1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 117/2016 ಕಲಂ: 87 Karnataka Police
Act.
28-05-2016 ರಂದು ಸಾಯಂಕಾಲ 5-15 ಗಂಟೆಯ ಸುಮಾರಿಗೆ ರಾಮನಗರದ ಗಿರಣಿ
ಮಲ್ಲಪ್ಪ ರವರ ಗೋಡಾನ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ
ತೊಡಗಿದ್ದಾಗ್ಗೆ ಶ್ರೀ. ನಿಂಗಪ್ಪ ಪಿ.ಎಸ್.ಐ ಕಾರಟಗಿ ಮತ್ತು
ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು
ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತನ ಕಡೆಯಿಂದ ಹಾಗೂ ಖಣದಲ್ಲಿ ಸೇರಿ ರೂ. 17960=00 ಗಳನ್ನು ಮತ್ತು
ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಗುನ್ನೆ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 87/2016 ಕಲಂ: 87 Karnataka Police
Act.
ದಿನಾಂಕ:28.05.2016 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ
ಬೇವೂರ ಗ್ರಾಮದ ಆಶ್ರಮದ ಹಿಂದುಗಡೆ ಇರುವ ಬಯಲು ಜಾಗೆಯಲ್ಲಿ ಇಸ್ಪಟ್ ಜೂಜಾಟ ನಡೆದಿದೆ ಅಂತಾ ಬಾತ್ಮಿ
ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿ
7 ಜನ ಆರೋಪಿತರಿಂದ 1530/-ರೂ ನಗದು ಹಣ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ:
92/2016 ಕಲಂ: 323, 341, 504, 506 ಐ.ಪಿ.ಸಿ:.
ದಿನಾಂಕ: 28-05-2016 ರಂದು 02-10 ಪಿ.ಎಮ್. ಕ್ಕೆ ಫಿರ್ಯಾದಿ ರಣಧೀರಕುಮಾರ ತಂದೆ ರಾಮ್ ನಿರಂಜನ್ ಮಿಶ್ರಾ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-05-2016 ರಂದು ರಾತ್ರಿ 9-25 ಗಂಟೆ ಸುಮಾರಿಗೆ ಕೊಪ್ಪಳ ನಗರದ ಶಾರಾದಾ ಟಾಕೀಜ ಹತ್ತಿರ ನನ್ನ ಕೆಲಸಕ್ಕೆ ಹೋಗುವ ಸಲುವಾಗಿ ಬಸ್ ಗಾಗಿ ಕಾಯುತ್ತಿದ್ದಾಗ ಸೈಯ್ಯದ ಮರ್ತೂಜಾ ಖಾದ್ರಿ ಸಾ: ಕೊಪ್ಪಳ ಈತನು ನನ್ನ ಹಿಂದಿನಿಂದ ಬಂದು ನನ್ನ ಮೇಲೆ ಹಲ್ಲೆ ಮಾಡಿದನು ನಾನು ಯಾಕೆ ಅಂತಾ ಕೇಳಲು ನನಗೆ ಗಟ್ಟಿಯಾಗಿ ಹಿಡಿದು ತಲೆ ಮೂಗು ಮತ್ತು ಬೆನ್ನಿಗೆ ಹೊಡೆದಿತ್ತಾನೆ. ನಂತರ ನನಗೆ ಮಾಕಿ, ಬೇಹನಕೀ ಎಂಬ ಅವಾಚ್ಯವಾಗಿ ಬೈದಾಡಿ ಇದನ್ನು ಪೊಲೀಸರಿಗೆ ಹೇಳಿದರೆ ನಿನಗೆ ಜೀವಂತವಾಗಿ ಉಳಿಸುವುದಿಲ್ಲ ಅಂತಾ ಪ್ರಾಣ ಬೆದರಿಕೆ ಹಾಕಿ ಹೋಗಿರುತ್ತಾನೆ ಕಾರಣ ಸೈಯದ್ ಮುರ್ತುಜಾ ಖಾದ್ರಿ ಸಾ: ಕೊಪ್ಪಳ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ:
93/2016 ಕಲಂ: 323, 341, 504, 506 ಸಹಿತ 149 ಐ.ಪಿ.ಸಿ:.
ದಿನಾಂಕ: 28-05-2016 ರಂದು 08-30 ಪಿ.ಎಮ್. ಕ್ಕೆ ಫಿರ್ಯಾದಿ ಸೈಯ್ಯದ ಮುರ್ತುಜಾ ತಂದೆ ಸೈ. ಅಬ್ದುಲ ರಹಮಾನ ಖಾದ್ರಿ ಸಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖತ ದೂರಿನ ಸಾರಾಂಶವೇನೆಂದರೆ, ದಿನಾಂಕ: 27-05-2016 ರಂದು ರಾತ್ರಿ 9-00 ಗಂಟೆ ಸುಮಾರಿಗೆ ಕೊಪ್ಪಳ ನಗರದ ಶಾರಾದಾ ಟಾಕೀಜ ಹತ್ತಿರ ನಾನು ಕೆಲಸ ಮುಗಿಸಿಕೊಂಡು ಬರುವಾಗ ಹಿರೇಬಗನಾಳದಲ್ಲಿರುವ ಹರೇಕೃಷ್ಣ ಕಾರ್ಖಾನೆಯಲ್ಲಿ ಕೆಲಸ ಮಾಡುವ ರಣದೀರ, ಮಿಶ್ರಾ, ಫಹೀಮ್, ವಿವೇಕ, ಕಿರಣ, ಪಾಟೀಲಗೌಡ, ರಾಕೇಶ ಇವರು ನನ್ನನ್ನು ನೋಡಿ ನಗುತ್ತಾ ನನಗೆ ಅಡ್ಡಗಟ್ಟಿ, ಅವಾಚ್ಯವಾಗಿ ಬೈಯುತ್ಆ ಕಿರುಕುಳ ನೀಡಿದರು. ಆಗ ನಾನು ನನ್ನ ರಕ್ಷಣೆಗೆ ಆಕ್ಷೇಪಣೆ ಮಾಡಿದಾಗ ಅವರೆಲ್ಲರೂ ಸೇರಿಕೊಂಡು ನನಗೆ ಪ್ರಾಣ ಬೆದರಿಕೆ ಹಾಕಿ ಕೈಯಿಂದ ನನ್ನ ಮೇಲೆ ಮೇಲೆ ಹಲ್ಲೆ ಮಾಡಿದರು. ರಣಧೀರ ಮತ್ತು ಮಿಶ್ರಾ ಇವರು ನನಗೆ ಕಲ್ಲಿನಿಂದ ಹೊಡೆಯಲಿಕ್ಕೆ ಬಂದಾಗ ಅಲ್ಲಿದ್ದ ಜನರು ಬಿಡಿಸಿಕೊಂಡಿದ್ದು ಇರುತ್ತದೆ. ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment