1] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 143/2016 ಕಲಂ: 87
Karnataka Police Act.
ಕುಷ್ಟಗಿ ಠಾಣಾ ವ್ಯಾಪ್ತಿಯ ಚಳಗೇರಿ ಗ್ರಾಮದ ಯುವಕ ಮಂಡಳ ಎದುರಿಗೆ
ಸಾರ್ವಜನಿಕ ಸ್ಥಳದಲ್ಲಿ ಅಂದರಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ತಿಳಿದು ಬಂದಿದ್ದು ಆಗ ಪಿ.ಎಸ್.ಐ. ಕುಷ್ಟಗಿ ಮತ್ತು ಹೆಚ್.ಸಿ-108, ಪಿ.ಸಿ-116, 161, 265, 430, 393, 105, 24 ಹಾಗೂ ಇಬ್ಬರು ಪಂಚರೊಂದಿಗೆ ಎಲ್ಲರೂ ಕೂಡಿ ಹೋಗಿ ರೇಡ್ ಮಾಡಿ 13 ಜನ
ಆರೋಪಿತರು ಸಿಕ್ಕಿದ್ದು ಇರುತ್ತದೆ.
ಸಿಕ್ಕ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ಹಣ 10790=00 ರೂ,
ಹಾಗೂ 52
ಇಸ್ಪೆಟ್ ಎಲೆಗಳು ಹಾಗೂ ಒಂದು ಹಳೆಯ ಬರಕಾ ಇವುಗಳನ್ನು ಪಂಚನಾಮೆ
ಕಾಲಕ್ಕೆ ಜಪ್ತಿ ಮಾಡಿಕೊಂಡು ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 52/2016 ಕಲಂ: 304(ಎ)
ಐ.ಪಿ.ಸಿ:.
ಫಿರ್ಯಾದಿದಾರರು ತನ್ನ ಹೆಂಡತಿಯ ಮೂರನೇ ಹೆರಿಗೆಗೆ ಅಂತಾ ಕುಕನೂರಿನ ಸರಕಾರಿ ಆಸ್ಪತ್ರೆಗೆ
ಕರೆದುಕೊಂಡು ದಿನಾಂಕ:22-04-2016 ರಂದು ಬೆಳಿಗ್ಗೆ 11.00 ಗಂಟೆಗೆ ಬಂದು ಸೇರಿಕೆ ಮಾಡಿದ್ದು ಕುಕನೂರಿನ
ವೈದ್ಯರು ಪರಿಶೀಲಿಸಿ ಅಂದೇ ರಾತ್ರಿ 9.20 ಗಂಟೆಗೆ ತನ್ನ ಹೆಂಡತಿಗೆ ಸಿಜರಿನ್ ಹೆರಿಗೆ ಮಾಡಿ ತಮ್ಮ
ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಿ ನಂತರ ನಿಮ್ಮ
ಹೆಂಡತಿಗೆ ತುಂಬಾ ಸೀರಿಯಸ್ ಆಗಿದೆ ನೀವು ಕೂಡಲೇ ಕೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು
ಮಾಡಿ ಅಂತಾ ತಿಳಿಸಿದ ಮೇರೆಗೆ ತಾನು ತನ್ನ ಹೆಂಡತಿಯ ಚಿಕ್ಕಮ್ಮಳಾದ ಅನ್ನಪೂರ್ಣಮ್ಮ ಹಾಗೂ ಆಕೆಯ ಅಣ್ಣ
ಹನುಮಂತಪ್ಪರವರೊಂದಿಗೆ ಕುಕನೂರಿನಿಂದ ದಿನಾಂಕ:08-05-16 ರಂದು ಬೆಳಿಗ್ಗೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಸೇರಿಕೆ ಮಾಡಿದಾಗ ಕೀಮ್ಸ್ ಆಸ್ಪತ್ರೆಯ ವೈದ್ಯರು ನಿಮ್ಮ ಹೆಂಡತಿಯ ಶರೀರಕ್ಕೆ(ಯೋನಿಗೆ)
ಗಾಯವಾಗಿದ್ದರಿಂದ ಇನ್ ಪ್ಯಾಕ್ಸನ್ (ಸೆಪ್ಟಿಕ್) ಆಗಿ ಹೊಟ್ಟೆಯ ಒಳಗೆ ಕೀವು ತುಂಬಿ ಈ ರೀತಿ ಆಗಿದೆ
ಅಂತಾ ಹೇಳಿ ಚಿಕಿತ್ಸೆ ಮುಂದುವರೆಸಿದ್ದು ಇಂದು ದಿನಾಂಕ:16-05-16 ರಂದು ಹೆಂಡತಿ ಸಂಜೆ
6.15 ಗಂಟೆಗೆ ಮೃತಪಟ್ಟ ಬಗ್ಗೆ ಪೋನ್ ಮಾಡಿ ತಿಳಿಸಿದ್ದರು. ತನ್ನ ಹೆಂಡತಿ ಸಾವಿಗೆ ಕಾರಣನಾದ ವೈದ್ಯರ
ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3) ಯಲಬುರ್ಗಾ
ಪೊಲೀಸ್ ಠಾಣೆ ಗುನ್ನೆ ನಂ. 51/2016 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ: 17-05-2016 ರಂದು ರಾತ್ರಿ 8-10 ಗಂಟೆ ಸುಮಾರಿಗೆ
ಪಿರ್ಯಾದಿದಾರಳು ಹಾಗೂ ಇನ್ನೂ 05 ಜನರು ಆರೋಪಿ ನಂ. 01 ನೇದವನ ಟಾಟಾ ಮ್ಯಾಜೀಕ್ ನಂ.
ಕೆಎ-26/ಎಂ-3913 ನೇದ್ದರಲ್ಲಿ ಬಳೂಟಗಿ ಬರುತಿದ್ದು, ಸದರಿ ವಾಹನವನ್ನು ಆರೋಪಿತನು
ಗಜೇಂದ್ರಗಡದಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಳೂಟಗಿ ಸೀಮಾದಲ್ಲಿಯ ನಾಗಪ್ಪ
ಕುರಿ ಇವರ ಹೋಲದ ಹತ್ತಿರ ಗಜೇಂದ್ರಗಡ-ಬಳೂಟಗಿ ರಸ್ತೆಯ ಮೇಲೆ ಬರುತ್ತಿರುವಾಗ ಅದೇಸಮಯಕ್ಕೆ
ಬಳೂಟಗಿ ಕಡೆಯಿಂದ ಆರೋಪಿ ನಂ. 02 ನೇದ್ದವನು ಕೆ.ಎಸ್.ಆರ್.ಟಿ.ಸಿ. ಬಸ್ ನಂ. ಕೆಎ-37/ಎಫ್-0480 ನೇದ್ದನ್ನು
ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಗಜೇಂದ್ರಗಡ ಕಡೆಗೆ ಹೋರಟಿದ್ದು, ಎರಡು ವಾಹನ
ಚಾಲಕರು ಒಬ್ಬರಿಗೋಬ್ಬರು ಸೈಡ್ ಕೊಡದೇ ಪರಸ್ಪರ ಮುಖಾಮುಖಿಯಾಗಿ ಡಿಕ್ಕಿ ಹೊಡೆಸಿ
ಅಪಘಾತಪಡಿಸಿದ್ದು ಇರುತ್ತದೆ. ಇದರಿಂದಾಗಿ ಗಾಯಾಳುಗಳಿಗೆ ಮತ್ತು ಆರೋಪಿ ನಂ. 01 ನೇದವನಿಗೆ ಭಾರಿ
ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಸದರಿ 02 ವಾಹನದ ಚಾಲಕರ ವಿರುದ್ದ ಸೂಕ್ತ
ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
4) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 105/2016 ಕಲಂ.
279, 338 ಐ.ಪಿ.ಸಿ:.
ಗಾಯಾಳುವಿನ ತಮ್ಮ ಮೆಹಬೂಬ ಸರ್ದಾರಖಾನ ಸಾ: ಕೊಪ್ಪಳ ಫಿರ್ಯಾದಿ ನೀಡಿದ್ದು ದಿ:17-05-16 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಮ್ಮ ಅಣ್ಣ ಮರ್ದಾನಅಲಿ ಇವರು ಹುಲಿಗಿಯಿಂದ ವಾಪಾಸ್ ಊರಿಗೆ ಕೊಪ್ಪಳ ಕ್ಕೆ
ಅಂತಾ ಬರಲು ತನ್ನ ಮೋಟಾರ ಸೈಕಲ್ ನಂ: ಕೆಎ-35/ಎಸ್-8072 ನೇದ್ದನ್ನು ಹೊಸಪೇಟೆ-ಕೊಪ್ಪಳ
ಎನ್.ಹೆಚ್-63 ರಸ್ತೆಯ ಬಸಾಪೂರ ದಿಬ್ಬದ
ಹತ್ತಿರ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಬಂದವನೆ ವಾಹನ ನಿಯಂತ್ರಿಸದೇ ಸ್ಕಿಡ್
ಮಾಡಿ ಅಪಘಾತ ಮಾಡಿಕೊಂಡು ಬಿದ್ದಿದ್ದರಿಂದ ತನಗೆ ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಸದರಿ
ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5) ಕೊಪ್ಪಳ ನಗರ ಪೊಲೀಸ್
ಠಾಣೆ ಗುನ್ನೆ ನಂ. 82/2016 ಕಲಂ. 498(ಎ), 323,
504, 506 ಸಹಿತ 149 ಐ.ಪಿ.ಸಿ ಮತ್ತು 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿನಾಂಕ: 16.05.2016 ರಂದು ರಾತಿ
8:00 ಗಂಟೆಗೆ ಫಿರ್ಯಾದಿದಾರಳಾದ ಶೃತಿ ರವರ ಮದುವೆ ಆರೋಪಿ ನಂ 01 ಮಹಾಂತೇಶ ನೇದ್ದವರ ಸಂಗಡ ಗುರು-ಹಿರಿಯರ ಸಮಕ್ಷಮ
ಹನುಮನಾಳ ಗ್ರಾಮದಲ್ಲಿ ಮದುವೆ ಮಾಡಿಕೊಂಡಿದ್ದು ಮದುವೆಯಾದ ಒಂದು ತಿಂಗಳ ವರೆಗೆ ಅನೋನ್ಯವಾಗಿ ಸಂಸಾರ
ಮಾಡಿದ್ದು ಇರುತ್ತದೆ. ಮದುವೆಯಾಗಿ ಒಂದು ತಿಂಗಳ ನಂತರ ಫಿರ್ಯಾದಿದಾರಳ ಗಂಡ
ಹಾಗೂ ಅತ್ತೆ, ಮಾವ, ನಾದಿನಿ, ಭಾವಂದಿರು ಸೇರಿಕೊಂಡು ಫಿರ್ಯಾದಿದಾರಳಿಗೆ
ಹೊಡೆಬಡಿ ಮಾಡಿ ತವರು ಮನೆಯಿಂದ 05 ತೊಲೆ ಬಂಗಾರ, 05 ಲಕ್ಷ ರೂಪಾಯಿ ವರದಕ್ಷಿಣೆ ತರುವಂತೆ ದಿನಾಲು
ಮಾನಸೀಕ ಮತ್ತು ದೈಹಿಕ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ
ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment