1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 97/2016 ಕಲಂ: 454, 457, 380 ಐ.ಪಿ.ಸಿ:
ದಿ:11.05.2016 ರಂದು ಮಧ್ಯಾನ್ನ 12.45 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಪಿ.ಡಿ.ರಂಗಪ್ಪ , ಮುಖ್ಯೋಪಾಧ್ಯಾಯರು, ಸರಕಾರಿ ಪ್ರೌಡ ಶಾಲೆ, ಹಿರೇಬೊಮ್ಮನಾಳ ಸಾ: ಕೂಡ್ಲಿಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ
ಸಾರಾಂಶವೇನೆಂದರೆ, ದಿ: 09.05.2016 ರಂದು ಮದ್ಯಾಹ್ನ 1-30 ಗಂಟೆಯಿಂದ ದಿ: 10.05.2016 ರಂದು ಮುಂಜಾನೆ 9-15 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಹಿರೇಬೊಮ್ಮನಾಳ ಸರ್ಕಾರಿ
ಪ್ರೌಡಶಾಲೆಯ ಕಂಪ್ಯೂಟರ್ ಕೊಠಡಿಯ ಬಾಗಿಲು ಮತ್ತು ಬೀಗ ಮುರಿದು ಒಳಪ್ರವೇಶ ಮಾಡಿ ಕಂಪ್ಯೂಟರ್
ಕೋಠಡಿಯಲ್ಲಿದ್ದ 1] ಹೆಚ್.ಸಿ.ಎಲ್ ಕಂಪನಿಯ ಒಂದು
ಕಂಪ್ಯೂಟರ್ ಮಾನಿಟರ್ ಮತ್ತು ಸಿ.ಪಿ.ಯು ಅಂ.ಕಿ- ರೂ.22,000-00, 2] ಒಂದು ಪ್ರಿಂಟರ್ ಅಂ.ಕಿ- ರೂ 10,000-00 3] ಒಂದು ಎಲ್.ಸಿ.ಡಿ ಟಿ.ವಿ ಅಂ.ಕಿ ರೂ.15000-00, 4] ಹೈ ಪವರ್ ಎಕ್ಸ್ಎಲ್ ಇನವಾಡರ್ ಕಂಪನಿಯ 2 ಯು.ಪಿ.ಎಸ್ ಬ್ಯಾಟರಿ ಅಂ.ಕಿ ರೂ.26,000-00 5] ಒಂದು ಮೈಕ್ ಅಂಪ್ಲಿಫೈರ್ ಅಂ.ಕಿ ರೂ.2000-00 6] 2 ಜೊತೆ ಲ್ಯಾನ್ಸರ್ ಶೂ ಅಂ.ಕಿ ರೂ-518-00 ಒಟ್ಟು ಅಂ.ಕಿ.ರೂ:75518-00 ಬೆಲೆ ಬಾಳುವ ಸಾಮಗ್ರಿಗಳನ್ನು ಮತ್ತು ಕಳ್ಳತನ ಮಾಡಿದ ಯಾರೋ ಕಳ್ಳರನ್ನು ಪತ್ತೆ ಮಾಡಿ ಕಳ್ಳರ
ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ವಗೈರಾ ಫಿರ್ಯಾದಿಯ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 78(3) Karnataka Police Act.
ದಿನಾಂಕ 11-05-2016 ರಂದು ಪಿರ್ಯಾದುದಾರರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಮಾಹಿತಿ
ಇದ್ದ ಪ್ರಕಾರ ಅಗಳಕೇರಾ ಗ್ರಾಮದಲ್ಲಿ ಬಸ್ ಸ್ಟ್ಯಾಂಡ ಮುಂದೆ ಗಂಗಾವತಿ ರಸ್ತೆಯ ಮೇಲೆ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನನ್ನು ಪಂಚರೊಂದಿಗೆ ದಾಳಿಮಾಡಿ ಹಿಡಿದು
ಆರೋಪಿತನಿಂದ ಒಂದು ಬಾಲ ಪೆನ್ನು, ಒಂದು ಮಟಕಾ ಪಟ್ಟಿ ಮತ್ತು ಜೂಜಾಟದ ನಗದು ಹಣ 2700=00 ರೂ ಗಳನ್ನು ಪಂಚರ ಸಮಕ್ಷಮ ಜಪ್ತು ಮಾಡಿದ್ದು ಸದರಿ ಜಪ್ತು ಮಾಡಿದ ಮುದ್ದೆಮಾಲು, ಆರೋಪಿತನಿಗೆ ಮತ್ತು ಮೂಲ ಪಂಚನಾಮೆಯನ್ನು ಹಾಜರು ಪಡಿಸಿದ್ದರ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
3] ಗಂಗಾವತಿ ನಗರ ಪೊಲೀಸ್ ಪೊಲೀಸ್ ಠಾಣೆ ಗುನ್ನೆ ನಂ:
90/2016 ಕಲಂ: 78(1)(ಎ)(6)
Karnataka Police Act.
ದಿನಾಂಕ 11-05-2016 ರಂದು 21-15 ಗಂಟೆಗೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್
ನಗರ ಪೊಲೀಸ್ ಠಾಣೆ ಗಂಗಾವತಿ ರವರು ಕ್ರಿಕೇಟ್ ಜೂಜಾಟದಲ್ಲಿ ತೊಡಗಿದ
ಇಬ್ಬರು ವ್ಯಕ್ತಿಗಳನ್ನು ಹಾಜರ ಪಡಿಸಿ ಸದರಿಯವರ ಮೇಲೆ ಕ್ರಮ ಜರುಗಿಸುವ ಕುರಿತು ತಮ್ಮದೊಂದು
ವರದಿಯನ್ನು ಪಂಚನಾಮೆಯೊಂದಿಗೆ ನೀಡಿದ್ದು ಸದರಿ ವರದಿ ಸಾರಂಶವೇನೆಂದರೆ, ಇಂದು ದಿನಾಂಕ: 11-05-2016 ರಂದು 20-00 ಗಂಟೆಗೆ ಆರೋಪಿತರಾದ (01) ಸಿದ್ದಲಿಂಗಪ್ಪ ತಂದೆ ಶ್ರೀಶೈಲಪ್ಪ ಶಿವಶೆಟ್ಟರ್ ವಯಸ್ಸು 35 ವರ್ಷ ಜಾ: ಲಿಂಗಾಯತ ಉ: ಹೋಟಲ್
ವ್ಯಾಪಾರ ಸಾ: ಪಿಂಜಾರ ಓಣಿ, ಗಂಗಾವತಿ. ಮತ್ತು (02) ಬಾಬುಲಾಲ್ ತಂದೆ ಕೇಥರಾಮಜೀ ವಯಸ್ಸು 30
ವರ್ಷ ಜಾ: ಚೌದರಿ ಉ: ಬಟ್ಟೆ ವ್ಯಾಪಾರ ಸಾ: ಮಹಾವೀರ ಸರ್ಕಲ್, ಗಂಗಾವತಿ ಇವರು ದುರುಗಮ್ಮ
ದೇವಸ್ಥಾನದ ಸಮೀಪದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್
ಮುಖಾಂತರವಾಗಿ ಐ.ಪಿ.ಎಲ್ 9 ನೇ ಆವೃತ್ತಿಯ ಟಿ-20 ಕ್ರಿಕೇಟನ ಆರ್.ಸಿ.ಬಿ. & ಮುಂಬಾಯಿ
ಇಂಡಿಯನ್ಸ್ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದ ಮೇಲೆ ಆರ್.ಸಿ.ಬಿ. ವಿರುದ್ದ ಮುಂಬಾಯಿ ಇಂಡಿಯನ್ಸ್ ಗೆದ್ದರೆ 1,000 ರೂ.
ಗಳಿಗೆ ರೂ. 2,000 ರೂ. ಗಳನ್ನು ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ
ಕ್ರಿಕೇಟ ಜೂಜಾಟದಲ್ಲಿ ತೊಡಗಿರುವದು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಪಂಚರ ಸಮಕ್ಷಮ ದಾಳಿ
ಮಾಡಿ ಹಿಡಿದು ಸಿದ್ದಲಿಂಗಪ್ಪ ಇವನಿಂದ ಕ್ರಿಕೇಟ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು 20,600-00 ರೂ.
ನಗದು ಹಣ,
ಒಂದು
ನೋಕಿಯಾ ಕಂಪನಿಯ ಮೊಬೈಲ್ . ಮತ್ತು ಬಾಬುಲಾಲ್ ಇವನಿಂದ ಕ್ರಿಕೇಟ್
ಜೂಜಾಟಕ್ಕೆ ಸಂಬಂಧಿಸಿದಂತೆ ನಗದು ಹಣ ರೂ. 10,000-00, ಒಂದು ಸ್ಯಾಮಸಂಗ್ ಕಂಪನಿಯ ಮೊಬೈಲ್ ಹಾಗೂ
ಕ್ರಿಕೇಟ್ ಜೂಜಾಟಕ್ಕೆ ಸಂಬಂಧಿಸಿದಂತೆ ಒಂದು ಚೀಟಿ ದೊರೆತಿದ್ದು, ಇವುಗಳನ್ನು ಪಂಚರ ಸಮಕ್ಷಮ
ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಆರೋಪಿತರು ಇಂದು ನಡೆಯುತ್ತಿರುವ ಐ.ಪಿ.ಎಲ್
9 ನೇ ಆವೃತ್ತಿಯ ಟಿ-20 ಕ್ರಿಕೇಟನ ಆರ್.ಸಿ.ಬಿ. & ಮುಂಬಾಯಿ ಇಂಡಿಯನ್ಸ್ ತಂಡಗಳ ನಡುವೆ
ನಡೆದ ಕ್ರಿಕೇಟ್ ಪಂದ್ಯದ ಮೇಲೆ ಜೂಜಾಟದಲ್ಲಿ ತೊಡಗಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment