1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
125/2016 ಕಲಂ: 279, 337, 338 ಐ.ಪಿ.ಸಿ:.
ಫಿರ್ಯಾದಿದಾರರಾದ ಶ್ರೀ ಯಮನಪ್ಪ ತಂದಿ ನಾಗೇಂದ್ರಪ್ಪ ಈಡಿಗೇರ ವಯಾ-55 ವರ್ಷ ಲಿಖಿತ
ಫಿರ್ಯಾದಿಯನ್ನು ಕೊಟ್ಟಿದ್ದು ದಿನಾಂಕ : 17-06-2016 ರಂದು ನನ್ನದು ಸಿದ್ದಾಪೂರದಲ್ಲಿ
ಕೆಲವಸವಿದ್ದರಿಂದ ನಾನು ಮತ್ತು ಗುಂಡೂರ್ ಕ್ಯಾಂಪಿನ ಶ್ರೀನಿವಾಸ
ಸಿದ್ದಾಪೂರದಲ್ಲಿ ಸಾಯಿ ಹೊಟೇಲ್ ಮುಂದೆ ನಮ್ಮ ವೈಯಕ್ತಿಕ ಕೆಲಸದ ಸಲುವಾಗಿ
ಮಾತನಾಡುತ್ತಾ ನಿಂತುಕೊಂಡಿದ್ದೇವು. ಅಲ್ಲಿ ಸಾಂಭವಮುರ್ತಿ ಇವರು ಸಿದ್ದಾಪೂರ
ಕಡೆಯಿಂದ ಗುಂಡೂರ್ ಕ್ರಾಸ್ ಕಡಗೆ ಸಿದ್ದಾಪೂರ ಬ್ರಿಡ್ಜ ಹತ್ತಿರ ನಡೆದುಕೊಂಡು
ಗುಂಡೂರ್ ಕ್ರಾಸ್ ಕಡೆಗೆ ಹೊರಟಿದ್ದನು. ನಾವು ಅಲ್ಲಿಯೇ ಮಾತನಾಡುತ್ತಾ
ನಿಂತುಕೊಂಡಿದ್ದೇವು. ಕಾರಟಗಿ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕ ತನ್ನ ಮೊಟಾರ್
ಸೈಕಲ್ಲ್ ಹಿಂದುಗಡೆ ಒಬ್ಬ ಮಹಿಳೆಯನ್ನು ಕೂಡ್ರಿಸಿಕೊಂಡು ಕಾರಟಗಿ ಕಡೆಯಿಂದ ಗಂಗಾವತಿ
ಕಡೆಗೆ ಅತೀ ವೇಗ ಹಾಗೂ ಅಲಕ್ಷತನದಿಂದ ಓಡಿಸಿಕೊಂಡು ಹೊಗಿ ರಸ್ತೆಯ ಎಡಬದಿಗೆ
ನಡೆದುಕೊಂಡು ಹೊರಟಿದ್ದ ಸಾಂಬಮುರ್ತಿ ಈತನಿಗೆ ಗಮನಿಸದೆ ಹಿಂದುಗಡೆಯಿಂದ ಟಕ್ಕರ್
ಕೊಟ್ಟು ಅಪಘಾತಪಡಿಸಿ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದರು. ನಾವು ಆತನ ಹತ್ತಿರ ಹೊಗಿ ನೋಡಲು
ಸಾಂಭಮುರ್ತಿಗೆ ತಲೆಗೆ, ಹಣೆಗೆ, ಕೈಕಾಲುಗಳಿಗೆ ಹಾಗೂ ಬುಜಕ್ಕೆ ಗಂಭೀರ ಗಾಯ ಹಾಗೂ
ಪೆಟ್ಟುಗಳಾಗಿ ಮಾತನಾಡದ ಸ್ಥಿತಿಯಲ್ಲಿದ್ದನು. ಅಪಘಾತಪಡಿಸಿದ ಮೊಟಾರ್ ಸೈಕಲ್ ನಂಬರ್ ನೋಡಲು ಕೆ.ಎ-
37 / ಯು- 8934 ಹೊಂಡಾ ಶೈನ್ ಮೊಟಾರ್ ಸೈಕಲ್ ಇದ್ದು, ಅದರ ಚಾಲಕನ ಬಗ್ಗೆ ವಿಚಾರಿಸಲಾಗಿ
ಸೂಗೂರಯ್ಯ ತಂದಿ ಮಾಹಾಲಿಂಗಯ್ಯ ಸಾ- ಕಾರಟಗಿ ಅಂತಾ ಹೇಳಿದ್ದು ಆತನಿಗೆ ಕೈ ಕಾಲುಗಳಿಗೆ
ತೆರಚಿದ ಗಾಯ ಮತ್ತು ಪೆಟ್ಟುಗಳಾಗಿದ್ದವು. ಹಿಂದೆ ಕುಳಿತ ಮಹಿಳೆಯ ಬಗ್ಗೆ ವಿಚಾರಿಸಲಾಗಿ
ಶಿವಲಿಂಗಮ್ಮ ಅಂತಾ ಗೊತ್ತಾಗಿದ್ದು, ಅವರಿಗೆ ಮುಖಕ್ಕೆ, ಎದೆಗೆ ಹಾಗೂ
ಕೈಕಾಲುಗಳಿಗೆ ರಕ್ತಗಾಯ ಮತ್ತು ಒಳಪೆಟ್ಟಾಗಿದ್ದವು. ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್.ನಂ: 18/2016 ಕಲಂ: 174 ಸಿ.ಅರ್.ಪಿ.ಸಿ:.
ಫಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮೀ @ ನಿಂಗಮ್ಮ ಗಂಡ
ಫಕೀರಪ್ಪ ಕಂದಗಲ್, ವಯಸ್ಸು
32 ವರ್ಷ, ಜಾತಿ:
ಕುರುಬರು ಉ: ಹೊಲಮನೆಗೆಲಸ ಸಾ: ಮುಷ್ಟೂರು ತಾ: ಗಂಗಾವತಿ. ಇವರು ಫಿರ್ಯಾದಿಯನ್ನು ನೀಡಿದ್ದು, ಅದರ ದಿನಾಂಕ:-
19-06-2016 ರಂದು ಬೆಳಗಿನಜಾವ 04:00
ಗಂಟೆಯ ಸುಮಾರಿಗೆ ನನ್ನ ಗಂಡ ಫಕೀರಪ್ಪ ತಂದೆ ದೊಡ್ಡ
ಹನುಮಂತಪ್ಪ, 38 ವರ್ಷ ಈತನು ಮುಷ್ಟೂರು ಸೀಮಾದಲ್ಲಿರುವ ನಮ್ಮ ಗದ್ದೆಗೆ ನೀರು ಹರಿಸಲು
ಹೋದಾಗ ಕರೆಂಟ್ ಇಲ್ಲದ ಕಾರಣ ಸ್ವಲ್ಪ ಹೊತ್ತು ಗದ್ದೆಯಲ್ಲಿಯೇ ಮಲಗಿದ ಸಮಯದಲ್ಲಿ ಬೆಳಗಿನಜಾವ
05:00 ಗಂಟೆಯ ಸುಮಾರಿಗೆ ಆತನ ಬಲಗಡೆ ಕಿವಿಗೆ ಯಾವುದೋ ವಿಷಕಾರಿ ಹಾವು
ಕಚ್ಚಿದ್ದು, ಆಗ
ಅಲ್ಲಿಗೆ ಹೋದ ಅಮರೇಶನಿಗೆ ನನ್ನ ಗಂಡನು ತಿಳಿಸಿ, ಅಲ್ಲಿಯೇ
ಇದ್ದಂತಹ ಹಾವನ್ನು ಇಬ್ಬರೂ ಸೇರಿ ಬಡಿದು ಸಾಯಿಸಿ ನಂತರ ಗ್ರಾಮದಲ್ಲಿ ಬಂದಿದ್ದು, ನನ್ನ ಗಂಡನಿಗೆ
ಊರಲ್ಲಿಯೇ ಕನಕರಾಯ ಎಂಬುವವರ ಹತ್ತಿರ ನಾಟಿ ಔಷಧಿಯನ್ನು ಕೊಡಿಸಿದ್ದು, ಆದರೆ ನನ್ನ
ಗಂಡನಿಗೆ ಗುಣವಾಗದೇ ಆರೋಗ್ಯದಲ್ಲಿ ತೀವ್ರ ಹೆಚ್ಚು ಕಡಿಮೆಯಾಗಿದ್ದರಿಂದ ಗಂಗಾವತಿ ಸರಕಾರಿ
ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿರುವಾಗ ದಾರಿಯಲ್ಲಿ ಬೆಳಿಗ್ಗೆ 8:00 ಗಂಟೆಯ
ಸುಮಾರಿಗೆ ಮೃತಪಟ್ಟಿರುತ್ತಾನೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment