Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 6, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 78/2016 ಕಲಂ: 78(3) Karnataka Police Act.

ದಿನಾಂಕ:05-05-2016 ರಂದು ರಾತ್ರಿ 9-30 ಗಂಟೆಗೆ ಶ್ರೀ ಸತೀಶ ಪಾಟೀಲ ಪಿ.ಐ. ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:05-05-2016 ರಂದು ರಾತ್ರಿ 8-00 ಗಂಟೆಗೆ ಪೊಲೀಸ್ ಠಾಣಾ ವ್ಯಾಪ್ತಿಯ, ಭಾಗ್ಯನಗರದ ಸರ್ಕಾರಿ ಆಸ್ಪತ್ರೆಯ ರಸ್ತೆಯ ಚಹಾದ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ: 01 ನೇದ್ದವನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ ಯಾರ ಅದೃಷ್ಟ ಅಂತಾ ಕೂಗುತ್ತಾ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಐ ಸಾಹೇಬರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 450=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ದಿನಾಂಕ: 06-05-2016 ರಾತ್ರಿ 01-00 ಗಂಟೆಗೆ ಗುನ್ನೆ ನಂ : 78/2016 ಕಲಂ : 78 [3] ಕೆ.ಪಿ. ಕಾಯ್ದೆ ರಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.

2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 94/2016 ಕಲಂ: 78(3) Karnataka Police Act.
ದಿನಾಂಕ:05-05-2016 ರಂದು ರಾತ್ರಿ 9-00 ಗಂಟೆಗೆ ಶ್ರೀ ಚಿತ್ತರಂಜನ್ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಮಟಕಾ ಜೂಜಾಟದ ದಾಳಿ ಮಾಡಿ ವರದಿಯನ್ನು ಹಾಜರಪಡಿಸಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಮಾನ್ಯ ಘನ ನ್ಯಾಯಾಲಯದಿಂದಾ ಅನುಮತಿ ಪಡೆದುಕೊಂಡಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಇಂದು ದಿ:05-05-2016 ರಂದು ರಾತ್ರಿ 7-10 ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ದದೇಗಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ: 01 ನೇದ್ದವನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00 ರೂಪಾಯಿಗೆ 80=00 ರೂಪಾಯಿಗಳನ್ನು ಕೊಡುತ್ತೇವೆ ಅಂತಾ ಕೂಗುತ್ತಿದ್ದಾಗ, ಆರೋಪಿ ನಂ: 02 ನೇದ್ದವರು ಜನರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಡುವಾಗ ಹೀಗೆ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ಕೂಡಿಕೊಂಡು ದಾಳಿ ಮಾಡಿ ಆರೋಪಿತರಿಂದ ಮಟಕಾ ಜೂಜಾಟದ ನಗದು ಹಣ ರೂ 540=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.  
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 128/2016 ಕಲಂ: 78(3) Karnataka Police Act.
ದಿನಾಂಕ: 05-05-2016 ರಂದು ರಾತ್ರಿ 7-15 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಟಗಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-108,ಹೆಚ್.ಸಿ-63,ಪಿ.ಸಿ-117,116,161 ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಸದರಿ ಸರ್ಕಾರಿ ಆಸ್ಪತ್ರೆ ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಅಜ್ಜು ತಂದೆ ದಾದಾಸಾಬ್ ಹಾಲಿಗಾಡಿ ವಯ: 32 ವರ್ಷ, ಜಾ: ಮುಸ್ಲಿಂ, ಉ: ಡ್ರೈವರ ಸಾ: ಕುಷ್ಟಗಿ  ತಿಳಿಸಿದ್ದು ಸದರಿಯವನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 385-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ ಇವುಗಳನ್ನು ಜಪ್ತ ಪಡಿಸಿದ್ದು..ನಂತರ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಪಂಚನಾಮೆಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
4] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 47/2016 ಕಲಂ: 498(ಎ), 323, 324, 504, 506, 109 ಸಹಿತ 3 & 4 ವರದಕ್ಷಿಣೆ ನಿಷೇಧ ಕಾಯ್ದೆ:.
ದಿನಾಂಕ:05-05-2016 ರಂದು 9-30 ಪಿಎಂಕ್ಕೆ ಕುಕನೂರ ಸರ್ಕಾರೀ ಆಸ್ಪತ್ರೆಯಿಂದ ಇಬ್ಬರೂ ದು:ಖಪಾತಗೊಂಡು ದಾಖಲಾದ ಬಗ್ಗೆ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ  9-45 ಪಿಎಂಕ್ಕೆ  ಭೇಟಿ ನೀಡಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು 10-45 ಪಿಎಂಕ್ಕೆ ಆಸ್ಪತ್ರೆಯಲ್ಲಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ ದಿ:11-3-12 ರಂದು ಆರೋಪಿ ನಂ:1ನೇದ್ದವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ಮೂರು ತಿಂಗಳವರೆಗೆ ಚನ್ನಾಗಿಯೇ ಇದ್ದು, ನಂತರ, ವರದಕ್ಷಿಣೆ ತರುವಂತೆ ಆರೋಪಿ 1ನೇಯವನು 2 ಮತ್ತು 3ನೇಯವರ ಮಾತು ಕೇಳಿ ಪಿರ್ಯಾದಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದು, ಅಲ್ಲದೇ ವರದಕ್ಷಿಣೆ ಹಣ ತರುವಂತೆ ಪಿರ್ಯಾದಿದಾರಳಿಗೆ ಈಗ್ಗೆ ಒಂಭತ್ತು ತಿಂಗಳ ಹಿಂದೆ ಬೆಂಗಳೂರಿನಿಂದ ಆಕೆಯ ತವರುಮನೆಗೆ ಕಳುಹಿಸಿಕೊಟ್ಟಿದ್ದು, ಆಕೆಯು ಕುಕನೂರಿನ ತನ್ನ ತವರುಮನೆಯಲ್ಲಿ ಬಂದು ಇದ್ದಳು.  ಅಲ್ಲದೇ, ಈ ಬಗ್ಗೆ ಆರೋಪಿ ನಂ:1 ಮತ್ತು 2ನೇದ್ದವರಿಗೆ ಹೇಳಿದರೂ ಕೂಡಾ ಕೇಳದೇ ಇದ್ದು, ಆರೋಪಿ ನಂ:1ನೇದ್ದವನು ಆಗಾಗ ಬಂದು ಪಿರ್ಯಾದಿದಾರಳಿಗೆ ಮತ್ತು ಆಕೆಯ ತವರುಮನೆಯವರಿಗೆ ಆವಾಚ್ಯ ಶಬ್ಧಗಳಿಂದ ನಿಂದಿಸಿ, ತೊಂದರೆ ಮಾಡುತ್ತಿದ್ದು, ಇದನ್ನು ಹಿರಿಯರ ಸಮಕ್ಷಮ ಬಗೆಹರಿಸಿದರೂ ಕೂಡಾ ದಿನಾಂಕ:30-04-2016 ರಂದು ಆರೋಪಿ ನಂ:1ನೇದ್ದವನು ಪಿರ್ಯಾದಿ ತವರುಮನೆಗೆ ಬಂದು ನಿಂದಿಸಿ, ತಾಳೆಕಿತ್ತುಕೊಂಡಿದ್ದು, ಆ ಕಾಲಕ್ಕೂ ಕೂಡಾ ಹಿರಿಯರ ಸಮಕ್ಷಮ ಬುದ್ಧಿವಾದ ಹೇಳಿದ್ದು ಇತ್ತು.  ಆದರೆ, ದಿನಾಂಕ:05-05-2016 ರಂದು 9-00 ಪಿಎಂಕ್ಕೆ ಪಿರ್ಯಾದಿದಾರಳು ತನ್ನ ತಂದೆ, ಚಿಕ್ಕಪ್ಪನ ಮಗ ಮಂಜುನಾಥ, ತಾಯಿಯೊಂದಿಗೆ ತನ್ನ ತವರುಮನೆಯಲ್ಲಿದ್ದಾಗ ಆರೋಪಿತ ಹನುಮಂತಪ್ಪನು ತನ್ನ ತಂದೆ ಹಾಗೂ ತಮ್ಮನ ಪ್ರಚೋದನೆಯ ಮೇರೆಗೆ ತನ್ನ ತವರು ಮನೆಗೆ ಬಂದು ತನಗೆ “ ಲೇ ಬೋಸುಡಿ ವರದಕ್ಷಿಣೆ ತೆಗೆದುಕೊಂಡು ಬಾ ಅಂದ್ರ ಇಲ್ಲೇ ಕುಂತ್ಕೋಂಡಿ ತರೋದಿಕ್ಕೆ ಆಗೋದಿಲ್ಲಾ ಬೋಸುಡಿ ರಂಡೆ ” ಅಂತಾ ಅಂದವನೇ ತನಗೆ ಕೈಯಿಂದ ಹೊಟ್ಟೆಗೆ ಗುದ್ದಿ, ಬಡಿಯಅತ್ತಿದ್ದು, ಆಗ ತನ್ನ ತಂದೆ ಹಾಗೂ ಚಿಕ್ಕಪ್ಪನ ಮಗ ಮಂಜುನಾಥ ಇವರು ಬಡಿಯುವುದನ್ನು ಬಿಡಿಸಲು ಬಂದಾಗ “ ಬೋಸುಡಿ ಮಕ್ಕಳಾ ಕೇಳಿದಷ್ಟು ವರದಕ್ಷಿಣೆ ಕೊಡೋದಿಕ್ಕೆ ಆಗೋದಿಲ್ಲಾಂದ್ರ ಹೆಣ್ಣಾಕ ಹಡದಿರಲೇ ಬೋಸುಡಿ ” ಅಂತಾ ಅಂದವನೇ ಪಿರ್ಯಾದಿ ತಂದೆಯ ಕೈಯಿಂದ ಕಪಾಳಕ್ಕೆ ಹೊಡೆದಿದ್ದು, ಅಲ್ಲದೇ, ಮಂಜುನಾಥನಿಗೆ ಅಲ್ಲಿಯೇ ಮೂಲೆಯಲ್ಲಿಟ್ಟಿದ್ದ ಕಟ್ಟಿಗೆಯಿಂದ ತೆಗೆದುಕೊಂಡು ಬೆನ್ನಿಗೆ ಹೊಡೆದಿದ್ದು, ಅವನು ನೆಲಕ್ಕೆ ಬಿದ್ದಾಗ ಕಟ್ಟಿಗೆ ಒಗೆದು ಮಂಜುನಾಥನ ಎಡಗಾಲಿಗೆ ಬಾಯಿಂದ ಕಡಿದನು. ಓಣಿಯ ಜನರು ಬಂದು ತನ್ನ ಗಂಡನಿಗೆ ಬುದ್ಧಿವಾದ ಹೇಳಿ ಬಿಡಿಸಿದರು.  ಆಗ ತನ್ನ ಗಂಡನು “ ಈ ಬೋಸುಡಿ ಮಕ್ಕಳಿಗೆ ವರದಕ್ಷಿಣೆ ಕೊಟ್ಟು ಗಂಡನ ಮನೆಗೆ ಕಳುಹಿಸಿಕೊಡೋದಿಕ್ಕೆ ಆಗೋದಿಲ್ಲಾ ಬೋಸುಡಿ ಮಕ್ಕಳು ಈ ಸೂಳೇನು ಇಲ್ಲಿಯೇ ಬಿದ್ದಾಳಾ.  ಈ ಮಕ್ಕಳನ್ನು ನೋಡೋವರೆಗೂ ನೋಡಿ ಕಡಿದುಬಿಡುತ್ತೇನೆ ” ಅಂತಾ ಮನೆಕಡೆಗೆ ಮುಖಮಾಡಿ ಒದರಾಡುತ್ತಾ ಅವಸರವಸರವಾಗಿ ಹೋಗುವಾಗ ತನ್ನ ಗಂಡನು ಪಾವಟಿಗಿಯಿಂದ ಬಿದ್ದು, ಹಣೆಗೆ ಗಾಯವಾಗಿದ್ದು, ನೋಡಲು ಅಂತಾ ಹೋದಾಗ ಅವನು ಪಿರ್ಯಾದಿಗೆ  ಆವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವದ ಬೆದರಿಕೆ ಹಾಕಿದ್ದು, ಇರುತ್ತದೆ.  ಕಾರಣ, ಅವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರನ್ನು ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 63/2016 ಕಲಂ: 279, 337, 338 ಐ.ಪಿ.ಸಿ:.

ದಿನಾಂಕ: 25-04-2016 ರಂದು ಬೆಳಗ್ಗೆ 10-30 ಗಂಟೆಯ ಸುಮಾರಿಗೆ ಅಳವಂಡಿ ಹಲವಾಗಲಿ ರಸ್ತೆಯ ಮೇಲೆ ಅಳವಂಡಿ ಸೀಮಾದ ಶಂಕ್ರಪ್ಪ ಕಲಾದಗಿ ಇವರ ಹೊಲದ ಹತ್ತಿರ ರಸ್ತೆ ಅಫಘಾತವಾಗಿ ಗಾಯಾಳುಗಳು ಸ್ಥಳದಲ್ಲಿ ಬಿದ್ದಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಕೋಡಲೇ ನಾನು ಘಟನಾ ಸ್ಥಳಕ್ಕೆ ಬೇಟಿ ನೀಡಿ, ಅಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳಿಗೆ ವಿಚಾರಿಸಿ, ನಂತರ ಅಲ್ಲಿಯೇ ಇದ್ದ , ಘಟನೆಯ ಪ್ರತ್ಯೇಕ್ಷದಶರ್ಿಯಾದ ಪಿರ್ಯಾದಿದಾರರ ಹೇಳಿಕ ಪಡೆದುಕೊಂಡಿದ್ದು, ಅದರ ಸಾರಾಂಶವೆನೆಚಿದರೆ, ಇಂದು ದಿನಾಂಕ: 05-05-2016 ರಂದು ಬೆಳಗ್ಗೆ ಆರೋಪಿ ನಂ: 01 ಈತನು ತನ್ನ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ್-0097 ನೇದ್ದನ್ನು ತೆಗೆದುಕೊಂಡು ಫಿಯರ್ಾದಿದಾರನನ್ನು ಜೋತೆಗೆ ಕರೆದುಕೊಂಡು ಕೆಲಸ ಮುಗಿಸಿಕೊಂಡ ಬೆಳಗ್ಗೆ 10-00 ಗಂಟೆಗೆ ಅಳವಂಡಿಯಿಂದ ವಾಪಸ್ ಹಲವಾಗಲಿಗೆ ಹೋಗುತ್ತಿದ್ದಾಗ, ಆರೋಪಿ ನಂ: 1 ಈತನು ಪಿರ್ಯಾದಿಯನ್ನು ತನ್ನ ಮೋಟರ್ ಸೈಕಲ್ ಹಿಂದಿನ ಸೀಟ್ನಲ್ಲಿ ಕುಡಿಸಿಕೊಂಡು ಹಲವಾಗಲಿ ಕಡೆಗೆ ತಾನು ನಡೆಸುತ್ತಿದ್ದ ಮೋಟರ್ ಸೈಕಲ್ನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು, ಅದೇ ರೀತಿಯಾಗಿ ಆರೋಪಿ ನಂ: 02 ಈತನೂ ಸಹ ಎದರುಗಡೆಯಿಂದ ಅಂದರೆ, ಹಲವಾಗಲಿ ಕಡೆಯಿಂದ ತಾನು ನಡೆಸ್ಮತ್ತಿದ್ದ ಮೋಟರ್ ಸೈಕಲ್ ನಂ: ಕೆಎ-37 ಎಕ್ಸ-2575 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು, ಇಬ್ಬರೂ ಒಬ್ಬರಿಗೊಬ್ಬರು ಸ್ಶೆಡ್ ಕೊಡದೇ ರಸ್ತೆಯ ಮುಧ್ಯದಲ್ಲಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದು, ರಸ್ತೆಯ ಮೇಲೆ ಬಿದ್ದ ಪರಿಣಾಮ ಇಬ್ಬರಿಗೂ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ  ಇಬ್ಬರೂ ಮೋಟರ್ ಸೈಕಲ್ ಸವಾರರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಕೊಟ್ಟ ಪಿರ್ಯಾದಿಯನ್ನು ಪಡೆದುಕೊಂಡು ವಾಪಸ್ ಮಧ್ಯಾಹ್ನ 2-00 ಗಂಟೆಗೆ ಠಾಣೆಗೆ ಬಂದು ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008