Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 30, 2016

1] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 72/2016 ಕಲಂ: 87 Karnatka Police Act.
ದಿನಾಂಕ: 29-07-2016 ರಂದು ಸಾಯಂಕಾಲ 5-05 ಗಂಟೆಯ ಸುಮಾರಿಗೆ ಸಂಗನಾಳ ಗ್ರಾಮದಲ್ಲಿ ಬರುವ ಹನುಮಂತ ದೇವರ ಗುಡಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಕೂಡಿಕೊಂಡು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿ ಹಿಡಿದಿದ್ದು 4 ಜನರು 1). ವಿರೇಶ ತಂದೆ ರಾಮಪ್ಪ ಕೋಳೂರ ವಯ: 29 ವರ್ಷ ಜಾತಿ: ಕುರುಬರ ಉ: ಗೌಂಡಿ ಕೆಲಸ ಸಾ: ಸಂಗನಾಳ 2] ಈಶಪ್ಪ ತಂದೆ ಹೊನ್ನಪ್ಪ ಸಿದ್ದರೆಡ್ಡಿ ವಯ: 38 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ ಸಾ : ಸಂಗನಾಳ 3] ಶರಣಪ್ಪ ತಂದೆ ಕಳಕನಗೌಡ ಅಪ್ಪನಗೌಡ್ರ ವಯ: 52 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ  ಸಾ: ಸಂಗನಾಳ 4] ತೋಟನಗೌಡ ತಂದೆ ಮಲ್ಲನಗೌಡ ಮಾಲಿಪಾಟೀಲ ವಯ: 45 ವರ್ಷ ಜಾತಿ : ರಡ್ಡಿ ಉ: ಒಕ್ಕಲುತನ ಸಾ:ಸಂಗನಾಳ ಸಿಕ್ಕಿ ಬಿದ್ದಿದ್ದು 6 ಜನ ಆರೋಪಿತರು ಓಡಿ ಹೋಗಿದ್ದು  ಇರುತ್ತದೆ. 5] ಶರಣಪ್ಪ ತಂದೆ ವಿರುಪಾಕ್ಷಪ್ಪ ಗರಡಿ 6] ಸಿದ್ದಪ್ಪ ತಂದೆ ಶರಣಪ್ಪ ಅಡವಳ್ಳಿ 7] ಮಂಜುನಾಥ ತಂದೆ ದೇವಪ್ಪ ಸಿದ್ನೆಕೊಪ್ಪ 8] ಈರಪ್ಪ ತಂದೆ ಶರಣಪ್ಪ ವೀರಾಪೂರ 9] ಬೀಮಪ್ಪ @ ಬೀಮಶಿ ತಂದೆ ಶಿವಪ್ಪ ಜೋಗಿನ 10] ಅಂದಪ್ಪ ಅಡವಳ್ಳಿ ಸಾ: ಎಲ್ಲರೂ ಸಂಗನಾಳ ಇರುತ್ತಾರೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 1,060=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಪ್ಲಾಸ್ಟೀಕ ಸಿಮೇಂಟ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 73/2016 ಕಲಂ: 87 Karnatka Police Act.
ದಿನಾಂಕ: 29-07-2016 ರಂದು ರಾತ್ರಿ 7-55 ಗಂಟೆಯ ಸುಮಾರಿಗೆ ಹಿರೇಮ್ಯಾಗೇರಿ ಗ್ರಾಮದಲ್ಲಿ ಬರುವ ಪಾರ್ವತಿ-ಪರಮೇಶ್ವರ ದೇವಸ್ಥಾನದ ಹಿಂಭಾಗದಲ್ಲಿಯ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ನಸೀಬ ಜೂಜಾಟದಲ್ಲಿ ತೊಡಗಿದ್ದಾಗ ರಾತ್ರಿ 8-00 ಗಂಟೆಗೆ ದಾಳಿ ಮಾಡಿ ಹಿಡಿದಿದ್ದು 9 ಜನರು ಸಿಕ್ಕಿ ಬಿದ್ದಿದ್ದು 1). ಮಂಜುನಾಥ ತಂದೆ ಶರಣಪ್ಪ ಅಗ್ನಿ ವಯ: 32 ವರ್ಷ ಜಾತಿ :ಬಣಜಿಗ ಉ: ಕೂಲಿ ಕೆಲಸ 2). ಜಗದೀಶ ತಂದೆ ಶಿವಪುತ್ರಪ್ಪ ಜಮಖಂಡಿ ವಯ : 26 ವರ್ಷ ಜಾ ಲಿಂಗಾಯತ  3). ವಿಜಯಕುಮಾರ ತಂದೆ ತಿಪ್ಪಣ್ಣ ಚಲವಾದಿ ವಯ-38 ವರ್ಷ ಜಾತಿ- ಚಲವಾದಿ 4).ಅಂದಾನಪ್ಪ ತಂದೆ ಗುರಪ್ಪ ರಾಮಶೆಟ್ಟಿ ವಯ- 35 ವರ್ಷ ಜಾತಿ- ಪಂಚಮಸಾಲಿ 5). ಮುತ್ತಣ್ಣ ತಂದೆ ಬಸಪ್ಪ ಹೊಟ್ಟಿನ್ ವಯ- 35 ವರ್ಷ ಜಾತಿ- ಪಂಚಮಸಾಲಿ 6). ಬಸವರಾಜ ತಂದೆ ಕಲ್ಲಪ್ಪ ಗುರಿಕಾರ ವಯ- 48 ವರ್ಷ ಜಾತಿ- ಲಿಂಗಾಯತ 7). ಗುರಪ್ಪ ತಂದೆ ಮಲ್ಲಪ್ಪ ಯಲಬುರ್ಗಿ ವಯ- 32 ವರ್ಷ ಜಾತಿ- ಪಂಚಮಸಾಲಿ  8). ಮಾಹಾಂತೇಶ ತಂದೆ ಶಂಕ್ರಪ್ಪ ಗುರಿಕಾರ ವ-33 ವರ್ಷ ಜಾ-ಪಂಚಮಸಾಲಿ 9).ರಾಯಪ್ಪ ತಂದೆ ರಾಮಣ್ಣ ಮಾಡ್ಲಗೇರಿ ವ-48 ವರ್ಷ ಜಾ-ಲಿಂಗಾಯತ ಉ-ಒಕ್ಕಲುತನ ಸಾ- ಎಲ್ಲರೂ ಹಿರೇಮ್ಯಾಗೇರಿ 5 ಜನ ಆರೋಪಿತರು ಓಡಿ ಹೋಗಿದ್ದು  10] ಕಲ್ಲಪ್ಪ ತಂದೆ ಲಕ್ಷ್ಮಪ್ಪ ಗುರಿಕಾರ 11] ಕಲ್ಲಪ್ಪ ತಂದೆ ಗೇನಪ್ಪ ಗುರಿಕಾರ 12] ಶರಣಪ್ಪ ತಂದೆ ದೊಡ್ಡಪ್ಪ ಗುರಿಕಾರ 13] ಅಂದಪ್ಪ ತಂದೆ ಈರಪ್ಪ ಹೊಟ್ಟಿನ 14] ಅಶೋಕ ತಂದೆ ಶಂಕ್ರಪ್ಪ ದಿವಟರ ಸಾ: ಎಲ್ಲರೂ ಹಿರೇಮ್ಯಾಗೇರಿ ಇರುತ್ತದೆ. ಸಿಕ್ಕಿ ಬಿದ್ದ ಆರೋಪಿತರ ಹತ್ತಿರ ಮತ್ತು ಕಣದಲ್ಲಿದ್ದ ಒಟ್ಟು 3,550=00 ರೂಪಾಯಿ ನಗದು ಹಣ, 52 ಇಸ್ಪೀಟ ಎಲೆಗಳು, ಒಂದು ಹಳೆ ಸಿಮೇಂಟ ಪ್ಲಾಸ್ಟೀಕ ಚೀಲ ಸಿಕ್ಕಿದ್ದು ಇರುತ್ತದೆ. ಈ ಬಗ್ಗೆ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 83/2016 ಕಲಂ: 78(3) Karnatka Police Act.
ದಿನಾಂಕ: 29-07-2016 ರಂದು ರಾತ್ರಿ 8-25 ಗಂಟೆಯ ಸುಮಾರಿಗೆ ಆರೋಪಿ ಸಾಬಣ್ಣ ತಂದೆ ಅಲ್ಲಾಸಾಬ ನಧಾಪ್ ಸಾ: ಕವಲೂರು ಇತನು ಕವಲೂರು ಗ್ರಾಮದ ಸರಕಾರಿ ಆಸ್ಪತ್ರೆಯ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಶ್ರೀ ರಾಜಕುಮಾರ ವಾಜಂತ್ರಿ ಪಿ.ಐ. ಡಿ.ಸಿ.ಐ.ಬಿ ಘಟಕ ಹಾಗೂ ತಮ್ಮ ಘಟಕದ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು ಹಾಗೂ ನಗದು ಹಣ 6240=00 ರೂ.ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡು ರಾತ್ರಿ 9-45 ಗಂಟೆಗೆ ಠಾಣೆಗೆ ಬಂದು ಆರೋಪಿತನ ಮೇಲೆ ಕ್ರಮ ಜರುಗಿಸುವ ಕುರಿತು ಒಂದು ವರದಿ ಮತ್ತು ಆರೋಪಿತನನ್ನು ಹಾಜರಪಡಿಸಿದ್ದು, ಈ ಬಗ್ಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 124/2016 ಕಲಂ: 457, 380 ಐ.ಪಿ.ಸಿ.
ದಿನಾಂಕ: 29-07-2016 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿದಾರರಾದ ಅನೀಲ್ ತಂದೆ ಪಾರಸ್ ಮಲ್ ಛೋಪ್ರಾ ಸಾ: 1ನೇ ಕ್ರಾಸ್ ಬಿ.ಟಿ ಪಾಟೀಲ್ ನಗರ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಹಾಜರು ಪಡಿಸಿದ ಗಣಕೀಕೃತ ಫಿರ್ಯಾದಿಯ ಸಾರಾಂಶವೇನೆಂರೆ, ಫಿರ್ಯಾದಿದಾರರು ಕೊಪ್ಪಳ ನಗರದ ಹೊಸಪೇಟೆ ರಸ್ತೆಯಲ್ಲಿ ಡಿಜಿಟಲ್ ಪಾಯಿಂಟ್ ಎಂಬ ಎಲೆಕ್ಟ್ರಾನಿಕ್ಸ ಅಂಗಡಿಯನ್ನು ಹೊಂದಿದ್ದು. ದಿನಾಂಕ: 29-07-2016 ರಂದು ಬೆಳಿಗ್ಗೆ 2-30 ಗಂಟೆಯಿಂದ ಬೆಳಿಗ್ಗೆ 3-30 ಗಂಟೆಯ ಅವಧಿಯಲ್ಲಿ ಫಿರ್ಯಾದಿದಾರರ ಡಿಜಿಟಲ್ ಪಾಯಿಂಟ್ ಅಂಗಡಿಯ ವೆಂಟಿಲೇಟರ್ ನ  ಕಬ್ಬಿಣದ ರಾಡ್ ಮುರಿದು ಅಂಗಡಿಯೊಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಗಳನ್ನು ಕಿತ್ತು ಅಂಗಡಿಯಲ್ಲಿದ್ದ 1] ಒಂದು ಸ್ಯಾಮ್ಸಂಗ್ ಮೇಟ್ರೋ 360 ಮೋಬೈಲ್ ಅಂಕಿರೂ: 3,320=00. 2] ಒಂದು ಸ್ಯಾಮ್ಸಂಗ್ ಗುರು 1205 ಮೋಬೈಲ್ ಅಂಕಿರೂ: 1,220=00. 3] ಒಂದು ಸ್ಯಾಮ್ಸಂಗ್ ಆನ್5 ಮೋಬೈಲ್ ಅಂಕಿ.ರೂ: 8,990=00. 4] ಐದು ಲೆನೆವೋ ಎ5000 ಮೋಬೈಲ್ ಅಂಕಿರೂ: 42,500=00. 6] ಒಂದು ಲೆನೆವೋ ಎ536 ಮೋಬೈಲ್ ಅಂ.ಕಿ.ರೂ: 6,249=00. 7] ಒಂದು ಲೆನೆವೋ ಪಿ1Turbo  ಮೋಬೈಲ್ ಅಂಕಿ.ರೂ: 17,300=00. 8] ಮೂರು ಲೆನೆವೋ ವೈಬ್ಸಿ ಮೋಬೈಲ್ಗಳು ಅಂ.ಕಿ.ರೂ: 19,500=00. 9] ಮೂರು ಲೆನೆವೋ ಎ1000 ಮೋಬೈಲ್ಗಳು ಅಂ.ಕಿ.ರೂ: 12,000=00. 10] ಎರಡು ಲೆನೆವೋ 319 ಮೋಬೈಲ್ಗಳು ಅಂ.ಕಿ.ರೂ: 8,652=00. 11] ಒಂದು ಲೆನೆವೋ ಕೆ3 ನೋಟ್ ಮೋಬೈಲ್ ಅಂ.ಕಿ.ರೂ: 9,300=00. 12] ಒಂದು ಜಿಯೋನಿ ಎಮ್5ಪ್ಲಸ್ ಮೋಬೈಲ್ ಅಂ.ಕಿ.ರೂ: 26,999=00. 13] ಒಂದು ಜಿಯೋನಿ ಪಿ3ಎಸ್ ಮೋಬೈಲ್ ಅಂ.ಕಿ.ರೂ: 5,765=00. 14] ನಾಲ್ಕು ಜಿಯೋನಿ ಪಿ5 ಎಲ್ ಮೋಬೈಲ್ಗಳು ಅಂ.ಕಿರೂ: 33,996=00. 15] ಮೂರು ಜಿಯೋನಿ ಎಫ್103 ಮೋಬೈಲ್ ಅಂ.ಕಿ.ರೂ: 35,997=00. 16] ಒಂದು ಜಿಯೋನಿ ಎಲ್700 ಮೋಬೈಲ್ ಅಂ.ಕಿ.ರೂ: 1,899=00. 17] ಒಂದು YU4711 ಮೋಬೈಲ್ ಅಂ.ಕಿ.ರೂ: 6,060=00. 18] ಒಂದು LYF FLAME 6 ಮೋಬೈಲ್ ಅಂ.ಕಿ.ರೂ: 3,000=00. 19] ಒಂದು LYF WIND 4  ಮೋಬೈಲ್ ಅಂ.ಕಿ.ರೂ: 6,800=00. 20] ಒಂದು ಒಪ್ಪೋ Neo7 ಮೋಬೈಲ್ ಅಂ.ಕಿ.ರೂ: 9,515=00. 21] ಒಂದು ಒಪ್ಪೋ A37 ಮೋಬೈಲ್ ಅಂ.ಕಿ.ರೂ: 11,421=00. 22] ಒಂದು ಒಪ್ಪೋ Neo5  ಮೋಬೈಲ್ ಅಂ.ಕಿ.ರೂ: 7,000=00. 23] ಒಂದು XOLO ಮೋಬೈಲ್ ಅಂಕಿರೂ: 5,500=00. 24] ಒಂದು ಸೋನಿ ಮೋಬೈಲ್ ಅಂಕಿರೂ: 18,990=00. 25] ಒಂದು ಇಂಟೆಕ್ಸ್ ಮೋಬೈಲ್ ಅಂಕಿರೂ: 7,500=00. ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ: 3,09,473=00 ಬೆಲೆಬಾಳುವುಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮಾನ್ಯರವರು ನಮ್ಮ ಅಂಗಡಿಯ ವೆಂಟಿಲೇಟರ್ ನ ಕಬ್ಬಿಣದ ರಾಡ್ ಮುರಿದು ಒಳ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಮೋಬೈಲ್ ಗಳನ್ನ ಪತ್ತೇ ಮಾಡಿ ಕಳ್ಳತನ ಮಾಡಿದ ಯಾರೋ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿ ಮೇಲಿಂದ ಪ್ರಕರಣ ದಾಖಾಲು ಮಾಢಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 215/2016 ಕಲಂ: 498 (A), 323, 504, 506  R/W 149 IPC ಹಾಗೂ 3 & 4 D.P.Act.
ದಿನಾಂಕ:29-07-2016 ರಂದು ಮುಂಜಾನೆ 07.15 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಸರಸ್ವತಿ ಗಂಡ ರಾಮಣ್ಣ ಮನ್ನಾಪೂರ ವಯ :20 ವರ್ಷ ಉ : ಮನೆಗೆಲಸ ಸಾ :ಕಂದಕೂರ ತಾ : ಕುಷ್ಟಗಿ. ರವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಸದರ ಪಿರ್ಯಾದಿಯ ಸಾರಾಂಶವೆನೆಂದರೆ, ಫಿರ್ಯಾದಿದಾರಳಿಗೆ ದಿನಾಂಕ 27-08-2015 ರಂದು ಹಿರೇಅರಳಿಹಳ್ಳಿ ಗ್ರಾಮದ ರಾಮಣ್ಣ ಮನ್ನಾಪೂರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ 25,000/-ನಗದು ಹಣ, 2 ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ಕೊಟ್ಟಿರುತ್ತೇವೆ. 3-4 ತಿಂಗಳವರೆಗೆ ಗಂಡನೊಂದಿಗೆ ಸುಖ ಸಂಸಾರ ನಡೆಸಿಕೊಂಡು ನಂತರ ಫಿರ್ಯಾದಿ ಗಂಡ ಮತ್ತು ಅತ್ತೆ, ಗಂಡನ ಅಣ್ಣಂದಿರು ಮತ್ತು ಅವರ ತಂಗಿಯರು ದಿನಾಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವಾಚ್ಯವಾಗಿ ಬೈದಾಡುತ್ತಾ ಹೊಡಿಬಡಿ ಮಾಡುತ್ತಿದ್ದರು. ಮತ್ತು ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆಯಾಗಿ 50,000/-ಗಳನ್ನು ಮತ್ತು 5 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಪಿಡಿಸುತ್ತಿದ್ದರು. ಮತ್ತು ಈ ವಿಷಯವನ್ನು ಫಿರ್ಯಾದಿಯು ತನ್ನ ಅಣ್ಣ ಮತ್ತು ಆತನ ಸ್ನೇಹಿತ ಶರಣಯ್ಯ ಇವರಿಗೆ ತಿಳಿಸಿದ್ದು ಅವರು ಸಹ ಬುದ್ದಿ ಹೇಳಿ ಜಗಳ ಬಿಡಿಸಿದ್ದು ಅದೆ ದಿವಸ ಫಿರ್ಯಾದಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ. ದಿನಾಂಕ 10-07-2016 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಫಿರ್ಯಾದಿಯು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ನಮ್ಮ ಮನೆಯ ಮುಂದೆ ಬಂದು ನನ್ನ ಗಂಡ ಲೇ ಸೂಳೆ ವರದಕ್ಷಿಣೆ ಹಣ ಮತ್ತು ಬಂಗಾರ ತರಬೇಕೆಂದು ಹೇಳಿದರೆ ನಿನ್ನ ತವರು ಮನೆಯಲ್ಲಿ ಕುಂತಿಯಾ ಅಂತಾ ಅವಾಚ್ಯವಾಗಿ ಬೈದಾಡುತ್ತಾ ನನಗೆ ಮೈ ಕೈಗೆ ಹೊಡಿಬಡಿ ಮಾಡಿದ್ದು, ಅವರ ಜೋತೆಗೆ ಬಂದಿದ್ದ ಇತರರು ನುಕಾಡಿ,ಎಳೆದಾಡಿ, ಹೊಡಿಬಡಿ ಮಾಡಿ ನಿನ್ನನ್ನು ಇವತ್ತು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿದರು. ಅದೆ ವೇಳೆಗೆ ರಾಮಣ್ಣ ತಂದಿ ಹನಮಂತಪ್ಪ ಗೋಪಾಳಿ, ನನ್ನ ತಾಯಿ ಶಂಕ್ರವ್ವ ಗಂಡ ಹನಮಂತಪ್ಪ ಕುಷ್ಟಗಿ, ಮತ್ತು ಚಿಕ್ಕಪ್ಪನಾದ ದೇವಪ್ಪ ತಂದಿ ಮರಿಯಪ್ಪ ಕುಷ್ಟಗಿ, ಇವರು ಬಂದು ಜಗಳ ಬಿಡಿಸಿದರು. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Friday, July 29, 2016

1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 63/2016 ಕಲಂ: 87 Karnatka Police Act.
ದಿನಾಂಕ: 28-07-2016 ರಂದು 4-20 ಗಂಟೆಗೆ ಪಿ.ಎಸ್.ಐ. ಹನಮಸಾಗರ ರವರು ಠಾಣೆಗೆ ಹಾಜರಾಗಿ ಇಸ್ಪೇಟ್ ದಾಳಿ ಪಂಚನಾಮೆ ಹಾಗೂ 5 ಜನ ಆರೋಪಿತರು ಮತ್ತು ಮುದ್ದೆಮಾಲಸಮೇತ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಸಾರಾಂಶವೇನೆಂದರೆ. ಪಿ.ಎಸ್.ಐ. ರವರು ದಿನಾಂಕ: 28-07-2016 ರಂದು ಮದ್ಯಾಹ್ನ 2-15 ಗಂಟೆಗೆ ಹನಮಸಾಗರದ ಹಳೆ ಬಸ ನಿಲ್ದಾಣದಲ್ಲಿದ್ದಾಗ. ಹನಮಸಾಗರದ ಎ.ಪಿ.ಎಂ.ಸಿ.ಯಲ್ಲಿ ಸಾರ್ವನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿ ಹೆಚ್.ಸಿ-11, 83, ಪಿ.ಸಿ-126, ರವರು ಹಾಗೂ ಇಬ್ಬರು ಪಂಚರಾದ 1] ಶಿವಪುತ್ರ ತಂದೆ ಬಾಲನಗೌಡ ಮಾಲಿಪಾಟೀಲ್ ಸಾ: ಹನಮಸಾಗರ 2] ರೈಹಿಮಾನಸಾಬ ತಂದೆ ಚಂದುಸಾಬ ಮುಲ್ಲಾರ ಸಾ: ಕುರುಬನಾಳ ಹಾ:ವ: ಹನಮಸಾಗರ ರವರೊಂದಿಗೆ ಸರಕಾರಿ ಜೀಪ ನಂ: ಕೆ.ಎ-37 ಜಿ-186 ನೇದ್ದರಲ್ಲಿ ಹೊರಟು ಹನಮಸಾಗರದ ಎ.ಪಿ.ಎಂ.ಸಿ. ಯಲ್ಲಿ ಸಾರ್ವ ಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು, ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವರರನ್ನು ಪಂಚರ ಸಮಕ್ಷಮ ದಾಳಿ ಮಾಡಲು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿ ಬಿದಿದ್ದು. ಇಸ್ಪೆಟ್ ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ ಎಲೆಗಳು ಹಾಗೂ 1110/- ನಗದು ಹಣ ಹಾಗೂ ಒಂದು ಪ್ಲಾಸ್ಟಿಕ್ ಬರ್ಕಾ ಜಪ್ತ ಮಾಡಿಕೊಂಡು ಕಾನೂನು ಕ್ರಮ ಜರುಗಿಸಲು ವರದಿ ನೀಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 90/2016 ಕಲಂ: 78(3) Karnatka Police Act.
ದಿನಾಂಕ. 28-07-2016 ರಂದು ಸಂಜೆ 7-00 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಶ್ರೀ ಚಂದ್ರಶೇಖರ ಪಿಸಿ-409 ರವರು ತಾವರಗೇರಾ ಪಟ್ಟಣದ ಶ್ಯಾಮೀದಲಿ ವೃತ್ತದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದಿದ್ದು, ರೇಡ್ ಮಾಡುವ ಕುರಿತು ಶ್ರೀ ಚಂದ್ರಶೇಖರ ಪಿಸಿ-409 ರವರಿಗೆ ಪಂಚರನ್ನು ಕರೆದುಕೊಂಡು ಬಾ ಅಂತಾ ಆದೇಶಿಸಿದ ಪ್ರಕಾರ ಇಬ್ಬರು ಪಂಚರನ್ನು ಬರಮಾಡಿಕೊಂಡು ತಾವರಗೇರಾದ ಬಸ್ ನಿಲ್ದಾಣದಲ್ಲಿ ಗಂಗಾವತಿಯ ಡಿ.ಎಸ್.ಪಿ ಸಾಹೇಬರ ಅಪರಾಧ ತಂಡದಲ್ಲಿರುವ ಸಿಬ್ಬಂದಿಯವರಾದ ಶ್ರೀ ಮುತ್ತಣ್ಣ ಪಿಸಿ-65 ಮತ್ತು ಶ್ರೀ ಗ್ಯಾನಪ್ಪ ಪಿಸಿ-131 ರವರು ಜೀಪಿನಲ್ಲಿ ಹತ್ತಿದ್ದು ಅವರನ್ನು ವಿಚಾರಿಸಲಾಗಿ ಅವರು ತಾವುಗಳು ಮಾನ್ಯ ಡಿ.ಎಸ್.ಪಿ ಸಾಹೇಬರ ಮಾರ್ಗದರ್ಶನದಲ್ಲಿ ಬಂದಿದ್ದು ಡಿ.ಎಸ್.ಪಿ ಸಾಹೇಬರಿಗೆ ಬಂದ ಮಾಹಿತಿ ಪ್ರಕಾರ ತಾವರಗೆರಾ ಶ್ಯಾಮೀದಲಿ ವೃತ್ತದಲ್ಲಿ ಮಟ್ಕಾ ಜೂಜಾಟ ನಡೆದಿದೆ ಅಂತಾ ತಿಳಿಸಿದ್ದು ಆಗ ನಾನು ಅವರಿಗೆ ನಾವು ಕೂಡ ಅದೇ ಮಾಹಿತಿಯಂತೆ ರೇಡ್ ಕುರಿತು ಹೋಗುತ್ತಿದ್ದು ನೀವು ಬನ್ನಿ ಎಂದು ಅವರನ್ನು ಕೂಡ ಕರೆದುಕೊಂಡು ಎಲ್ಲರೂ ಕೂಡಿ ತಾವರಗೇರಾದ ಶ್ಯಾಮೀದಲಿ ವೃತ್ತದ ಹತ್ತಿರ ಹೋಗಿ ಜೀಪನ್ನು ನಿಲ್ಲಿಸಿ ನೋಡಲಾಗಿ ಶ್ಯಾಮೀದಲಿ ವೃತ್ತದಲ್ಲಿರುವ ಒಂದು ಪಾನ್ಶ್ಯಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರ್ಗಳನ್ನು ಬರುದುಕೊಡುತ್ತಿದ್ದು, ಮಟ್ಕಾ ನಂಬರ್ ಬಂದಲ್ಲಿ ಒಂದು ರೂಪಾಯಿಗೆ 80-00 ರೂಪಾಯಿ ಕೊಡುತ್ತೆನೆ ಅಂತಾ ಕೂಗೂತ್ತಾ ಮಟ್ಕಾ ನಂಬರ್ಗಳನ್ನು ಬರೆದುಕೊಳ್ಳುತ್ತಿರುವ ಕಾಲಕ್ಕೆ ನಾನು ಹಾಗೂ ಸಿಬ್ಬಂದಿಯವರು ಮತ್ತು ಪಂಚರು ಕೂಡಿ ಸಂಜೆ 7-30 ಗಂಟೆಗೆ ದಾಳಿ ಮಾಡಲು ಮಟ್ಕಾ ನಂಬರ್ ಬರೆಸುತ್ತಿದ್ದವರು ಓಡಿ ಹೋಗಿದ್ದು, ಮಟ್ಕಾ ನಂಬರ್ಗಳನ್ನು ಬರದುಕೊಡುತ್ತಿದ್ದನು ಸಿಕ್ಕಿ ಬಿದ್ದಿದ್ದು, ಸಿಕ್ಕಿ ಬಿದ್ದವನಿಗೆ ವಿಚಾರಿಸಲು ಆತನು ತನ್ನ ಹೆಸರು ಚಂದ್ರಯ್ಯಸ್ವಾಮಿ ತಂದೆ ವೀರಯ್ಯಸ್ವಾಮಿ ಕಲ್ಮಠ್, ವಯ: 50 ವರ್ಷ, ಜಾತಿ: ಜಂಗಮ, ಉ: ಪಾನಶ್ಯಾಪ್ ಸಾ: ತಾವರಗೇರಾ ಅಂತಾ ತಿಳಿಸಿದ್ದು, ನಾನು ಅವನ ಅಂಗಜಡ್ತಿಯನ್ನು ಮಾಡಲು ಅವನ ಹತ್ತಿರ ಒಂದು ಮಟ್ಕಾ ನಂಬರ್ ಬರೆದ ಚೀಟಿ, ಒಂದು ಬಾಲ್ ಪೆನ್ನು, ಹಾಗೂ ಜೂಜಾಟದ ನಗದು ಹಣ 3090=00 ರೂ. ಗಳು ಸಿಕ್ಕಿದ್ದು, ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು ಕೈ ಕೊಂಡಿದ್ದು ಇರುತ್ತದೆ. 

Thursday, July 28, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 167/2016 ಕಲಂ: 78(3) Karnatka Police Act.
ದಿನಾಂಕ 27-07-2016 ರಂದು ರಾತ್ರಿ  8-30 ಗಂಟೆಯ ಸುಮಾರಿಗೆ  ನಾಗನಕಲ್ಲ ಗ್ರಾಮದ  ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ   ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಲು   ಒಬ್ಬನು ಓಡಿ ಹೊಗಿದ್ದು  ಒಬ್ಬನು ಸಿಕ್ಕಿದ್ದು  ಸಿಕ್ಕಿಬಿದ್ದವನಿಗೆ ವಿಚಾರಿಸಲಾಗಿ ಬಾಷಾಸಾಬ ತಂದಿ ಅಮೀನಸಾಬ ಬಡಗಿ ವಯಾ-35 ವರ್ಷ ಜಾ- ಮುಸ್ಲಿಂ ಸಾ- ನಾಗನಕಲ್ಲ ತಾ- ಗಂಗಾವತಿ  ಈತನನ್ನ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 850=00 ಗಳನ್ನು ಜಪ್ತ ಮಾಡಿಕೊಂಡು  ಈತನು ಮಟ್ಕಾ ಪಟ್ಟಿ ಮತ್ತು ಹಣವನ್ನು ವಶಪಡಿಸಿಕೊಂಡಿದ್ದು ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.  
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 162/2016 ಕಲಂ: 454, 457, 380 ಐ.ಪಿ.ಸಿ:.
ದಿ :27.07.2016 ರಂದು ಮದ್ಯಾಹ್ನ 1.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶ್ರೀನಿವಾಸರಾವ್ ತಂದೆ ಸದಾಶಿವರಾವ್ ಕುಲಕರ್ಣಿ, BSNL Sub Divisional Engineer, ಸಾ : ಕೊಪ್ಪಳ  ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೇ, ನಿನ್ನೆ ದಿ-26.07.2016 ರಂದು ಸಂಜೆ 05.30 ಗಂಟೆಯಿಂದ ಇಂದು ದಿ-27.07.2016 ರಂದು ಬೆಳಿಗ್ಗೆ 10.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗಿಣಗೇರಿ ದೂರವಾಣಿ ವಿನಿಮಯ ಕೇಂದ್ರ ಕೊಠಡಿಯ ಬೀಗ ಮುರಿದು ಒಳಗಡೆ ಪ್ರವೇಶ ಮಾಡಿ ಕೊಠಡಿಯಲ್ಲಿದ್ದ, 1] 400 ಎ.ಹೆಚ್ ಸಾಮರ್ಥ್ಯ 45 ಸೆಲ್ ಗಳು ತಲಾ 1 ಕ್ಕೆ 6000/- ರೂ ಒಟ್ಟು ಅಂ.ಕಿ-270000-00 ರೂ ಮತ್ತು 2] 600 ಎ.ಹೆಚ್ ಸಾಮರ್ಥ್ಯ 24 ಸೆಲ್ ಗಳು ತಲಾ 1 ಕ್ಕೆ 10,000/- ರೂ ಒಟ್ಟು ಅಂ.ಕಿ-240000-00 ರೂ  ಹೀಗೆ ಒಟ್ಟು 69 ಸೆಲ್ ಗಳು ಅಂ.ಕಿ-5,10,000-00 ರೂ ಬೆಲೆಬಾಳುವ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಮಾಡಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ತಡವಾಗಿ ನೀಡಿದ ದೂರಿನ ಮೇಲಿಂದ ಕೊಪ್ಪಳ ಗ್ರಾಮೀಣ ಠಾಣೆ ಗುನ್ನೆ ನಂ : 162/2016. ಕಲಂ : 454,457,380 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ 
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 213/2016 ಕಲಂ: 498(ಎ), 323, 504, 506 ಸಹಿತ 149 ಐ.ಪಿ.ಸಿ ಮತ್ತು 3, 4 ವರದಕ್ಷಿಣೆ ನಿಷೇಧ ಕಾಯ್ದೆ.
ದಿನಾಂಕ:27-07-2016 ರಂದು ಮುಂಜಾನೆ 11-00 ಗಂಟೆಗೆ ಪಿರ್ಯಾದಿದಾರರಾದ ಶ್ರಿಮತಿ ಅನಿತಾ @ ಅನೆಂತೆಮ್ಮ ಗಂಡ ತಿಮ್ಮಣ್ಣ ಭೋವಿ ಸಾ :ಹುಲಿಹೈದರ ಹಾ : : 8 ನೇ ವಾರ್ಡ ವಡ್ಡರ ಓಣಿ ಕುಷ್ಟಗಿ ಪಿರ್ಯಾದಿಯನ್ನು ಸಲ್ಲಿಸಿದ್ದು ಪಿರ್ಯಾದಿದಾರಳನ್ನು ದಿನಾಂಕ :17-02-2015 ರಂದು ಮದುವೆ ಮಾಡಿಕೊಟ್ಟಿದ್ದು  ಇರುತ್ತದೆ. ಸುಮಾರು 4 ತಿಂಗಳವರೆಗೆ ಸಂಸಾರ ಮಾಡಿದ್ದು ನಂತರ ನ್ನ ಗಂಡನಾದ ತಿಮ್ಮಣ್ಣ ಈತನು ನೀನು ಚೆಂದ ಇಲ್ಲಾ, ವರದಕ್ಷಿಣೆ ಕಡಿಮೆ ಕೊಟ್ಟಿದಿ, ಇನ್ನೂ ನೀನು ವರದಕ್ಷಿಣೆ ತೆಗೆದೆಕೊಂಡು ಬಾ ಅಂತಾ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಮಾಡುತ್ತಿದ್ದನು. ಆಗ ನಾನು ನಮ್ಮ ತಂದೆ-ತಾಯಿಗೆ ಈ ವಿಷಯವನ್ನು ತವರು ಮನೆಗೆ ಅಂತಾ ಬಂದಾಗ ಹೇಳುತ್ತಿದ್ದೇನು. ಆಗ ನಮ್ಮ ತಂದೆ-ತಾಯಿಯು ಇದು ಸಂಸಾರದ ವಿಷಯ ನಾವು ಸ್ವಲ್ಪ ದಿನದಲ್ಲಿ ಹಣವನ್ನು ರೆಡಿಮಾಡಿಕೊಂಡು ಬರುತ್ತೇನೆ. ಅಂತಾ ಹೇಳಿ ಸಮಜಾಹಿಸಿ ಕಳುಹಿಸುತ್ತಿದ್ದರು. ಮತ್ತು ನಾವು ಹುಲಿಹೈದರಕ್ಕೆ ಬಂದು ಹಣವನ್ನು ತಂದು ಕೊಡುತ್ತೇವೆ. ಅಂತಾ ಹೇಳುತ್ತಿದ್ದರು. ಹಾಗೂ ನನ್ನ ಗಂಡನು ಅಲ್ಲದೇ ನನ್ನ ಅತ್ತೆ ಯಲ್ಲಮ್ಮ ಮಾವ ಹನುಮಂತಪ್ಪ, ಮೈದುನಾ ಬಸವರಾಜ ಹಾಗೂ ನಾದಿನಿ ದ್ಯಾಮವ್ವ ಇವರು ಸಹ ನೀನು ಸರಿಯಾಗಿಲ್ಲಾ ನಿನ್ನ ತವರು ಮನೆಯಿಂದ ವರದಕ್ಷಿಣೆ ಹಣ ಕಡಿಮೆ ತಂದಿದ್ದಿ ಅಂತಾ ಬೈದಾಡುತ್ತಾ ಹೊಡಿಬಡಿ ಮಾಡುತ್ತಾ ಇವರು ಸಹ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಮಾಡಿ ಹೊಡಿಬಡಿ ಮಾಡುತ್ತಿದ್ದರು. ನನ್ನನ್ನು ಈಗ್ಗೆ 6 ತಿಂಗಳದ ಹಿಂದೆ ನನ್ನ ಗಂಡ ತಿಮ್ಮಣ್ಣ ಭೋವಿ, ಅತ್ತೆ ಯಲ್ಲಮ್ಮ ಭೋವಿ, ಮಾವ ಹನುಮಂತಪ್ಪ ಭೋವಿ, ಮೈದುನಾ ಬಸವರಾಜ ಭೋವಿ ಮತ್ತು ನಾದಿನಿ ದ್ಯಾಮವ್ವ  ಭೋವಿ ಇವರೆಲ್ಲರೂ ಹೊಡಿಬಡಿ ಮಾಡಿ ನೀನು ನಿನ್ನ ತವರು ಮನೆಯಿಂದ ವರದಕ್ಷಿಣೆಯಾಗಿ  10,000=00 ರೂ :ಹಣವನ್ನು ಮತ್ತು 2 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ನನಗೆ ಅವಾಚ್ಯವಾಗಿ ಬೈದಾಡಿ ಮನೆಯಿಂದ ಹೊರಗೆ ಹಾಕಿ ನೀನು ವರದಕ್ಷಿಣೆ ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ವಾಪಸ ಗಂಡನ ಮನೆಗೆ ಬಾ ಇಲ್ಲ ಅಂದರೆ ಅಲ್ಲಿಯೇ ಬಿದ್ದರಿ ಅಂತಾ ಹೇಳಿ ಕಳಿಸಿದ್ದರು.  ಆಗ ನಾನು ತವರುಮನೆಯಾದ ಕುಷ್ಟಗಿಗೆ ಬಂದು ನನ್ನ ತಂದೆ-ತಾಯಿಯೊಂದಿಗೆ ಇರುತ್ತೇನೆ. ಈಗ್ಗೆ 15-20 ದಿವಸಗಳ ಹಿಂದೆ ದಿನಾಂಕ :30-06-2016 ರಂದು ಕುಷ್ಟಗಿಗೆ ನನ್ನ ಗಂಡ ತಿಮ್ಮಣ್ಣ ಭೋವಿ, ಅತ್ತೆ ಯಲ್ಲಮ್ಮ ಭೋವಿ, ಮಾವ ಹನುಮಂತಪ್ಪ ಭೋವಿ, ಮೈದುನಾ ಬಸವರಾಜ ಭೋವಿ ಮತ್ತು ನಾದಿನಿ ದ್ಯಾಮವ್ವ  ಭೋವಿ ಇವರೆಲ್ಲರೂ ಕುಷ್ಟಗಿಗೆ ಬಂದು ನಮ್ಮ ಮನೆಯ ಅಂಗಳದಲ್ಲಿ ನನ್ನ ಗಂಡನಾದ ತಿಮ್ಮಣ್ಣ ಲೇ ಭೋಸುಡಿ ನೀನು ನಿನ್ನ ತವರು ಮನೆಯಿಂದ 10,000=00 ವರದಕ್ಷಿಣೆ ಮತ್ತು 2 ತೊಲೆ ಬಂಗಾರವನ್ನು ತೆಗೆದುಕೊಂಡು ಬಾ ಅಂತಾ ಹೇಳಿ ಕಳಿಸಿದ್ದೀವಿ ನೀನು ಇಲ್ಲಿಯೇ ಇದ್ದೀಯಾ ಅಂತಾ ಅಂದವನೇ ತಲೆಯ ಕೂದಲನ್ನು ಹಿಡಿದು ಎಳೆದಾಡಿ ಹೊಡೆದನು, ಅತ್ತೆ ಯಲ್ಲಮ್ಮ ಭೋವಿ ಈಕೆಯು ಈ ಸೂಳೆಯದು ಇಲ್ಲಿ ಯಾಕ ಹಡಸಾಕ ಅದಳ ಈಕೆಯ ಜೀವವನ್ನು ತೆಗೆಯಿರಿ ಅಂತಾ ಬೈದು ಕೈಯಿಂದ ಹೊಡಿಬಡಿ ಮಾಡಿ ಈವಳ ಜೀವವನ್ನು ತೆಗೆಯಿರಿ ಅಂತಾ ಜೀವದ ಬೆದರಿಕೆ ಹಾಕಿದಳು, ಮಾವ ಹನುಮಂತಪ್ಪ, ಮೈದುನಾ ಬಸವರಾಜ ಮತ್ತು ನಾದಿನಿ ದ್ಯಾಮವ್ವ ಇವರೆಲ್ಲರೂ ಈಕೆಯದು ಬಹಳ ಆಗೈತಿ ಒದಿರಿ ಬಡಿರಿ ಅಂತಾ ಅನ್ನುತ್ತಾ ಮೈಗೆ.ಕೈಗೆ  ಕೈಗಳಿಂದ ಹೊಡಿಬಡಿ ಮಾಡಿದರು. ಆಗ ನಮ್ಮ ತಂದೆ-ತಾಯಿ ಮತ್ತು ಬಾಜು ಮನೆಯವರಾದ 1) ಯಲ್ಲಪ್ಪ ತಂದೆ ಹನುಮಪ್ಪ ಭೋವಿ 2) ಯಲ್ಲಪ್ಪ ತಂದೆ ಯಂಕಪ್ಪ ಭೋವಿ ಮತ್ತು 3) ಗಂಗಮ್ಮ ಗಂಡ ಯಲ್ಲಪ್ಪ ಭೋವಿ ರವರು ಜಗಳ ಬಿಡಿಸಿ ಬುದ್ದಿ ಹೇಳಿ ಕಳಿಸಿದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


Wednesday, July 27, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 147/2016 ಕಲಂ: 468, 471, 420 ಐ.ಪಿ.ಸಿ:.
ಪಿರ್ಯಾದಿದಾರರಾದ ಶ್ರೀ ಎಲ್.ಡಿ. ಚಂದ್ರಕಾಂತ, ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಗಂಗಾವತಿ ರವರು ಫಿರ್ಯಾದಿ ನೀಡಿದ್ದು, ಗಂಗಾವತಿ ನಗರದ ಪ್ರಶಾಂತ ನಗರದ ನಿವಾಸಿಯಾದ ಕೇಶವರಾಜ್ ತಂದೆ ರಾಮಚಂದ್ರರಾವ್ ರವರು 2013 ನೇ ಸಾಲಿನಲ್ಲಿ ಗಂಗಾವತಿ ನಗರ ಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ನಗರ ಸಭೆಯ ವಾರ್ಡ ನಂ:08 ಪ್ರಶಾಂತ ನಗರದಿಂದ ಸ್ಪರ್ಧಿಸಿ ಚುನಾಯಿತನಾಗಿದ್ದು, ಆರೋಪಿತನು ಚುನಾವಣೆ ಸಮಯದಲ್ಲಿ ತಾನು ಬ್ರಾಹ್ಮಣ ಜಾತಿಗೆ ಸೇರಿದವನಾಗಿದ್ದರೂ ಸಹ ತನ್ನ ನಿಜವಾದ ಜಾತಿಯನ್ನು ಮರೆ ಮಾಚಿ ತಾನು ದೇವಾಂಗ ಜಾತಿಗೆ ಸಂಬಂದಿಸಿದ ಪ್ರವರ್ಗ-ಅ ನೇದ್ದರ ಪ್ರಮಾಣ ಪತ್ರವನ್ನು ಪಡೆದುಕೊಂಡು ತನ್ನ ಜಾತಿಯ ಬಗ್ಗೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಪ್ರವರ್ಗ-ಅ ನೇದ್ದರ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದುದು ಇರುತ್ತದೆ. ನಂತರ ಸದರಿಯವನ ಪ್ರಮಾಣ ಪತ್ರದ ಮೇಲೆ ವಿಚಾರಣೆಗಾಗಿ ಒಬ್ಬರು ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಸಮಯದಲ್ಲಿ ಶಾಲಾ ದಾಖಲೆ ಮತ್ತು ಇನ್ನಿತರ ಅವಶ್ಯಕ ದಾಖಲಾತಿಗಳನ್ನು ಪರಿಶೀಲಿಸಿದಾಗ ಆರೋಪಿತನು ಬ್ರಾಹ್ಮಣ ಜಾತಿಗೆ ಸೇರಿದ ಬಗ್ಗೆ ವಿಚಾಣೆಯ ಸಮಯದಲ್ಲಿ ರುಜುವಾತಾಗಿದ್ದರಿಂದ ಅವನಿಗೆ ನೀಡಿದ ಪ್ರವರ್ಗ-ಅ ನೇದ್ದರ ಅಡಿಯಲ್ಲಿ ದಿನಾಂಕ:19-02-2013 ರಂದು ನೀಡಿದ ಪ್ರಮಾಣ ಪತ್ರವನ್ನು ದಿನಾಂಕ: 11-03-2016 ರಂದು ರದ್ದು ಪಡಿಸಿದ್ದಾಗಿ, ಆರೋಪಿತನು ತಾನು ಪ್ರವರ್ಗ-ಅ ರಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆಯುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮೋಸ  ಮಾಡಿರುವುದಾಗಿ ಮತ್ತು ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 213/2016 ಕಲಂ: 87 Karnatka Police Act.
ದಿನಾಂಕ: 26-07-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೇರಾ ಕ್ಯಾಂಪ್ ಸೀಮಾದಲ್ಲಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ 120, 429, 363, 335, 354, 110, 43, 323, 361 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಹೊಸಕೇರಾ ಕ್ಯಾಂಪ್ ಸೀಮಾದಲ್ಲಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 3 ಜನರು ಸಿಕ್ಕಿ ಬಿದ್ದಿದ್ದು, ಉಳಿದವರು ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಮಲ್ಲಪ್ಪ ತಂದೆ ಸಂಗಪ್ಪ ಕುರಿ, ವಯಸ್ಸು 40 ವರ್ಷ, ಕುರುಬರು, ಟ್ರ್ಯಾಕ್ಟರ್ ಚಾಲಕ ಸಾ: ಹೊಸಕೇರಾ ಕ್ಯಾಂಪ್ (2) ಹುಸೇನ್ ಬಾಷಾ ತಂದೆ ಸಾಹೇಬಣ್ಣ, 35 ವರ್ಷ, ಪಿಂಜಾರ, ಉ: ಹೋಟಲ್ ಸಾ: ಹೊಸಕೇರಾ ಕ್ಯಾಂಪ್ (3) ಮಂಜುನಾಥ ತಂದೆ ಮಲ್ಲಿಕಾರ್ಜುನ ಮಾಲೀಪಾಟೀಲ್, ವಯಸ್ಸು 30 ವರ್ಷ, ಜಾತಿ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹೊಸಕೇರಾ. ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,045/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 165/2016 ಕಲಂ: 78(3) Karnataka Police Act.
ದಿನಾಂಕ 26-07-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ  ಹೊಸಜೂರಟಗಿ ಈಶ್ವರ ದೇವಸ್ಥಾನದ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ. ಕಾರಟಗಿ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು   ಒಬ್ಬನು ಓಡಿ ಹೊಗಿದ್ದು  ಒಬ್ಬನು ಸಿಕ್ಕಿದ್ದು   ಸಿಕ್ಕಿಬಿದ್ದವನಿಗೆ ವಿಚಾರಿಸಲಾಗಿ 1) ಕೃಷ್ಣಾ ತಂದಿ ಕನಕಪ್ಪ ವಯಾ-20 ವರ್ಷ ಜಾ- ನಾಯಕ ಉ- ಕೂಲಿ ಕೆಲಸ ಸಾ- ಹೊಸಜೂರಟಗಿ ತಾ- ಗಂಗಾವತಿ ಈತನನ್ನ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 1900=00 ಗಳನ್ನು ಜಪ್ತ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 166/2016 ಕಲಂ: 302 ಐ.ಪಿ.ಸಿ:.

ದಿನಾಂಕ- 27-07-2016 ರಂದು ಬೆಳಿಗ್ಗೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ದೇವಪ್ಪ ತಾಯಿ ನರಸಮ್ಮ ದಾಸರ  ವಯಾ- 32 ವರ್ಷ ಜಾ- ಮಾದಿಗ - ಪೆಂಟಿಂಗ್ ಕೆಲಸ ಸಾ- ಇಂದಿರಾನಗರ ಕಾರಟಗಿ ರವರು ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ  ನಿನ್ನೆ ದಿನಾಂಕ : 26-07-2016 ರಂದು  ಕಾರಟಗಿಯ ಸಮೀಪ ಮಾರುತಿ ಕ್ಯಾಂಪಿಗೆ  ಪೆಂಟಿಂಗ್ ಕೆಲಸಕ್ಕೆ ಹೊಗಿ ಕೆಲಸ  ಮುಗಿಸಿಕೊಂಡು ವಾಪಾಸ್ ಸಾಯಂಕಾಲ 6-00 ಗಂಟೆಗೆ ಮನೆಗೆ ಬಂದೇವು. ನಂತರ ನನ್ನ ಸಹೋದರ  ತಾನು ಹೊರಗಡೆ ಹೊಗುವದಾಗಿ ಹೇಳಿ  ಮನೆಯಿಂದ  ಸಾಯಂಕಾಲ 6-30 ಗಂಟೆಯ ಸುಮಾರಿಗೆ  ಹೊರಗೆ ಹೊದನುರಾತ್ರಿ 11-00 ಗಂಟೆಯಾದರು ವಾಪಾಸ್ ಮನೆಗೆ ಬಾರದೆ ಇದ್ದುದ್ದರಿಂದ  ಆತನ ಮೊಬೈಲ್ ನಂಬರ್ ಗಳಾದ 1) 9632919135 ಹಾಗೂ  8792210725 ನೇದ್ದವುಗಳಿಗೆ  ಕರೆ ಮಾಡಲಾಗಿ  ಸ್ವಿಚ್ ಆಪ್ ಇದ್ದವು.   ನಂತರ ನಾವು ಊಟ ಎಂದಿನಂತೆ ಮಲಗಿಕೊಂಡೆವುದಿನಾಂಕ : 27-07-2016 ರಂದು  ಎಂದಿನಂತೆ ಬೆಳಗ್ಗೆ 5-00 ಗಂಟೆಯ ಸುಮಾರಿಗೆ  ಮನೆಯವರೆಲ್ಲರು ಎದ್ದು ನೋಡಲಾಗಿ ನನ್ನ ಸಹೋದರ ಹನಮೇಶ ಈತನು  ಮನೆಗೂ ಬಾರದೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ  ನಾನು ಮತ್ತು ನಮ್ಮ ಓಣಿಯ  ಗಾಳೇಶ  ಮೇಗಡೆಮನೆ ಕೂಡಿಕೊಂಡು ಕಾರಟಗಿಯ ನವಲಿ ಕ್ರಾಸ್ ಹತ್ತಿರ ಹೊಗಿ ನೋಡಲಾಗಿ  ಅಲ್ಲಿ ಕೆಲವು ಜನರು  ಏನೋ ಮಾತನಾಡುತ್ತಾ ನಿಂತಿದ್ದುನಾವು ಏನು ಅಂತಾ ವಿಚಾರಿಸಲಾಗಿ  ಚಳ್ಳೂರ ರಸ್ತೆಯ  ಸ್ನೇಹ ಡಾಬಾದ ಹತ್ತಿರ  ರಾತ್ರಿ ವೇಳೆಯಲ್ಲಿ  ಒಬ್ಬ ವ್ಯಕ್ತಿಯು  ಕೊಲೆಯಾಗಿ ಬಿದ್ದಿರುತ್ತಾನೆ ಅಂತಾ ಸುದ್ದಿ ತಿಳಿದು ನಾನು ಗಾಳೇಶ ಮೇಗಡೆ ಮನೆ, ದುರುಗೇಶ ಹಾಗೂ ಇತರರು ಹೊಗಿ ನೋಡಲು  ಒಬ್ಬ ವ್ಯಕ್ತಿಯ ಶವವು ಅಂಗಾತವಾಗಿ  ಬಿದ್ದಿದ್ದು  ಹತ್ತಿರ ಹೊಗಿ ನೋಡಲಾಗಿ  ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ನನ್ನ ಸಹೋದರ  ಹನಮೇಶ ಈತನದೇ ಶವವಿದ್ದು  ನನ್ನ ತಮ್ಮ ಹನಮೇಶನಿಗೆ  ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ  ದಿನಾಂಕ : 26-07-2016 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ : 27-07-2016 ರಂದು ಬೆಳಗಿನ ಜಾವಾ 5-00 ಗಂಟೆಯ ನಡುವಿನ ಅವದಿಯಲ್ಲಿ  ಯಾವುದೋ ಬಲವಾದ ಹರಿತವಾದ ಆಯುಧದಿಂದ ಆತನ ಕುತ್ತಿಗೆ ಹಾಗೂ ಮುಖಕ್ಕೆ ಹೊಡೆದು  ಗಂಭೀರಘಾಯಗೊಳಿಸಿದ್ದರಿಂದ  ಆತನಿಗೆ ಭಾರೀ ಘಾಯವಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿರುತ್ತೇನೆ

 
Will Smith Visitors
Since 01/02/2008