1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 279, 304(ಎ) ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀ ಚಳ್ಳಗೊಳ್ಳ ಸತ್ಯನಾರಾಯಣ ತಂದೆ ವೀರರಾಜು, ವಯಸ್ಸು 45 ವರ್ಷ, ಫಿರ್ಯಾದಿಯನ್ನು
ನೀಡಿದ್ದು, ದಿನಾಂಕ:- 31-05-2016 ರಂದು ಮಧ್ಯಾಹ್ನ 2:00 ಗಂಟೆಯ ಸುಮಾರಿಗೆ ಯಾರೋ ನನ್ನ ಮಾವ ಕೃಷ್ಣರಾವ್
ಇವರ ಮೊಬೈಲ್ ನಿಂದ ನನಗೆ ಕರೆ ಮಾಡಿ ಶ್ರೀರಾಮನಗರದಲ್ಲಿ ಕಾರು ಅಪಘಾತದಲ್ಲಿ ಈ ಮೊಬೈಲ್ ಹೊಂದಿರುವ
ವ್ಯಕ್ತಿ ಹಾಗೂ ಆತನ ಸಂಗಡ ಇನ್ನೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ
ಅಂತಾ ತಿಳಿಸಿದರು. ಕೂಡಲೇ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಕೃಷ್ಣಾರಾವ್ ಇವರ ಟಾಟಾ ಜೆಸ್ಟ್
ಕಾರ್ ನಂಬರ್: ಕೆ.ಎ-37/ ಎಂ-8598 ನೇದ್ದು ರಸ್ತೆಯಲ್ಲಿ ಪಲ್ಟಿ ಹೊಡೆದು ರಸ್ತೆಯ ಪಕ್ಕ ಒಂದು ಮನೆಯ
ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ನಂ: ಕೆ.ಎ-36/ ಟಿ.ಬಿ-3850 ನೇದ್ದಕ್ಕೆ ಟಕ್ಕರ್ ಆಗಿ ಅಪಘಾತವಾಗಿ
ಡ್ರೈವರ್ ಸೀಟ್ ಪಕ್ಕದಲ್ಲಿ ಕುಳಿತಿದ್ದ ಜಿ. ದೇವೇಂದ್ರರಾವ್ ಈತನು ಕಾರಿನಲ್ಲಿಯೇ ಮೃತಪಟ್ಟಿದ್ದು,
ಆತನಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಎದೆಗೆ ಹಾಗೂ ಕೈಗೆ ಗಾಯಗಳಾಗಿದ್ದವು. ಕೃಷ್ಣರಾವ್
ಈತನು ಕಾರನ ಪಕ್ಕದಲ್ಲಿ ಹೊರಗಡೆ ಮೃತಪಟ್ಟಿದ್ದನು. ಆತನಿಗೆ ತಲೆಗೆ ಮತ್ತು ಎದೆಗೆ ತೀವ್ರ ಒಳಪೆಟ್ಟಾಗಿ
ಎರಡೂ ಕಿವಿಗಳಲ್ಲಿ ರಕ್ತ ಬಂದಿತ್ತು. ಅಲ್ಲಿ ಸೇರಿದ್ದ ಜನರಿಗೆ ವಿಚಾರಿಸಲು ತಿಳಿದಿದ್ದೇನೆಂದರೆ,
ಮಧ್ಯಾಹ್ನ 1:45 ಗಂಟೆಯ ಸುಮಾರಿಗೆ ಕೃಷ್ಣಾರಾವ್ ಮತ್ತು ದೇವೇಂದ್ರರಾವ್ ಇಬ್ಬರೂ ಕೂಡಿಕೊಂಡು ಕಾರಿನಲ್ಲಿ
ಗಂಗಾವತಿ-ಸಿಂಧನೂರು ಮುಖ್ಯ ರಸ್ತೆಯಲ್ಲಿ ಸಿಂಧನೂರು ಕಡೆಯಿಂದ ಗಂಗಾವತಿ ಕಡೆಗೆ ಬರುತ್ತಿದ್ದು, ಕಾರನ್ನು
ನಡೆಯಿಸುತ್ತಿದ್ದ ಕೃಷ್ಣಾರಾವ್ ಈತನು ಕಾರನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು
ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಎಡಗಡೆ ಪೂಲ್ ಗೆ ಟಕ್ಕರ್ ಆಗುವುದನ್ನು ತಪ್ಪಿಸಲು
ಒಮ್ಮೆಲೇ ಕಾರನ್ನು ಬಲಗಡೆ ತಿರುಗಿಸಿಕೊಂಡಿದ್ದರಿಂದ ಕಾರು ಪಲ್ಟಿ ಹೊಡೆದು ಸುಮಾರು 70 ಅಡಿಗಳಷ್ಟು
ಮುಂದೆ ರಸ್ತೆಯ ಬಲಗಡೆ ಬಂದು ಒಂದು ಮನೆಯ ಮುಂದೆ ನಿಲ್ಲಿಸಿದ್ದ ಟ್ರ್ಯಾಕ್ಟರ್ ಗೆ ಟಕ್ಕರ್ ಕೊಟ್ಟು
ಅಪಘಾತವಾಗಿದ್ದು, ಅಪಘಾತದ ರಭಸಕ್ಕೆ ದೇವೇಂದ್ರರಾವ್ ನು ಕಾರಿನ ಒಳಗಡೆ ಕುಳಿತಲ್ಲಿಯೇ ಮೃತಪಟ್ಟಿದ್ದು,
ಕೃಷ್ಣಾರಾವ್ ನು ಕಾರಿನಿಂದ ಇಳಿದು ಹೊರಗಡೆ ಬಂದ ತಕ್ಷಣ ಮೃತಪಟ್ಟಿರುತ್ತಾನೆ ಅಂತಾ ತಿಳಿಯಿತು.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 150/2016 ಕಲಂ: 279, 337, 338, 304(ಎ) ಐ.ಪಿ.ಸಿ :.
ದಿನಾಂಕ:
31-05-2016 ರಂದು ರಾತ್ರಿ 09-30 ಗಂಟೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ
ಬಂದ ಮೇರೆಗೆ ಗಾಯಾಳು ಹನುಮಂತಪ್ಪ ಗುರಿಕಾರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ದಿನಾಂಕ : 31-05-2016 ರಂದು ಗುಮಗೇರಿಯಲ್ಲಿ ನಮ್ಮ ಸಂಬಂಧಿಕರ ದೇವರ
ಕಾರ್ಯವಿದ್ದ ಕಾರಣ ನಾನು ಮತ್ತು ನಮ್ಮೂರ ಹೊಸೂರಪ್ಪ ಮತ್ತು ಶ್ಯಾಮರಾಜ ರವರು ಕೂಡಿಕೊಂಡು ನಮ್ಮ ಊರಿನಿಂದ
ಗುಮಗೇರಿಗೆ ಹೋಗುವ ಕುರಿತು ಶ್ಯಾಮರಾಜ ಬೆವಿನಾಳ ಇತನ ಹಿರೋ ಮೋ.ಸೈ ಇಂಜಿನ್ ನಂ :
MBLJC59ADFGB00734 ನೇದ್ದನ್ನು ತೆಗೆದುಕೊಂಡು ಹಿರೇಮನ್ನಾಪೂರ ದಾಟಿ ಗುಮಗೇರಿ ಕಡೆಗೆ ಹೋಗುತ್ತಿದ್ದಾಗ
ರಾತ್ರಿ 8-45 ಗಂಟೆ ಸುಮಾರಿಗೆ ಗುಮಗೇರಿ ಇನ್ನೂ ಸ್ವಲ್ಪ ದೂರ ಇರುವಾಗ್ಗೆ ಸದರಿ ನಮ್ಮ ಮೋ.ಸೈ. ನಡೆಸುತ್ತಿದ್ದ
ಶ್ಯಾಮರಾಜ ಈತನು ಮೋ.ಸೈ.ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟು ಸದರ ರಸ್ತೆಯಲ್ಲಿ
ಹೋಗುತ್ತಿದ್ದ 3 ಜನ ಪಾದಚಾರಿಗಳ ಪೈಕಿ ದೇವಪ್ಪ ತಂದೆ ಬಸಣ್ಣ ನೀರಲೂಟಿ ಇತನಿಗೆ ಟಕ್ಕರ್ ಮಾಡಿದ್ದು
ಆಗ ಮೋ.ಸೈ. ಸೈಕಲ್ ಮೇಲಿನ ನಿಯಂತ್ರಣ ತಪ್ಪಿ ನಮ್ಮ ಎದರುಗಡೆಯಿಂದ ಬರುತ್ತಿದ್ದ ಮೋ.ಸೈ. ನಂ
ಕೆಎ-37-ಡಬ್ಲು-4122 ನೇದ್ದರ ಸವಾರನಿಗೆ ಟಕ್ಕರ್ ಮಾಡಿ ಅಪಘಾತಪಡಿಸಿ ಮೋ.ಸೈ. ಕೆಡವಿದ್ದರಿಂದ ಅದರಲ್ಲಿದ್ದ
ನಾನು ಮತ್ತು ಹೊಸೂರಪ್ಪ ಗಾಯಗೊಂಡಿದ್ದು ಹಾಗೂ ಸದರಿ ಶ್ಯಾಮರಾಜ ಇತನು ತೀವ್ರಗಾಯಗೊಂಡು ಸ್ಥಳದಲ್ಲಿಯೇ
ಮೃಪಟ್ಟಿದ್ದು ನಾವು ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾದೆವು. ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
106/2016 ಕಲಂ: 186, 323, 353, 504, 506 ಸಹಿತ 34 ಐ.ಪಿ.ಸಿ. ಹಾಗೂ ಕಲಂ: 4 ಸಹಿತ 3 ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿಯ
ಮೇಲೆ ಹಿಂಸಾಚಾರವನ್ನು ಮತ್ತು ವೈದ್ಯೋಪಚಾರ ಸಂಸ್ಥೆಗಳ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸುವ
ಅಧಿನಿಯಮ 2009
ಫಿರ್ಯಾದಿದಾರರಾದ ಡಾ|| ಈಶ್ವರ ಶಿ. ಸವಡಿ ಮುಖ್ಯ ವೈಧ್ಯಾದಿಕಾರಿಗಳು ಉಪವಿಭಾಗ ಆಸ್ಪತ್ರೆ
ಗಂಗಾವತಿ ರವರು ಫಿರ್ಯಾದಿಯನ್ನು ಸಲ್ಲಿಸಿದ್ದು, ದಿನಾಂಕ 31-05-2016 ರಂದು
ಮಧ್ಯಾಹ್ನ 1-30 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಯಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆಯ ರಾಷ್ಟ್ರೀಯ
ಕಾರ್ಯಕ್ರಮದ ನಿಮಿತ್ಯ ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಕೈಕೊಂಡು ಅವರಿಗೆ ಆಸ್ಪತ್ರೆಯಲ್ಲಿ ಬೆಡ್
ಗಳ ಕೊರತೆ ಇದ್ದುದರಿಂದ ನೆಲದ ಮೇಲೆ ಹಾಸಿಗೆ ಹಾಸಿ ಮಲಗಿಸುತ್ತಿದ್ದು, ಆ ಸಮಯದಲ್ಲಿ ಅಲ್ಲಿಗೆ ಬಂದ
ಶಹಾಬುದ್ದೀನ್ ಮತ್ತಿತರೇ ಮೂರು ಜನರು ಅನಧೀಕೃತವಾಗಿ ಆಸ್ಪತ್ರೆಯಲ್ಲಿ ನುಗ್ಗಿ ಏಕಾಏಕಿ ನನಗೆ ಏಕವಚನದಲ್ಲಿ
“ಏಯ್ ಏನ್ ಡ್ಯೂಟಿ ಮಾಡ್ತೀ ನೀನು ಭೋಸುಡಿಕೆ” ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು
ಅಲ್ಲದೇ ಜೀವದ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಇರುತ್ತದೆ. ಕಾರಣ ಸದರಿ ಶಹಾಬುದ್ಧೀನ್ ಹಾಗೂ ಮತ್ತಿತರ ಮೂವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು
ಮುಂತಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment