1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 131/2016 ಕಲಂ: 78(3) Karnataka Police Act.
ದಿನಾಂಕ 08-05-2016 ರಂದು ರಾತ್ರಿ 07-15 ಗಂಟೆಗೆ
ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು
ಪಂಚನಾಮೆಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ ಕುಷ್ಟಗಿ ಠಾಣಾ ವ್ಯಾಪ್ತಿಯ
ಹಿರೇಮನ್ನಾಪೂರ ಗ್ರಾಮದ ಶರಣ ಬಸವೇಶ್ವರ ಗುಡಿಯ ಸಾರ್ವಜನಿಕ ಸ್ಥಳದ ಹತ್ತಿರ ಅಂದರಬಾಹರ ಎಂಬ
ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿರ್ಯಾಧಿದಾರರು ಮತ್ತು ಹೆಚ್.ಸಿ-63, ಪಿ.ಸಿ-92,117,161,240 ಹಾಗೂ ನಮ್ಮ ಸರಕಾರಿ ಜೀಪ ನಂ: ಕೆ.ಎ-37-ಜಿ-292 ನೇದ್ದರಲ್ಲಿ ಮತ್ತು ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್
ಮಾಡಿ 5
ಜನ ಆರೋಪಿತರನ್ನು ಹಾಗೂ ಇಸ್ಪೆಟ್ ಜೂಜಾಟದ ಒಟ್ಟು ಹಣ 3050=00 ರೂ,
ಹಾಗೂ 52
ಇಸ್ಪೆಟ್ ಎಲೆಗಳು ಹಾಗೂ ಒಂದು ನ್ಯೂಸ್ ಪೇಪರರನ್ನು ಪಂಚನಾಮೆ ಕಾಲಕ್ಕೆ
ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಹಾಜರು ಪಡಿಸಿದ ಮೇರೆಗೆ ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ
ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ:
/2016 ಕಲಂ: 279, 337, 338 ಐ.ಪಿ.ಸಿ:
ದಿನಾಂಕ:
08-05-2016
ರಂದು ಮುಂಜಾನೆ 10-45 ಗಂಟೆಯ ಸುಮಾರಿಗೆ ಆರೋಪಿತನು ತಾನು
ಚಲಾಯಿಸುತ್ತಿದ್ದ ಕಾರ ನಂ: ಕೆ.ಎ-51/ಸಿ-6375 ನೇದ್ದನ್ನು ಕೊಪ್ಪಳ ಕಡೆಯಿಂದ ಯಲಬುರ್ಗಾ ಕಡೆಗೆ
ಅತೀಜೋರಾಗಿ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಸಂಗನಾಳ ಸೀಮಾದಲ್ಲಿ ಬರುವ ಬೂನ ಹಳ್ಳದ
ಬ್ರಿಡ್ಜ ಮೇಲೆ ಪಶ್ಚಿಮ ಭಾಗದ ದಂಡೆಗೆ ನಿಲ್ಲಿಸಿದ ಕಲ್ಲ್ಲುಗಳಿಗೆ ಜೋರಾಗಿ ಠಕ್ಕರ ಕೊಟ್ಟು
ಅಪಘಾತ ಪಡಿಸಿದ್ದರಿಂದ ಕಾರ ಪಲ್ಟಿಯಾಗಿ ಸ್ವಲ್ಪು ದೂರದಲ್ಲಿ ಹೋಗಿ ರಸ್ತೆಯ ಎಡಮಗ್ಗಲು ಇರುವ ತೆಗ್ಗಿನಲ್ಲಿ
ಬಿದ್ದಿದ್ದರಿಂದ ಕಾರಿನಲ್ಲಿದ್ದ ಪಿರ್ಯಾದಿದಾರನ ಬಲ ಕಣ್ಣಿನ ಕೆಳಗೆ, ಅದರ ಬಲಭಾಗದಲ್ಲಿ ರಕ್ತಗಾಯ, ಬಲ ತಲೆಯ ಮೇಲೆ ಭಾರಿ
ಸ್ವರೂಪದ ರಕ್ತಗಾಯ, ಎಡಗೈಯ ಮೊಣಕೈ ಹೊರ ಭಾಗದಲ್ಲಿ, ಎಡಗೈ ಮುಂಗೈ ಮೇಲೆ ತೆರಚಿದ ನಮೂನೆಯ
ಗಾಯವಾಗಿದ್ದು,
ಆರೋಪಿತನಾದ ಕಾರ ಚಾಲಕ ಮಕ್ಕಣ್ಣ ಇಟಿ ಈತನ ತಲೆಗೆ ಒಳಪೆಟ್ಟಾಗಿದ್ದು, ಬಲ ಕಪಾಳ ಮೇಲೆ ತೆರಚಿದ ನಮೂನೆಯ ಗಾಯವಾಗಿದ್ದು, ಎಡಗಾಲ ತೊಡೆಗೆ ಭಾರಿ ಸ್ವರೂಪದ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ
ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment