1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 48/2016 ಕಲಂ: 143, 147, 323, 324, 504, 307 ಸಹಿತ 149 :.
ದಿನಾಂಕ:05-05-2016 ರಂದು 10-30 ಪಿಎಂಕ್ಕೆ ಗಾಯಗೊಂಡು ಠಾಣೆಗೆ ಬಂದ ಹನುಮಪ್ಪ ತಂದೆ ಯಮನಪ್ಪ ಹನುಮನಹಟ್ಟಿ ಸಾ:ವಡ್ಡರಹಟ್ಟಿ
ಈತನಿಗೆ ಚಿಕಿತ್ಸೆ ಕುರಿತು ಕುಕನೂರ ಸರ್ಕಾರೀ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಸದರಿಯವನು ಚಿಕಿತ್ಸೆ
ಕುರಿತು ಕೊಪ್ಪಳಕ್ಕೆ ಹೋಗಿ ಅಲ್ಲಿ ತಮ್ಮ ಹಿರಿಯರಿಗೆ ವಿಚಾರಿಸಿ, ಘಟನೆ ಬಗ್ಗೆ ದೂರು ನೀಡುವುದಾಗಿ
ತಿಳಿಸಿ, ಇಂದು ಬೆಳಿಗ್ಗೆ 10-00 ಗಂಟೆಗೆ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ, ವಿಚಾರಿಸಿದ್ದು,
ಸದರಿ ಪಿರ್ಯಾದಿದಾರನು ಸಾಯಂಕಾಲ 6-00 ಗಂಟೆಗೆ ಒಂದು ಲಿಖಿತ ದೂರನ್ನುನೀಡಿದ್ದು ಅದರ ಸಾರಾಂಶವೇನೆಂದರೆ,
ತಾನು ಬೆಂಗಳೂರಿನಲ್ಲಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹೆಚ್.ಸಿ. ಅಂತಾ ಕರ್ತವ್ಯನಿರ್ವಹಿಸುತ್ತಿದ್ದು,
ತಾನು ಆರೋಪಿ ನಂ: 6ನೇದ್ದವಳೊಂದಿಗೆ ಸನ್ 2012 ರಲ್ಲಿ ಮದುವೆಯಾಗಿದ್ದು, ಆಕೆಯು ಹಠಮಾರಿ ಸ್ವಭಾವದವಳಿದ್ದು,
ತನಗೆ ವಿನಾಕಾರಣ ಕೊಪ್ಪಳ ಜಿಲ್ಲೆಗೆ ವರ್ಗಮಾಡಿಕೊಂಡು ಬಾ ಅಂತಾ ಹಿಂಸೆ ನೀಡುತ್ತಿದ್ದುದಲ್ಲದೇ, ತಾನು
ಕರ್ತವ್ಯಕ್ಕೆಹೋದಾಗ ದಿನಾಂಕ:18-7-2015 ರಂದು ಹೇಳದೇ ಕೇಳದೇ ತಮ್ಮ ತವರೂರಾದ ಕುಕನೂರಿಗೆ ಬಂದಿದ್ದು,
ಆಕೆಯನ್ನು ಕರೆದುಕೊಂಡು ಬರಲು ಹಿರಿಯರ ಮುಖಾಂತರ ಬುದ್ಧಿಹೇಳಿದರೂ ಕೇಳದೇ ಅದೇ ರೀತಿ ಹಠ ಮಾಡಿಕೊಂಡು
ಕೊಪ್ಪಳಕ್ಕೆ ವರ್ಗಮಾಡಿಕೊಂಡು ಬಂದರೆ ಮಾತ್ರ ಸಂಸಾರಿಕ ಜೀವನ ಮಾಡುತ್ತೇನೆ ಇಲ್ಲದಿದ್ದರೆ ಇಲ್ಲಾ ಅಂತಾ
ಅಂದು ತವರುಮನೆಯಲ್ಲಿ ಉಳಿದುಕೊಂಡಿದ್ದು, ತಾನು ನಿನ್ನೆ ದಿನಾಂಕ:5-5-16 ರಂದು ಸಾಯಂಕಾಲ 7-00 ಗಂಟೆಗೆ
ಕುಕನೂರಗೆ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲು ಬಂದಾಗ ಆರೋಪಿತರೆಲ್ಲರೂ ಕೂಡಿ ಪಿರ್ಯಾದಿಗೆ ಆವಾಚ್ಯವಾಗಿ
ಬೈಯ್ದಾಡಿ, ಎದೆಯ ಮೇಲಿನ ಅಂಗಿ, ಕೂದಲು ಹಿಡಿದು ಕೊಲೆ ಮಾಡಬೇಕೆಂದು ಕಟ್ಟಿಗೆಯಿಂದ
ಹಿಡಿಗಾತ್ರದ ಕಬ್ಬಿಣದ ರಾಡಿನಿಂದ ಕಲ್ಲಿನಿಂದ ತನ್ನ ಬೆನ್ನಿಗೆ, ಹಣೆಗೆ ರಟ್ಟೆ ಭುಜಕ್ಕೆ ಹೊಡೆದಿರುತ್ತಾರೆ.
ಅಲ್ಲದೇ, ಆರೋಪಿ ಲಕ್ಷ್ಮವ್ವ ಮತ್ತು ಈರಪ್ಪ ಇವರು ಬಾಯಿಗೆ 3-4 ಬಾರಿ ಕೈಯಿಂದ ಗುದ್ದಿ ಗಾಯಗೊಳಿಸಿದ್ದು,
ಚಿಕಿತ್ಸೆ ಕುರಿತು ತಾನು ಕುಕನೂರ ಸರ್ಕಾರೀ ಆಸ್ಪತ್ರೆಗೆ ದಾಖಲಾದಾಗ ತನ್ನ ತಂದೆ ಬಂದು ತನ್ನನ್ನು
ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳಕ್ಕೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ತಾನು ಚಿಕಿತ್ಸೆ
ಪಡೆದು ಈಗ ತಡವಾಗಿ ದೂರು ನೀಡುತ್ತಿದ್ದು, ಕಾರಣ ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು
ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ:
19/2016 ಕಲಂ: 279, 338 ಐ.ಪಿ.ಸಿ:
ದಿನಾಂಕ. 06-05-2016
ರಂದು ಸಂಜೆ 5-00 ಗಂಟೆಗೆ ಕೊಪ್ಪಳದ
ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ
ಗಾಯಗೊಂಡ ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು
ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 06-05-2016
ರಂದು ಸಂಜೆ 4-30 ಗಂಟೆಯ ಸುಮಾರಿಗೆ
ಫಿರ್ಯಾದಿ ಮತ್ತು ಅವರ ಅಣ್ಣ ರಾಜಾಸಾಬ ಇಬ್ಬರೂ ಮನೆಯಿಂದ ನಡೆದುಕೊಂಡು ತರಕಾರಿಯನ್ನು ತರಲು
ಸಾರ್ವಜನಿಕ ಮೈದಾನದ ಕಡೆಗೆ ಹೊಗಲು ಸಾಲರಜಂಗ್ ರಸ್ತೆಯ ಮೇಲೆ ಗವಿಸಿದ್ದಪ್ಪ ಮುಂಡರಗಿ ಇವರ ಮನೆಯ
ಮುಂದೆ ಹೊಗುತ್ತಿರುವಾಗ ಹಿಂದಿನಿಂದ ಮೋಟಾರ್ ಸೈಕಲ್ ನಂ. KA-36/EB-5433 ನೆದ್ದರ ಸವಾರ ಮಲ್ಲೇಶ ಚೌಹಾಣ ಇತನು ಮೋಟಾರ್ ಸೈಕಲ್ ನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಅಣ್ಣನಿಗೆ ಟಕ್ಕರಮಾಡಿ ಅಪಘಾತ ಮಾಡಿದ್ದು, ಇದರಿಂದ ರಾಜಾಸಾಬ ಇತನಿಗೆ ಎಡಗಾಲ ಮೊಣಕಾಲಿಗೆ ಭಾರಿ ಒಳಪೆಟ್ಟು ಆಗಿ ಕಾಲು ಮುರಿದು ಬಲಗಾಲ
ಮೊಣಕಾಲಿಗೆ ಮತ್ತು ಎಡಗಣ್ಣಿನ ಹತ್ತಿರ ರಕ್ತಗಾಯ ವಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆಯ
ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment