Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, May 11, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 89/2016 ಕಲಂ: 78(1)(ಎ)(6) Karnataka Police Act.
ದಿನಾಂಕ 10-05-2016 ರಂದು 21-00 ಗಂಟೆಗೆ ಶ್ರೀ ಇ.ಕಾಳಿಕೃಷ್ಣ,  ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ ಗಂಗಾವತಿ ರವರು ಕ್ರೀಕೇಟ್ ಜೂಜಾಟದಲ್ಲಿ ತೊಡಗಿದ ಇಬ್ಬರೂ ವ್ಯಕ್ತಿಗಳನ್ನು ಹಾಜರ ಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಅದರ ಸಾರಂಶವೇನೆಂದರೆ,  ಇಂದು ದಿನಾಂಕ: 10-05-2016 ರಂದು 19-45 ಗಂಟೆಗೆ ಆರೋಪಿತರಾದ (01) ಹನುಮಂತ ತಂದೆ ಲಕ್ಷ್ಮಪ್ಪ ವಯಸ್ಸು 33 ವರ್ಷ ಜಾ: ಉಪ್ಪಾರ ಉ: ಮೋಟಾರ  ಸೈಕಲ್ ಮೆಕಾನಿಕ್ ಸಾ: ಕಿಲ್ಲಾ ಏರಿಯಾ, ಗಂಗಾವತಿ.  ಮತ್ತು (02) ಖಾದರ @ ಬಾವ ತಂದೆ ಬುಡನಸಾಬ ವಯಸ್ಸು 22 ವರ್ಷ  ಜಾ: ಮುಸ್ಲಿಂ ಉ: ರಾಡ್ ಬೆಂಡಿಂಗ್ ಕೆಲಸ ಸಾ: ಲಿಂಗರಾಜ ಕ್ಯಾಂಪ್, ಗಂಗಾವತಿ ಇವರು ಕಿಲ್ಲಾ ಏರಿಯಾದಲ್ಲಿರುವ ಅಂಬಾಭವಾನಿ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20  ಕ್ರಿಕೇಟನ ಸನ್ ರೈಜರ್ಸ್ ಹೈದ್ರಾಬಾದ &  ರೈಜಿಂಗ್ ಪುಣೆ ಸೂಪರ್ ಜೇಂಟ್ಸ್ (ಆರ್.ಪಿ.ಎಸ್.)  ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಮೊಬೈಲ್ ಮೇಸೇಜಗಳ  ಮೂಲಕ ಕ್ರಿಕೇಟ ಜೂಜಾಟದಲ್ಲಿ ತೊಡಗಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವರಿಂದ ಕ್ರಿಕೇಟ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 6,600-00 ರೂ ನಗದು ಹಣ, ಜೂಜಾಟ ಆಡಲು ಬಳಸಿದ ಒಂದು ಸೋನಿ ಕಂಪನಿಯ ಮೊಬೈಲ್ ಹಾಗೂ ಒಂದು ಇನ್ ಫೋಕಸ್ ಕಂಪನಿಯ ಮೊಬೈಲ್ ದೊರೆತಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆಯುತ್ತಿರುವ ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20  ಕ್ರಿಕೇಟನ ಸನ್ ರೈಜರ್ಸ್ ಹೈದ್ರಾಬಾದ &  ರೈಜಿಂಗ್ ಪುಣೆ ಸೂಪರ್ ಜೇಂಟ್ಸ್ (ಆರ್.ಪಿ.ಎಸ್.) ತಂಡಗಳ ನಡುವೆ ನಡೆದ  ಕ್ರಿಕೇಟ್ ಪಂದ್ಯದ ಮೇಲೆ ಜೂಜಾಟದಲ್ಲಿ ತೊಡಗಿದ್ದರಿಂದ ಸದರಿಯವರ ಮೇಲೆ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 135/2016 ಕಲಂ: 78(3) Karnataka Police Act.

ದಿನಾಂಕ: 10-05-2016 ರಂದು ರಾತ್ರಿ 7-30 ಗಂಟೆಗೆ ಮಾನ್ಯ ಪಿ.ಎಸ್.ಐ ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕ್ಯಾದಗುಪ್ಪಾ ಗ್ರಾಮ ಬಸ ನಿಲ್ದಾಣದ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಹೆಚ್.ಸಿ-63, ನೀಲಕಂಠಪ್ಪ ಪಿ.ಸಿ-116, ಸಂಗಮೇಶ ಪಿ.ಸಿ-117,ಶ್ರೀಧರ ಪಿ.ಸಿ-161 ಪ್ರಶಾಂತ ಮತ್ತು ಸರಕಾರಿ ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಸದರಿ ಬಸ ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಹನುಮಂತಪ್ಪ ತಂದೆ ದೊಡ್ಡಪ್ಪ ತಳವಾರ  ವಯ: 21 ವರ್ಷ, ಜಾ: ವಾಲ್ಮೀಕಿ : ಒಕ್ಕಲುತನ ಸಾ:ಕ್ಯಾದಗುಪ್ಪಾ ತಿಳಿಸಿದ್ದು ಸದರಿಯವನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 4050-00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ  ಮತ್ತು ಶ್ಯಾಮಸಂಗ ಕಂಪನಿಯ ಮೋಬೈಲ್ ಅಂ:ಕಿ:650/- ರೂ:ಗಳು ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಆರೋಪಿ 2 ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಆರೋಪಿತತನ್ನು ಮುದ್ದೆಮಾಲುಗಳನ್ನು, ಪಂಚನಾಮೆ ಮತ್ತು ವರದಿಯೊಂದಿಗೆ ಹಾಜರಪಡಿಸಿದ್ದು, ಸದರಿ ಸಾರಾಂಶದ ಮೇಲಿಂದ   ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 141/2016 ಕಲಂ: 279, 338, 304(ಎ) ಐ.ಪಿ.ಸಿ:.
ದಿನಾಂಕ: 10-05-2016 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಎಂ. ಸ್ವಾಮಿದೊರೈ ತಂದೆ ಪಿ. ಮೂರ್ತಿ, ವಯಸ್ಸು 56 ವರ್ಷ, ಜಾತಿ: ತಮಿಳು ಬೆಸ್ತರು ಉ: ಮೀನುಗಾರಿಕೆ ಸಾ: ಕೋಟೆ-ಕಂಪ್ಲಿ  ತಾ: ಹೊಸಪೇಟೆ.  ಇವರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶ ಈ ಪ್ರಕಾರ ಇದೆ, " ಇಂದು ದಿನಾಂಕ:- 10-05-2016 ರಂದು ನನ್ನ ತಂಗಿಯ ಗಂಡನಾದ ಜಗದೀಶ ತಂದೆ ವೆಲ್ಡಿಂಗ್ ರಾಜು, ವಯಸ್ಸು 40 ವರ್ಷ, ಜಾತಿ: ತಮಿಳು ಮುದಲಿಯಾರ ಉ: ವೆಲ್ಡಿಂಗ್ ಕೆಲಸ ಸಾ: ಕಂಪ್ಲಿ ಶುಗರ ಫ್ಯಾಕ್ಟರಿ  ಮತ್ತು ಆತನ ಸಂಗಡ ಕೆಲಸ ಮಾಡುವ ದಾದಾಪೀರ್ ತಂದೆ ನೂರಬಾಷಾ, ವಯಸ್ಸು 38 ವರ್ಷ, ಉ: ವೆಲ್ಡಿಂಗ್ ಕೆಲಸ ಸಾ: ಎಂ.ಡಿ. ಕ್ಯಾಂಪ್-ಕಂಪ್ಲಿ ಈತನೊಂದಿಗೆ ತಮ್ಮ ಕೆಲಸದ ನಿಮಿತ್ಯವಾಗಿ ಮೋಟಾರ ಸೈಕಲ್ ಮೇಲೆ ಮಾನ್ವಿಗೆ ಹೋಗಿದ್ದರು. ನಂತರ ರಾತ್ರಿ 8:00 ಗಂಟೆಯ ಸುಮಾರಿಗೆ ಜಗದೀಶನ ಮೊಬೈಲ್ ನಿಂದ ನನ್ನ ಮನೆಯ ಪಕ್ಕದಲ್ಲಿರುವ ನನ್ನ ತಂಗಿಯ ಮಗ ಸುಬ್ರಮಣ್ಯ  ಈತನ ಮೊಬೈಲ್ ಗೆ ಯಾರೋ ಕರೆ ಮಾಡಿ ಜಗದೀಶನಿಗೆ ಗಂಗಾವತಿ ತಾಲೂಕಿನ ಡಾಣಾಪೂರು ಕ್ರಾಸ್ ಹತ್ತಿರ ಲಾರಿ ಅಪಘಾತವಾಗಿ ಜಗದೀಶನು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆತನ ಸಂಗಡ ಇದ್ದ ದಾದಾ ಪೀರನಿಗೆ ತೀವ್ರ ಗಾಯಗಳಾಗಿದ್ದು, ಆತನನ್ನು ಗಂಗಾವತಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಅಂತಾ ವಿಷಯ ತಿಳಿಸಿದ್ದು, ಕೂಡಲೇ ನಾನು ಸುಬ್ರಮಣ್ಯ ಕೂಡಿಕೊಂಡು ಗಂಗಾವತಿ ಸರಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ದಾದಾಪೀರ್ ನಿಗೆ ಎಡ ಮೊಣಕಾಲಿಗೆ ತೀವ್ರ ಒಳಪೆಟ್ಟಾಗಿ, ತೊಡೆಯ ಹತ್ತಿರ ತೆರೆಚಿದ ಗಾಯವಾಗಿದ್ದು, ಎಡಗೈ ಬೆರೆಳುಗಳಿಗೆ ತೀವ್ರ ರಕ್ತಗಾಯಗಳಾಗಿದ್ದವು, ಮರ್ಮಾಂಗಕ್ಕೆ ಸಹ ಗಾಯವಾಗಿತ್ತು. ವಿಚಾರಿಸಲು ದಾದಾಪೀರನು ತಿಳಿಸಿದ್ದೇನೆಂದರೆ, “ ತಾನು ಮತ್ತು ಜಗದೀಶ ಮಾನ್ವಿಯಿಂದ ಕೆಲಸ ಮುಗಿಸಿಕೊಂಡು  ಹಿರೋ ಪ್ಯಾಶೆನ್ ಪ್ರೋ ಮೋಟಾರ ಸೈಕಲ್ ನಂ: ಕೆ.ಎ-35/ಎಕ್ಸ್-7515 ನೇದ್ದರಲ್ಲಿ ವಾಪಸ್ ಕಂಪ್ಲಿಗೆ ಹೋಗುತ್ತಿದ್ದೆವು. ಮೋಟಾರ ಸೈಕಲ್ ನ್ನು ತಾನು ನಡೆಯಿಸುತ್ತಿದ್ದು, ಜಗದೀಶನು ಹಿಂಭಾಗದಲ್ಲಿ ಕುಳಿತಿದ್ದನು. ತಾವು ಸಿಂಧನೂರು-ಗಂಗಾವತಿ ಮುಖ್ಯ ರಸ್ತೆಯಲ್ಲಿ ಸಂಜೆ 6:45 ಗಂಟೆಯ ಸುಮಾರಿಗೆ ಡಾಣಾಪೂರು ಕ್ರಾಸ್ ಹತ್ತಿರ ಬರುತ್ತಿರುವಾಗ ತಮ್ಮ ಹಿಂದಿನಿಂದ ಒಬ್ಬ ಲಾರಿ ಚಾಲಕನು ಲಾರಿಯನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ತಮ್ಮ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು.  ಇದರಿಂದ ತಾವು ಮೋಟಾರ ಸೈಕಲ್ ಸಮೇತ ಕೆಳಗೆ ಬಿದ್ದು ಲಾರಿಯು ಹಾಯ್ದು ಹೋಗಿದ್ದು, ಇದರಿಂದ ಜಗದೀಶನಿಗೆ  ಎಡಗೈ ಸಂಪೂರ್ಣ ಭಾರೀ ಗಾಯ ಮತ್ತು ತಲೆಗೆ ತೀವ್ರ ಒಳಪೆಟ್ಟಾಗಿ ಮೂಗಿನಲ್ಲಿ ರಕ್ತ ಬಂದು, ಅಲ್ಲಲ್ಲಿ ತೆರೆಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟನು.  ತನಗೆ ತೀವ್ರ ಗಾಯಗಳಾದವು. ಅಪಘಾತ ಮಾಡಿದ ಲಾರಿಯನ್ನು ನೋಡಲು ಅದರ ನಂಬರ್: ಕೆ.ಎ-25/ ಬಿ-1977 ಅಂತಾ ಇದ್ದು, ಅದರ ಚಾಲಕನ ಹೆಸರು ಸಂಗಮೇಶ ತಂದೆ ಕಳಕಪ್ಪ, 43 ವರ್ಷ ಸಾ: ಹಳೇ ಹುಬ್ಬಳ್ಳಿ ಅಂತಾ ತಿಳಿಯಿತು. ನಂತರ ಯಾರೋ ರಸ್ತೆಯಲ್ಲಿ ಹೋಗುವವರು ಟೋಲ್ ಅಂಬ್ಯುಲೆನ್ಸ್ ಗೆ ಫೋನ್ ಮಾಡಲಾಗಿ ಅಂಬ್ಯುಲೆನ್ಸ್ ಬಂದಿದ್ದು, ಅದರಲ್ಲಿ ತನ್ನನ್ನು ಚಿಕಿತ್ಸೆಗಾಗಿ  ಕರೆದುಕೊಂಡು ಬಂದು ದಾಖಲು ಮಾಡಿರುತ್ತಾರೆ. ಹಾಗೂ ಶವವನ್ನೂ ಸಹ ಆಸ್ಪತ್ರೆಯ ಶವಾಗಾರ ಕೋಣೆಗೆ ಸಾಗಿಸಿರುತ್ತಾರೆ ” ಅಂತಾ ತಿಳಿಸಿದನು.  ಕಾರಣ ಈ ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸಂಗಮೇಶ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ.” ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 279, 304(ಎ) ಐ.ಪಿ.ಸಿ:.
ದಿ:10-05-2016 ರಂದು ರಾತ್ರಿ 7-45 ಗಂಟೆಗೆ ಫಿರ್ಯಾದಿದಾರರಾದ ಮಳಿಯಪ್ಪ ಬಡಿಗೇರ. ಸಾ: ಲಿಂಗನಬಂಡಿ ತಾ: ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂದರೇ, ದಿ:10-05-16 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ ಮಾವ ರಮೇಶ ಬಡಿಗೇರ ಇವರು ತಮ್ಮ ಮೋಟಾರ ಸೈಕಲ್ ನಂ: ಕೆಎ-37/ಇಎ-7678 ನೇದ್ದರ ಹಿಂದೆ ತನ್ನ ಹೆಂಡತಿ ಗಂಗಮ್ಮ ವಯ: 38 ವರ್ಷ, ಇವರನ್ನು ಕೂಡ್ರಿಸಿಕೊಂಡು ಗಂಗನಾಳ ಗ್ರಾಮಕ್ಕೆ ಅಂತಾ ಬೇವೂರ-ಮುಸಲಾಪೂರ ರಸ್ತೆಯ ಗಂಗನಾಳ ಸಮೀಪದಲ್ಲಿ ಹೊರಟಿದ್ದಾಗ ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಓಡಿಸಿಕೊಂಡು ಹೊರಟು ಗಾಡಿಯನ್ನು ನಿಯಂತ್ರಿಸದೇ ಹಾಕಿಕೊಂಡು ಬಿದ್ದು ಅಪಘಾತ ಮಾಡಿದ್ದರಿಂದ ಗಂಗಮ್ಮಳು ಕೆಳಗಡೆ ಬಿದ್ದು ಅವರ ತಲೆಗೆ ಭಾರಿ ಪೆಟ್ಟುಗಳಾಗಿದ್ದರಿಂದ ಗಂಗಮ್ಮ ಳಿಗೆ ಉಪಚಾರಕ್ಕಾಗಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಸಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಧಾರವಾಡ ಎಸ್.ಡಿ.ಎಮ್ ಆಸ್ಪತ್ರೆಗೆ ಸೇರಿಸಿದ್ದು ಇರುತ್ತದೆ. ನಂತರ ಇಂದು ಮದ್ಯಾಹ್ನ 3-40 ಗಂಟೆಗೆ ಗಾಯಾಳು ಗಂಗಮ್ಮ ಗಂಡ ರಮೇಶ ಬಡಿಗೇರ. ವಯ: 38 ವರ್ಷ, ಇವಳು ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾಳೆ. ಕಾರಣ ಸದರಿ ಮೋಟಾರ ಸೈಕಲ್ ಚಾಲಕ ರಮೇಶ ತಂದೆ ಮಳಿಯಪ್ಪ ಬಡಿಗೇರ. ಸಾ: ಲಿಂಗನಬಂಡಿ. ತಾ:ಯಲಬುರ್ಗಾ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 40/2016 ಕಲಂ: 341, 323, 324, 504, 506, ಸಹಿತ 34 ಐ.ಪಿ.ಸಿ:.

ಫಿರ್ಯಾದಿಗೆ ಹಾಗೂ ಅವರ ಅಣ್ಣ ತಮ್ಮಂದಿರಿಗೆ ಹೊಲ ಮನೆ ಪಾಲವಾಟ್ನಿ ವಿಷಯವಾಗಿ ಮನಸ್ಥಾಪವಿದ್ದು, ದಿನಾಂಕ: 09-05-2016 ರಂದು ಮುಂಜಾನೆ 09-00 ಗಂಟೆಯ ಸುಮಾರು ಆರೋಪಿ ಬಸವರಾಜನು ಶಿವಪ್ಪ ತೆಳಗಡೆ ಇವರ ಮನೆಯ ಹತ್ತಿರ ಹಿರಿಯರು ಕರೆಯುತ್ತಿದ್ದಾರೆ ಅಂತಾ ಹೇಳಿದಾಗ, ಫಿರ್ಯಾದಿ ಹಾಗೂ ಆತನ ಹೆಂಡತಿ ಅನಸೂಯ ಕೂಡಿ ಶಿವಪ್ಪನ ಮನೆಯ ಹತ್ತಿರ ರೋಡಿನಲ್ಲಿ ಹೋದಾಗ, ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆರೋಪಿ ಹನಮಂತನು ಫಿರ್ಯಾದಿಯ ಹೆಂಡತಿಯನ್ನು ನೋಡಿ ಯಾಕಲೇ ಬೋಸುಡಿ ನೀ ಬಂದಿಯೇನು ಅಂತಾ ಬೈದು ಕೈಯಿಂದ ಕಪಾಳಕ್ಕೆ ಹೊಡೆದಾಗ, ಫಿರ್ಯಾದಿ ಯಾಕೆ ಹೊಡೆಯುತ್ತಿಯಾ ಹನಮಂತಣ್ಣ ಅಂತಾ ಅಂದಾಗ, ಅವಳು ಹಡಸಲಿ ಇಲ್ಲಿ ಯಾಕ ಬಂದ್ಲ ಅಂತಾ ಅನ್ನುತ್ತಾ ಫಿರ್ಯಾದಿಗೆ ತೆಕ್ಕಿ ಬಿದ್ದ, ಆಗ ಅಲ್ಲೆ ಇದ್ದ ಆರೋಪಿ ಬಸವರಾಜನು ಫಿರ್ಯಾದಿ ದುಬ್ಬಕ್ಕೆ ಕೈಯಿಂದ ಗುದ್ದಿ, ಗಟ್ಟಿಯಾಗಿ ಹಿಡಿದುಕೊಂಡ. ಆಗ ಆರೋಪಿ ಹುಲಿಗೆವ್ವ ಈಕೆಯು ಅಲ್ಲೆ ಇದ್ದ ಒಂದು ಕಟ್ಟಿಗೆ ತೆಗೆದುಕೊಂಡು ಫಿರ್ಯಾದಿ ತಲೆಗೆ ಹೊಡೆದಾಗ, ಫಿರ್ಯಾದಿ ರಕ್ತಗಾಯವಾಗಿ ಬೀಳಲು ಆಗ ಆರೋಪಿ ದ್ಯಾಮವ್ವ ಇವರು ಫಿರ್ಯಾದಿಗೆ ಕೈಯಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ನಂತರ ಫಿರ್ಯಾದಿ ಹಾಗೂ ಆತನ ಹೆಂಡತಿ ಕೂಡಿ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ತೋರಿಸಿಕೊಂಡು ನಂತರ ಹಿರಿಯರಲ್ಲಿ ವಿಚಾರಿಸಿ ಠಾಣೆಗೆ ತಡವಾಗಿ ಬಂದಿದ್ದು ಅಂತಾ ಮುಂತಾಗಿ ಫಿರ್ಯಾದಿ ಸಾರಾಂಶದ ಮೇಲಿಂದ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

0 comments:

 
Will Smith Visitors
Since 01/02/2008