Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, July 13, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 147/2016 ಕಲಂ: 78(3) Karnataka Police Act.
ದಿನಾಂಕಃ-11-07-2016 ರಂದು ರಾತ್ರಿ 9-05 ಗಂಟೆಯ ಸುಮಾರಿಗೆ ಮಾನ್ಯ ವೀರಾರೆಡ್ಡಿ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಒಂದು ವರದಿಯನ್ನು ಹಾಜರುಪಡಿಸಿದ್ದು ಇದರ ಸಾರಾಂಶವೆನಂದರೆ, ಇಂದು ದಿನಾಂಕ 11-07-2016 ರಂದು ಸಾಯಂಕಾಲ 7-30 ಗಂಟೆಯ ಸುಮಾರಿಗೆ  ಕಾರಟಗಿಯ ಎ.ಪಿ.ಎಮ್.ಸಿ ಒಂದನೇ ಗೇಟ್ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿ ನಂ 1) ರಾಮು @ ರಮೇಶ ತಂದಿ ಕಾಳಿಂಗಪ್ಪ ಈಡಿಗೇರ ವಯಾ-25 ವರ್ಷ ಜಾ. ಈಡಿಗೇರ ಉ- ಕೂಲಿ ಕೆಲಸ ಸಾ. ಉಪ್ಪಾರ ಓಣಿ ಕಾರಟಗಿ ತಾ. ಗಂಗಾವತಿ ಈತನ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ  ದಾಳಿ ಮಾಡಲು ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತನಿಗೆ ಹಿಡಿದುಕೊಂಡು  ಆತನಿಂದ ರೂ. 2700=00 ಗಳನ್ನು ಜಪ್ತ ಮಾಡಿಕೊಂಡು  ಗುನ್ನೆ ದಾಖಲು ಮಾಡಿಕೊಂಡಿದ್ದು ಇರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ. 66/2016 ಕಲಂ 279 338  .ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ: 12-07-2016  ರಂದು ರಾತ್ರಿ 7-40 ಗಂಟೆ ಸುಮಾರಿಗೆ ಪಿರ್ಯಾದಿದಾರ ಹಾಗೂ ಆತನ ತಾಯಿ, ಆತನ ಅಕ್ಕ ಹಾಗೂ ಅಕ್ಕನ ಮಗನಾದ ಅಲ್ಲಾಭಕ್ಷಿ ಎಲ್ಲರೂ ಯಲಬುರ್ಗಾದ ತಹಶೀಲ ಕಾರ್ಯಾಲಯದ ಮುಂದಿನ ಕಂಪೌಂಡಗೆ ಹೊಂದಿಕೊಂಡಿರುವ ತಮ್ಮ ಹೊಟೇಲ್ ದಿಂದ ಮನೆಗೆ ಯಲಬುರ್ಗಾ-ಕೊಪ್ಪಳ ರಸ್ತೆಯ ಮೇಲೆ ಎಡಬದಿಯಲ್ಲಿ ನಡೆದುಕೊಂಡು ಹೋರಟಾಗ ಅದೇಸಮಯಕ್ಕೆ ಕಿತ್ತೂರು ಚನ್ನಮ್ಮ ಸರ್ಕಲ್ ಕಡೆಯಿಂದ ಆರೋಪಿತನು ತಾನು ಚಲಾಯಿಸುತಿದ್ದ ಕಪ್ಪು ಬಣ್ಣದ ಹಿರೋಹೊಂಡಾ ಸ್ಪ್ಲೇಂಡರ್ ಪ್ಲಸ್ ಕಂಪನಿಯ ಮೋಟಾರ್ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಅಲ್ಲಾಭಕ್ಷಿ ಇತನಿಗೆ ಡಿಕ್ಕಿ ಹೊಡೆಸಿ ಅಪಘಾತಪಡಿಸಿರುತ್ತಾನೆ. ಇದರಿಂದಾಗಿ ಅಲ್ಲಾಭಕ್ಷಿ ಇತನು ಭಾರಿ ಸ್ವರೂಪದಲ್ಲಿ ಗಾಯಗೊಂಡಿರುತ್ತಾನೆ. ನಂತರ ಆರೋಪಿತನು ಮೋಟಾರ್ ಸೈಕಲ್ ಸಮೇತ ಹೋಗಿರುತ್ತಾನೆ. ಸದರಿ ಅಪಘಾತಪಡಿಸಿದ ಮೋಟಾರ್ ಸೈಕಲ್ ಸವಾರ ಹಾಗೂ ಮೋಟಾರ್ ಸೈಕಲನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 153/2016 ಕಲಂ: 379, 109, 323, 506  ಐ.ಪಿ.ಸಿ:
ದಿ:12-07-2016 ರಂದು 2-30 ಪಿ.ಎಮ್ ಕ್ಕೆ. ಫಿರ್ಯಾದಿದಾರರಾದ ಶ್ರೀಮತಿ ರೋಹಿಣಿ ಗಂಡ ಸಂತೋಷಕುಮಾರ. ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೇಂದರೇ, ದಿ:04-07-2016 ರಂದು ನಡೆದ ವಿಶೇಷ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸಭೆಯಲ್ಲಿ ಬಾಲಕ ಯಲ್ಲಪ್ಪ ತಂದೆ ಯಮನೂರಪ್ಪ ತರ್ಲಕಟ್ಟಿ ಸಾ: ಗಿಣಿಗೇರಿ ಇವರು ಸಮಿತಿಯ ಮುಂದೆ ಹಾಜರಾಗಿ ಆರೋಪಿ ಆರೋಪಿ ಮಾರುತಿ ತಂದೆ ಭೀಮಪ್ಪ ಭಜಂತ್ರಿ ಸಾ: ಗಿಣಿಗೇರಿ. ಎಂಬುವವರು ಹುಲಿಗಿಯಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದಂದು ಬರುವ ಭಕ್ತರ ಮತ್ತು ಯಾತ್ರಿಕರ ಹಣ, ಪರ್ಸ,ಮೊಬೈಲ್ ಮತ್ತಿತರ ವಸ್ತುಗಳನ್ನು ಕಳ್ಳತನ ಮಾಡಿಕೊಡುವಂತೆ ತನಗೆ ಮತ್ತು ಇತರ ಬಾಲಕರಾದ ಭೀಮೇಶ, ಬಸವರಾಜ, ಮಹೇಶ, ಹನುಮೇಶ ಎಲ್ಲರಿಗೂ ಒತ್ತಾಯಿಸಿದ್ದು ಅವನು ಹೇಳಿದಂತೆ ಮಾಡದಿದ್ದರೆ ಹೊಡಿಬಡಿ ಮಾಡುವದು ಮತ್ತು ಜೀವದ ಬೆದರಿಕೆ ಹಾಕುತ್ತಿದ್ದನು. ಎಂದು ಬಾಲಕನು ಸಮಿತಿಯ ಮುಂದೆ ಹೇಳಿಕೊಂಡಿದ್ದರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಸಮಾಜದಲ್ಲಿ ಕಳ್ಳತನ ಸ್ವಭಾವ ರೂಡಿಸಿಕೊಳ್ಳುವ ಕಲುಷಿತ ವಾತಾವರಣ ಸೃಷ್ಟಿ ಮಾಡುತ್ತಿರುವ ಮತ್ತು ಬಾಲಾಪರಾಧ ಸಮಸ್ಯೆ ಉದ್ಭವಗೊಳ್ಳಲು ಕಾರಣವಾದ ಮಾರುತಿ ತಂದೆ ಭೀಮಪ್ಪ ಭಜಂತ್ರಿ ಸಾ: ಗಿಣಿಗೇರಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮುಂತಾಗಿ ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 154/2016 ಕಲಂ: 143, 147, 447, 427 ಸಹಿತ 149 ಐ.ಪಿ.ಸಿ:
ದಿ: 12.07.2016 ಸಾಯಂಕಾಲ 04.15 ಗಂಟೆಗೆ ಫಿರ್ಯಾದಿದಾರರಾದ ಸತ್ಯನಾರಾಯಣ ಅಸಿಸ್ಟಂಟ್ ಮ್ಯಾನೇಜರ್ ಸೆಕ್ಯೂರಿಟಿ ಡಿಪಾರ್ಟಮೆಂಟ್, ಎಂ.ಎಸ್.ಪಿ.ಎಲ್ ಲಿಮಿಟೆಡ್ ಕಂಪನಿ ಹಾಲವರ್ತಿ ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ದಿ:11.07.16 ರಂದು ಮಧ್ಯಾನ್ನ 02.40 ಗಂಟೆಯ ಸುಮಾರಿಗೆ ಹಾಲವರ್ತಿ ಗ್ರಾಮದ 1] ದುರಗಪ್ಪ ಹರಿಜನ 2] ದುರಗೇಶ ಹರಿಜನ 3] ಆನಂದ ಕಿನ್ನಾಳ 4] ಮಾರುತೆಪ್ಪ 5] ಬಸವರಾಜ ಹೊಸಮನಿ 6] ಹನಮಗೌಡ ರಡ್ಡೇರ ಹಾಗೂ 7] ಕೇಮಪ್ಪ ಇಟಗಿ ಈ 7 ಜನರು ಗುಂಪು ಕಟ್ಟಿಕೊಂಡು ಕಂಪನಿ ಮಾಲಿಕತ್ವದ ಸರ್ವೆ ನಂ-303 ಮತ್ತು 305 ಜಮೀನದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿ ಜಮೀನದಲ್ಲಿದ್ದ 3 ಬೋರವೆಲ್ ಗಳ ಪೈಪುಗಳನ್ನು ಮುರಿದು ಹಾಕಿ ಹಾನಿ ಮಾಡಿರುತ್ತಾರೆ. ಹಾನಿ ಮಾಡಿದ ವ್ಯಕ್ತಿಗಳನ್ನು ವಿಚಾರಣೆ ಮಾಡಿ ಅವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಂಡು ತಮ್ಮ ಆಸ್ತಿ-ಪಾಸ್ತಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಮುಂತಾಗಿ ಸಲ್ಲಿಸಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
5] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 154/2016 ಕಲಂ: 379 ಐ.ಪಿ.ಸಿ:

ದಿನಾಂಕ 12-07-2016 ರಂದು 11-30 ಎ.ಎಂ.ಕ್ಕೆ ಜಯರಾಮ ಇಲ್ಲೂರು ತಂದೆ ನೀಲಕಂಠಯ್ಯ ಇಲ್ಲೂರು ವಯಸ್ಸು 48 ವರ್ಷ ಜಾ: ಆರ್ಯ ವೈಶ್ಯ ಉ: ವ್ಯಾಪಾರ ಸಾ: ಕುವೆಂಪು ಬಡಾವಣೆ, ರವರು ಫಿರ್ಯಾದಿ ನೀಡಿದ್ದು ದಿನಾಂಕ 09-07-2016 ರ ಸಂಜೆ 7-00 ಗಂಟೆಯಿಂದ ದಿನಾಂಕ: 12-07-2016 ರ ಬೆಳಗಿನ 8-30  ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ಕುವೆಂಪು ಬಡಾವಣೆಯಲ್ಲಿರುವ   ಫಿರ್ಯಾದಿದಾರರ   ಮನೆಯ ಪೂರ್ವಕ್ಕೆ ಇರುವ ಕಿಡಕಿಗೆ ಹಾಕಿದ್ದ ಮೆಸನ್ನು ಹೊರಗಿನಿಂದ ಪ್ಲಾಸ್ಟೀಕ ಪೈಪು ಬಳಸಿ ಒಳಗೆ ತಳ್ಳಿ ಪೈಪಿನ ಸಹಾಯದಿಂದ ಶೋಕೇಸ ನಲ್ಲಿ ಇಟ್ಟಿದ್ದ ನನ್ನ ಬ್ಯಾಗನಲ್ಲಿದ್ದ 40,000/- ಹಣ, ನನ್ನ ಹೆಂಡತಿಯ ವ್ಯಾನಿಟಿ ಬ್ಯಾಗನಲ್ಲಿ ಇಟ್ಟಿದ್ದ 5,000/- ರೂ , ಹಣ , ನನ್ನ ಮಗಳ ನೋಕಿಯಾ ಮೊಬೈಲ್ ಅಂದಾಜು ಕಿಮತ್ತು 1,500/- ಹಾಗೂ ನನ್ನ ಹಳೆಯ ಮೊಬೈಲ್ ಸ್ಯಾಮಸಂಗ್ ಮೊಬೈಲ್ ಅಂ,ಕಿ 2000/- ರೂ ಹೀಗೆ ಒಟ್ಟು 45,000/- ರೂ ನಗದು ಹಣ, ಎರಡು ಮೊಬೈಲುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು. 

0 comments:

 
Will Smith Visitors
Since 01/02/2008