1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 119/2016 ಕಲಂ:78 (3) KARNATAKA POLICE ACT 1963.
ದಿನಾಂಕ:08-06-2016
ರಂದು ರಾತ್ರಿ 7-20
ಗಂಟೆಗೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ, ಗಿಣಿಗೇರಾ ಗ್ರಾಮದ ಮಸೀದಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಬರ ಹೋಗುವ ಸಾರ್ವಜನಿಕರಿಗೆ ನೀವು ಬರೆಯಿಸಿದ ನಶೀಬದ ನಂಬರ ಹತ್ತಿದಲ್ಲಿ 1=00
ರೂಪಾಯಿಗೆ
80=00 ರೂಪಾಯಿಗಳನ್ನು ಕೊಡುತ್ತೇನೆ. ಅಂತಾ ಕೂಗುತ್ತಾ ಮಟಕಾ ನಶೀಬದ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್.ಐ ಸಾಹೇಬರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿ ದೇವೇಂದ್ರ
ತಂದೆ ಷಣ್ಮೂಖಪ್ಪ ಚೌವ್ಹಾಣ ವಯ: 30 ವರ್ಷ ಸಾ: ಗಿಣಿಗೇರಾ
ಇತನಿಂದ ನಗದು
ಹಣ ರೂ.
2,620=00 ರೂ, ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ ಮತ್ತು ಒಂದು ಮೊಬೈಲ್. ಅಂಕಿ.
300=00 ರೂ. ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ಬಂದು ನೀಡಿದ ವರದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿದ್ದು ಇರುತ್ತದೆ.
2] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 96/2016 ಕಲಂ: 406, 420, ಐ.ಪಿ.ಸಿ.
ದಿನಾಂಕ 29.06.2015 ರಿಂದ
04.03.2016 ರ ನಡುವಿನ ಅವಧಿಯಲ್ಲಿ ಆರೋಪಿ ವಿ.ನಾಗೇಂದ್ರ ತಂದೆ ರಮೇಶ ಸಾ: ಗವಿಮಠ ರೋಡ್ ಕೊಪ್ಪಳ
ಇತನು ಫಿರ್ಯಾದಿದಾರರ ಶ್ರೀರಾಮ ಪೈನಾನ್ಸ ನಲ್ಲಿ ಕೆಲವೊಂದು ದಾಖಲೆಗಳನ್ನು ಸಲ್ಲಿಸಿ ಅವರಿಂದ ತಾನು
ಕೊಪ್ಪಳ ನಗರದ ಬಸವೇಶ್ವರ ಗಂಜ್ ಹತ್ತಿರ ಕರುಣಾಮಯ ಕೃಪಾ ಟಾಯರ್ಸ ಅಂತಾ ಎಮ್.ಆರ್.ಎಫ್ ಕಂಪನಿಯ ಟಾಯರಗಳನ್ನು
ಸಾರ್ವಜನಿಕರಿಗೆ ಮಾರಾಟ ಮಾಡುತ್ತೇನೆ ಅದಕ್ಕಾಗಿ ತಮ್ಮ ಪೈನಾನ್ಸನಿಂದ ಸಾಲದ ರೂಪವಾಗಿ 200000=00
ರೂಪಾಯಿಗಳನ್ನು ಪಡೆದುಕೊಂಡು ಸ್ವಲ್ಪ ದಿನಗಳ ನಂತರ ಫಿರ್ಯಾದಿದಾರರ ಶ್ರೀರಾಮ ಪೈನಾನ್ಸಗೆ ಸಾಲದ ಹಣವನ್ನು
ಪಾವತಿಸದೇ ತನ್ನ ಅಂಗಡಿಯನ್ನು ಬಂದ ಮಾಡಿಕೊಂಡು ಎಲ್ಲಿಯೋ ಹೋಗಿದ್ದ ಕಾರಣ ತಮ್ಮ ಪೈನಾನ್ಸಗೆ ಸುಳ್ಳು
ದಾಖಲೆಗಳನ್ನು ಸಲ್ಲಿಸಿ ಮೋಸ ಮಾಡಿರುತ್ತಾನೆ ಅಂತಾ ಮುಂತಾಗಿದ್ದ ಖಾಸಗಿ ದೂರಿನ ಸಾರಾಂಶದ ಮೇಲಿಂದ
ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 97/2016 ಕಲಂ: 420, 34 ಐ.ಪಿ.ಸಿ.
ಆರೋಪಿ ಸಂತೋಷ ಕುಮಾರ ತಂದೆ
ಪ್ರಭಂಜನ್ ರಾವ್ ವಿರಾಪೂರ್ ಸಾ: ಬಳ್ಳಾರಿ ಇತನು ಕೊಪ್ಪಳ ನಗರದ ಹುಡ್ಕೋ ಕಾಲೋನಿಯಲ್ಲಿ ವಿ3 ಲೈಫ್
ಕೇರ್ ಇಂಡಿಯಾ ಲಿ. ಅಂತಾ ಖಾಸಗಿ ಕಂಪನಿಯನ್ನು ತೆರೆರಿದ್ದು ಸದರಿ ಆರೋಪಿತರು ಫಿರ್ಯಾದಿ ನಾಗೇಶಯ್ಯ
ಇವರಿಗೆ ತಮ್ಮ ಕಂನಿಯಲ್ಲಿ ಪ್ಲ್ಯಾಯಿಂಗ್ ಫ್ಯಾನ್ಟಸಿ 25000 ಟ್ರೀಸರ್ ಆಫ್ ಇಂಡಿಯಾ 49999 ಎಂಬ ಹೊಸದಾಗಿ
ಯೋಜನೆಯನ್ನು ಹುಟ್ಟುಹಾಕಿ ಅದರಲ್ಲಿ ಹಣವನ್ನು ಹೂಡಿಕೆ ಮಾಡಿದರೇ ವಿದೇಶ ಪ್ರವಾಸ ಮತ್ತು ಮನೆಗೆ ಗೃಹ
ಬಳಕೆ ವಸ್ತುಗಳನ್ನ ಮತ್ತು ಪಿಠೋಪಕರಣಗಳನ್ನು ಒದಗಿಸಿಕೊಡುತ್ತೇವೆ ಅಂತಾ ನಂಬಿಕೆ ಬರುವಂತೆ ಹೇಳಿ ದಿನಾಂಕ
05.11.2011 ರಂದು 1, 29,498 ರೂಪಾಯಿಗಳನ್ನು ಪಡೆದುಕೊಂಡು ಹಣವನ್ನು ವಾಪಾಸ ನೀಡದೇ ಮೋಸ ಮಾಡಿರುತ್ತಾರೆ
ಅಂತಾ ಮುಂತಾಗಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 98/2016 ಕಲಂ: 110 (ಎ)&(ಜಿ) ಸಿ.ಆರ್.ಪಿ.ಸಿ.
ದಿನಾಂಕ 08.06.2016 ರಂದು ಸಾಯಂಕಾಲ 5:00 ಗಂಟೆಗೆ ಪಿ.ಸಿ 70-ಇಬ್ರಾಹಿಂ
ಕೊಪ್ಪಳ ನಗರ ಪೊಲೀಸ್ ಠಾಣೆರವರು ಹಾಜರಾಗಿ ಒಂದು ಗಣಕೀಕೃತ ವರದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ,
ದಿನಾಂಕ:08-06-2016 ರಂದು ಮದ್ಯಾನ 4-00 ಗಂಟೆಗೆ ನಾನು ನಮ್ಮ ಠಾಣೆಯ ಸಿಬ್ಬಂದಿ ಯವರಾದ ಪಿಸಿ-332
ಸಣ್ಣವೀರಣ್ಣ ಇವರೊಂದಿಗೆ ಗೌರಿ ಅಂಗಳದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತ್ತಾ ಹೊರಟಿದ್ದಾಗ ಇಬ್ಬರೂ
ವ್ಯಕ್ತಿಗಳು ಗೌರಿಅಂಗಳದ ದ್ಯಾಮವ್ವ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ರಸ್ತೆಯ
ಮೇಲೆ ಹೋಗಿ ಬರುವ ಜನರಿಗೆ ಯಾವ ಸೂಳೇ ಮಕ್ಕಳು ಯಾರು ನಮಗೇನು ಮಾಡುವುದಿಲ್ಲಾ ಅಂತಾ ಒದರಾಡುತ್ತಾ ರಸ್ತೆಯ
ಮೇಲೆ ಹೋಗಿ ಸಾರ್ವಜನಿಕರಿಗೆ ಹಾಗೂ ದೇವಸ್ಥಾನಕ್ಕೆ ಬರುವ ಜನರಿಗೆ ಸತಾಯಿಸುತ್ತಿದ್ದಾಗ ಸದರಿಯವರನ್ನು
ಹಿಡಿದುಕೊಂಡು ಅವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರು 1] ಅಲ್ತಾಫ್ ತಂದೆ ಮಹ್ಮದಸಾಬ ಹಾಲಹಳ್ಳಿ
ವಯಾ: 19 ವರ್ಷ ಜಾ: ಮುಸ್ಲಿಂ ಉ: ಬೇಲ್ದಾರ ಕೆಲಸ ಸಾ: ನಿರ್ಮಿತಿ ಕೇಂದ್ರದ ಹತ್ತಿರ ಕೊಪ್ಪಳ 2] ಮುಜಾಹೀದ್ದಿನ್
ತಂದೆ ಶಕೀಲ್ ಅಹ್ಮದ್ ಸಂಗಟಿ ವಯಾ: 19 ವರ್ಷ, ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಗೌರಿ ಅಂಗಳ ಕೊಪ್ಪಳ ಅಂತಾ ಹೇಳಿದ್ದು, ಸದರಿ ಆರೋಪಿತರನ್ನು ಹಾಗೆಯೇ ಬಿಟ್ಟಲ್ಲಿ
ಸದರಿಯವರು ಸಾರ್ವಜನಿಕರ ಶಾಂತತೆಗೆ ಭಂಗ ಉಂಟಾಗುವ ಸಾಧ್ಯತೆ ಕಂಡುಬಂದಿದ್ದರಿಂದ ಮುಂಜಾಗೃತೆ ಕುರಿತು
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 155/2016 ಕಲಂ: 506,498A,504,324 ಐ.ಪಿ.ಸಿ.
ದಿನಾಂಕ :08-06-2016 ರಂದು ಸಂಜೆ 05-00 ಗಂಟೆಗೆ ಕುಷ್ಟಗಿ ಪೊಲೀಸ್ ಠಾಣೆಯ
ವೈಜನಾಥ ಹೆಚ್.ಸಿ-45 ರವರು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಗಾಯಾಳು ನಿರ್ಮಲಾ ಗಂಡ ಹಾಮಪ್ಪ ಲಮಾಣಿ ಸಾ:ತೊಣಸಿಹಾಳತಾಂಡಾ ರವರ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡು ಬಂದು ಹಾಜರಪಡಿಸಿದ್ದು ಸದರಿ ಪಿರ್ಯಾದಿ ಸಾರಾಂಶವೆನೆಂದರೆ.
ಸದರಿ ಪಿರ್ಯಾದಿದಾರಳ ಮದುವೆಯಾಗಿ ಸುಮಾರು 14 ವರ್ಷಗಳು ಆಗಿದ್ದು. ಮೂರು ಮಕ್ಕಳು ಇದ್ದು ಸದರಿ ಮಕ್ಕಳಿಗೆ
ಪಿರ್ಯಾದಿದಾರಳೇ ಲಾಲನೇ ಪಾಲನೇ ಮಡುತ್ತಿದ್ದು ಪಿರ್ಯಾದಿಯ ಗಂಡನಾದ ಹಾಮಪ್ಪ ಈತನು ಮದುವೆಯಾದ ನಂತರ
ವಿನಾಃಕಾರಣ ಸಂಶಯ ಪಡುತ್ತಾ ತನ್ನ ಸಂಗಡ ಜಗಳ ತೆಗೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ
ಬಂದು ನಿನ್ನೆ ದಿನಾಂಕ:07-06-2016 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಅವಾಚ್ಯವಾಗಿ ಬೈದಾಡುತ್ತಾ
ಹೊಡಿಬಡಿ ಮಾಡುತ್ತಾ ನೀನು ಇವತ್ತು ಸತ್ತು ಹೋಗು ಅಂತಾ ಬಾಟಲಿಯಲ್ಲಿದ್ದ ಸೀಮೆಎಣ್ಣಿಯನ್ನು ಪಿರ್ಯಾದಿಯ
ಮೇಲೆ ಹಾಕಿದ್ದು ಪಿರ್ಯಾದಿದಾರಳು ನನಗೆ ನೀನು ಏನು
ಸಾಯಿಸುತ್ತಿ ನಾನೇ ಸಾಯುತ್ತೇನೆ ಅಂತಾ ಅಂದವಳೇ ಬೆಂಕಿಕಡ್ಡಿಯಿಂದ
ಬೆಂಕಿ ಹಚ್ಚಿಕೊಂಡಿದ್ದು ಇರುತ್ತದೆ. ನಂತರ ತನ್ನ ಗಂಡನು
ಮತ್ತು ಮಗನಾದ ರಾಹುಲ್ ಇವರು ಬೆಂಕಿ ಹಾರಿಸಿ ಚಿಕಿತ್ಸೆ ಕುರಿತು 108 ಅಮಬುಲೆನ್ಸ ನಲ್ಲಿ
ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಕೊಪ್ಪಳ ಸರಕಾರಿ
ಆಸ್ಪತ್ರೆಯಲ್ಲಿ ಸೇರಿಕೆ ಆಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಹೇಳಿಕೆಯ ಪಿರ್ಯಾದಿಯ ಸಾರಾಂಶದ
ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
6] ಕುಷ್ಠಗಿ ಪೊಲೀಸ್ ಠಾಣೆ ಗುನ್ನೆ ನಂ: 157/2016 ಕಲಂ:78(3) Karnataka Police Act
ದಿನಾಂಕ: 08-06-2016 ರಂದು ರಾತ್ರಿ 9-00 ಗಂಟೆಗೆ ಪಿ.ಎಸ್.ಐ ಸಾಹೇಬರು ಕುಷ್ಟಗಿ
ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಕುಷ್ಟಗಿ ಪಟ್ಟಣದ ಕನಕದಾಸ
ವೃತ್ತ ಟೇಲಿಪೋನ್ ಆಫೀಸ್ ಹತ್ತಿರ ಮಟಕಾ ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪೊಲೀಸರನ್ನು
ನೋಡಿ ಮಟಕಾ ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು, ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ
ಸದರಿಯವನ್ನು ಹಿಡಿದು ವಿಚಾರಿಸಿದಾಗ ಹೆಸರು ಅಬ್ದುಲ್ ಸಲೀಂ ತಂದೆ ಮಂಜೂರು ಸಾಬ ಮುದುಗಲ್ ವಯ: 30
ವರ್ಷ, ಜಾ: ಮುಸ್ಲಿಂ, ಉ: ವೈರಿಂಗ್ ಕೆಲಸ, ಸಾ: ಮದೀನಾ ಗಲ್ಲಿ ಕುಷ್ಟಗಿ ತಿಳಿಸಿದ್ದು ಸದರಿಯವನು
ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿದನು. ಮತ್ತು ಮಟ್ಕಾ ಜೂಜಾಟದಲ್ಲಿ
ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 522-00 ರೂಪಾಯಿ
ನಗದು ಹಣ, ಒಂದು ಬಾಲ್ ಪೆನ್ನು ಹಾಗೂ ಒಂದು ಮಟ್ಕಾ ಬರೆದ ಪಟ್ಟಿ ಮತ್ತು ಸೆಲ್ ಕಾನ್ ಕಂಪನಿಯ ಮೋಬೈಲ್ ಅಂ:ಕಿ:500/- ರೂ:ಗಳು
ಇವುಗಳನ್ನು ಜಪ್ತ ಪಡಿಸಿದ್ದು. ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಬಾಸ್ಕರ ಸಾವಜಿ
ಸಾ: ಕುಷ್ಟಗಿ ನೇದ್ದನಿಗೆ ಕೊಡುವುದಾಗಿ ತಿಳಿಸಿದ್ದು ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
0 comments:
Post a Comment