Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, June 15, 2016

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 102/2016 ಕಲಂ: 224, 332 ಐ.ಪಿ.ಸಿ.  
ದಿನಾಂಕ: 14-06-2016 ರಂದು ಸಂಜೆ 06-00 ಗಂಟೆಗೆ ಫಿರ್ಯಾದಿದಾರರಾದ ಚಂದ್ರಪ್ಪ ಎಹೆಚ್.ಸಿ-46 ರವರ ತನ್ನ ಸಂಗಡ ಆರೋಪಿ ವಿಚಾರಣಾಧೀನ ಕೈದಿ ಅಶೋಕ-46 ಇತನೊಂದಿಗೆ ಠಾಣೆಗೆ ಹಾಜರಾಗಿ ದಿನಾಂಕ: 14.06.2016 ರಂದು ಬೆಳಿಗ್ಗೆ ನಾನು ಹಾಗೂ ರಾಜೇಶ .ಪಿ.ಸಿ 130, ಅಮೃತ .ಪಿ.ಸಿ-100 ಮೂರು  ಜನರು ಕೂಡಿಕೊಂಡು ಸರ್ಕಾರಿ ವಾಹನ ನಂ ಕೆ.-37/ಜಿ-263 ನೇದ್ದರಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಆರೋಪಿ ಬೆಂಗಾವಲು ಕರ್ತವ್ಯಕ್ಕೆ ಹೋಗಿದ್ದು ಇರುತ್ತದೆ. ನಂತರ ಅಲ್ಲಿ ನಮಗೆ ವಿಚಾರಣಾ ಕೈದಿಯಾದ ಅಶೋಕ @ ರವಿ ತಂದೆ ಚಂದಪ್ಪ ನಂ 4684 ನೇದ್ದವರಿಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರುವಂತೆ ಜಿಲ್ಲಾ ಕೇಂದ್ರ ಕಾರಾಗೃಹದ ಸಿಬ್ಬಂದಿಯವರು ತಿಳಿಸಿದ್ದು ಅದರಂತೆ ನಾನು ಹಾಗೂ ರಾಜೇಶ .ಪಿ.ಸಿ-130, ಅಮೃತ .ಪಿ.ಸಿ-100 ಕೂಡಿಕೊಂಡು ನಮ್ಮ ಸರ್ಕಾರಿ ವಾಹನದಲ್ಲಿ ಬೆಳಿಗ್ಗೆ 10:50 ಗಂಟೆಗೆ ವಿಚಾರಣಾ ಕೈದಿಯಾದ ಅಶೋಕ @ ರವಿ ತಂದೆ ಚಂದಪ್ಪ ಕೈದಿ ನಂ 4684 ನೇದ್ದವರಿಗೆ ಆರೋಗ್ಯ ತಪಾಸಣೆ ಮಾಡಿಸುವ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅವನನ್ನು ಇಲ್ಲಿನ ವೈದ್ಯಾಧಿಕಾರಿಗಳ ಹತ್ತಿರ ಆರೋಗ್ಯ ತಪಾಸಣೆ ಮಾಡಿಸಿ ನಂತರ ಮದ್ಯಾನ 12:30 ಗಂಟೆಯ ಸುಮಾರಿಗೆ ಸದರಿ ಆರೋಪಿತನನ್ನು ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ವಾಪಾಸ ಕರೆದುಕೊಂಡು ಹೋಗುವ ಸಲುವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ನಮ್ಮ ವಾಹನ ನಂ ಕೆ.-37/ಜಿ-263 ನೇದ್ದರ ಒಳಗೆ ಕೂಡಿಸುವಷ್ಟರಲ್ಲಿ ಬಾಗಿಲಿನ ಹತ್ತಿರ ನಿಂತಿದ್ದ ನನಗೆ ಏಕಾಏಕೀ ಕೈಯಿಂದ ನನ್ನ ಮರ್ಮಾಂಗಕ್ಕೆ ಮುಷ್ಟಿಯಿಂದ ಹೊಡೆದು ನಂತರ ಅಲ್ಲಿಯೇ ಇದ್ದ ಅಮೃತ .ಪಿ.ಸಿ-100 ರವರಿಗೆ ಇವರಿಗೂ ಸಹ ಕೈಯಿಂದ ಹಲ್ಲೆ ಮಾಡಿ, ನಮಗೆ ಕೆಳಗೆ ದಬ್ಬಿ ಅಲ್ಲಿಂದ ಓಡಿಹೋದನು. ನಂತರ ನಾವು ಸುಧಾರಿಸಿಕೊಳ್ಳುವಷ್ಟರಲ್ಲಿ ಸದರಿ ಆರೋಪಿತನು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಎನ್.ಹೆಚ್-63 ರಸ್ತೆ ಹೊಸಪೇಟೆ ರಸ್ತೆಯ ಕಡೆಗೆ ಓಡಿಹೋಗಿ ಹೊಸಪೇಟೆ ಕಡೆ ಹೊರಟಿದ್ದು ಯಾವುದೋ ಒಂದು ಟಂ.ಟಂ. ವಾಹನದಲ್ಲಿ  ಹತ್ತಿ ಹೋದನು. ಆಗ ನಾವು ಅವನಿಗೆ ಬೆನ್ನಟ್ಟಿದ್ದು ಅದೇ ವೇಳೆಗೆ ಡಿ.ಸಿ.ಆಫೀಸ್ ಕಡೆಯಿಂದ ಕಂಟ್ರೊಲ್ ರೂಮ್ ಮೆಸೆಂಜರ್ ರವರಾದ ಪ್ರತಾಪ್ ದಂಡಿನ ಎಪಿಸಿ-111 ಮತ್ತು ಚಂದ್ರಕಾಂತ ಎಪಿಸಿ-76 ರವರ ಅಲ್ಲಿಗೆ ತಮ್ಮ ಮೋಟಾರ್ ಸೈಕಲ್ ಮೇಲೆ ಬಂದಿದ್ದು, ಅವರನ್ನು ನೋಡಿ ನಾವು ತಪ್ಪಿಸಿಕೊಂಡು ಓಡುತ್ತಿದ್ದ ಆರೋಪಿತನು ಹೊಸಪೇಟೆ ಕಡೆ ಹೊರಟಿದ್ದ ಟಂ.ಟಂ. ವಾಹನದಲ್ಲಿ ಹೋಗುತ್ತಿದ್ದಾನೆ. ಅವನನ್ನು ಹಿಡಿಯಿರಿ ಅವನಿಗೆ ಕೈ ಮತ್ತು ಕಾಲುಗಳ ಮೇಲೆ ಚರ್ಮ ರೋಗವಿರುತ್ತದೆ ಅಂತಾ ಹೇಳಿದಾಗ ಅವರು ಸಹ ತಮ್ಮ ಮೋಟಾರ್ ಸೈಕಲ್ ತೆಗೆದುಕೊಂಡು ಆರೋಪಿ ತನನ್ನು ಬೆನ್ನಟ್ಟಿದ್ದು, ಅಭಯ್ ಸಾಲ್ವಂಟ  ಮುಂದೆ ರಸ್ತೆಯ ಮೇಲೆ ಸದರಿ ವಾಹನವನ್ನು ನಿಲ್ಲಿಸಿ ಎಪಿಸಿ-111 ಮತ್ತು 76 ರವರು ನಾವು ಹೇಳಿದ ಲಕ್ಷಣಗಳುಳ್ಳ ವ್ಯಕ್ತಿಯನ್ನು ಹಿಡಿದುಕೊಂಡಿದ್ದು ಅದೇ ವೇಳೆಗೆ ಹೊಸಪೇಟೆ ಕಡೆಯಿಂದ ಪಿ.ಎಸ್.. ಮುನಿರಾಬಾದ ವಾಹನ ಚಾಲಕನಾದ ಶಿವಕುಮಾರ .ಪಿಸಿ-96 ರವರು ಸಹ ಅಲ್ಲಿಗೆ ಬಂದಿದ್ದನು. ಆಗ ನಾನು ಮತ್ತು ಅಮೃತ ಎಪಿಸಿ-100 ಇಬ್ಬರೂ ಸ್ಥಳಕ್ಕೆ ಹೋಗಿ ಸದರಿ ಆರೋಪಿತನಿಗೆ ವಶಕ್ಕೆ ಪಡೆದೆವು. ಆಗ ಸಮಯ ಮಧ್ಯಾಹ್ನ 1:00 ಗಂಟೆಯಾಗಿತ್ತು. ಕಾರಣ ಸಮವಸ್ರ್ತದಲ್ಲಿ ಕರ್ತವ್ಯದ ಮೇಲೆ ಇದ್ದ ನಮ್ಮ ಮೇಲೆ ಹಲ್ಲೆ ಮಾಡಿ ಮತ್ತು ಪೊಲೀಸ ಅಭೀರಕ್ಷೆಯಿಂದ ತಪ್ಪಿಸಿಕೊಂಡ ಅಶೋಕ @ ರವಿ  ವಿಚಾರಣಾಧಿನ ಕೈದಿ ನಂ 4684 ನೇದ್ದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 123/2016 ಕಲಂ: 109 ಐ.ಪಿ.ಸಿ.
ದಿ:14-06-2016 ರಂದು ರಾತ್ರಿ 9-15 ಗಂಟೆಗೆ ಅಂಜನಪ್ಪ ಸಿಪಿಸಿ-346 ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ತಮ್ಮ ವರದಿಯೊಂದಿಗೆ ಒಬ್ಬ ವ್ಯಕ್ತಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ:14-06-2016 ರಂದು ರಾತ್ರಿ ತಾನು ಮಾನ್ಯ ಪಿ.ಎಸ್.ಐ ಸಾಹೇಬರ ಆದೇಶದ ಮೇರೆಗೆ ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಗಿಣಿಗೇರಿ ಗ್ರಾಮದಲ್ಲಿ ಗುಪ್ತ ಮಾಹಿತಿ ಸಂಗ್ರಹದ ಕರ್ತವ್ಯದಲ್ಲಿದ್ದಾಗ ಗಿಣಿಗೇರಿ ಗ್ರಾಮದ ಬೈಪಾಸ್ ಹತ್ತಿರ ನಾಗರಾಜ @ ರಾಜಾ ತಂದೆ ನಿಂಗಪ್ಪ ಟವಲ್. ವಯ: 28 ವರ್ಷ, ಜಾ: ನಾಯಕ, ಕೂಲಿಕೆಲಸ, ಸಾ:ಮೋಕಾ. ತಾ:ಜಿ: ಬಳ್ಳಾರಿ ಇವನು ಸಂಶಯಾಸ್ಪದ ರೀತಿಯಲ್ಲಿ ಸಿಕ್ಕಿದ್ದು ಸದರಿಯವರಿಗೆ ಸದರಿ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಲಾಗಿ ಯಾವುದೇ ಸಮರ್ಪಕವಾದ ಉತ್ತರ ಕೊಡಲಿಲ್ಲಾ ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ಗಿಣಿಗೇರಿ ಗ್ರಾಮದಲ್ಲಿ  ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದು ಎಂಬ ಬಲವಾದ ಸಂಶಯ ಬಂದಿದ್ದು, ಹಾಗೂ ಸ್ವತ್ತಿನ ಅಪರಾಧ ನಿಯಂತ್ರಣಕ್ಕಾಗಿ ಮತ್ತು ಮುಂಜಾಗ್ರತಾ ಕ್ರಮವಾಗಿ ಸದರಿಯವನನ್ನು ವಶಕ್ಕೆ ತೆಗೆದುಕೊಂಡು  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.


0 comments:

 
Will Smith Visitors
Since 01/02/2008