1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 45/2016 ಕಲಂ: 87 Karnataka Police Act.
ದಿನಾಂಕ: 04-05-2016 ರಂದು 5-30 ಪಿಎಂಕ್ಕೆ
ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ
ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 8 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ
ತಾವು ಹಾಗೂ ಸಿ.ಪಿ.ಐ.ಸಾಹೇಬರು ಮತ್ತು ಡಿ.ಎಸ್.ಪಿ.ಸಾಹೇಬರೊಂದಿಗೆ
ಇಬ್ಬರೂ ಪಂಚರ
ಸಮಕ್ಷಮ ಸಿಬ್ಬಂದಿಯೊಂದಿಗೆ 3-50 ಪಿಎಂಕ್ಕೆ ತಳಕಲ್ ಗ್ರಾಮದ ಕರಿಯಮ್ಮನ ಗುಡಿಮುಂದಿನ ಸಾರ್ವಜನಿಕ
ಬಯಲು ಜಾಗೆಯಲ್ಲಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು
ಸದರಿಯವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು
ಹಣ 2200/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ
ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ
ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಕುಕನೂರ ಪೊಲೀಸ್ ಠಾಣಾ ಗುನ್ನೆ ನಂ: 45/2016 ಕಲಂ:87 ಕೆ.ಪಿ. ಅಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 46/2016
ಕಲಂ: 87 Karnataka Police Act.
ದಿನಾಂಕ: 04-05-2016 ರಂದು 7-30 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 4 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಹಾಗೂ ಸಿ.ಪಿ.ಐ.ಸಾಹೇಬರು ಮತ್ತು ಡಿ.ಎಸ್.ಪಿ.ಸಾಹೇಬರೊಂದಿಗೆ ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 6-20 ಪಿಎಂಕ್ಕೆ ಗುದ್ನೆಪ್ಪನ ಮಠದ ಸಮುದಾಯ ಭವನದ ಮುಂದಿನ ಸಾರ್ವಜನಿಕ ಬಯಲು ಜಾಗೆಯಲ್ಲಿ
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಇನ್ನು 4 ಜನ ಆರೋಪಿತರು
ಓಡಿಹೋಗಿದ್ದು ಇದೆ. ಸಿಕ್ಕಿಬಿದ್ದವರಿಂದ ಹಾಗೂ ಜೂಜಾಟದ ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1200/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಬಂದಿದ್ದು, ಕಾರಣ, ಸದರಿಯವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಸೂಚಿಸಿದೆ ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 93/2016 ಕಲಂ: 279, 337, 338 ಐ.ಪಿ.ಸಿ:
ದಿ:04-05-16 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಗೋಣಿಬಸಪ್ಪ ಸಾ: ಬಿ.ಟಿ. ಪಾಟೀಲನಗರ ಕೊಪ್ಪಳ
ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:30-04-16 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ನಾನು ನನ್ನ ಮೋಟಾರ ಸೈಕಲ್ ನಂ: ಕೆಎ-34/ಆರ್ -2417 ನೇದ್ದನ್ನು ಓಡಿಸಿಕೊಂಡು ಬೂದಗುಂಪಾ ಗ್ರಾಮದಲ್ಲಿಯ ಬ್ಯಾಂಕ್ ಕೆಲಸಕ್ಕೆ ಅಂತಾ
ಕೊಪ್ಪಳ-ಗಿಣಿಗೇರಿ ರಸ್ತೆಯ ಬಸಾಪೂರ ಸಮೀಪದ ಜಗಪತಿ ಕೋಳಿ ಫಾರ್ಮ ಹತ್ತಿರ ಹೊರಟಿದ್ದಾಗ, ಅದೇವೇಳೆಗೆ ನನ್ನ ಎದುರುಗಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-37/ವೈ-7030 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯಕರವಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸುತ್ತಾ ಬಂದು ನನ್ನ ಮೋಟಾರ ಸೈಕಲ್ ಗೆ ಟಕ್ಕರ
ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ನನಗೆ ಪೆಟ್ಟುಗಳಾಗಿದ್ದು, ಅಲ್ಲದೇ ಮೋಟಾರ ಸೈಕಲ್ ಚಾಲಕ ಮಜರಪ್ಪ ಇತನಿಗೆ ಸಣ್ಣಪುಟ್ಟ
ಪೆಟ್ಟುಗಳಾಗಿದ್ದು, ಮಜರಪ್ಪನ ಗಾಢಿಯ ಹಿಂದೆ
ಕುಳಿತು ಬಂದಿದ್ದ ಗಾಳೆಪ್ಪ ಹಾಗೂ ಸಂಜೀವಪ್ಪ ಇಬ್ಬರೂ ಸಾ:ಗುಡದಳ್ಳಿ ಇವರಿಗೆ ಕೂಡಾ ಭಾರಿ
ಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಸದರಿ ಅಪಘಾತ ಮಾಡಿದ ಮೋಟಾರ ಸೈಕಲ್ ನಂ; ಕೆಎ-37/ವೈ-7030 ನೇದ್ದರ ಚಾಲಕ ಮಜರಪ್ಪ ಸಾ:
ಗುಡದಳ್ಳಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment