1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 60/2016 ಕಲಂ: 87 Karnataka Police Act.
ದಿನಾಂಕ: 11-06-2016 ರಂದು 6-00 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 07 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 4-30 ಪಿಎಂಕ್ಕೆ ಅರಕೇರಿ ಗ್ರಾಮದ ಮಸೀದಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ
ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ
ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 1500/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 40/2016 ಕಲಂ: 341, 504, 323, 506 ಸಹಿತ 34 ಐ.ಪಿ.ಸಿ.
ಫಿರ್ಯಾದಿದಾರರು ಮತ್ತು ಆರೋಪಿತರು
ಅಣ್ಣ ತಮ್ಮಂದಿರಿದ್ದು ಮಳೆ ಬಂದರೆ ಆರೋಪಿತರ ಹೊಲದಲ್ಲಿನ ಮಳೆ ನೀರು ಹರಿದು ಹೊಲದ ಪಕ್ಕದ ಹೊಲದವರಾದ
ತಮ್ಮೂರ ಹನುಮಪ್ಪ ಚೌರಿ ಇತನ ಹೊಲದಲ್ಲಿ ಹೊಗುತ್ತಿದ್ದು ಈಗ್ಗೆ ಎರಡು ದಿವಸಗಳಿಂದ ಮಳೆ ಬಂದಿದ್ದರಿಂದ
ಇಂದು ದಿನಾಂಕ: 11.06.2016 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ಆರೋಪಿತರು ಮಳೆ
ನೀರು ಹರಿದು ಹೋಗುತ್ತಿರುವ ಬಗ್ಗೆ ಹಾಗೂ ಹೊಲದ ಹದ್ದು ಬಸ್ತು ಮಾಡುವ ಬಗ್ಗೆ ಸದರಿ ಹನುಮಪ್ಪ ಚೌರಿ
ಇತನೊಂದಿಗೆ ಬಾಯಿ ಮಾತಿನಿಂದ ಜಗಳ ಮಾಡುತ್ತಿರುವ ಕಾಲಕ್ಕೆ ಅದೇ ವೇಳೆಗೆ ಫಿರ್ಯಾದಿದಾರನು ತನ್ನ ಮನೆಯಿಂದ
ತನ್ನ ಪಾಡಿಗೆ ತಾನು ತಮ್ಮ ಹೊಲಕ್ಕೆ ಗಳೆ ಹೊಡೆಯಲು ಹೋಗುತ್ತಿರುವಾಗ ಆರೋಪಿತರಿಬ್ಬರೂ ಫಿರ್ಯಾದಿದಾರನನ್ನು
ಅಡ್ಡಗಟ್ಟಿ ತಡೆದು ನಿಲ್ಲಿಸಿ ಎನಲೇ ಬೋಸುಡಿ ಮಗನೇ ಮಳೆ ನೀರು ಹರಿದು ಹೋಗುತ್ತಿರುವ ಬಗ್ಗೆ ಹಾಗೂ
ಹೊಲದ ಹದ್ದು ಬಸ್ತು ಮಾಡುವ ಬಗ್ಗೆ ನಾವು ಜಗಳ ಮಾಡುತ್ತಿದ್ದರೆ ಅದನ್ನು ನೋಡಿ ನಿನು ಸುಮ್ಮನೆ ಹೋಗುತ್ತಿ
ನಿನ್ನ ಸೊಕ್ಕು ಜಾಸ್ತಿಯಾಗಿದೆ ಅಂತಾ ಅವ್ಯಾಶ್ಚವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡಿ ಜೀವದ
ಬೇದರಿಕೆ ಹಾಕಿದ್ದು ಇರುತ್ತದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment