1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ:
64/2016 ಕಲಂ: 87 Karnataka Police Act:.
ದಿನಾಂಕ: 16-06-2016 ರಂದು 5-30 ಪಿಎಂಕ್ಕೆ ಪಿ.ಎಸ್.ಐ. ಕುಕನೂರ ಠಾಣೆರವರು ಠಾಣೆಗೆ ಹಾಜರಾಗಿ ದಾಳಿ ಪಂಚನಾಮೆ ಲಗತ್ತಿಸಿ, ಸರ್ಕಾರೀ ತರ್ಫೆ ಪಿರ್ಯಾದಿಯನ್ನು ಮುದ್ದೆಮಾಲು ಹಾಗೂ ವಶಕ್ಕೆ ಪಡೆದ 12 ಜನ ಆರೋಪಿತರನ್ನು ಹಾಜರಪಡಿಸಿ ವರದಿ ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ಜೂಜಾಟದ ಮಾಹಿತಿ ಬಂದ ಪ್ರಕಾರ ತಾವು ಇಬ್ಬರೂ ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ 3-45 ಪಿಎಂಕ್ಕೆ ಕೋಮಲಾಪೂರ ಗ್ರಾಮದ ಕಾಳಿಕಾದೇವಿ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ಮಾಡಿ, ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಸದರಿಯವರಿಂದ ಹಾಗೂ ಜೂಜಾಟದ
ಕಣದಿಂದ ಒಂದು ಟಾವೆಲ್ಲ್, 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 7500/- ರೂ.ಗಳನ್ನು ಜಪ್ತ ಪಡಿಸಿಕೊಂಡಿದ್ದು, ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ:
121/2016 ಕಲಂ: 87 Karnataka Police Act:.
ದಿನಾಂಕ:-16-06-2016 ರಂದು
ಮದ್ಯಾಹ್ನ 12-40 ಗಂಟೆಗೆ ಮಾನ್ಯ
ಪಿ.ಎಸ್.ಐ ಸಾಹೇಬರು ಒಂದು ಇಸ್ಪೀಟ್ ಜೂಜಾಟದ ದಾಳಿ ಮೂಲ ಪಂಚನಾಮೆ ಮತ್ತು ವರದಿಯನ್ನು
ಹಾಜರುಪಡಿಸಿದ್ದು ಸದರಿ ವರದಿಯ ಸಾರಾಂಶವೆನಂದರೆ ಇಂದು 16-06-2016 ರಂದು ಬೆಳಿಗ್ಗೆ 11-05 ಗಂಟೆಯ ಸುಮಾರಿಗೆ ಸೋಮನಾಳ ಗ್ರಾಮದ ಶಂಕ್ರಪ್ಪ ಇವರ ಗ್ಯಾರೇಜ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ಇಸ್ಪೀಟ್
ಜೂಜಾಟದಲ್ಲಿ ತೊಡಗಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ
ಸಮಕ್ಷಮದಲ್ಲಿ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು ಸಿಕ್ಕಿ ಬಿದ್ದ ಆರೋಪಿತನ ಕಡೆಯಿಂದ ಹಾಗೂ
ಖಣದಲ್ಲಿ ಸೇರಿ ರೂ. 2980=00 ಗಳನ್ನು ಮತ್ತು ಸ್ಥಳದಲ್ಲಿ ಇದ್ದ ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು
ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ:
125/2016 ಕಲಂ: 78(3) Karnataka Police Act:.
ದಿನಾಂಕ 16-06-2016 ರಂದು ಸಂಜೆ 6-15 ಗಂಟೆಯ ಸುಮಾರಿಗೆ ಅಡವಿಭಾವಿದೊಡ್ಡ
ತಾಂಡಾದಲ್ಲಿ ಕ್ರಾಸ್ ಹತ್ತಿರದಲ್ಲಿರುವ ಒಂದು ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಓ.ಸಿ.ಮಟಕಾ
ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಶ್ರೀ ವೀರಾರೆಡ್ಡಿ, ಪಿ.ಎಸ್.ಐ. ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ
ಅಡವಿಭಾವಿದೊಡ್ಡ ತಾಂಡಾದಲ್ಲಿ ಕ್ರಾಸ್ ಹತ್ತಿರದಲ್ಲಿರುವ ಕಿರಾಣಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ
ಹೋಗಿ ನೋಡಲಾಗಿ, ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ
80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟದ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ
ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ
01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 1480=00 ಸಿಕ್ಕಿದ್ದು, ಮಟಕಾ ಸಾಮಾಗ್ರಿಗಳನ್ನು
ಮತ್ತು ನಗದು ಹಣವನ್ನು ಪಂಚರ ಸಮಕ್ಷಮ ಜಪ್ತ ಮಾಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 169/2016 ಕಲಂ: 78(3) Karnataka
Police Act:.
ದಿನಾಂಕ:- 16-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಅಯೋಧ್ಯ ಗ್ರಾಮದಲ್ಲಿ
ಭಜನಾ ಮಂಡಳಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ
ಮಾಹಿತಿ ಬಂದಿದ್ದು, ಮಾನ್ಯ
ಸಿ.ಪಿ.ಐ ಸಾಹೇಬರ ಮಾರ್ಗದರ್ಶನದ ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಮತ್ತು ಪಿ.ಸಿ. 129, 180, 323 ಎ.ಪಿ.ಸಿ. 77 ಕನಕಪ್ಪ
ಹಾಗೂ ಇಬ್ಬರು ಪಂಚರು ಕೂಡಿಕೊಂಡು ಹೋಗಿ
ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಹೊಸ ಅಯೋಧ್ಯ ಗ್ರಾಮದ ಭಜನಾ ಮಂಡಳಿ ಮುಂಭಾಗದ ಸಾರ್ವಜನಿಕ
ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ
ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ
ಕೊಡುತ್ತೇನೆ, ಅದೃಷ್ಟದ
ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ
ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ
ತೊಡಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ
ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು
ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು ತನ್ನ ಹೆಸರು
ಹುಸೇನಪ್ಪ ತಂದೆ ಶ್ಯಾಮಪ್ಪ, ವಯಸ್ಸು 40 ವರ್ಷ, ಜಾತಿ:
ಮಾದಿಗ ಉ: ಕೂಲಿಕೆಲಸ ಸಾ: ಹೊಸ ಅಯೋಧ್ಯ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 915/- ರೂಪಾಯಿ, ಒಂದು ಮಟಕಾ
ಪಟ್ಟಿ, ಒಂದು ಬಾಲ್ ಪೆನ್ನು
ದೊರೆತಿದ್ದು ಇದೆ. ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
5] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 170/2016 ಕಲಂ: 78(3) Karnataka
Police Act:.
ದಿನಾಂಕ:- 16-06-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್
ಠಾಣೆ ವ್ಯಾಪ್ತಿಯ ಶರಣಬಸವೇಶ್ವರ ಕ್ಯಾಂಪಿನಲ್ಲಿ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಮಾನ್ಯ ಸಿ.ಪಿ.ಐ ಸಾಹೇಬರ ಮಾರ್ಗದರ್ಶನದ ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ ಮತ್ತು ಪಿ.ಸಿ. 354, 363, 323, 38 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಶರಣಬಸವೇಶ್ವರ ಕ್ಯಾಂಪಿನ ಊರ ಮುಂದೆ ಜೀಪನ್ನು ನಿಲ್ಲಿಸಿ
ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಶರಣಬಸವೇಶ್ವರ ಕ್ಯಾಂಪಿನ
ಸರಕಾರಿ ಶಾಲೆಯ ಹತ್ತಿರ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ
ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು
ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು
ತನ್ನ ಹೆಸರು ಕಂಟೆಪ್ಪ ತಂದೆ ದುರುಗಪ್ಪ ತರಲಕಟ್ಟಿ, ವಯಸ್ಸು 70 ವರ್ಷ, ಜಾತಿ: ನಾಯಕ ಸಾ:
ಶರಣಬಸವೇಶ್ವರ ಕ್ಯಾಂಪ್. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,245/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು
ದೊರೆತಿದ್ದು ಇದೆ. ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
6] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 116/2016 ಕಲಂ: 78(3) Karnataka
Police Act:.
ದಿನಾಂಕ 16-06-2016 ರಂದು 19-15 ಗಂಟೆಯ ಸುಮಾರಿಗೆ ಆರೋಪಿತನಾದ ಅಲ್ಲಸಾಬ ತಂದೆ ಮಾನಸಾಬ ನದಾಫ್
ವಯಸ್ಸು 58 ವರ್ಷ ಜಾ: ಮುಸ್ಲಿಂ ಉ: ಗಾದಿ ಕೆಲಸ ಸಾ: ಅಂಬಾಭವಾನಿ ದೇವಸ್ಥಾನದ ಹತ್ತಿರ ಕಿಲ್ಲಾ ಏರಿಯಾ,
ಗಂಗಾವತಿ ಈತನು ಗಂಗಾವತಿ ನಗರದ ಮಹಾವೀರ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು
ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ ಶ್ರೀ ಇ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ನಗದು ಹಣ ರೂ.3,910-00 [02] ಒಂದು ಸ್ಯಾಮಸಂಗ್
ಕಂಪನಿಯ ಮೊಬೈಲ್ ಅಂ.ಕಿ.ರೂ.100-00. [03] ಒಂದು
ಮಟ್ಕಾ ನಂಬರ ಬರೆದ ಪಟ್ಟಿ, (04) ಒಂದು
ಮಟಕ ನಂಬರ ಇರುವ ಪುಸ್ತಕ ಮತ್ತು (05) ಒಂದು ಬಾಲ್ ಪೆನ್ನು ಜಪ್ತಿ
ಪಡಿಸಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
0 comments:
Post a Comment