Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, May 10, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 88/2016 ಕಲಂ: 78(1)(ಎ)(6) Karnataka Police Act.
ದಿನಾಂಕ 09-05-2016 ರಂದು 22-00 ಗಂಟೆಗೆ ಶ್ರೀ ರಾಮಣ್ಣ ನಾಯ್ಕ ಪಿ ಎಸ್ ಐ (ಅ.ವಿ) ನಗರ ಪೊಲೀಸ್ ಠಾಣೆ ಗಂಗಾವತಿ.  ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ  ಇಬ್ಬರೂ ವ್ಯಕ್ತಿಗಳನ್ನು ಹಾಜರಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ,   ಇಂದು ದಿನಾಂಕ: 09-05-2016 ರಂದು ರಾತ್ರಿ 20-30 ಗಂಟೆಗೆ ಆರೋಪಿತರಾದ 1]  ಜಯರಾಮ ತಂದೆ ಯಂಕಪ್ಪ ವಯಾ: 36 ವರ್ಷ ಜಾ: ಉಪ್ಪಾರ ಉ: ಸೂಪರವೈಸರ್ ಸಾ: ಜುಲೈ ನಗರ ಗಂಗಾವತಿ , 2] ಬಸವರಾಜ ತಂದೆ ಪರಶುರಾಮ ಉಪ್ಪಾರ ವಯಾ: 18 ವರ್ಷ ಜಾ: ಉಪ್ಪಾರ ಉ: ಮೊಬೈಲ್ ಶಾಪ ಕೆಲಸ ಸಾ: ಅಮರಭಗತ್ ಸಿಂಗ್ ನಗರ ಗಂಗಾವತಿ ಇವರು ರಾಯಚೂರು ರಸ್ತೆಯಲ್ಲಿರುವ ರಿಲಯನ್ಸ್ ಪೆಟ್ರೋಲ ಬಂಕ್ ಹತ್ತಿರ , ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20  ಕ್ರಿಕೇಟನ ಕಿಂಗ್ಸ ಇಲೆವೆನ್ ಪಂಜಾಬ್  &  ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಮೊಬೈಲ್ ಮೇಸೇಜಗಳ   ಮೂಲಕ ಕ್ರಿಕೇಟ ಜೂಜಾಟದಲ್ಲಿ ತೊಡಗಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಕ್ರಿಕೇಟ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 5,200-00 ರೂ ನಗದು ಹಣ, ಜೂಜಾಟ ಆಡಲು ಬಳಸಿದ ಒಂದು ಸ್ಯಾಮಸಂಗ್ ಮೊಬೈಲ ಹಾಗೂ ಸೋನಿ ಮೊಬೈಲ್, ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20 ಕ್ರಿಕೇಟ ವೇಳಾಪಟ್ಟಿ ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆಯುತ್ತಿರುವ ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20  ಕ್ರಿಕೇಟನ ಕಿಂಗ್ಸ ಇಲೆವೆನ್ ಪಂಜಾಬ್  &  ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡಗಳ ನಡುವೆ ನಡೆದ  ಕ್ರಿಕೇಟ್ ಪಂದ್ಯದ ಮೇಲೆ ಜೂಜಾಟದಲ್ಲಿ ತೊಡಗಿದ್ದರಿಂದ ಸದರಿಯವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ: 143, 147, 148, 341, 323, 324, 504, 506 ಸಹಿತ 149 ಐ.ಪಿ.ಸಿ:

ದಿನಾಂಕ : 10-05-2016 ರಂದು 00-10 ಗಂಟೆಯ ಸುಮಾರಿಗೆ ಫಿರ್ಯಾದಿದಾರರಾದ ಶ್ರೀ ಲಕ್ಷ್ಮಣ್ಣ ತಂದೆ ದೇವಣ್ಣ ಹಾದಿಮನಿ ವಯ 32 ವರ್ಷ ಜಾತಿ ನಾಯಕ . ಒಕ್ಕಲುತನ ಸಾ. ಉಳೇನೂರ ತಾ.ಗಂಗಾವತಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಕೊಟ್ಟಿದ್ದು ಅದರ ಸಾರಾಂಶವೆನೆಂದರೆ,, ನಾನು ತಂದೆತಾಯಿಗೆ ಒಟ್ಟು 2 ಜನ ಮಕ್ಕಳಿದ್ದು ಅದರಲ್ಲಿ ನನ್ನ ಅಣ್ಣ ದೊಡ್ಡ ಲಕ್ಷ್ಮಣ್ಣ ಹಾಗೂ ಕೊನೆಯವನು ನಾನು ಇರುತ್ತೇನೆ. ನಮ್ಮ ಮನೆಯ ಸಮೀಪದಲ್ಲಿ ಹುಲಿಗೆಪ್ಪ ತಂದೆ ಈರಣ್ಣ ಕಾರಟಗಿ ರವರ ಮನೆ ಇದ್ದು, ಇವರಿಗೂ ಮತ್ತು ನಮಗೂ ತಾಲೂಕ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಚುನಾವಣೆ ನಡೆದಾಗಿನಿಂದ ನಾವು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಕ್ಕೆ ನನ್ನ ವಿರುದ್ದ ವೈಶಮ್ಯ ಇರುತ್ತದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನನ್ನ ಹೆಂಡತಿಯಾದ `ದೇವಮ್ಮಳನ್ನು ನಿಲ್ಲಿಸಿದ್ದು ಅದರಲ್ಲಿ ನಾವು ಗೆಲುವು ಸಾಧಿಸಿದ್ದರಿಂದ ನಮ್ಮಗಳ ವಿರುದ್ದ ಪದೇ ಪದೇ ಹಗೆ ಸಾಧಿಸುತ್ತಿರುತ್ತಾರೆ.     ದಿವಸ  ದಿನಾಂಕ : 09-05-2016 ರಂದು ನಮ್ಮೂರಿನಲ್ಲಿ ಕಲ್ಲಿನಾಥೇಶ್ವರ ದೇವರ ಜಾತ್ರೆ ಇದ್ದುದ್ದರಿಂದ ಜಾತ್ರೆಯಲ್ಲಿ 17 ಜೊತೆ ಸಾಮೂಹಿಕ ವಿವಾಹಗಳನ್ನು ನಡೆಸಿದ್ದರು. ಸದರಿ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದು ಮದ್ಯಾಹ್ನ 12 ಗಂಟೆಯ ಸುಮಾರಿಗೆ  ನಾನು ಜನರಿಗೆ ಊಟ ಬಡಿಸುತ್ತಿದ್ದಾಗ ನಮ್ಮೂರಿನ 1) ಹುಲಿಗೆಪ್ಪ ತಂದೆ ಈರಣ್ಣ ಕಾರಟಗಿ ಈತನು ಬಂದು ಲೇ ಸೂಳೇ ಮಗನ ಲ್ಲಿಯಾಕೆ ಕುಂದ್ರಿಸಿದಿ ಅಂತಾ ಅಂದು ಪತ್ರೊಳ್ಳಿ ಅಲೆಯನ್ನು ಕಿತ್ತೊಗೆಯ ಹತ್ತಿದ್ದು ಆಗ ನಾನು ಬೇವೂರಿನವರು ಬಂದಾರ ಯಾಕ ಬಾಯಿ ಮಾಡುತ್ತಿದಿ ಅಂದಿದ್ದಕ್ಕೆ ನನಗೆ ಕೈಯಿಂದ ಮುಖಕ್ಕೆ ಹೊಡೆದು ಕಾಲಿನಿಂದ ದ್ದನು. ನಾನು ಇವತ್ತು ಜಾತ್ರೆ ಇದೆ ನಂತರ ವಿಚಾರಿಸಿದರಾಯಿತು ಅಂತಾ ಸುಮ್ಮನಾದೆನು.   ನಂತರ ಸಾಯಂಕಾಲ 06 ಗಂಟೆಯ ಸುಮಾರಿಗೆ ನಾನು, ನನ್ನ ತಾಯಿ, ದ್ಯಾವಮ್ಮ, ತಂದೆ ದೇವಣ್ಣ, ನನ್ನ ಹೆಂಡತಿ ದೇವಮ್ಮ ಕೂಡಿಕೊಂಡು ನಮ್ಮ ಮನೆಯ ಹತ್ತಿರ ಕುಂತುಕೊಂಡಿದ್ದಾಗ ಸದರಿ ಮೇಲ್ಕಾಣಿಸಿದ 1) ಹುಲಿಗೆಪ್ಪ ತಂದೆ ಈರಣ್ಣ ಕಾರಟಗಿ 2) ಗಂಗಾಧರ ತಂದೆ ಈರಣ್ಣ ಕಾರಟಗಿ 3) ಈರಣ್ಣ ತಂಧೆ ಮಾರೆಪ್ಪ ಕಾರಟಗಿ 4) ರಾಮಣ್ಣ ತಂದೆ ಮಾರೆಪ್ಪ ಕಾರಟಗಿ 5) ಹುಲಿಗೆಪ್ಪ ತಂದೆ ಮಾರೆಪ್ಪ ಕಾರಟಗಿ 6) ಪರಸಪ್ಪ ತಂದೆ ಮಾರೆಪ್ಪ ಪಾಳೆ 7) ಹೊನ್ನೂರಪ್ಪ ತಂದೆ ಮಾರೆಪ್ಪ ಪಾಳೆ ಹಾಗೂ 8) ಫಕೀರಪ್ಪ ತಂದೆ ರಾಮಣ್ಣ ಕಾರಟಗಿ 8 ಜನರು ಸಮಾನ ಉದ್ದೇಶದಿಂದ ಕೂಡಿಕೊಂಡು ಬಂದು ಹುಲಗಪ್ಪ ತಂದೆ ಈರಣ್ಣ ಕಾರಟಗಿ ಈತನು ಲೇ ಸೂಳೇ ಮಗನ ಜಾತ್ರೆಯಲ್ಲಿ ನಮ್ಮ ವಿರುದ್ದ ಜಗಳ ಮಾಡ್ತಿದಿ ಅಂತಾ ಅವಾಛ್ಯವಾಗಿ ಬೈದು, ನೀ ಏನ್ ಗ್ರಾಮ ಪಂಚಾಯತಿ ಎಲೆಕ್ಷನ್ ದಾಗ ಗೆದ್ದಿದಿ  ಅಂದ್ರ ದೊಡ್ಡ ಲಾಡ್ ಏನ್ ನೀನು ಅಂತಾ ಬೈಯ್ದಾಡ ಹತ್ತಿದ್ದು ಆಗ ನಾನು ನಾನೇನು ದೊಡ್ಡಸ್ಥಿಕೆ ಮಾಡಕತ್ತಿಲ್ಲಪ್ಪ ನಮ್ಮ ಪಾಡಿಗೆ ನಾವು ಅದಿವಿ ಅಂತಾ ಅಂದು ಮುಂದೆ ಹೊರಡಲು ಅಲ್ಲಿದ್ದ ಹೊನ್ನೂರಪ್ಪ ತಂದೆ ಮಾರೆಪ್ಪ ಈತನು ನನ್ನನ್ನು ಮುಂದೆ ಹೋಗದಂತೆ ತೆಡೆದು ನಿಲ್ಲಿಸಿದ್ದು,, ಹುಲಿಗೆಪ್ಪ ಈತನು ಸೂಳೇ ಮಗಂದು ಬಾಳ್ ಆಗೈತಿ ಅಂತಾ ಅಂದವನೇ ತನ್ನ ಕೈಯಲ್ಲಿದ್ದ ಕೊಡಲಿಯನ್ನು ತಗೆದುಕೊಂಡು ನನ್ನ ತಲೆಗೆ ಹೊಡೆಯಲು ಬಂದಾಗ ನಾನು ಎರಡೂ ಕೈ ಅಡ್ಡ ತಂದಿದ್ದರಿಂದ ನನ್ನ ಎರಡೂ ಕೈಗಳಿಗೆ ಕೊಡಲಿ ಏಟು ಬಿದ್ದು ರಕ್ತಗಾಯವಾಗಿದ್ದು, ಅಲ್ಲದೆ ಅಲ್ಲಿಯೇ ಇದ್ದ ಗಂಗಾಧರ ತಂದೆ ಈರಣ್ಣ ಕಾರಟಗಿ ಮತ್ತು ಪರಸಪ್ಪ ತಂದೆ ಮಾರೆಪ್ಪ ಪಾಳೆ ಇವರು ಲೇ ಬೋಸುಡಿ ಮಗನ ನಮ್ಮ ವಿರುದ್ದ ಎಲೆಕ್ಷನ್ ಗೆ ನಿಲ್ಲುತ್ತಿಯನೇ ಅಂತಾ ಕೈಯಿಂದ ನನ್ನ ಮೈಕೈಗೆ ಹೊಡೆಯ ಹತ್ತಿದ್ದು ಆಗ ನಾನು ಕೆಳಗೆ ಬಿದ್ದೆನು. ಅಲ್ಲಿದ್ದ ಈರಣ್ಣ ತಂಧೆ ಮಾರೆಪ್ಪ ಕಾರಟಗಿ, ರಾಮಣ್ಣ ತಂದೆ ಮಾರೆಪ್ಪ ಕಾರಟಗಿ ಹುಲಗಪ್ಪ ಕಾರಟಗಿ ಮತ್ತು ಫಕೀರಪ್ಪ ತಂದೆ ರಾಮಣ್ಣ ಕಾರಟಗಿ ರವರು ಕಾಲಿನಿಂದ ನನ್ನ ಮೈಕೈಗೆ ಒದೆಯ ಹತ್ತಿದರು. ಸದರಿ ಘಟನೆಯನ್ನು ನೋಡಿದ ನನ್ನ ತಂದೆ, ತಾಯಿ, ಹೆಂಡತಿ ಮತ್ತು ನಮ್ಮೂರಿನ ಮಾರೆಪ್ಪ ತಂದೆ ಹನುಮಂತಪ್ಪ ಮತ್ತು ದೇವಣ್ಣ ತಂದೆ ಮಲ್ಲಪ್ಪ ಹಾದಿಮನಿ, ಹುಲಿಗೆಪ್ಪ ತಂದೆ ಹನುಮಂತಪ್ಪ ಕಂಪ್ಲಿ ರವರು ಬಂದು ನನ್ನನ್ನು ಅವರಿಂದ ಬಿಡಿಸಿಕೊಳ್ಳಲು ಸದರಿಯವರು ಲೇ ಲಕ್ಷ್ಮ್ಯಾ ಸೂಳೇ ಮಗನಾ ಇವತ್ತು ಇವರು ಬಂದ್ರು ಅಂತಾ ನೀನು ಉಳಕೊಂಡಿ ಇಲ್ಲಾ ಅಂದ್ರಾ ನಿನ್ನ ಜೀವ ತಗಿತಿದ್ವಿ, ಮುಂದೆ ಎಂದಾದರೂ ಒಂದು ದಿನ ನಿನ್ನ ಜೀವ ಸಹಿತ ಉಳಿಸುವುದಿಲ್ಲ ಅಂತಾ ಅನ್ನುತ್ತಾ ಅಲ್ಲಿಂದ ಹೋರಟು ಹೋದರು. ನಂತರ ನೋಡಿಕೊಳ್ಳಲು ನನಗೆ ಎರಡೂ ಕೈಗಳಿಗೆ ರಕ್ತಗಾಯ ಮತ್ತು ಮೂಗಿಗೆ ಮತ್ತು ಬಲಪಕ್ಕಡಿಗೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ನಾನು ನಮ್ಮೂರಿನ ಗುರುಹಿರಿಯರನ್ನು ವಿಚಾರಿಸಿ ಈಗ ತಡವಾಗಿ ಬಂದು ಫಿರ್ಯಾದಿಯನ್ನು ಸಲ್ಲಿಸಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 8 ಜನರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ನನ್ನ ವಿರುದ್ದ ದ್ವೇಷ ಸಾಧಿಸುತ್ತ ದಿನ ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮ ಮನೆಯ ಹತ್ತಿರ ಬಂದು ನನಗೆ ಕೊಡಲಿಯಿಂದ ಮತ್ತು ಕೈಯಿಂದ, ಕಾಳಿನಿಂದ ನನ್ನ ಮೈಕೈಗೆ ಹೊಡೆಬಡಿ ಮಾಡಿ ದುಖಾಃಪಾತಗೊಳಿಸಿದ 8 ಜನರ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ವಿನಂತಿ ಇರುತ್ತದೆ. ಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008