1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 112/2016 ಕಲಂ: 279, 338 ಐ.ಪಿ.ಸಿ:.
ದಿ:02-06-2016
ರಂದು 01-40 ಎ.ಎಮ್ ಕ್ಕೆ. ಫಿರ್ಯಾದಿದಾರರಾದ ಆರ್. ಮಣಿ ತಂದೆ ಮಗಲೆಪ್ಪ. ಆರ್. ಸಾ: ಪುಂಗನೂರ. ಜಿ:
ಚಿತ್ತೂರ [ಎ.ಪಿ] ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶವೇನೆಂದರೇ, ನಿನ್ನೆ ದಿ:01-06-16 ರಂದು ಮಧ್ಯಾಹ್ನ ನಾನು ಮತ್ತು
ನಮ್ಮ ಐಶರ್ ಲಾರಿಯ ಚಾಲಕ ಜಿ. ಹನ್ಮಂತ ಇಬ್ಬರೂ ಕೂಡಿ ಬೆಳಗಾಂ ದಲ್ಲಿ ನಮ್ಮ ಐಶರ್ ವಾಹನದಲ್ಲಿ
ಕೋಸಗಡ್ಡಿ ಲೋಡ ಮಾಡಿಕೊಂಡು ಬಳ್ಳಾರಿ ಗೆ ಅನಲೋಡ ಮಾಡಲು ಅಂತಾ ಬರುತ್ತಿದ್ದೆವು. ನಂತರ ನಮ್ಮ ಐಶರ
ನಂ; ಎಪಿ-03/ಟಿಸಿ-9484 ನೇದ್ದರ ಚಾಲಕನು ನಿನ್ನೆ ರಾತ್ರಿ 11-50 ಗಂಟೆಯ ಸುಮಾರಿಗೆ ಗದಗ-ಕೊಪ್ಪಳ ಎನ್.ಹೆಚ್-63 ರಸ್ತೆಯ ದದೇಗಲ್ ದಾಟಿ ಕೊಪ್ಪಳ ಕಡೆಗೆ ರಸ್ತೆಯ ತಿರುವಿನಲ್ಲಿ ಓಡಿಸಿಕೊಂಡು ಬರುತ್ತಿದ್ದಾಗ, ಅದೇವೇಳೆಗೆ ಎದುರುಗಡೆ ಕೊಪ್ಪಳ ಕಡೆಯಿಂದ ಲಾರಿ ನಂ: ಕೆಎ-19/ಎಎ-2606 ನೇದ್ದರ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬಂದವನೇ ನಮ್ಮ ವಾಹನಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು
ಇರುತ್ತದೆ. ಈ ಅಪಘಾತದಲ್ಲಿ ಅಪಘಾತ ಮಾಡಿದ ಲಾರಿಯ ಚಾಲಕ ಸೂರ್ಯಬಾನ ಇತನ ತಲೆಯ ಬಲಗಡೆ, ಬಲಕಿವಿಗೆ ಭಾರಿ ರಕ್ತಗಾಯವಾಗಿದ್ದು, ಅಲ್ಲದೇ ಬಲಕಾಲ ಮೊಣಕಾಲ ಕೆಳಗಡೆ ಭಾರಿ ರಕ್ತಗಾಯವಾಗಿದೆ. ಮತ್ತು
ಎಡಕಾಲ ಮೊಣಕಾಲ ಕೆಳಗಡೆ ತೆರೆಚಿದ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ
ಕೈಗೊಂಡಿದ್ದು ಅದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:
113/2016 ಕಲಂ: 279, 337, 338, 304(ಎ) ಐ.ಪಿ.ಸಿ :.
ದಿ:02.06.2016 ರಂದು ಬೆಳಿಗ್ಗೆ 11.30 ಗಂಟೆಗೆ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ರಸ್ತೆ ಅಪಘಾತದಲ್ಲಿ
ಗಾಯಗೊಂಡ ಗಾಯಾಳುಗಳು ಚಿಕಿತ್ಸೆ ಕುರಿತು ದಾಖಲಾದ ಬಗ್ಗೆ ಎಂ.ಎಲ್.ಸಿ ಮಾಹಿತಿ ಬಂದಿದ್ದರಿಂದ, ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಪೈಕಿ ಬಸವರಾಜ
ತಂದೆ ಚಿದಾನಂದಪ್ಪ. ಸಾ: ಹಳೇಬಜಾರ, ಸಿಂಧನೂರ, ಇವರನ್ನು ವಿಚಾರಿಸಿ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ಇಂದು ದಿ:02.06.2016 ರಂದು ವೈಯಕ್ತಿಕ ಕೆಲಸದ ನಿಮಿತ್ಯ ಗಂಗಾವತಿ-ಕೊಲ್ಲಾಪುರ ಬಸ್ಸಿನಲ್ಲಿ ರಸ್ತೆಯಲ್ಲಿ ಗಂಗಾವತಿಯಿಂದ ಬರುತ್ತಿರುವಾಗ ಬಸ್ ಗಿಣಗೇರಿ ದಾಟಿ
ಕೊಪ್ಪಳ ಕಡೆ ಬಸಾಪುರ ಮಾರ್ಗವಾಗಿ ಹೊರಟಾಗ ಬಸಾಪುರ ದಾಟಿ ಕೊಪ್ಪಳ ಕಡೆ ಹೊರಟಾಗ
ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ.ಎ-37/ಎಫ್-619 ನೇದ್ದರ ಚಾಲಕ ವೀರಣ್ಣ ಆವಟಿ, ಈತನು ರಸ್ತೆಯ ತಿರುವುಗಳನ್ನು ಲೆಕ್ಕಿಸದೇ ಬಸ್ಸನ್ನು ಅತೀವೇಗವಾಗಿ
ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸುತ್ತಾ ಬೆಳೆಗ್ಗೆ 09.15 ಗಂಟೆ ಸುಮಾರಿಗೆ ಎದುರುಗಡೆ ಬರುತ್ತಿದ್ದ ಲಾರಿ ನಂ: ಎ.ಪಿ.29/ಟಿ-9495 ನೇದ್ದಕ್ಕೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತದಲ್ಲಿ ನನಗೆ ಮತ್ತು ನನ್ನಂತೆ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ, 1] ಬಸಪ್ಪ ತಂದೆ ಫಕೀರಪ್ಪ ಮಡಿವಾಳರ, 2] ಮಾಯಮ್ಮ ಗಂಡ ಲಕ್ಷ್ಮಣ 3] ಶರತ್ ತಂದೆ ಶಿವಕುಮಾರ ಶಾಬಾದಿ 4] ಶಿವಕುಮಾರ ತಂದೆ ವೀರಬದ್ರಪ್ಪ ಸಿಂಪಿ 5] ಎನ್.ಶಂಕ್ರಪ್ಪ ತಂದೆ ವೀರುಪಾಕ್ಷಪ್ಪ ಸಿಂಪಿ 6] ಮಂಜುನಾಥ ತಂದೆ ಬಸಪ್ಪ ಕಳ್ಳಿಮನಿ 7] ಅನ್ನಪೂರ್ಣ ಗಂಡ ಮಂಜುನಾಥ ಕಳ್ಳಿಮನಿ 8] ವಿಜಯ ತಂದೆ ಮಂಜುನಾಥ ಕಳ್ಳಿಮನಿ, 9] ಈಶಪ್ಪ ತಂದೆ ಹನಮಂತಪ್ಪ ಕಾಸನಕಂಡಿ 10] ಪಾರ್ವತಿ ತಂದೆ ಹನಮಂತಪ್ಪ ಅಡ್ಡಿ 11] ಪವಿತ್ರಾ ತಂದೆ ರಾಘವೇಂದ್ರ ಮರಾಠಿ 12] ರಾಘವೇಂದ್ರ ತಂದೆ ಶೇಖರರಾವ್ ಮರಾಠಿ 13] ರವಿಕುಮಾರ ತಂದೆ ಮಲ್ಲಿಕಾರ್ಜುನ ಚಟ್ಟೇರ 14] ಸೈಯದ್ ಮದಾರ ತಂದೆ ಅಬ್ದುಲ್ ಖರೀಂ 15] ಅನೀಲಕುಮಾರ ತಂದೆ ಹನಮಂತಪ್ಪ ಚಾಕರಿ 16] ಸೋಮಣ್ಣ ತಂದೆ ಕಾಳಪ್ಪ ಪತ್ತಾರ 17] ಈರಮ್ಮ ಗಂಡ ನಾಗಪ್ಪ ಆಚಾರಿ 18] ಅಬ್ಬಾಸಲಿ ತಂದೆ ಶಬ್ಬೀರಸಾಬ ಅರಗಂಜಿ ಇವರಿಗೆ ಹಾಗೂ ಬಸ್ಸಿನ ಡ್ರೈವರ್ ವೀರಣ್ಣ ಆವಟಿ, ನಿರ್ವಾಹಕ. ಕೆ.ಮಂಜುನಾಥ ಕುರ್ಡೇಕರ್ ಇವರಿಗೆ ಹಾಗೂ ಲಾರಿಯ ಕ್ಲೀನರ್
ಮಲ್ಲಯ್ಯ ತಂದೆ ಅಚ್ಚಯ್ಯ ಇವರಿಗೆ ಭಾರಿ ಮತ್ತು ಸಾದಾ ಸ್ವರೂಪದ ಗಾಯಗಳಾಗಿದ್ದು, ಅಪಘಾತದಲ್ಲಿ ಲಾರಿ ಡ್ರೈವರ್ ನಿರಂಜನ್ ಸಾ: ಹೈದ್ರಾಬಾದ. ಈತನಿಗೆ
ಭಾರಿ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲಿ ಮೃತಪಟ್ಟಿದ್ದು ಇರುತ್ತದೆ. ನಂತರ ಗಾಯಗೊಂಡಿದ್ದ
ನಾವುಗಳು 108 ಅಂಬುಲೆನ್ಸ ದಲ್ಲಿ ಕೊಪ್ಪಳ
ಜಿಲ್ಲಾ ಆಸ್ಪತ್ರೆಗೆ ಬಂದು ಚಿಕಿತ್ಸೆಗಾಗಿ ಸೇರಿಕೆ ಯಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ
ಕೆ.ಎಸ್.ಆರ್.ಟಿ.ಸಿ ಬಸ್ ನಂ-ಕೆ.ಎ-37/ಎಫ್-619 ನೇದ್ದರ ಚಾಲಕ ವೀರಣ್ಣ ತಂದೆ
ಶ್ರೀಶೈಲಪ್ಪ ಆವಟಿ ಬ್ಯಾಡ್ಜ್ ನಂ: 709 ಸಾ: ಕುಷ್ಟಗಿ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ ನೀಡಿದ ದೂರನ್ನು
ಪಡೆದುಕೊಂಡು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment