1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
62/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ:15-06-2016 ರಂದು ಬೆಳಿಗ್ಗೆ 8.20 ಗಂಟೆ ಸುಮಾರಿಗೆ ತಾನು ತಮ್ಮೂರಲ್ಲಿರುವಾಗ
ತನ್ನ ತಮ್ಮ ಮರ್ತುಜಾಸಾಬನು ತನಗೆ ಪೋನ್ ಮಾಡಿ ಗೊಬ್ಬರ ಇಳಿಸಿ ಬರುವಾಗ
ಟಿಪ್ಪರ ಚಾಲಕ ತಮ್ಮ ಟ್ರ್ಯಾಕ್ಟರ್ ನಂ.ಕೆ.ಎ.35 ಟಿ.3286 ಮತ್ತು ಟ್ರ್ಯಾಲಿ
ನಂ.ಕೆ,.ಎ.35 ಟಿ.3287 ನೇದ್ದಕ್ಕೆ ಹಿಂದಿನಿಂದ ಟಕ್ಕರು ಕೊಟ್ಟು ಅಪಘಾತವಾಗಿ ತನಗೆ ಸ್ವಲ್ಪ ಪೆಟ್ಟಾಗಿ ವಜೀರ್ ಸಾಬನಿಗೆ ಭಾರಿಗಾಯವಾಗಿದೆ ಬೇಗ ಬಾ ಅಂತಾ ಪೋನ್ ಮಾಡಿ ತಿಳಿಸಿದ ಕೂಡಲೇ ತಾನು ತನ್ನ
ಹತ್ತಿರ ಇದ್ದ ತಮ್ಮೂರ ತಿಮ್ಮಣ್ಣ ಚೌಡಿ, ಫಕೀರಪ್ಪ ಭಜಂತ್ರಿರವರು ಕೂಡಿ ಸ್ಥಳಕ್ಕೆ ಹೋಗಿ ನೊಡಲಾಗಿ ಪೋನ್ ನಲ್ಲಿ ತಿಳಿಸಿದ ವಿಷಯ ನಿಜವಿದ್ದು, ತಾವು ತನ್ನ ತಮ್ಮ ಮರ್ತುಜಾಸಾಬನಿಗೆ ವಿಚಾರಿಸಲಾಗಿ ತನ್ನ ಅಣ್ಣ ವಜೀರ್ ಸಾಬನೊಂದಿಗೆ ತಮ್ಮ ಹೊಲಕ್ಕೆ ತಿಪ್ಪಿಗೊಬ್ಬರ ಲೋಡ್ ಮಾಡಿಕೊಂಡು ಗದಗ-ಕೊಪ್ಪಳ ಎನ್ ಹೆಚ್.63 ರಸ್ತೆಯ ಮೂಲಕ ಹೋಗಿ ಹೊಲದಲ್ಲಿ ತಿಪ್ಪಿಗೊಬ್ಬರ ಅನ್ ಲೋಡ್ ಮಾಡಿ ವಾಪಾಸ್ಸು ಅದೇ ರಸ್ತೆಯ ಮಾರ್ಗವಾಗಿ ಮತ್ತೆ ಗೊಬ್ಬರ ಲೋಡ್ ಮಾಡಿಕೊಂಡು ಹೋಗಲು
ತಳಕಲ್ ಗೆ ಬರುತ್ತಿರುವಾಗ ಟ್ರ್ಯಾಕ್ಟರ್ ನ್ನು ರಸ್ತೆಯ ಎಡಗಡೆ ನಿಧಾನವಾಗಿ
ನಡೆಸುತ್ತಾ ಮೊರಾರ್ಜಿ ಶಾಲೆಯ ಹತ್ತಿರ ಬೆಳಿಗ್ಗೆ 8-00 ಎಎಂ. ಸುಮಾರಿಗೆ ಬರುವಾಗ ಅದೇ ವೇಳೆಗೆ ತಮ್ಮ ಹಿಂದಿನಿಂದ ಅಂದರೆ ಗದಗ ಕಡೆಯಿಂದ ಒಂದು ಟಿಪ್ಪರನ್ನು ಅದರ ಚಾಲಕ ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು
ಬಂದು ಮುಂದೆ ಹೊರಟ ಟ್ರ್ಯಾಕ್ಟರ್ ನ್ನು ಲೆಕ್ಕಿಸದೇ ತಮ್ಮ ಟ್ರ್ಯಾಕ್ಟರ್ ಗೆ ಹಿಂದಿನಿಂದ ಟಕ್ಕರು ಕೊಟ್ಟು ಅಪಘಾತ ಪಡಿಸಿದ್ದು, ಇದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿ ಟ್ರ್ಯಾಲಿ ಬಾಡಿ ರಸ್ತೆಯ ಮೇಲೆ
ಬಿದ್ದು, ಟ್ರ್ಯಾಕ್ಟರ್ ಇಂಜಿನ್ ಮತ್ತು
ಟ್ರ್ಯಾಲಿಯ ಚೆಸ್ಸಿ ರಸ್ತೆಯ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಟಿಪ್ಪರ ಚಾಲಕ ಟಿಪ್ಪರನ್ನು ರಸ್ತೆಯ ಬಲಬಾಗದ ತಗ್ಗಿನಲ್ಲಿ ಇಳಿಸಿ ವಾಹನ ಬಿಟ್ಟು ಓಡಿಹೋದನು. ಅಪಘಾತದಿಂದ ತನ್ನ ಅಣ್ಣ ವಜೀರ್ ಸಾಬನಿಗೆ ತಲೆ ಮೇಲೆ ಭಾರಿರಕ್ತಗಾಯವಾಗಿ, ಎಡಗಣ್ಣಿನ ಹುಬ್ಬಿನ ಮೇಲೆ,ಎಡಕೆನ್ನೆಗೆ, ಎಡಕಿವಿಗೆ, ಎಡಬುಜದ ಮೇಲೆ, ಎರಡೂ ಕೈಗೆ ಮತ್ತು ಎರಡೂ ಕಾಲಿನ ಮೊಣಕಾಲಿನ ಹತ್ತಿರ ಅಲ್ಲಲ್ಲಿ ತೆರಚಿದ
ಗಾಯಗಳಾಗಿದ್ದು, ತನಗೆ ಎಡಗೈಗೆ ಒಳಪೆಟ್ಟಾಗಿದ್ದು
ಇದೆ ಅಂತಾ ತಿಳಿಸಿ ಟಿಪ್ಪರ ಚಾಲಕನಿಗೆ ತಾನು ನೋಡಿದರೆ ಗುರುತಿಸುತ್ತೇನೆ ಅಂತಾ ಹೇಳಿದನು.
ತಾವು ನೋಡಲಾಗಿ ಟಿಪ್ಪರನಲ್ಲಿ ಯಾರೂ ಇದ್ದಿಲ್ಲ. ಅದರ ನಂ.ಜಿ.ಎ.05 ಟಿ.0598 ಅಂತಾ ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
120/2016 ಕಲಂ: 498(ಎ), 323, 324, 504, 506 ಸಹಿತ 34 ಐ.ಪಿ.ಸಿ.
ಪಿರ್ಯಾದಿದಾರರಾದ ಶ್ರೀಮತಿ ಭಾಗ್ಯಲಕ್ಷ್ಮೀ ಗಂಡ ಮಲ್ಲಿಕಾರ್ಜುನ ಹೊಸಮನಿ ವಯಾ-32 ವರ್ಷ ಜಾ. ಲಿಂಗಾಯತ ಸಾ. ಸಿದ್ದಾಪೂರ ತಾ. ಗಂಗಾವತಿ ರವರು ದೂರು ನೀಡಿದ್ದು ನನಗೆ ಈಗ್ಗೆ 6 ವರ್ಷಗಳ ಹಿಂದೆ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನ ಗೌಡ ತಂದಿ ವಿರುಪಾಕ್ಷಪ್ಪ ಹೊಸಮನಿ ಇವರೊಂದಿಗೆ ಬೆನ್ನೂರು ಗ್ರಾಮದ ಕಲ್ಲೇಶ್ವರ ದೇವಸ್ಥಾನದಲ್ಲಿ ನಮ್ಮ ತಾಯಿ ಹನುಮಮ್ಮ ಮತ್ತು ನಮ್ಮ ಸೊಹದರ ಮಾವ ಬಸವರಾಜ ಇವರು ಕೂಡಿ ಗುರುಹಿರಿಯ ಸಮಕ್ಷದಲ್ಲಿ ಹಾಗೂ 4 ತೊಲೆ ಬಂಗಾರ ಬಟ್ಟೆ ಬರಿ ಹಾಗೂ ದಿನನಿತ್ಯದ ಅಡುಗೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು ಮದುವೆಯಾದ ನಂತರ ನನ್ನ ಗಂಡನ ಮನೆಗೆ ಬಾಳುವೆ ಮಾಡಲೆಂದು ಬಂದು ಸಿದ್ದಾಪೂರದಲ್ಲಿ ವಾಸವಾಗಿದ್ದು ನನ್ನ ಗಂಡನು ಬೆನ್ನೂರ ಗ್ರಾಮದಲ್ಲಿ ಕಲ್ಲೇಶ್ವರ ಹಿರಿಯ ಪ್ರಾಥಮೀಕ ಶಾಲೆಯೊಂದರಲ್ಲಿ ಹಾಗೂ ನಾನು ಡಿಇಡಿ ಪದವಿದರಳು ಇರುವುದರಿಂದ ನಾನು ಶಾಲೆ ಪಾಠ ಮಾಡಲು ಹೋಗುತ್ತಿದ್ದೇನು ನನಗೆ 1) ಪೃತ್ವಿರಾಜ 2) ಮೇಗರಾಜ ಅಂತಾ ಎರಡು ಮಕ್ಕಳಾಗಿದ್ದರಿಂದ ನಾನು ಶಾಲೆಗೆ ಹೋಗದೇ ಮನೆಯಲ್ಲಿ ಮಕ್ಕಳನ್ನು ನೊಡಿಕೊಂಡು ಮನೆ ಕೆಲಸ ಮಾಡಿಕೊಂಡು ಇದ್ದೇನು ನನನ್ನ ಗಂಡ ಮಲ್ಲಿಕಾರ್ಜುನ, ಮೈದೂನ ಪಂಪನಗೌಡ ಮತ್ತು ಅತ್ತೆ ಪಾರ್ವತೆಮ್ಮ ನಾದಿನಿ ಶ್ರೀದೇವಿ ಇವರು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನಿಡುವುದು ನೀನು ದುಡಿಯಲಿಲ್ಲಾ ದುಕ್ಕಬಡಿಯಲಿಲ್ಲಾ ನಿನಗೆ ನಿನ್ನ ಮಕ್ಕಳಿಗೆ ಎಲ್ಲಿಂದ ಕುಳ ಹಾಕಬೇಕು ಅಂತಾ ಬೈದಾಡಿ ಕೆಲವೊಂದು ಸಲ ನನಗೆ ಹೊಡೆಬಡೆ ಮಾಡಿ ಊಟ ಹಾಕದೇ ಉಪಾವಾಸ ಹಾಕಿರುತ್ತಾರೆ ನಾನು ನನ್ನ ತವರಿಗೆ ಹೋದಾಗ ಅಳುತ್ತಾ ನಮ್ಮ ತಾಯಿಯ ಮುಂದೆ ಹೇಳಿರುತ್ತೇನೆ ನನ್ನ ತಾಯಿ ನನಗೆ ಸಮಾಧಾನ ಮಾಡಿ ಕಳುಹಿಸಿಕೊಟ್ಟು ನನ್ನ ಗಂಡನಿಗೆ ನಮ್ಮ ಅತ್ತೆಯವರಿಗೆ ಬುದ್ದಿವಾದ ಹೇಳಿಸಿ ಮತ್ತೆ ಕಳುಹಿಸಿಕೊಟ್ಟಿದ್ದರು ಕಳುಹಿಸಿಕೊಟ್ಟ ನಂತರವು ನನ್ನ ಗಂಡ ಮೈದುನ ಅತ್ತೆ ನಾದಿನಿ ಎಲ್ಲರೂ ಸೇರಿ ಅಶ್ಲೀಲವಾಗಿ ಬೈದು ಗಂಡನಿಗೆ ಇಲ್ಲ ಸಲ್ಲದ ವಿಷಯಗಳನ್ನು ಹೇಳಿ ಮುಂದೆ ನಿಂತುಕೊಂಡು ಬಡಿಸುತ್ತಾರೆ. ನನ್ನ ಬಾಳುವೆ ಅಂತಾ ಸಹಿಸಿಕೊಂಡು ಗಂಡನ ಮನೆಯಲ್ಲಿ ಇದ್ದೇನು ಇಂದು ದಿನಾಂಕ:-15-06-2016 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನನ್ನ ಗಂಡನು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ್ಗೆ ಮಕ್ಕಳು ಬಾತ್ ರೋಮ್ ಗೆ ಹೋಗಿದ್ದರ ವಿಷಯಕ್ಕೆ ಸಂಬಂದಿಸಿದಂತೆ ನನ್ನೊಂದಿಗೆ ಜಗಳ ತೆಗೆದು ಅಡುಗೆ ಮಾಡುತ್ತಿದ್ದ ನನಗೆ ಬಂದು ಹೊಡೆಬಡೆ ಮಾಡಿದನು ನನ್ನ ಅತ್ತಿ ನಾದಿನಿಯರು ಆತನಿಗೆ ಪ್ರಚೋದನೆ ಮಾಡಿದರು ನನ್ನ ಗಂಡ ನನಗೆ ಕೊಣೆಯಲ್ಲಿ ಹಾಕಿದ್ದನು ನಾನು ಆಗಲೇ ಪೊಲೀಸ ಠಾಣೆಗೆ ಬರಬೇಕಂದರೆ ನನ್ನ ಗಂಡ ನನಗೆ ಮನೆಯಿಂದ ಹೋದರೆ ಸಾಯಿಸಿಬಿಡುತ್ತೇನೆ ಅಂತಾ ಜೀವ ಬೇದರಿಕೆ ಹಾಕಿರುತ್ತಾರೆ ನಾನು ಬಾತರೋಮ್ ಗೆ ಹೋಗುತ್ತೇನೆ ಅಂತಾ ಹೇಳಿ ನನ್ನ ದೊಡ್ಡಮಗನನ್ನು ಕರೆದುಕೊಂಡು ಬಂದಿದ್ದು ನನಗೆ ರಕ್ಷಣೆ ನೀಡಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಮೇಲೆ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment