Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 27, 2016

1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 147/2016 ಕಲಂ: 468, 471, 420 ಐ.ಪಿ.ಸಿ:.
ಪಿರ್ಯಾದಿದಾರರಾದ ಶ್ರೀ ಎಲ್.ಡಿ. ಚಂದ್ರಕಾಂತ, ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಗಂಗಾವತಿ ರವರು ಫಿರ್ಯಾದಿ ನೀಡಿದ್ದು, ಗಂಗಾವತಿ ನಗರದ ಪ್ರಶಾಂತ ನಗರದ ನಿವಾಸಿಯಾದ ಕೇಶವರಾಜ್ ತಂದೆ ರಾಮಚಂದ್ರರಾವ್ ರವರು 2013 ನೇ ಸಾಲಿನಲ್ಲಿ ಗಂಗಾವತಿ ನಗರ ಸಭೆಗೆ ನಡೆದ ಚುನಾವಣೆಯ ಸಮಯದಲ್ಲಿ ನಗರ ಸಭೆಯ ವಾರ್ಡ ನಂ:08 ಪ್ರಶಾಂತ ನಗರದಿಂದ ಸ್ಪರ್ಧಿಸಿ ಚುನಾಯಿತನಾಗಿದ್ದು, ಆರೋಪಿತನು ಚುನಾವಣೆ ಸಮಯದಲ್ಲಿ ತಾನು ಬ್ರಾಹ್ಮಣ ಜಾತಿಗೆ ಸೇರಿದವನಾಗಿದ್ದರೂ ಸಹ ತನ್ನ ನಿಜವಾದ ಜಾತಿಯನ್ನು ಮರೆ ಮಾಚಿ ತಾನು ದೇವಾಂಗ ಜಾತಿಗೆ ಸಂಬಂದಿಸಿದ ಪ್ರವರ್ಗ-ಅ ನೇದ್ದರ ಪ್ರಮಾಣ ಪತ್ರವನ್ನು ಪಡೆದುಕೊಂಡು ತನ್ನ ಜಾತಿಯ ಬಗ್ಗೆ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಪ್ರವರ್ಗ-ಅ ನೇದ್ದರ ಜಾತಿಯ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದುದು ಇರುತ್ತದೆ. ನಂತರ ಸದರಿಯವನ ಪ್ರಮಾಣ ಪತ್ರದ ಮೇಲೆ ವಿಚಾರಣೆಗಾಗಿ ಒಬ್ಬರು ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಸಮಯದಲ್ಲಿ ಶಾಲಾ ದಾಖಲೆ ಮತ್ತು ಇನ್ನಿತರ ಅವಶ್ಯಕ ದಾಖಲಾತಿಗಳನ್ನು ಪರಿಶೀಲಿಸಿದಾಗ ಆರೋಪಿತನು ಬ್ರಾಹ್ಮಣ ಜಾತಿಗೆ ಸೇರಿದ ಬಗ್ಗೆ ವಿಚಾಣೆಯ ಸಮಯದಲ್ಲಿ ರುಜುವಾತಾಗಿದ್ದರಿಂದ ಅವನಿಗೆ ನೀಡಿದ ಪ್ರವರ್ಗ-ಅ ನೇದ್ದರ ಅಡಿಯಲ್ಲಿ ದಿನಾಂಕ:19-02-2013 ರಂದು ನೀಡಿದ ಪ್ರಮಾಣ ಪತ್ರವನ್ನು ದಿನಾಂಕ: 11-03-2016 ರಂದು ರದ್ದು ಪಡಿಸಿದ್ದಾಗಿ, ಆರೋಪಿತನು ತಾನು ಪ್ರವರ್ಗ-ಅ ರಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆಯುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ, ಮೋಸ  ಮಾಡಿರುವುದಾಗಿ ಮತ್ತು ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 213/2016 ಕಲಂ: 87 Karnatka Police Act.
ದಿನಾಂಕ: 26-07-2016 ರಂದು ಮಧ್ಯಾಹ್ನ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೇರಾ ಕ್ಯಾಂಪ್ ಸೀಮಾದಲ್ಲಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಹಾರ ಎಂಬ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಮಾನ್ಯ ಸಿಪಿಐ ಸಾಹೇಬರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ 120, 429, 363, 335, 354, 110, 43, 323, 361 ಜೀಪ ಚಾಲಕ ಎ.ಪಿ.ಸಿ. 77 ಕನಕಪ್ಪ ರವರು ಮತ್ತು ಇಬ್ಬರು ಪಂಚರನ್ನು ಬರಮಾಡಿಕೊಂಡು ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಹೊಸಕೇರಾ ಕ್ಯಾಂಪ್ ಸೀಮಾದಲ್ಲಿ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಮಧ್ಯಾಹ್ನ 3:30 ಗಂಟೆಯಾಗಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದವರ ಪೈಕಿ 3 ಜನರು ಸಿಕ್ಕಿ ಬಿದ್ದಿದ್ದು, ಉಳಿದವರು ಅಲ್ಲಿಂದ ಓಡಿ ಹೋದರು. ಸಿಕ್ಕವರ ಹೆಸರನ್ನು ವಿಚಾರಿಸಲು ಅವರು ತಮ್ಮ ಹೆಸರುಗಳು (1) ಮಲ್ಲಪ್ಪ ತಂದೆ ಸಂಗಪ್ಪ ಕುರಿ, ವಯಸ್ಸು 40 ವರ್ಷ, ಕುರುಬರು, ಟ್ರ್ಯಾಕ್ಟರ್ ಚಾಲಕ ಸಾ: ಹೊಸಕೇರಾ ಕ್ಯಾಂಪ್ (2) ಹುಸೇನ್ ಬಾಷಾ ತಂದೆ ಸಾಹೇಬಣ್ಣ, 35 ವರ್ಷ, ಪಿಂಜಾರ, ಉ: ಹೋಟಲ್ ಸಾ: ಹೊಸಕೇರಾ ಕ್ಯಾಂಪ್ (3) ಮಂಜುನಾಥ ತಂದೆ ಮಲ್ಲಿಕಾರ್ಜುನ ಮಾಲೀಪಾಟೀಲ್, ವಯಸ್ಸು 30 ವರ್ಷ, ಜಾತಿ: ಲಿಂಗಾಯತ ಉ: ಕೂಲಿ ಕೆಲಸ ಸಾ: ಹೊಸಕೇರಾ. ಅಂತಾ ತಿಳಿಸಿದರು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 2,045/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಚೀಲ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 165/2016 ಕಲಂ: 78(3) Karnataka Police Act.
ದಿನಾಂಕ 26-07-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ  ಹೊಸಜೂರಟಗಿ ಈಶ್ವರ ದೇವಸ್ಥಾನದ ಹತ್ತಿರ  ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ. ಕಾರಟಗಿ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು   ಒಬ್ಬನು ಓಡಿ ಹೊಗಿದ್ದು  ಒಬ್ಬನು ಸಿಕ್ಕಿದ್ದು   ಸಿಕ್ಕಿಬಿದ್ದವನಿಗೆ ವಿಚಾರಿಸಲಾಗಿ 1) ಕೃಷ್ಣಾ ತಂದಿ ಕನಕಪ್ಪ ವಯಾ-20 ವರ್ಷ ಜಾ- ನಾಯಕ ಉ- ಕೂಲಿ ಕೆಲಸ ಸಾ- ಹೊಸಜೂರಟಗಿ ತಾ- ಗಂಗಾವತಿ ಈತನನ್ನ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 1900=00 ಗಳನ್ನು ಜಪ್ತ ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 166/2016 ಕಲಂ: 302 ಐ.ಪಿ.ಸಿ:.

ದಿನಾಂಕ- 27-07-2016 ರಂದು ಬೆಳಿಗ್ಗೆ 6-15 ಗಂಟೆಗೆ ಪಿರ್ಯಾದಿದಾರರಾದ ಶ್ರೀ  ದೇವಪ್ಪ ತಾಯಿ ನರಸಮ್ಮ ದಾಸರ  ವಯಾ- 32 ವರ್ಷ ಜಾ- ಮಾದಿಗ - ಪೆಂಟಿಂಗ್ ಕೆಲಸ ಸಾ- ಇಂದಿರಾನಗರ ಕಾರಟಗಿ ರವರು ಪಿರ್ಯಾದಿ ನೀಡಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ  ನಿನ್ನೆ ದಿನಾಂಕ : 26-07-2016 ರಂದು  ಕಾರಟಗಿಯ ಸಮೀಪ ಮಾರುತಿ ಕ್ಯಾಂಪಿಗೆ  ಪೆಂಟಿಂಗ್ ಕೆಲಸಕ್ಕೆ ಹೊಗಿ ಕೆಲಸ  ಮುಗಿಸಿಕೊಂಡು ವಾಪಾಸ್ ಸಾಯಂಕಾಲ 6-00 ಗಂಟೆಗೆ ಮನೆಗೆ ಬಂದೇವು. ನಂತರ ನನ್ನ ಸಹೋದರ  ತಾನು ಹೊರಗಡೆ ಹೊಗುವದಾಗಿ ಹೇಳಿ  ಮನೆಯಿಂದ  ಸಾಯಂಕಾಲ 6-30 ಗಂಟೆಯ ಸುಮಾರಿಗೆ  ಹೊರಗೆ ಹೊದನುರಾತ್ರಿ 11-00 ಗಂಟೆಯಾದರು ವಾಪಾಸ್ ಮನೆಗೆ ಬಾರದೆ ಇದ್ದುದ್ದರಿಂದ  ಆತನ ಮೊಬೈಲ್ ನಂಬರ್ ಗಳಾದ 1) 9632919135 ಹಾಗೂ  8792210725 ನೇದ್ದವುಗಳಿಗೆ  ಕರೆ ಮಾಡಲಾಗಿ  ಸ್ವಿಚ್ ಆಪ್ ಇದ್ದವು.   ನಂತರ ನಾವು ಊಟ ಎಂದಿನಂತೆ ಮಲಗಿಕೊಂಡೆವುದಿನಾಂಕ : 27-07-2016 ರಂದು  ಎಂದಿನಂತೆ ಬೆಳಗ್ಗೆ 5-00 ಗಂಟೆಯ ಸುಮಾರಿಗೆ  ಮನೆಯವರೆಲ್ಲರು ಎದ್ದು ನೋಡಲಾಗಿ ನನ್ನ ಸಹೋದರ ಹನಮೇಶ ಈತನು  ಮನೆಗೂ ಬಾರದೆ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ  ನಾನು ಮತ್ತು ನಮ್ಮ ಓಣಿಯ  ಗಾಳೇಶ  ಮೇಗಡೆಮನೆ ಕೂಡಿಕೊಂಡು ಕಾರಟಗಿಯ ನವಲಿ ಕ್ರಾಸ್ ಹತ್ತಿರ ಹೊಗಿ ನೋಡಲಾಗಿ  ಅಲ್ಲಿ ಕೆಲವು ಜನರು  ಏನೋ ಮಾತನಾಡುತ್ತಾ ನಿಂತಿದ್ದುನಾವು ಏನು ಅಂತಾ ವಿಚಾರಿಸಲಾಗಿ  ಚಳ್ಳೂರ ರಸ್ತೆಯ  ಸ್ನೇಹ ಡಾಬಾದ ಹತ್ತಿರ  ರಾತ್ರಿ ವೇಳೆಯಲ್ಲಿ  ಒಬ್ಬ ವ್ಯಕ್ತಿಯು  ಕೊಲೆಯಾಗಿ ಬಿದ್ದಿರುತ್ತಾನೆ ಅಂತಾ ಸುದ್ದಿ ತಿಳಿದು ನಾನು ಗಾಳೇಶ ಮೇಗಡೆ ಮನೆ, ದುರುಗೇಶ ಹಾಗೂ ಇತರರು ಹೊಗಿ ನೋಡಲು  ಒಬ್ಬ ವ್ಯಕ್ತಿಯ ಶವವು ಅಂಗಾತವಾಗಿ  ಬಿದ್ದಿದ್ದು  ಹತ್ತಿರ ಹೊಗಿ ನೋಡಲಾಗಿ  ಕೊಲೆಯಾಗಿ ಬಿದ್ದಿದ್ದ ವ್ಯಕ್ತಿ ನನ್ನ ಸಹೋದರ  ಹನಮೇಶ ಈತನದೇ ಶವವಿದ್ದು  ನನ್ನ ತಮ್ಮ ಹನಮೇಶನಿಗೆ  ಯಾರೋ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ  ದಿನಾಂಕ : 26-07-2016 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ : 27-07-2016 ರಂದು ಬೆಳಗಿನ ಜಾವಾ 5-00 ಗಂಟೆಯ ನಡುವಿನ ಅವದಿಯಲ್ಲಿ  ಯಾವುದೋ ಬಲವಾದ ಹರಿತವಾದ ಆಯುಧದಿಂದ ಆತನ ಕುತ್ತಿಗೆ ಹಾಗೂ ಮುಖಕ್ಕೆ ಹೊಡೆದು  ಗಂಭೀರಘಾಯಗೊಳಿಸಿದ್ದರಿಂದ  ಆತನಿಗೆ ಭಾರೀ ಘಾಯವಾಗಿ ವಿಪರೀತ ರಕ್ತಸ್ರಾವವಾಗಿ ಮೃತಪಟ್ಟಿದ್ದು ಇರುತ್ತದೆ. ಫಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡಿರುತ್ತೇನೆ

0 comments:

 
Will Smith Visitors
Since 01/02/2008