1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 76/2016 ಕಲಂ: 143, 147, 341, 148, 354, 324, 504, 506 ಸಹಿತ
149 ಐ.ಪಿ.ಸಿ:
ದಿನಾಂಕ: 03.05.2016 ರಂದು
ಬೆಳಿಗ್ಗೆ 11:30 ಗಂಟೆಗೆ ಫಿರ್ಯಾದಿ ಭೀರಪ್ಪ ತಂದೆ ಪಕೀರಪ್ಪ ಮೇಳ್ಳಿಕೇರಿ ಸಾ: ಮಿಟ್ಟಿಕೇರಿ
ಒಣಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ
ನಿನ್ನೆ ದಿನಾಂಕ 02.05.2016 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಮ್ಮ ಓಣಿಯ ಶಿವರಾಜ ಜಾಲಗಾರ
ಇತನ ಹತ್ತಿರ ಇದ್ದ ಮೋಬೈಲ್ ಫೋನ್ ನಮ್ಮ ಓಣಿಯ ಫಾರೂಕ್ ಕೊಲ್ಕಾರ್ ಇತನು ಶಿವರಾಜನ ಹತ್ತಿರ ಮೋಬೈಲ್
ಫೋನ ತನ್ನದು ಅಂತಾ ತಕರಾರು ತೆಗೆದು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡಿದ್ದು ನಂತರ ತಮ್ಮ ತಮ್ಮಲ್ಲಿಯೇ
ಬಗೆಹರಿಸಿಕೊಂಡಿದ್ದರು. ಇಂದು ದಿನಾಂಕ 03.05.2016 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ
ಭಾಗ್ಯನಗರದಲ್ಲಿ ಕೂಲಿ ಕೆಲಸ ಇದ್ದ ಪ್ರಯುಕ್ತ ನಾನು ಹಾಗೂ ನನ್ನ ತಾಯಿ ಹುಲಿಗೇಮ್ಮ, ನಮ್ಮ ಓಣಿಯ ಶಿವರಾಜ
ತಂದೆ ಸಿದ್ದಪ್ಪ ಜಾಲಗಾರ 03 ಜನ ಕೂಡಿಕೊಂಡು ಸೈಲಾನ್ಪೂರ ಓಣಿ ಕ್ರಾಸ್ ಹತ್ತಿರ ಬರುತ್ತಿದ್ದಾಗ
ನಮ್ಮ ಓಣಿಯ ಮುಸ್ಲಿಂ ಜನಾಂಗದ ಜನರಾದ 1] ಅಲ್ತಾಫ್ ಆಟೋ ಡ್ರೈವರ 2] ಹುಸೇನ್ ಹಳ್ಳಿಕೇರಿ 3] ತೌಫೀಕ್
ಮೆಕ್ಯಾನಿಕ್ 4] ಸಮೀರ ಮೆಕ್ಯಾನಿಕ್ 5] ಫಾರೂಕ್ ಕಟ್ಟಿಗೆ ಅಡ್ಡೆ 6] ಖುದ್ದುಸ್ ಹಾಗೂ ಅವರ ಅಣ್ಣ
7] ಹಾಜಂ ಹಾಗೂ ಇತರೆ ಜನರು ಗುಂಪು ಕಟ್ಟಿಕೊಂಡು ಏಕಾಏಕೀ ನಮ್ಮನ್ನು ತಡೆದುನಿಲ್ಲಿಸಿ ಲೇ ಭೂಸುಡಿ
ಮಕ್ಕಳಾ ನಿನ್ನೆ ರಾತ್ರಿ ನಮ್ಮ ಮೊಬೈಲ್ ತೆಗೆದುಕೊಂಡು ನಮ್ಮೊಂದಿಗೆ ಜಗಳ ತೆಗೆಯುತ್ತೀರಿ ಏನಲೇ ಅಂತಾ
ಬೈಯುತ್ತಾ ನಮ್ಮೊಂದಿಗೆ ಜಗಳ ತೆಗೆದು ಸ್ಥಳದಲ್ಲಿ ರಸ್ತೆಯ ಬಾಜು ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು
ಬೀಸಾಡುತ್ತಾ ಹುಸೇನ್ ಹಳ್ಳಿಕೇರಿ ಮತ್ತು ಅಲ್ತಾಫ್ ಇಬ್ಬರೂ ನನ್ನ ಹಣೆಗೆ ಮತ್ತು ತಲೆಗೆ ಹೊಡೆದು ರಕ್ತಗಾಯಗೊಳಿಸಿದರು.
ನಂತರ ಅಲ್ಲಿಯೇ ಇದ್ದ ನನ್ನ ತಾಯಿ ಹುಲಿಗೇಮ್ಮ ಇವಳು ನನ್ನ ಮಗನಿಗೆ ಯಾಕೆ ಕಲ್ಲಿನಿಂದ ಹೊಡೆಯುತ್ತೀರಿ
ಅಂತಾ ಕೇಳಲು ಎಲ್ಲರೂ ಕೂಡಿಕೊಂಡು ನನ್ನ ತಾಯಿಗೆ ಏನಲೇ ಚಿನಾಲಿ ಬೋಸುಡಿ ನಿನ್ನ ಮಗನಿಗೆ ಹೇಳು ನಮ್ಮ
ತಂಟೆಗೆ ಬರಬೇಡಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಸಾರ್ವಜನಿಕ ಸ್ಥಳದಲ್ಲಿ ನನ್ನ ತಾಯಿಯ ಸೀರೆಯನ್ನು
ಮತ್ತು ಕೈಯನ್ನು ಹಿಡಿದು ಜಗ್ಗಾಡಿ ಕಲ್ಲಿನಿಂದ ಬೆನ್ನಿಗೆ ಹೊಡೆದರು. ನಂತರ ಇತರೆ ಜನರು ನಮಗೆ ಅವಾಚ್ಯ
ಶಬ್ದಗಳಿಂದ ಬೈದಾಡಿದರು. ಆಗ ನಾನು ಮತ್ತು ನನ್ನ ತಾಯಿ ಹುಲಿಗೇಮ್ಮ , ಶಿವರಾಜ ಜಾಲಗಾರ 03 ಜನರು ಕೂಗಾಡಲು
ಅಲ್ಲಿಯೇ ಇದ್ದ ಓಣಿಯ ಕುಮಾರ ತಂದೆ ನರೇಗಲ್ಲಪ್ಪ ಜಾಲಗಾರ, ಬಸಯ್ಯ ತಂದೆ ಶಿವಾನಂದಯ್ಯ ಹಿರೇಮಠ, ಜಯಪ್ಪ
ತಂದೆ ಯಂಕಪ್ಪ ಶಹಾಪೂರ, ಶರಣಪ್ಪ ತಂದೆ ಲಂಕೆಪ್ಪ ಜಾಲಗಾರ ಇವರು ಬಂದು ಜಗಳ ಬಿಡಿಸಿದರು. ನಂತರ ನಮಗೆ
ಹೊಡೆಬಡಿ ಮಾಡಿದ 07 ಜನರು ಹಾಗೂ ಇತರೆ ಜನರು ಸ್ಥಳದಿಂದ ಹೋಗುವಾಗ ಇವತ್ತು ಉಳಿದುಕೊಂಡಿರಿ ಮಕ್ಕಳಾ
ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ ಹೇಳಿ ಹೋದರು.ಕಾರಣ ಆರೋಪಿತರ
ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 77/2016 ಕಲಂ: 143, 147, 148, 341, 323 324, 504, 506 ಸಹಿತ
149 ಐ.ಪಿ.ಸಿ:
ದಿನಾಂಕ: 03.05.2016 ರಂದು
ಮದ್ಯಾನ 12:00 ಗಂಟೆಗೆ ಫಿರ್ಯಾದಿ ಹುಸೇನಸಾಬ ಹಳ್ಳಿಕೇರಿ ಸಾ: ಸೈಲಾನ್ಪೂರ ಒಣಿ ಕೊಪ್ಪಳ ಇವರು
ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಅದರ ಸಾರಾಂಶವೇನೆಂದರೆ ದಿನಾಂಕ
02.05.2016 ರಂದು ರಾತ್ರಿ 8:00 ಗಂಟೆಯ ಸುಮಾರಿಗೆ ನಮ್ಮ ಓಣಿಯ ಫಾರೂಕ್ ಕೋಲ್ಕಾರ್ ಹಾಗೂ ಮಿಟ್ಟಿಕೇರಿ
ಒಣಿಯ ಶಿವರಾಜ ಜಾಲಗಾರ ಇವರು ಮೊಬೈಲ್ ಫೋನಗಾಗಿ ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ನಂತರ ತಮ್ಮ ತಮ್ಮಲ್ಲಿಯೇ
ಬಗೆಹರಿಸಿಕೊಂಡಿದ್ದರು. ಇಂದು ದಿನಾಂಕ 03.05.2016 ರಂದು ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ನಾನು
ಹಾಗೂ ನನಗೆ ಪರಿಚಯದ ಮದರ್ಾನಅಲಿ ಮನಿಯಾರ ಇಬ್ಬರೂ ಕೂಡಿಕೊಂಡು ಸೈಲಾನ್ಪೂರ ಓಣಿ ಕ್ರಾಸ್ ಹತ್ತಿರ
ನಮ್ಮ ಮೀನು ಅಂಗಡಿಯ ಮುಂದೆ ನಿಂತುಕೊಂಡಿ ದ್ದಾಗ ಮಿಟ್ಟಿಕೇರಿ ಓಣಿಯ ಹಿಂದೂ ಜನಾಂಗದ ಜನರಾದ 1] ಭೀರಪ್ಪ
ಮೇಳ್ಳಿಕೇರಿ 2] ಕುಮಾರ ಜಾಲಗಾರ 3] ಗವಿಶಿದ್ದಪ್ಪ ಕನ್ಯಾಳ 4] ಸತ್ಯಪ್ಪ ತಂದೆ ಭರಮಪ್ಪ ಬಾರಕೇರ
5] ರಾಜು ಜಾಲಗಾರ 6] ಮಂಜು ಜಾಲಗಾರ 7] ಪಂಪಣ್ಣ ಹಡಪದ 8] ಹುಲುಗಪ್ಪ ಜಂಗ್ಲಿ ಹಾಗೂ ಇತರೆ ಜನರು ಗುಂಪು
ಕಟ್ಟಿಕೊಂಡು ಏಕಾಏಕೀ ನಮ್ಮನ್ನು ತಡೆದುನಿಲ್ಲಿಸಿ ಲೇ ಭೂಸುಡಿ ಮಕ್ಕಳಾ ನಿನ್ನೆ ರಾತ್ರಿ ನಮ್ಮ ಓಣಿಯ
ಶಿವರಾಜನ ಮೊಬೈಲ್ ತೆಗೆದುಕೊಂಡು ನಮ್ಮೊಂದಿಗೆ ಜಗಳ ತೆಗೆಯುತ್ತೀರಿ ಏನಲೇ ಅಂತಾ ಬೈಯುತ್ತಾ ನಮ್ಮೊಂದಿಗೆ
ಜಗಳ ತೆಗೆದು ಸ್ಥಳದಲ್ಲಿ ರಸ್ತೆಯ ಬಾಜು ಬಿದ್ದಿದ್ದ ಕಲ್ಲುಗಳನ್ನು ತೆಗೆದುಕೊಂಡು ಬೀರಪ್ಪ ಮೇಳ್ಳಿಕೇರಿ,
ಕುಮಾರ ಜಾಲಗಾರ ಇಬ್ಬರೂ ನನ್ನ ಹಣೆಗೆ ಹಾಗೂ ಮದರ್ಾನಅಲಿ ಗೆ ತಲೆಗೆ ಹೊಡೆದು ರಕ್ತಗಾಯಗೊಳಿಸಿದರು.
ನಂತರ ಅಲ್ಲಿಯೇ ಇದ್ದ ಮರ್ದಾನ ಅಲಿ ಮನಿಯಾರ ಇತನು ನಮಗೆ ಯಾಕೆ ಕಲ್ಲಿನಿಂದ ಹೊಡೆಯುತ್ತೀರಿ ಅಂತಾ ಕೇಳಲು
ಎಲ್ಲರೂ ಕೂಡಿಕೊಂಡು ನಮಗೆ ಏ ಬೋಸುಡಿ ಮಕ್ಕಳಾ ನಮ್ಮ ತಂಟೆಗೆ ಬರಬೇಡಾ ಅಂತಾ ಎಷ್ಟು ಸಲ ಹೇಳಬೇಕು ನಿಮಗೆ
ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದರು. ನಂತರ ಇತರೆ ಜನರು ನಮಗೆ ಅವಾಚ್ಯ ಶಬ್ದಗಳಿಂದ
ಬೈದಾಡಿದರು. ಆಗ ನಾನು ಮತ್ತು ಮದರ್ಾಲ ಅಲಿ ಮನಿಯಾರ ಇಬ್ಬರು ಕೂಗಾಡಲು ಅಲ್ಲಿಯೇ ಇದ್ದ ಓಣಿಯ ಬಸಯ್ಯ
ತಂದೆ ಶಿವಾನಂದಯ್ಯ ಹಿರೇಮಠ, ಸೋಫಿಸಾಬ ತಂದೆ ಹುಸೇನಸಾಬ ವಾಲೀಕಾರ , ಮದರ್ಾನಅಲಿ ಜಂಜಾಲಿ ಇವರು ಬಂದು
ಜಗಳ ಬಿಡಿಸಿದರು. ನಂತರ ನಮಗೆ ಹೊಡೆಬಡಿ ಮಾಡಿದ 08 ಜನರು ಹಾಗೂ ಇತರೆ ಜನರು ಸ್ಥಳದಿಂದ ಹೋಗುವಾಗ ಇವತ್ತು
ಉಳಿದುಕೊಂಡಿರಿ ಮಕ್ಕಳಾ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವುದಿಲ್ಲಾ ಅಂತಾ
ಹೇಳಿ ಹೋದರು. ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದು
ಅದೆ.
0 comments:
Post a Comment