1] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 23/2016 ಕಲಂ: 279, 337, 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ. 07-06-2016
ರಂದು ರಾತ್ರಿ 7-35 ಗಂಟೆಗೆ ಕೊಪ್ಪಳದ ಕಿಮ್ಸ್ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ
ಹೋಗಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಬಸಪ್ಪ
ಕೊಡದಾಳ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ. 07-06-2016 ರಂದು ನಾನು ಮತ್ತು ನಮ್ಮ
ಅಣ್ಣ ಶರಣಪ್ಪ ಇಬ್ಬರೂ ನಮ್ಮ ಮೋಟಾರ್ ಸೈಕಲ್ ನಂಬರ್ KA 36 / R 6122 ನೇದ್ದನ್ನು ತೆಗೆದುಕೊಂಡು ಕೆಲಸದ ನಿಮಿತ್ಯ ಕೊಪ್ಪಳಕ್ಕೆ ಬಂದು, ಅಲ್ಲಿ ಕೆಲಸವನ್ನು ಮುಗಿಸಿಕೊಂಡು ಮೆಕ್ಕೆಜೋಳದ ಪಾಕೀಟ್ ಗಳನ್ನು ತೆಗೆದುಕೊಂಡು ವಾಪಾಸ್
ನಮ್ಮೂರಿಗೆ ಹೋಗಲು ನನ್ನ ಮೋಟಾರ್ ಸೈಕಲ್ ಹಿಂದೆ ನಮ್ಮ ಅಣ್ಣನನ್ನು ಕೂಡಿಸಿಕೊಂಡು ಕುಷ್ಟಗಿ
ರಸ್ತೆಯ ಮೇಲೆ ರೇಲ್ವೆ ಗೇಟ್ ದಾಟಿ ಗುರು ಗಾರ್ಡನ್ ಹೊಟೆಲ್ ಸಮೀಪ ಕಾಮನೂರು ಕಡೆಗೆ
ಹೋಗುತ್ತಿರುವಾಗ ಎದುರುಗಡೆಯಿಂದ ಕಾರ್ ನಂ. KA 37 / M 5223 ನೇದ್ದರ ಚಾಲಕನು ತಾನು ಚಲಾಯಿಸುತ್ತಿರುವ ಕಾರನ್ನು ತನ್ನ ಮುಂದೆ ಬರುತ್ತಿರುವ ವಾಹನವನ್ನು
ಓವರ್ ಟೇಕ್ ಮಾಡಿ ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ್
ಸೈಕಲ್ ಗೆ ಟಕ್ಕರ್ ಮಾಡಿ ಅಪಘಾತ ಮಾಡಿದ್ದು, ಇದರಿಂದ ನಾವು ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಇದರಿಂದ ನನಗೆ ಬಲಗಾಲಿನ ಬೆರಳುಗಳಿಗೆ, ಬಲಗೈ ಮೊಣಕೈ ಗೆ ರಕ್ತಗಾಯ, ನನ್ನ ಅಣ್ಣ ಶರಣಪ್ಪ ಈತನಿಗೆ
ಬಲಗಾಲಿನ ಪಾದಕ್ಕೆ, ಪಾದದ ಮೇಲ್ಭಾಗ ಮತ್ತು
ಮೊಣಕಾಲಿಗೆ ಭಾರಿ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಯು.ಡಿ.ಆರ್. ನಂ: 12/2016 ಕಲಂ: 174 ಸಿ.ಆರ್.ಪಿ.ಸಿ:.
ದಿನಾಂಕ:-07-06-2016
ರಂದು ಸಾಯಂಕಾಲ 4-40 ಗಂಟೆಗೆ ಪಿರ್ಯಾದುದಾರರಾದ ಕೇಶಪ್ಪ ತಂದಿ ದೇವಪ್ಪ ಅರಳ್ಳಿ ವಯಾ-
38 ವರ್ಷ ಜಾ. ನಾಯಕ ಸಾ. ನಂದಿಹಳ್ಳಿ ರವರು ಠಾಣೆಗೆ ಹಾಜರಾಗಿ ಒಂದು ಲಿಖಿತ ದೂರು ನೀಡಿದ್ದು ಸಾರಾಂಶದಲ್ಲಿ ನಂದಿಹಳ್ಳಿ ಸೀಮಾದಲ್ಲಿ ಪಿರ್ಯಾದಿದಾರರ ಜಮೀನು ಇದ್ದು ಸದ್ರಿ ಜಮೀನಿನಲ್ಲಿ ಪಿರ್ಯಾದಿದಾರ
ಮತ್ತು ಈತನ ಹೆಂಡಿತಿ ಶ್ರೀಮತಿ ರಾಜಮ್ಮ ಗಂಡ ಕೇಶಪ್ಪ
ಅರಳ್ಳಿ ಇವರು ಇಂದು ದಿನಾಂಕ-07-06-2016 ರಂದು ಜಮೀನಿನಲ್ಲಿ
ಕೆಲಸ ಮಾಡುತ್ತಿದ್ದಾಗ್ಗೆ ಮದ್ಯಾಹ್ನ 2-45 ಗಂಟೆಯಿಂದ 3-00 ಗಂಟೆಯ ಅವಧಿಯಲ್ಲಿ ಹೊಲದಲ್ಲಿ ಕೃಷ್ಷಿ ಚಟುವಟಿಯಲ್ಲಿ ತೊಡಗಿದ್ದಾಗ್ಗೆ ಪ್ರಕೃತಿ
ವಿಕೋಪದಿಂದ ಬಾರಿ ಮಳೆ
ಗಾಳಿ ಬಂದಿದ್ದರಿಂದ ಸದ್ರಿ ಶ್ರೀಮತಿ ರಾಜಮ್ಮ ಈಕೆಯು ಗಿಡದ ಚಾಟಿನಲ್ಲಿ ನಿಂತಿದ್ದಾಗ್ಗೆ
ಮಳೆಯೊಂದಿಗೆ ಬಂದ ಬಾರಿ ಸಿಡಿಲು ರಾಜಮ್ಮಳಿಗೆ ಬಡಿದು ಹೊಟ್ಟೆಗೆ ಗಂಭೀರ ಗಾಯಗಳಾಗಿ
ಸ್ಥಳದಲ್ಲೆ ಮೃತಪಟ್ಟಿರುತ್ತಾಳೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಯು.ಡಿ.ಅರ್. ನಂ: 11/2016 ಕಲಂ: 174(ಸಿ) ಸಿ.ಆರ್.ಪಿ.ಸಿ:.
ದಿನಾಂಕ : 07-06-2016 ರಂದು ಸಾಯಂಕಾಲ 5-30 ಗಂಟೆಗೆ ಫಿರ್ಯಾದಿದಾರರರಾದ ಗವಿಸಿದ್ದಪ್ಪ
ತಂದೆ ಈರಣ್ಣ ಜತ್ತಿ ವಯಾ: 25 ವರ್ಷ ಜಾತಿ: ಲಿಂಗಾಯತ ಬಣಜಿಗ ಉ: ಖಾಸಗಿ ಜೀಪ್ ಚಾಲಕ ಸಾ: ಇರಕಲ್ ಗಡ
ತಾ: ಕೊಪ್ಪಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸದರಿ ಸಾರಾಂಶವೆನೆಂದರೆ
ಇಂದು ದಿನಾಂಕ:
07-06-2016 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ಕೊಪ್ಪಳದಿಂದ ಕುಷ್ಟಗಿಗೆ ನನ್ನ ಕ್ರಷರ್ ನೇದ್ದರಲ್ಲಿ
ಕೆಲವೊಂದು ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದು, ಅವರಲ್ಲಿ ಒಬ್ಬ ಅಂದಾಜು 40 ವರ್ಷದ
ಒಬ್ಬ ವ್ಯಕ್ತಿಯು ಸಹ ನನ್ನ ಕ್ರಷರ್ ನ್ನು ಹತ್ತಿದ್ದು ಸದರಿಯವನು ತುಂಬಾ ಮದ್ಯಪಾನ ಮಾಡಿದ್ದು ಅವನಿಗೆ
ನಿಲ್ಲಲೂ ಬಾರದ ಸ್ಥಿತಿಯಲ್ಲಿದ್ದನು. ಸದರಿಯವನು ಕುಷ್ಟಗಿಗೆ ಕರೆದುಕೊಂಡು ಹೋಗುವಂತೆ ತಿಳಿಸಿ ಹಣ
ಕೊಟ್ಟಿದ್ದು, ನಂತರ ನಾವು ಕುಷ್ಟಗಿಗೆ ಮಧ್ಯಾನ್ಹ 12-00 ಗಂಟೆ ಸುಮಾರಿಗೆ ಬಂದಿದ್ದು, ಆಗ ಸದರಿ ನನ್ನ
ಕ್ರಷರ್ ನಲ್ಲಿ ಇದ್ದ ಎಲ್ಲಾ ಪ್ಯಾಸೆಂಜರ್ ರವರು ಕುಷ್ಟಗಿಯ ಅಮರೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿ ಹತ್ತಿರ
ಇಳಿದಿದ್ದು, ಸದರಿ ಮದ್ಯಪಾನ ಮಾಡಿದ ವ್ಯಕ್ತಿಯು ಸಹ ಇಳಿದಿದ್ದು, ನಂತರ ನಾನು ನನ್ನ ಕ್ರಷರ್ ನ್ನು
ಸ್ವಲ್ಪ ದೂರ ಮುಂದೆ ತೆಗೆದುಕೊಂಡು ಹೋಗಿ ಪಾರ್ಕಿಂಗ್ ಮಾಡಿ ನಿಲ್ಲಿಸಿ ನಾನು ಬಸ್ ಸ್ಟಾಂಡ್ ಹತ್ತಿರ
ಕೊಪ್ಪಳ ಕಡೆಗೆ ಹೋಗುವ ರಸ್ತೆಯಲ್ಲಿ ನಿಂತಿದ್ದಾಗ ಸದರಿ ನಮ್ಮ ಕ್ರಷರ್ ವಾಹನದಲ್ಲಿ ಬಂದಿದ್ದ ಮದ್ಯಪಾನ
ಮಾಡಿದ ವ್ಯಕ್ತಿಯು ಅಮರೇಶ್ವರ ಎಲೆಕ್ಟ್ರಿಕಲ್ಸ್ ಅಂಗಡಿ ಹತ್ತಿರ ನಿಂತಿದ್ದ ವ್ಯಕ್ತಿಯು ಏಕಾಏಕಿ ಅಲ್ಲಿಯೇ
ಕುಸಿದು ಕೆಳಗೆ ಮಲಗಿದನು, ಆಗ ನಾನು ಮತ್ತು ಅಲ್ಲಿದ್ದ ಕೆಲವು ಜನರು ಸದರಿ ವ್ಯಕ್ತಿಯ ಹತ್ತಿರ ಹೋಗಿ
ನೋಡಿದಾಗ ಆತನು ತುಂಬಾ ತ್ರಾಸ ಮಾಡಿಕೊಳ್ಳುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಆಗ ಆತನಿಗೆ
ನೀರು ತಂದು ಕುಡಿಸಿದೆವು ಅಷ್ಟರಲ್ಲಿ ಸದರಿಯವನು ಮೃತಪಟ್ಟನು. ಸದರಿ ಮೃತ ವ್ಯಕ್ತಿಯು ಸುಮಾರು 40
ವರ್ಷದವನಾಗಿದ್ದು, ನೀಲಿ ಬಣ್ಣದ ಲೈನಿಂಗ್ ಶರ್ಟ, ಒಳಗೆ ಹಳದಿ ಬಣ್ಣದ ಟೀ-ಶರ್ಟ ಹಾಗೂ ಕಪ್ಪು ನಾಶಿ
ಬಣ್ಣದ ಪ್ಯಾಂಟ್ ಧರಿಸಿದ್ದು, ಮುಖದ ಮೇಲೆ ಗಡ್ಡ ಮೀಸೆ ಇದ್ದು, ದುಂಡು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು,
ಸುಮಾರು 5.5 ಅಡಿ ಎತ್ತರ ಇರುತ್ತಾನೆ. ಆತನ ಮೈ ಮೇಲೆ ಯಾವದೇ ಗಾಯ ವಗೈರೆ ಇರುವದಿಲ್ಲ. ವ್ಯಕ್ತಿಯು
ಮದ್ಯಪಾನ ಮಾಡಿದ ಅಮಲಿನಲ್ಲಿ ಹೃದಯಾಘಾತದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment