1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 118/2016 ಕಲಂ: 279, 338 ಐ.ಪಿ.ಸಿ:.
ದಿ:06-06-2016
ರಂದು 7-00 ಪಿ.ಎಮ್ ಕ್ಕೆ ಜಿಲ್ಲಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಆಸ್ಪತ್ರೆಗೆ ಭೇಟಿ ನೀಡಿ
ಗಾಯಾಳು ಆರೈಕೆಯಲ್ಲಿದ್ದ ಈರಣ್ಣ ಧರ್ಮಾಪೂರ. ಸಾ: ಗಿಣಿಗೇರಿ. ತಾ:ಕೊಪ್ಪಳ. ಇವರು ನೀಡಿದ ಹೇಳಿಕೆ
ಫಿರ್ಯಾದಿ ಸಾರಾಂಶವೇನೆಂದರೇ, ಇಂದು ದಿ:06-06-16 ರಂದು ಸಂಜೆ 5-00 ಗಂಟೆಯ ಸುಮಾರಿಗೆ ತನ್ನ ಅಣ್ಣ
ಯಲ್ಲಪ್ಪನು ಭೀಮನೂರ ಕಡೆ ಹೊಲದಿಂದಾ ವಾಪಾಸ್ ಮನೆಗೆ ಅಂತಾ ಬರುವಾಗ ಭೀಮನೂರ ರಸ್ತೆಯಲ್ಲಿ ತನ್ನ
ಮೋಟಾರ ಸೈಕಲ್ ನಂ: ಕೆಎ-37/ಇಎ-8452 ನೇದ್ದನ್ನು ಅತೀವೇಗವಾಗಿ
ಹಾಗೂ ಅಲಕ್ಷ್ಯತನದಿಂದಾ ಓಡಿಸುತ್ತಾ ಬರುವಾಗ ನಿಯಂತ್ರಿಸದೇ ಸ್ಕಿಡ್ ಮಾಡಿಕೊಂಡು ಬಿದ್ದಿದ್ದು
ಇರುತ್ತದೆ. ಈ ಅಪಘಾತದಲ್ಲಿ ಯಲ್ಲಪ್ಪನ ತಲೆಗೆ ಭಾರಿ ಒಳಪೆಟ್ಟಾಗಿ ಕಿವಿಯಲ್ಲಿ ರಕ್ತ ಬಂದಿದ್ದು
ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 47/2016 ಕಲಂ: 279, 337, 338 ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:.
ದಿನಾಂಕ: 06-06-2016 ರಂದು
ಇಲಗಲ್ ಮಹಾಂತೇಶ(ಅಕ್ಕಿ) ಆಸ್ಪತ್ರೆಯಲ್ಲಿ ಇಲಾಜು ಪಡೆಯುತ್ತಿದ್ದ ಗಾಯಾಳು ಯಲಗೂರದಪ್ಪ ತಂದೆ ಮಕಾಳೆಪ್ಪ
ವಡಗೇರಿ. ಸಾ:ಕುಂಬಳಾವತಿ ರವರ ನುಡಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ಫಿರ್ಯಾದಿದಾರರು
ತನ್ನ ಮೋಟಾರ ಸೈಕಲ್ ನಂ. ಕೆ.ಎ-37/2041 ನೇದ್ದನ್ನು ತೆಗೆದುಕೊಂಡು ಅವರ ಮಾವ ಬಸಪ್ಪ ತಂದೆ ಹೊಳೆಯಪ್ಪ
ಜೋಗಿನ ಈತನನ್ನು ಹಿಂದಗಡೆ ಕೂಡಿಸಿಕೊಂಡು ಕುಂಬಳಾವತಿ ಗ್ರಾಮ ಇನ್ನೂ 1 ಕಿ.ಮೀ. ದೂರ ಇರುವಾಗ ದ್ಯಾಮವ್ವನ
ಪಾದಗಟ್ಟಿ ಹಾಗೂ ಆಂಜನೇಯ ದೇವಸ್ಥಾನದ ನಡುವೆ ಕುಂಬಳಾವತಿ ಗ್ರಾಮದ ಕಡೆಗೆ ಹೊರಟಾಗ ಎದುರುಗಡೆಯಿಂದ
ಬಂದ ಮೋಟಾರ ಸೈಕಲ್ ನಂ:ಕೆ.ಎ-36/ಇ.ಸಿ-9693 ನೇದ್ದರ ಸವಾರ ಅತೀವೇಗ ಹಾಗೂ ಆಲಕ್ಷತನದಿಂದ ತನ್ನ ಮೋಟಾರ
ಸೈಕಲನ್ನು ನಡೆಸಿಕೊಂಡು ಬಂದು ನನ್ನ ಮೋಟಾರ ಸೈಕಲನ ಬಲಗಡೆಯ ಕನ್ನಡಿಗೆ ಟಕ್ಕರಕೊಟ್ಟಿದ್ದು, ಅಪಘಾತಪಡಿಸಿದ್ದು,
ಆಗ ನಾನು ಮತ್ತು ನಮ್ಮ ಮಾವ ಬಸಪ್ಪ ಜೋಗಿನ ಇಬ್ಬರೂ ಮೋಟಾರ ಸಮೇತ ಕೆಳಗೆ ಬಿದ್ದೇವು. ನನಗೆ ಬಲಗಡೆ
ಪಾದಕ್ಕೆ, ಬಲ ಮೊಣಕಾಲಿಗೆ. ಬಲಗಡೆ ನಡಕ್ಕೆ ರಕ್ತ ಗಾಯಗಳಾಗಿರುತ್ತವೆ. ನಮ್ಮ ಮಾವ ಬಸಪ್ಪನಿಗೆ ಬಲಗಡೆ
ಮೊಣಕಾಳಿಗೆ ಮೂಕಪೆಟ್ಟು. ಬಲಗಡೆ ಚೆಪ್ಪೆ ಮತ್ತು ನಡಕ್ಕೆ ರಕ್ತ ಗಾಯಗಳಾಗಿರುತ್ತವೆ. ಸಾದಾ ಹಾಗೂ ತೀವ್ರ
ಸ್ವರೂಪದ ಗಾಯಪಡಿಸಿ ಓಡಿ ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ:
95/2016 ಕಲಂ: 465, 468, 420, 425 ಐ.ಪಿ.ಸಿ :.
ಶ್ರೀ. ಕೊಟ್ರಬಸಯ್ಯ ಫಿರ್ಯಾದಿದಾರರು
ಕೊಪ್ಪಳ ನಗರದ ಸರ್ವೆ ನಂ 644/4 ನೇದ್ದರಲ್ಲಿ 20 ಗುಂಟೆ ಜಾಗೆಯನ್ನು ಖರೀದಿ ಮಾಡಿದ್ದು ಆರೋಪಿತರು
ಫಿರ್ಯಾದಿದಾರರ ನಕಲಿ ಸಹಿ ಮಾಡಿ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಮಾಡಿ ತಹಸೀಲ್ ಆಫೀಸಿಗೆ ಕೊಟ್ಟು
ಎನ್.ಎ. ಜಾಗೆ ಅಂತಾ ಸದರಿ ಜಾಗೆಯನ್ನು ಭೂ ಪರಿವರ್ಥನೆ ಮಾಡಿಸಿಕೊಂಡು ಸರ್ವೆ ಆಫೀಸಲ್ಲಿ ಫಿರ್ಯಾದಿದಾರರು
ಅರ್ಜಿಯನ್ನು ಸಲ್ಲಿಸದೇ ಮತ್ತು ಫಿರ್ಯಾದಿದಾರರ ಗಮನಕ್ಕೆ ತರದೇ ಫಾರಂ ನಂ 10 ಮಾಡಿಸಿಕೊಂಡು ಮೊಸ ಮಾಡಿದ್ದು
ಇರುತ್ತದೆ ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ:
110/2016 ಕಲಂ: 406, 420 ಸಹಿತ 34 ಐ.ಪಿ.ಸಿ :.
ನಾಗರಾಜ ತಂದೆ ಗುದ್ನೆಪ್ಪ ಹಂಚಿನಾಳ
ಫಿರ್ಯಾದಿದಾರರು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ,
ಆರೋಪಿತರಾದ ಶ್ರೀನಿವಾಸ ಮತ್ತು
ಶರಣಪ್ಪ ರವರು ಸಿ.ಬಿ.ಎಸ್. ಗಂಜದಲ್ಲಿ ಶ್ರೀ ರಾಘವೇಂದ್ರ ಕ್ಯಾನ್ವಸಿಂಗ್ ಹೆಸರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಆರೋಪಿತರಿಬ್ಬರು ಕೂಡಿಕೊಂಡು
ದಿನಾಂಕ 04-02-2016 ರಿಂದ ದಿನಾಂಕ 03-03-2016 ರ ಅವಧಿಯಲ್ಲಿ ಫಿರ್ಯಾದಿದಾರರಿಂದ ರೂ. 9,49,544-00 ಬೆಲೆ ಬಾಳುವ ಅಕ್ಕಿಯನ್ನು ಮಾರಾಟ ಮಾಡಿಸುವ ಕುರಿತು ತೆಗೆದುಕೊಂಡು ಸದರಿ ಹಣವನ್ನು ಫಿರ್ಯಾದಿದಾರರಿಗೆ ಕೊಡದೆ
ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದು ಅಲ್ಲದೇ ಅದರಂತೆ ಸಿ.ಬಿ.ಎಸ್. ಗಂಜದಲ್ಲಿ ವ್ಯಾಪಾರ ಮಾಡಕೊಂಡಿರುವ
(01) ಶ್ರೀ ಶಿವ ಮಂಜುನಾಥ & ಕೋ.ದ ಶರಣೇಗೌಡ
ಇವರಿಂದ ರೂ.5,49,853-00 ಬೆಲೆ ಬಾಳುವ ಅಕ್ಕಿ. (02) ಶ್ರೀ ಟ್ರೇಡರ್ಸ್ನ ಮಾಲೀಕರಾದ ಲಲೀತ್ ಕುಮಾರ ಸುರಾನ ಇವರಿಂದ ರೂ. 5,37,370-00 ಬೆಲೆ
ಬಾಳುವ ಅಕ್ಕಿ.
(03) ರಾಜಶ್ರೀ & ಕಂಪನಿ ಮಾಲೀಕರು ಶ್ರೀಮತಿ
ಶೋಭಾ,ಆರ್.ಸುರಾನ ರವರಿಂದ ಒಟ್ಟು ಹಣ ರೂ.
3,84,153-00 ಬೆಲೆ ಬಾಳುವ ಅಕ್ಕಿ.
(04) ಸಿಮ್ರತ್ ಮಲ್ ಪನ್ನಲಾಲ್ ಸುರಾನ ಅಂಗಡಿಯ
ಮಾಲೀಕರಾದ ರಾಜೇಶಕುಮಾರ ಸುರಾನ ರವರಿಂದ ಒಟ್ಟು ರೂ.6,08,300-00 ಬೆಲೆ ಬಾಳುವ ಅಕ್ಕಿ. ಈ ರೀತಿಯಾಗಿ ಒಟ್ಟು ರೂ. 30,29,220-00 ಬೆಲೆ ಬಾಳುವ ಅಕ್ಕಿಯನ್ನು ಮಾರಾಟ
ಮಾಡಿಸುವ ಕುರಿತು ತೆಗೆದುಕೊಂಡು ಇದರ ಹಣವನ್ನು ಸದರಿಯವರಿಗೆ ವಾಪಸ್ ಕೊಡದೆ ನಂಬಿಕೆ ದ್ರೋಹವೆಸಗಿ
ಮೋಸ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment