1] ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ: 53/2016 ಕಲಂ: 302, 201 ಐ.ಪಿ.ಸಿ:.
ಮೃತ ಗಂಗಮ್ಮಳು ದಿನಾಂಕ- 28-05-2016 ರಂದು ರಾತ್ರಿ 7 ಗಂಟೆಯಿಂದ 9 ಗಂಟೆಯ ಮಧ್ಯದ
ಅವಧಿಯಲ್ಲಿ ಕಲಕಬಂಡಿ ಸೀಮಾದಲ್ಲಿಯ ತಮ್ಮ ಹೋಲದಿಂದ ಮನೆಗೆ ನಡೆದುಕೊಂಡು ಶಿವಪ್ಪ ಶೇಟ್ಟರ ಇವರ
ಹೋಲದಲ್ಲಿ ಹೋಗುವಾಗ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಬಡಿಗೆಯಿಂದ ಆಕೆಯ ತಲೆಗೆ
ಬಲವಾಗಿ ಬಡಿದು ಕೊಲೆ ಮಾಡಿ ಹೋಗಿದ್ದು ಇರುತ್ತದೆ. ಸದರಿ ಆರೋಪಿತರನ್ನು ಪತ್ತೆ ಮಾಡಿ ಕಾನೂನು
ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ
ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 57/2016 ಕಲಂ: 279, 337, 338 ಐ.ಪಿ.ಸಿ:.
ಪಿರ್ಯಾದಿಯ ಅಕ್ಕ ಮತ್ತು ಅಳಿಯ ಹಾಗೂ ಅಳಿಯನ ಹೆಂಡತಿ, ಮಕ್ಕಳು ಸೇರಿ ತನ್ನ ಕಾರ ನಂ. ಕೆ.ಎ.35
ಎನ್.883 ನೇದ್ದರಲ್ಲಿ ಬೆಳಿಗ್ಗೆ 6.00 ಗಂಟೆಗೆ ಅಹ್ಮದಾಬಾದ್ ನಿಂದ ಹೊಸಪೇಟೆಗೆ ಬರುವಾಗ ಆರೋಪಿ ಪ್ರಕಾಶನು
ತಾನು ನಡೆಸುತ್ತಿದ್ದ ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸುತ್ತಾ ಬರುವಾಗ ಭಾನಾಪೂರ
ದಾಟಿ ಕೊಪ್ಪಳ ಕಡೆಗೆ ಬರುತ್ತಿರುವಾಗ ಬೆಳಗಿನ ಜಾವ 1.20 ಗಂಟೆ ಸುಮಾರಿಗೆ ರಸ್ತೆಯ ತಿರುವನ್ನು ಗಮನಿಸದೇ
ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಕೊಪ್ಪಳ ಕಡೆಗೆ ಬರುವಾಗ ಎದುರಿಗೆ ಒಂದು ಲಾರಿ
ಬರುವದನ್ನು ಲೆಕ್ಕಿಸದೇ ಅತೀವೇಗವಾಗಿ ನಡೆಸಿ ಒಮ್ಮೇಲೇ ರಸ್ತೆಯ ಎಡಕ್ಕೆ ತನ್ನ ಕಾರನ್ನು ತಿರುಗಿಸಿದ್ದರಿಂದ
ಕಾರು ರಸ್ತೆಯ ಎಡಗಡೆ ತಗ್ಗಿಗೆ ಬಿದ್ದು ಅಪಘಾತವಾಗಿದ್ದು, ಇದರಿಂದ ಕಾರಿನಲ್ಲಿದ್ದ ಫಿರ್ಯಾದಿಯ ಅಕ್ಕ, ಆರೋಪಿ ಪ್ರಕಾಶನ ಹೆಂಡತಿಗೆ
ಭಾರಿ ಸ್ವರೂಪದ ಗಾಯಗಳಾಗಿದ್ದು, ಪ್ರಕಾಶನಿಗೆ, ಮತ್ತು ತನ್ನ ಮಕ್ಕಳಾದ ಆದಿತ್ಯ, ರಕ್ಷಿತಾಳಿಗೆ ಸಾದಾ
ಸ್ವರೂಪದ ಗಾಯಗಳಾಗಿದ್ದು ಇರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 58/2016 ಕಲಂ: 279, 337 ಐ.ಪಿ.ಸಿ:.
ಪಿರ್ಯಾದಿದಾರನು ತನ್ನ ತಮ್ಮನ ಹೆಸರಿನಲ್ಲಿರುವ ವಾಹನ ಸಂ;ಕೆಎ-23 ಎ-0135 ನೇದ್ದರಲ್ಲಿ ಬಾರ್
ಮತ್ತು ಪೌಂಡೇಷನ್ ನಟ್ ಗಳನ್ನು ಲೋಡ್ ಮಾಡಿಕೊಂಡು ಚಾಲಕ ಬಸವರಾಜ ತಂದೆ ನಾಗಪ್ಪ ನಾಗನೂರ ಸಾ: ಬೈಲಹೊಂಗಲ
ಈತನೊಂದಿಗೆ ಬೆಳಗಾವಿಯಿಂದ ಹೊಸಪೇಟೆಗೆ ಗದಗ-ಕೊಪ್ಪಳ ಎನ್.ಹೆಚ್. 63 ರಸ್ತೆಯ ಮುಖಾಂತರವಾಗಿ ತಳಕಲ್
ಮೊರಾರ್ಜಿ ಶಾಲೆಯ ಮುಂದಿನ ರಸ್ತೆಯಿಂದ ಹೊರಟಿರುವಾಗ ಸದರ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ
ಮತ್ತು ಅಲಕ್ಷ್ಯತನದಿಂದ ಚಲಾಯಿಸಿದ್ದರಿಂದ ವಾಹನ ಟೈರ್ ಬಸ್ಟ್ರ ಆಗಿ ವಾಹನ ಪಲ್ಟಿಯಾಗಿ ಅದರಲ್ಲಿದ್ದ
ಪಿರ್ಯಾದಿ ಮತ್ತು ಆರೋಪಿತನಿಗೆ ಸಾದಾ ಸ್ವರೂಪದ ಗಾಯಗಳಾಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
0 comments:
Post a Comment