.
ದಿ:25-05-2016
ರಂದು ಸಾಯಂಕಾಲ 5-45 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಯಾದಿ ಸ್ವೀಕೃತವಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಸೋಮನಾಥ ಕಲಾಲ. ಸಾ: ಹುಲಿಗಿ
ತಾ: ಕೊಪ್ಪಳ ಇವರನ್ನು ವಿಚಾರಿಸಿ ಲಿಖಿತ ಫಿರ್ಯಾದಿಯನ್ನು ಪಡೆದುಕೊಂಡಿದ್ದು, ದೂರಿನ ಸಾರಾಂಶವೇನೆಂದರೇ, ಇಂದು ದಿ:25-05-16 ರಂದು ಮಧ್ಯಾಹ್ನ ನಾನು ಮತ್ತು ನಮ್ಮ ಕುಲಸ್ಥನಾದ ಮೃತ್ಯುಂಜಯ ಕಲಾಲ
ಇಬ್ಬರೂ ವೈಯಕ್ತಿಕ ಕೆಲಸ ನಿಮಿತ್ತ ಮೃತ್ಯುಂಜಯ ಇತನ ಮೋಟಾರ ಸೈಕಲ್ ನಂ: ಕೆಎ-36/ಎಲ್-4708 ನೇದ್ದರಲ್ಲಿ ಕುಕನೂರಿಗೆ ಹೋಗಿದ್ದೆವು. ನಂತರ ಅಲ್ಲಿಂದ ವಾಪಾಸ್ ಊರಿಗೆ ಅಂತಾ
ಬರುತ್ತಿದ್ದಾಗ ಗದಗ-ಕೊಪ್ಪಳ ರಸ್ತೆಯ ಎನ್,ಹೆಚ್-63 ರಸ್ತೆಯ ಮಿಲೇನಿಯಮ್ ಕಾಲೇಜ
ಹತ್ತಿರ ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತ್ಯುಂಜಯ ಇತನು
ತನ್ನ ಮೋಟಾರ ಸೈಕಲ್ ನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯಕರ ವಾಗುವ
ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ನಡೆಸುತ್ತಾ ಗಾಡಿಯನ್ನು ನಿಯಂತ್ರಿಸದೇ ಸ್ಕಿಡ್ ಮಾಡಿ
ಬಿದ್ದಿದ್ದು ಇರುತ್ತದೆ. ಈ ಅಪಘಾತದಲ್ಲಿ ನನಗೆ ಬಲಗೈ ಮತ್ತು ಎಡಗೈ, ಹಣೆಗೆ, ಎಡಗಣ್ಣಿನ ಹತ್ತಿರ ತೆರೆಚಿದ ರಕ್ತಗಾಯಗಳಾಗಿದ್ದು, ಅಲ್ಲದೇ ಎಡತೊಡೆಯ ಹತ್ತಿರ ಸೈಲೆನ್ಸ ಬಡಿದು ಸುಟ್ಟಗಾಯವಾಗಿದ್ದು
ಇರುತ್ತದೆ. ಅಪಘಾತ ಮಾಡಿದ ಮೃತ್ಯಂಜಯನಿಗೆ ತಲೆಗೆ ಭಾರಿ ಪೆಟ್ಟಾಗಿ ಕಿವಿಯಿಂದ ರಕ್ತ
ಬಂದಿರುತ್ತದೆ. ಮತ್ತು ಹಣೆ, ಬಲಕಣ್ಣು, ಮೂಗಿಗೆ ತೆರೆಚಿದ
ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಮೊಟಾರ ಸೈಕಲ್ ಸವಾರ ಮೃತ್ಯುಂಜಯ ತಂದೆ
ತುಕಾರಾಮ ಕಲಾಲ. ವಯ: 35, ಜಾ: ಕಲಾಲ. ಉ: ಐಸಕ್ರೀಂ ವ್ಯಾಪಾರ, ಸಾ: ಹುಲಿಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment