1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 87 Karnaaka Police
Act.
ದಿನಾಂಕ:-30-05-2016 ರಂದು
ಸಾಯಂಕಾಲ 6-40 ಗಂಟೆಗೆ ಮಾನ್ಯ
ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು
ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 30-05-2016 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಯರಡೋಣ
ಡಗ್ಗಿ ಕ್ಯಾಂಪಿನ ನಾಗಪ್ಪ ಹಡಪದ ರವರ ಶೆಡ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್
ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ
ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತನ ಕಡೆಯಿಂದ ಹಾಗೂ
ಖಣದಲ್ಲಿ ಸೇರಿ ರೂ. 1,960=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು
ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ:
14/2016 ಕಲಂ: 279, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾಧಿದಾರನಾದ ಬೆಟ್ಟಪ್ಪ ತಂದೆ ಲಿಂಗಪ್ಪ ಜೋಗಿನ
ಸಾ: ಜಂಗಮರ ಕಲ್ಗುಡಿ ಇತನು ಠಾಣೆಗೆ ಹಾಜರಾಗಿ ನೀಡಿದ ಗಣಿಕಿಕೃತ
ಫಿರ್ಯಾಧಿವೇನೆಂದರೆ ತನ್ನ ತಾಯಿಯಾದ ಅಯ್ಯಮ್ಮ ವಯಸ್ಸು 80 ಇವಳು ಇಂದು ದಿನಾಂಕ
30-05-2016 ರಂದು ಬೆಳಗ್ಗೆ 10-00 ಗಂಟೆಗೆ ಸೋಮವಾರ ಇರುವುದರಿಂದ ಗಂಗಾವತಿ ಯಲ್ಲಿ ಪಡ್ಲಗಿ
ಹಿಡಿದುಕೊಂಡು ಗಂಗಾವತಿಗೆ ಹೋಗಿ ಬಿಕ್ಷೆಯನ್ನು ಬೇಡಿ ಕೊಂಡು ಬರುತ್ತೇನೆಂದು ಹೇಳಿ ಹೋದಳು. ನಂತರ ಸಂಜೆ 4-00 ಗಂಟೆಗೆ ನಾನು
ಮನೆಯಲ್ಲಿರುವಾಗ ನಮ್ಮೂರಿನ ಹನುಮಂತ ಕುರುಬರು ಇತನು ಬಂದು ನಿಮ್ಮ ತಾಯಿಗೆ ಗಂಗಾವತಿಯಲ್ಲಿ ಆಕ್ಸಿಡೆಂಟ್ ಆಗಿದೆ ಸರಕಾರಿ ಆಸ್ಪತ್ರೆಯಲ್ಲಿ
ಇದ್ದಾಳೆ ಕೂಡಲೇ ಬಾ ಅಂತಾ ಹೇಳಿದನು ನಾನು ಕೂಡಲೇ ಗಂಗಾವತಿಗೆ ಸಂಜೆಗೆ ಬಂದು ಗಂಗಾವತಿ ಸರಕಾರಿ
ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ನನ್ನ ತಾಯಿಗೆ ವಿಚಾರಿಸಲಾಗಿ ಮಹಾವೀರ ಸರ್ಕಲ್
ಹತ್ತಿರದ ಓ ಎಸ್ ಬಿ ರಸ್ತೆಯ ಅನ್ಮೂಲ ಗಾರ್ನಮೆಂಟ್ ಎದುರುಗಡೆ ಮದ್ಯಾನ್ನ 1-30 ಗಂಟೆ
ಸುಮಾರು ಯಾವುದೋ ಒಂದು ಮೋಟಾರು ಸೈಕಲ್ಲ ಸವಾರನು ತನ್ನ ಮೋ/ಸೈ ನ್ನು ಮಹಾವೀರ ಸರ್ಕಲ್ ಕಡೆಯಿಂದ
ಅತೀಜೋರಾಗಿ ಮತ್ತು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ನನ್ನಗೆ ಹಿಂದುಗಡೆ ಟಕ್ಕರ
ಕೊಟ್ಟು ಅಪಘಾತ ಮಾಡಿದನು ಆಗ ನಾನು ರಸ್ತೆ ಮೇಲೆ ಬಿದ್ದಾಗ ಸದರಿ ಮೋಟಾರು ಸೈಕಲ್ಲ ಸವಾರನು
ಗಾಡಿಯನ್ನು ನಿಲ್ಲಿಸಿ ನನಗೆ ವಿಚಾರಿಸಿದನು ನನಗೆ ಬಲಕೈಗೆ ತೆರೆಚಿದೆ ಮತ್ತು ಎಡಕಾಲ ಚಪ್ಪೆಗೆ
ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಸದರಿ ಮೋಟಾರು ಸೈಕಲ್ಲ ಸವಾರನು ನನ್ನನ್ನು ಯಾವುದೋ
ಒಂದು ಅಟೋದಲ್ಲಿ ಕರೆದುಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ
ಇಲ್ಲೇ ಇರುತ್ತೇನೆಂದು ಹೇಳಿ ನನ್ನನ್ನು ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾದನು ಅಂತಾ ತಿಳಿಸಿದಳು
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ,
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:
111/2016 ಕಲಂ: 279, 337, 338 ಐ.ಪಿ.ಸಿ:.
ದಿ:30-05-2016
ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶೇಖರಪ್ಪ ತಂದೆ ನಿಂಗಪ್ಪ ಕಂಬಗಲ್. ಸಾ: ವಟಪರವಿ ಇವರು ಠಾಣೆಗೆ
ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇ, ಇಂದು ದಿ:30-05-16 ರಂದು ಮಧ್ಯಾಹ್ನ ನಾನು ಮತ್ತು
ನಮ್ಮೂರಿನ ಲಕ್ಷ್ಮಣ ಹರಿಜನ ಇಬ್ಬರೂ ಕೂಡಿ ಕೊಪ್ಪಳದಲ್ಲಿ ನಮ್ಮ ಕೆಲಸ ಮುಗಿಸಿಕೊಂಡು ವಾಪಾಸ್
ನಮ್ಮ ಊರಿಗೆ ಹೋಗಲು ಅಂತಾ ಕ್ರೂಷರ್ ನಂ: ಕೆಎ-37/ಎ-3850 ನೇದ್ದರಲ್ಲಿ ಕುಳಿತು
ಹೋಗುವಾಗ ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಕೊಡದಾಳ
ಕ್ರಾಸ್ ಹತ್ತಿರ ನಾವು ಕುಳಿತಿದ್ದ ಕ್ರೂಷರ್ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಹಾಗೂ
ಅಲಕ್ಷ್ಯತನದಿಂದಾ ಓಡಿಸುತ್ತಾ ವಾಹನವನ್ನು ನಿಯಂತ್ರಿಸದೇ ರಸ್ತೆ ಬದಿ ಪಲ್ಟಿ ಮಾಡಿದ್ದರಿಂದ ಈ
ಅಪಘಾತದಲ್ಲಿ ನನಗೆ ಭಾರಿ ಪೆಟ್ಟುಗಳಾಗಿದ್ದು, ಲಕ್ಷ್ಮಣ ನಿಗೆ ಸಾದಾ ಗಾಯಗಳಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ.
0 comments:
Post a Comment