1] ಬೇವೂರು ಪೊಲೀಸ್ ಠಾಣೆ ಗುನ್ನೆ ನಂ:
41/2016 ಕಲಂ: 498A, 504, 326, 506 ಐ.ಪಿ.ಸಿ.
ಫಿರ್ಯಾದಿ ಯಮನವ್ವ ಇವಳು ಈಗ್ಗೆ ಸುಮಾರು 6 ವರ್ಷಗಳ ಹಿಂದೆ ಆರೋಪಿ
ಹನುಮಂತ ಇವನನ್ನು ಮದುವೆ ಆಗಿದ್ದು ಆರೋಪಿತನು ಫಿರ್ಯಾದಿದಾರಳೊಂದಿಗೆ
ಈ ಮೊದಲು ಚೆನ್ನಾಗಿ ಸಂಸಾರ ಮಾಡಿಕೊಂಡಿಕೊಂಡು ಹೋಗಿದ್ದು ನಂತರದ ದಿನಗಳಲ್ಲಿ ಆರೋಪಿತನು ಫಿರ್ಯಾದಿದಾರಳೊಂದಿಗೆ
ವಿನಾ:ಕಾರಣ ಜಗಳ ಮಾಡುತ್ತಿದ್ದರಿಂದ ಇವರಿಬ್ಬರಲ್ಲಿ ವೈಮನಸ್ಸಾಗಿದ್ದರಿಂದ ಫಿರ್ಯಾದಿದಾರಳು ಈಗ್ಗೆ
ಸುಮಾರು 2 ವರ್ಷಗಳಿಂದ ತನ್ನ ಮಕ್ಕಳೊಂದಿಗೆ ತನ್ನ ತವರುಮನೆಯಾದ ಮುರುಡಿ ಗ್ರಾಮಕ್ಕೆ ಬಂದು ತನ್ನ ತಂದೆ
ತಾಯಿಯವರ ಮನೆಯಲ್ಲಿ ವಾಸವಾಗಿದ್ದು ಆದಾಗ್ಯೂ ಕೂಡಾ ಆರೋಪಿತನು ಆಗಾಗ ಮುರುಡಿ ಗ್ರಾಮದ ಫಿರ್ಯಾದಿದಾರಳ
ಮನೆಗೆ ಬಂದು ಫಿರ್ಯಾದಿದಾರಳಿಗೆ ನೀನು ಗಂಡನನ್ನು ಬಿಟ್ಟು ಬಂದು ಇಲ್ಲಿ ಯಾರ ಜೋತೆಗೆ ಸಂಸಾರ ಮಾಡುತ್ತಿ
ಇಲ್ಲಿ ನೀನು ಅವರಿವರ ಜೋತೆಗೆ ಮಾತನಾಡುತ್ತಿ ನಿನ್ನ ನಡತೆ ಸರಿ ಇಲ್ಲಾ ನೀನು ಹೊಲಸು ಸೂಳೆ ಅದಿದಿ
ಅಂತಾ ಅವಳ ಶೀಲದ ಬಗ್ಗೆ ಶಂಕಿಸುತ್ತಾ ಕೈಯಿಂದ ಹೋಡಿ ಬಡಿ ಮಾಡುತ್ತಾ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ
ಕಿರುಕುಳ ಕೊಡುತ್ತಾ ಬಂದಿದ್ದು ಇರುತ್ತದೆ, ನಂತರ ದಿನಾಂಕ: 12.06.2016 ರಂದು ಸಾಯಂಕಲ 4:30 ಗಂಟೆ
ಸುಮಾರಿಗೆ ಫಿರ್ಯಾದಿದಾರಳು ಹಾಗೂ ಇವಳ ತಂದೆ ನಾಗಪ್ಪ ಇಬ್ಬರೂ ತಮ್ಮ ಮನೆಯ ಮುಂದೆ ಇದ್ದಾಗ ಅದೇ ವೇಳೆಗೆ
ಆರೋಪಿತನು ಫಿರ್ಯಾದಿದಾರಳು ಇದ್ದ ಮನೆಗೆ ಬಂದವನೇ ವಿನಾ:ಕಾರಣ ಫಿರ್ಯಾದಿದಾರಳೊಂದಿಗೆ ಜಗಳ ತೆಗೆದು
ಏನಲೇ ಸೂಳೇ ರಂಡೆ ನೀನು ಗಂಡನನ್ನು ಬಿಟ್ಟು ಬಂದು
ಇಲ್ಲೇ ಸೇರಿದಿ ಎಷ್ಟು ಹೇಳಿದರು ನೀನು ನನ್ನ ಮಾತು ಕೇಳುವುದಿಲ್ಲಾ ಅಂತಾ ಅಂದವನೇ ಒಮ್ಮಿಂದೊಮ್ಮಲೆ
ಸಿಟ್ಟಿಗೆದು ಅಲ್ಲೆ ಇದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ಫಿರ್ಯಾದಿದಾರಳ ತಲೆಗೆ ಬಲವಾಗಿ ಹೋಡೆದು ಭಾರಿ ರಕ್ತಗಾಯ
ಮಾಡಿದ್ದು ಅಲ್ಲದೆ ಫಿರ್ಯಾದಿದಾರಳಿಗೆ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ, ಅಂತಾ ಇತ್ಯಾದಿ ಫಿರ್ಯಾಧಿ
ಸಾರಾಂಶದ ಮೆಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 111/2016 ಕಲಂ:379 ಐ.ಪಿ.ಸಿ.
ದಿನಾಂಕ 13-06-2016 ರಂದು
11-30 ಗಂಟೆಗೆ ಶ್ರೀ ಮಂಜುನಾಥ ತಂದೆ ವೀರಭಧ್ರಪ್ಪ ಪಟ್ಟಣಶಟ್ಟಿ. ವಯಾ 36 ವರ್ಷ ಜಾ: ಬಣಜಿಗ ಉ: ವ್ಯಾಪಾರ
ಸಾ: ಚಿರ್ಚನಗುಡ್ಡ, ತಾ: ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಗಣಕಿಕೃತ ಫಿರ್ಯಾದಿ ನೀಡಿದ್ದು
ಅದರ ಸಾರಂಶವೇನೆಂದರೆ, ದಿನಾಂಕ 07-05-2016 ರಂದು 17-00
ಗಂಟೆಯಿಂದ 17-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಬಸ್ ನಿಲ್ದಾಣದ
ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಫಿರ್ಯಾದಿದಾರರ
ಟಿ.ವಿ.ಎಸ್ ಎಕ್ಸ್ ಎಲ್ ಹೆವಿ ಡ್ಯೂಟಿ ಮೋ. ಸೈಕಲ್ ನಂ ಕೆ,ಎ 37 ಎಸ್ 6306 ಚಾಸ್ಸಿ ನಂ
MD621BD19B1G70496 ಇಂಜಿನ್ ನಂ 0D1GB1381857 ಇದ್ದು ಹಸಿರು ಬಣ್ಣದ್ದು ಅಂ.ಕಿಮ್ಮತ್ತು ರೂ.
15,000-00 ಬೆಲೆ ಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಗಣಕಿಕೃತ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 112/2016 ಕಲಂ: ಮನುಷ್ಯಕಾಣೆ.
ದಿನಾಂಕ 13-06-2016 ರಂದು
7-00 ಪಿ.ಎಂ. ಕ್ಕೆ. ಫಿರ್ಯಾಧಿದಾರರಾದ ಬಾಬು ತಂದೆ ಸಂಗಪ್ಪ ಬಿಜಾಪೂರ, ವಯ 35 ವರ್ಷ ಉ: ಚಪ್ಪಲಿ
ವ್ಯಾಪಾರ, ಜಾತಿ: ಸಮಗಾರ, ಸಾ: ಮುರಾರಿ ನಗರ ಗಂಗಾವತಿ
ಇವರು ಠಾಣೆಗೆ ಹಾಜರಾಗಿ ಫಿರ್ಯಾದಿಯನ್ನು ಹಾಜರು ಪಡಿಸಿದ್ದು ಸದರಿ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರರ
ತಮ್ಮನಾದ ಸತ್ಯನಾರಾಯಣ 25 ವರ್ಷ ಇತನು ದಿನಾಂಕ: 14-02-2014 ರಂದು ಬೆಳಿಗ್ಗೆ ಸುಮಾರು 8-00 ಗಂಟೆಯ
ವೇಳೆಗೆ ಮುರಹರಿ ನಗರದಲ್ಲಿರುವ ತಮ್ಮ ಮನೆಯಿಂದ ದುಡಿದುಕೊಂಡು ಬರುತ್ತೇನೆಂದು ಮನೆಯಿಂದ ಹೋದವನು ಇವುದರೆಗೂ
ವಾಪಾಸ್ ಬರದೇ ಕಾಣೆಯಾಗಿರುತ್ತಾನೆ. ಕಾಣೆಯಾಗಿರುವ ತನ್ನ ತಮ್ಮನನ್ನು ಪತ್ತೆ ಮಾಡಿ ಕೊಡಬೇಕೆಂದು ನೀಡಿದ
ಫಿರ್ಯಾದಿ ಸಾರಾಂಶದ ಮೇಲಿಂದ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು
ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 122/2016 ಕಲಂ: 34, KARNATAKA EXCISE ACT, 1965
ದಿ:13-06-16 ರಂದು ಸಾಯಂಕಾಲ 4-30 ಗಂಟೆಗೆ ಕುಣಿಕೇರಾ ತಾಂಡಾದ
ಕೆ.ಪಿ.ಆರ್ ಪ್ಯಾಕ್ಟ್ರಿಯ ಹತ್ತಿರ ಆರೋಪಿ ಶಂಕರ್ ತಂದೆ ಕೃಷ್ಣಪ್ಪ ರಾಠೋಡ್ ಸಾ: ಕುಣಿಕೇರಿ ತಾಂಡಾ
ಇತನು ಯಾವುದೇ ಪರವಾನಿಗೆ ಇಲ್ಲದೇ ಅನಧಿಕೃತವಾಗಿ ಒಂದು ವಿಮಲ್ ಚೀಲದಲ್ಲಿ 1] ಕೊಡೇಶ್ ರಮ್ 180 ಎಮ್.ಎಲ್.
ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ. 61=39 ರೂ. ಹೀಗೆ ಒಟ್ಟು 11 ಟೆಟ್ರಾಪಾಕೇಟ್ ಗಳು. ಒಟ್ಟು ಅಂಕಿ.
675.29 ರೂ. 2] ಓಲ್ಡ್ ಟಾವೆರನ್ ವಿಸ್ಕಿ. 180 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ.
61=39 ರೂ. ಹೀಗೆ ಒಟ್ಟು 14 ಟೆಟ್ರಾಪಾಕೇಟ್ ಗಳು. ಒಟ್ಟು ಅಂಕಿ. 859=46 ರೂ. 3] ಹಾಯ್ ವಾಡ್ರ್ಸ
ವಿಸ್ಕಿ 90 ಎಮ್.ಎಲ್. ಅಳತೆಯ ಒಂದು ಟೆಟ್ರಾಪಾಕೇಟ್ ಅಂಕಿ. 26=14 ರೂ. ಹೀಗೆ ಒಟ್ಟು 21 ಟೆಟ್ರಾಪಾಕೇಟ್
ಗಳು. ಒಟ್ಟು ಅಂಕಿ. 548=94 ರೂ. 4] ಕಿಂಗಫಿಶರ್ ಸ್ಟ್ರಾಂಗ್ ಬಿಯರ್ 650 ಎಮ್.ಎಲ್. ಅಳತೆಯ ಒಂದು
ಬಾಟಲಿ ಅಂಕಿ. 120=00. ರೂ. ಹೀಗೆ 07 ಬಾಟಲಿಗಳು. ಒಟ್ಟು ಅಂಕಿ. 840=00 ರೂ. 5] ಕಿಂಗಫಿಶರ್ ಸ್ಟ್ರಾಂಗ್
ಬಿಯರ್ 330 ಎಮ್.ಎಲ್. ಅಳತೆಯ ಒಂದು ಬಾಟಲಿ ಅಂಕಿ. 65=00. ರೂ. ಹೀಗೆ 04 ಬಾಟಲಿಗಳು. ಒಟ್ಟು ಅಂಕಿ.
260=00 ರೂ. 6] ಕಿಂಗಫಿಶರ್ ಸ್ಟ್ರಾಂಗ್ ಬಿಯರ್ 500 ಎಮ್.ಎಲ್. ಅಳತೆಯ ಒಂದು ಟಿನ್ ಅಂಕಿ.
95=00. ರೂ. ಹೀಗೆ 05 ಟಿನ್ ಗಳು. ಒಟ್ಟು ಅಂಕಿ. 475=00 ರೂ. ಹೀಗೆ ಒಟ್ಟು ಮದ್ಯದ ಬಾಟಲಿ, ಟೆಟ್ರಾಪಾಕೇಟಗಳ
ಅಂ.ಕಿ. 3,658=00. ರೂ. ಬೆಲೆಬಾಳುವುಗಳನ್ನು ಮಾರಾಟ ಮಾಡುತ್ತಿದ್ದಾಗ ಫಿರ್ಯಾದಿದಾರರು ತಮ್ಮ ಸಿಬ್ಬಂದಿಯೊಂದಿಗೆ
ದಾಳಿ ಮಾಡಿದ್ದು ಆಗ ಆರೋಪಿತನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ನಂತರ ಮುದ್ದೆ
ಮಾಲನ್ನು ಜಪ್ತು ಮಾಡಿಕೊಂಡು ಆರೋಪಿತನ ಮೇಲೆ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು
ಇರುತ್ತದೆ.
5] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 78(3) Karnataka Police Act
ದಿನಾಂಕ: 13-06-2016 ರಂದು ರಾತ್ರಿ 9-00 ಗಂಟೆಗೆ ಪಿ.ಎಸ್.ಐ
ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಟಗಿ
ಪಟ್ಟಣದ ಮಲ್ಲಿಕ್ ಹೊಟೇಲ್ ಹತ್ತಿರ ಆಫೀಸ್ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ
ಹೋಗಿದ್ದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿ.ಸಿ-109,117,116,161,24 ಮತ್ತು ಸರಕಾರಿ
ಜೀಪ್ ಚಾಲಕ ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಮಲ್ಲಿಕ್ ಹೊಟೇಲ್ ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ
ಒಬ್ಬ ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿದ್ದನು.
ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು,
ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನನ್ನು ಹಿಡಿದು ವಿಚಾರಿಸಿದಾಗ
ಹೆಸರು ಸೈಯದ ಬಾಷಾ ತಂದೆ ಬಾಬುಸಾಬ್ ಮುನಿಯರ್ ವಯ: 34 ವರ್ಷ, ಜಾ: ಮುಸ್ಲಿಂ, ಉ: ಬಳಿ ವ್ಯಾಪಾರ ಸಾ: ಮದೀನಾ ಗಲ್ಲಿ ಕುಷ್ಟಗಿ ತಿಳಿಸಿದ್ದು ಮತ್ತು ಮಟ್ಕಾ
ಜೂಜಾಟದಲ್ಲಿ ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ
3700=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ ಮತ್ತು ಇಂಟೇಕ್ಸ್
ಕಂಪನಿಯ ಮೋಬೈಲ್ ಅಂ:ಕಿ: 500/- ರೂ:ಗಳು ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ
ಅಂತಾ ವಿಚಾರಿಸಿದಾಗ ಅಶೋಕ ಸಾವಜಿ ಸಾ: ಗಜೇಂದ್ರಗಡ
ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ. ನಂತರ ಆರೋಪಿತತನ್ನು ಮುದ್ದೆಮಾಲುಗಳನ್ನು, ಪಂಚನಾಮೆ
ಮತ್ತು ವರದಿಯೊಂದಿಗೆ ಹಾಜರಪಡಿಸಿ ವರದಿ ನೀಡಿದ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
6] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 58/2016 ಕಲಂ: 279,337,338,304(A) ಐ.ಪಿ.ಸಿ.
ದಿನಾಂಕ: 13-06-2016 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ
ಆರೋಪಿ ಪ್ರಕಾಶ ತಂದೆ ಅಂದಾನಪ್ಪ ಕೊತಂಬ್ರಿ ಸಾ: ಬ್ಯಾಹಟ್ಟಿ ತಾ: ಹುಬ್ಬಳ್ಳಿ ಇತನು ತಾನು ಚಲಾಯಿಸುತ್ತಿದ್ದ
ಟ್ರ್ಯಾಕ್ಸ ನಂ : ಕೆ.ಎ-25/ಎ-8962 ನೇದ್ದನ್ನು ಅತಿಜೋರಾಗಿ
ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಕಾತ್ರಾಳ ಸೀಮಾದಲ್ಲಿ ಸಿದ್ದಪ್ಪ ಜಾಲಿಹಾಳ ರವರ ಹೊಲದ ಹತ್ತಿರ ಹೊಗುತ್ತಿದ್ದಾಗ
ಟ್ರ್ಯಾಕ್ಸ ಚಾಲಕನು ವಾಹನದ ಮೇಲೆ ನಿಯಂತ್ರಣ ಸಾಧಿಸದೇ
ರಸ್ತೆಯ ಬಲಮಗ್ಗಲು ಪಲ್ಟಿ ಹೊಡೆಯುತ್ತಾ ಹೋಗಿ ತೆಗ್ಗಿನಲ್ಲಿ ಬಲಮಗ್ಗಲಾಗಿ ಬಿದ್ದಿದ್ದರಿಂದ
ಪಿರ್ಯಾದಿಯ ತಂದೆ ಯಮನೂರಪ್ಪ ಬೊಂದಾಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಟ್ರ್ಯಾಕ್ಸನಲ್ಲಿದ್ದ ಪಿರ್ಯಾದಿ,
ಹಾಗೂ ಇತರೇ 07 ಜನ ಪ್ರಯಾಣಿಕರಿಗೆ ಮತ್ತು ಆರೋಪಿತನಿಗೆ
ಸಾದಾ & ಭಾರಿ ಸ್ವರೂಪದ ಗಾಯಗಳಾಗಿರುತ್ತವೆ. ಅಂತಾ
ಮುಂತಾಗಿ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ
0 comments:
Post a Comment