1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 56/2016 ಕಲಂ: 32,34,38A,KARNATAKA EXCISE ACT, 1965.
ದಿನಾಂಕ: 09-06-2016 ರಂದು ಸಾಯಾಂಕಾಲ 6-00 ಗಂಟೆಗೆ ಸುಮಾರಿಗೆ ಆರೋಪಿ ರಾಜಾಭಕ್ಷಿ
ತಂದೆ ಮುರ್ತುಜಾಸಾಬ ಮೂಲಿಮನಿ ವಯ: 28 ವರ್ಷ ಸಾ: ಗಜೇಂದ್ರಗಡ ತಾ: ರೋಣ ಇತನು ಕಾತ್ರಾಳ ಕ್ರಾಸದಲ್ಲಿ
ಬರುವ ತನ್ನ ಭಾರತ ಢಾಭಾದಲ್ಲಿ ಅನಧೀಕೃತವಾಗಿ ಮಧ್ಯಪಾನ ಮಾರಾಟ ಮಾಡುತ್ತಿದ್ದಾಗ ಪಿ.,ಎಸ್.ಐ. ರವರು ಸಿಬ್ಬಂದಿ ಮತ್ತು ಪಂಚರೊಂದಿಗೆ ಸದರಿ
ಭಾರತ ಢಾಭಾದಲ್ಲಿ ದಾಳಿ ಮಾಡಲಾಗಿ, ಸದರಿ ಆರೋಪಿತನಿಂದ
ಪರಿಶೀಲನೆ ಮಾಡಿ ನೊಡಲಾಗಿ 1). 180 ಎಂ.ಎಲ್. ಇಂಪೀರಿಯಲ್ಲಿ ಬ್ಲೂ ವಿಸ್ಕಿ ಬಾಟಲಿಗಳು ಅಂ.ಕಿ.
659.50 ರೂ. ಗಳು, 2). 180 ಎಂ.ಎಲ್. 03 ಡಿ.ಎಸ್.ಪಿ.
ಬ್ಲಾಕ ವಿಸ್ಕಿ ಬಾಟಲಿಗಳು ಅಂ.ಕಿ. 326.55 ರೂ.ಗಳು.
3). 180 ಎಂ.ಎಲ್. 19 ಬ್ಯಾಗಪೈಪರ್ ವಿಸ್ಕಿ
ಟೆಟ್ರಾ ಪೌಚ್ ಅಂ.ಕಿ. 1,403.72 ರೂ.ಗಳು 4). 180 ಎಂ.ಎಲ್. 32 ಓಲ್ಡ ಟವರ್ನ ವಿಸ್ಕಿ ಟೆಟ್ರಾ ಪೌಚ್
ಅಂ.ಕಿ. 1,964.48 ರೂ.ಗಳು ಅಂ.ಕಿ. 5). 650 ಎಂ.ಎಲ್. 12 ಕಿಂಗ್ ಫೀಷರ್ ಸ್ಟ್ರಾಂಗ ಬೀಯರ್ ಅಂ.ಕಿ.
1,440/- ರೂ.ಗಳು 6] ಒಂದು ಪ್ಲಾಸ್ಟೀಕ ಗೊಬ್ಬರ ಅಂ.ಕೀ ಇಲ್ಲ ಹೀಗೆ ಒಟ್ಟು 5,794.55/-ರೂ. ದಷ್ಟು
ಮದ್ಯ ಸಿಕ್ಕಿದ್ದು ಇರುತ್ತದೆ. ಸದರ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 158/2016 ಕಲಂ: 420, 468, 471, 191 ಐ.ಪಿ.ಸಿ.
ದಿನಾಂಕ: 09-06-2016 ರಂದು
ಸಂಜೆ 06-00 ಗಂಟೆಗೆ ತಾವರಗೇರಾ ಪೊಲೀಸ್ ಠಾಣೆ ಯಿಂದ
ಹದ್ದಿ ಪ್ರಯುಕ್ತ ವರ್ಗಾವಣೆಯಾದ ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 48/2016 ನೇದ್ದು
ಸ್ವೀಕೃತವಾಗಿದ್ದು ಸಾರಾಂಶ ವೆನೆಂದರೆ ಪಿರ್ಯಾದಿ ಹಿರೇಹನುಮಪ್ಪ ಇವರ ತಾಯಿಯಾದ ಯಮನಮ್ಮ ರವರು ದಿನಾಂಕ:22-06-2011
ರಂದು ತೀರಿಕೊಂಡಿದ್ದು ಆಕೆಯ ಹೆಸರಿನಲ್ಲಿ ಸರ್ವೇ ನಂ:26 ಹಿಸ್ಸಾ 2 ಎ- ಕ್ಷೇತ್ರ 5 ಎಕರೆ 4 ಗುಂಟೆ
ಜಮೀನು ಇದ್ದು ಆದರೆ ಆರೋಪಿ ಪಂಪಪ್ಪ ತಂದೆ ಯಮನಮ್ಮ ಹರಿಜನ ವಯಾ 60 ವರ್ಷ
ಉ:ಒಕ್ಕಲುತನ ಇತನು
ಸುಳ್ಳು ದಸ್ತಾವೇಜುಗಳನ್ನು ತಯಾರಿಸಿ ತಮ್ಮ ಹೆಸರಿನಲ್ಲಿ ಸದರಿ ಜಮೀನಿನನ್ನು ವರ್ಗಾವಣೆ ಮಾಡಿಕೊಳ್ಳಲು
ಪ್ರಯತ್ನಿಸಿರುತ್ತಾರೆ. ಅಂತಾ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 165/2016 ಕಲಂ: 279, 304(ಎ) ಐ.ಪಿ.ಸಿ.
ದಿನಾಂಕ:- 10-06-2016 ರಂದು
ಬೆಳಿಗ್ಗೆ 7:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಯಮನಪ್ಪ ತಂದೆ ಹನುಮಂತಪ್ಪ ಗಂಗಾವತಿ, 46 ವರ್ಷ
ಜಾತಿ: ಗಂಗಾಮತ, ಸಾ: ಶ್ರೀಕೃಷ್ಣದೇವರಾಯ ನಗರ ಇವರು ಠಾಣೆಗೆ ಹಾಜರಾಗಿ ನುಡಿ ಹೇಳಿಕೆ ಫಿರ್ಯಾದಿಯನ್ನು
ನೀಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. “ದಿ: 09-06-2016 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ
ನನ್ನ ಮಗನಾದ ಸುರೇಶ ಈತನು ದಿನ ನಿತ್ಯದಂತೆ ಕೆಲಸಕ್ಕೆಂದು ಗಂಗಾವತಿಗೆ ಬಂದಿದ್ದನು. ನಂತರ ರಾತ್ರಿ
9:00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಕ್ಯಾಂಪಿನ ಮುತ್ತೇಶ ಎಂಬಾತನು ಪೋನ್ ಮಾಡಿ
“ನಾನು ಮಾಣಿಕಪ್ಪ ಆಸ್ಪತ್ರೆಯ ಮೆಡಿಕಲ್ ಶಾಫನಲ್ಲಿ ಕೆಲಸ ಮಗಿಸಿಕೊಂಡು ಗಂಗಾವತಿಯಿಂದ ಕೆಡಿನಗರಕ್ಕೆ
ನನ್ನ ಮೋಟಾರ ಸೈಕಲ ಮೇಲೆ ಗಂಗಾವತಿ-ಕಂಪ್ಲಿ ಮುಖ್ಯ ರಸ್ತೆಯಲ್ಲಿ ದೇವಿನಗರದ ಹತ್ತಿರ ತಾಯಮ್ಮನ ಗುಡಿ
ಹತ್ತಿರ ಬರುತ್ತಿರುವಾಗ ಒಬ್ಬ ವ್ಯಕ್ತಿಯು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ
ನಡೆಯಿಸಿಕೊಂಡು ನನ್ನ ಮೋಟಾರ ಸೈಕಲನ್ನು ಓವರ ಮಾಡಿ ಮುಂದೆ ರಸ್ತೆಯ ತಿರುವಿನಲ್ಲಿ ವೇಗವನ್ನು ನಿಯಂತ್ರಿಸಲು
ಆಗದೇ ಮೋಟಾರ ಸೈಕಲ ಸಮೇತ ರಸ್ತೆಯ ಪಕ್ಕ ಕಾಲುವೆಯಲ್ಲಿ ಬಿದ್ದಿದ್ದು ಕೂಡಲೇ ನಾನು ನನ್ನ ಮೋಟಾರ ಸೈಕಲನ್ನು
ಪಕ್ಕಕ್ಕೆ ನಿಲ್ಲಿಸಿ ಆತನನ್ನು ನೋಡಲಾಗಿ ನಿಮ್ಮ ಮಗನಾದ ಸುರೇಶನಿದ್ದು ಮೇಲಕ್ಕೆ ಎತ್ತಲು ಆತನಿಗೆ
ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರುವದಿಲ್ಲಾ. ನಂತರ ಆತನು ನಡೆಸುತ್ತಿದ್ದ
ಮೋಟಾರ ಸೈಕಲ ನೋಡಲು ನಂಬರ್ ಕೆ.ಎ-37/ವೈ-0526 ಹೊಂಡಾ ಡ್ರೀಮ್ ನಿಯೋ ಕಂಪನಿಯದ್ದು ಇದ್ದು ಮುಂಭಾಗ
ಡೂಮ್ ಸಂಪೂರ್ಣವಾಗಿ ಡ್ಯಾಮೇಜ ಆಗಿದ್ದು ಕೂಡಲೇ ನಮ್ಮ ಆಸ್ಪತ್ರೆಯ ಅಂಬ್ಯುಲೆನ್ಸ್ ಗೆ ಪೋನ್ ಮಾಡಿದ್ದು
ವಾಹನ ಬಂದ ನಂತರ ಅದರಲ್ಲಿ ಚಿಕಿತ್ಸೆ ಕುರಿತು ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವದಾಗಿ
” ತಿಳಿಸಿದನು. ಕೂಡಲೇ ನಾನು ಮತ್ತು ನನ್ನ ಮಗನಾದ ಮಂಜುನಾಥ ಇಬ್ಬರೂ ಕೂಡಿ ಸರಕಾರಿ ಆಸ್ಪತ್ರೆಗೆ ಬಂದು
ನನ್ನ ತೀವ್ರವಾಗಿ ಗಾಯಗೊಂಡಿದ್ದ ನನ್ನ ಮಗನನ್ನು ನೋಡಲು ಚಿಕಿತ್ಸೆ ಮಾಡಿದ ವೈಧ್ಯರು ಹೆಚ್ಚಿನ ಚಿಕಿತ್ಸೆ
ಕುರಿತು ಹುಬ್ಬಳ್ಳಿಯ ತತ್ವಾಧರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ಮಗ ಮಂಜುನಾಥನು
ಅದೇ ಅಂಬ್ಯುಲೆನ್ಸ್ ನಲ್ಲಿ ಹುಬ್ಬಳ್ಳಿಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ನಂತರ ದಿನಾಂಕ:
10-06-2016 ರಂದು ಬೆಳಗಿನ ಜಾವ 2:00 ಗಂಟೆಯ ಸುಮಾರಿಗೆ ನನ್ನ ಮಗ ಮಂಜುನಾಥ ಈತನು ಪೋನ್ ಮಾಡಿ“ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ ಈತನು ಚಿಕಿತ್ಸೆ
ಫಲಕಾರಿಯಾಗದೇ ಬೆಳಗಿನ ಜಾವ 01:15 ಗಂಟೆಗೆ ಮೃತಪಟ್ಟಿರುತ್ತಾನೆ” ಅಂತಾ ತಿಳಿಸಿದನು. ರಾತ್ರಿಯಾಗಿದ್ದರಿಂದ ಈಗ ತಡವಾಗಿ ಠಾಣೆಗೆ
ಬಂದು ಈ ನನ್ನ ಹೇಳಿಕೆ ದೂರನ್ನು ಸಲ್ಲಿರುತತ್ತೇನೆ. ಈ ಅಪಘಾತಕ್ಕೆ ನನ್ನ ಮಗನಾದ ಸುರೇಶ ಈತನೇ ಕಾರಣನಾಗಿದ್ದು,
ಮಾನ್ಯರು ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ”ಅಂತಾ ನೀಡಿದ ಹೇಳಿಕೆ ಆಧಾರದ ಮೇಲಿಂದ ಪ್ರಕರಣ ದಾಖಲು
ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment