1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 130/2016 ಕಲಂ: 78(3) Karnataka Police Act.
ದಿನಾಂಕ 07-05-2016 ರಂದು ರಾತ್ರಿ 07-30 ಗಂಟೆಗೆ ಮಾನ್ಯ ಪಿ.ಎಸ್.ಐ
ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು
ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ ಹನಮಗಿರಿ
ಗ್ರಾಮದಲ್ಲಿನ ಮಸೀದೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ
ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-108, 63, ಪಿ.ಸಿ-116,117,92,430,163,167,161,
ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್
ಮಾಡಿ 7
ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 5500=00
ರೂ, ಹಾಗೂ 52
ಇಸ್ಪೆಟ್ ಎಲೆಗಳು ಹಾಗೂ ಬರಕಾವನ್ನು ಪಂಚನಾಮೆ ಕಾಲಕ್ಕೆ ಜಪ್ತಿ
ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 19/2016 ಕಲಂ: 279, 338 ಐ.ಪಿ.ಸಿ:
ದಿನಾಂಕ:-07.05.2016 ರಂದು ಬೆಳೆಗ್ಗೆ 11:45 ಗಂಟೆ ಸುಮಾರಿಗೆ ಬೇವೂರ ಗ್ರಾಮದ ಟಿಚರ್ಸ್ ಕ್ವಾಟ್ಸರ್್
ಹಿಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಇಸ್ಪಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ
ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿ ನಂ: 1 ಮತ್ತು 2 ನೇದ್ದವರನ್ನು
ಹಿಡಿದು ಸಿಕ್ಕಿಬಿದ್ದ ಆರೋಪಿತರಿಂದ 700/-ರೂ ನಗದು ಹಣ ಹಾಗೂ 52 ಇಸ್ಪಟ್ ಎಲೆಗಳನ್ನು ಜಪ್ತ ಮಾಡಿಕೊಂಡು
ಬಂದಿದ್ದು ಇರುತ್ತದೆ ಹಾಗೂ ಆರೋಪಿ ನಂ 3 ರಿಂದ 5 ನೇದ್ದವರು ಓಡಿಹೋಗಿದ್ದು ಇರುತ್ತದೆ ಅಂತಾ ಇತ್ಯಾದಿ
ವರದಿ ಸಲ್ಲಿಸಿದ ಆದಾರದ ಮೇಲಿಂದ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ,
3] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 279, 337 ಐ.ಪಿ.ಸಿ:
ದಿನಾಂಕ 07-05-2016 ರಂದು ಪಿರ್ಯಾದುದಾರರು ತಮ್ಮನಾದ ಹನುಮಂತನು ಮೋ.ಸೈ ನಂ.ಕೆ.ಎ.37/ವಿ.4875 ನೇದ್ದರಲ್ಲಿ ಕೊಪ್ಪಳ-ಗಂಗಾವತಿ ರಸ್ತೆಯ ಮೇಲೆ ಬೂದಗುಂಪಾ ಕ್ರಾಸನಲ್ಲಿ ಬರುತ್ತಿರುವಾಗ ಬೂದಗುಂಪಾ ಕಡೆಯಿಂದ ಒಬ್ಬಲಾರಿ ಚಾಲಕನು ತನ್ನ ಲಾರಿ ನಂ.ಕೆ.ಎ35/ಎ4136 ನೇದ್ದನ್ನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಲಾರಿಯನ್ನು ಬಲಗಡೆಗೆ ತಿರುಗಿಸಿದಾಗ ಪಿರ್ಯಾದುದಾರರ ತಮ್ಮನ ಮೋ.ಸೈ.ಡಿಕ್ಕಿಕೊಟ್ಟು ಅಪಾತ ಮಾಡಿದ್ದರಿಂದ ಪಿರ್ಯಾದುದಾರರ ತಮ್ಮನಿಗೆ ಮುಖಕ್ಕೆ ,ತಲೆಗೆ ಮತ್ತು ಎಡಗಾಲಿಗೆ ಗಾಯ ಒಳಪೆಟ್ಟುಗಳಾಗಿರುತ್ತವೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
0 comments:
Post a Comment