Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 12, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 194/2016 ಕಲಂ: 78(3) Karnataka Police Act.
ದಿನಾಂಕ:- 11-07-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ   ದಾಸನಾಳ ಗ್ರಾಮದಲ್ಲಿ ಜಿಲಾನಿ ಎಂಬುವವನು ತನ್ನ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯಿಸಿದ್ದಾನೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಹಾಗೂ ಪಿ.ಸಿ. 361, 323, ಹೆಚ್.ಸಿ. 29, ಎ.ಪಿ.ಸಿ. 77 ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಹೋಗಿ ನೋಡಲಾಗಿ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇವೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆಯುತ್ತಿದ್ದು, ಇನ್ನೊಬ್ಬ ಕುಳಿತುಕೊಂಡು ಜನರಿಂದ   ಹಣವನ್ನು ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ದಾಳಿ ಮಾಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ಪಟ್ಟಿ ಬರೆಯುತ್ತಿದ್ದವನು ತನ್ನ ಹೆಸರು ಜಿಲಾನಿ ತಂದೆ ಮಹ್ಮದ್ ಖಾನ್, ವಯಸ್ಸು 60 ವರ್ಷ, ಜಾತಿ: ಮುಸ್ಲೀಂ ಉ: ಕೂಲಿ ಕೆಲಸ ಸಾ: ದಾಸನಾಳ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 250/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್ನು ದೊರೆತಿದ್ದು, ಕೂಗುತ್ತಿದ್ದವನು ತನ್ನ ಹೆಸರು ವೆಂಕಟೇಶ ತಂದೆ ಈರಪ್ಪ, ವಯಸ್ಸು 30 ವರ್ಷ, ಜಾತಿ: ನಾಯಕ ಉ: ಹಿಟ್ಟಿನ ಗಿರಣಿ ಸಾ: 2ನೇ ವಾರ್ಡ-ಬಸಾಪಟ್ಟಣ ಅಂತಾ ತಿಳಿಸಿದ್ದು. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 25/2016 ಕಲಂ: 279, 337  ಐ.ಪಿ.ಸಿ:
ದಿನಾಂಕ. 11-07-2016 ರಂದು ರಾತ್ರಿ 11-10 ಗಂಟೆಗೆ ಫಿರ್ಯಾದಿ ಸಚ್ಚಿನ್ ಧಲಬಂಜನ ಮತ್ತು ಅವರ ತಂದೆ ಗಾಯಾಳು ಸುರೇಶ ಇಬ್ಬರೂ ತಮ್ಮ ಟಿ.ವಿ.ಎಸ್ ಎಕ್ಸಲ್ ಮೋಪೆಡ್ ವಾಹನ ನಂಬರ. KA-34/L-7095 ನೆದ್ದರಲ್ಲಿ ಕುಳಿತುಕೊಂಡು ಮನೆಗೆ ಹೊಗಲು ಸುರೇಶ ಇವರು ವಾಹನ ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಅಥಿತಿ ಹೋಟೆಲ್ ಮುಂದೆ ಭಾಗ್ಯನಗರದ ಕಡೆಗೆ ಹೋಗುತ್ತಿರುವಾಗ, ಎದುರುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ನಂಬರ. KA-37/W-7634 ನೆದ್ದರ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ವಾಹನಕ್ಕೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಫಿರ್ಯಾದಿಯ ತಂದೆ ಸುರೇಶ ಇವರಿಗೆ ಹಣೆಯ ಎಡಗಡೆಗೆ ಮತ್ತು ಎಡಗಾಲಿನ ಪಾದಕ್ಕೆ ರಕ್ತಗಾಯಗಳಾಗಿರುತ್ತವೆ. ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 193/2016 ಕಲಂ: 279, 337  ಐ.ಪಿ.ಸಿ:
ದಿನಾಂಕ:- 11-07-2016 ರಂದು ಬೆಳಿಗ್ಗೆ 09:30 ಗಂಟೆಗೆ  ಹಿರೇಜಂತಕಲ್-ಚಿಕ್ಕಜಂತಕಲ್ ಮಾರ್ಗದ ನಾಗನಹಳ್ಳಿ ಹತ್ತಿರ ನನ್ನ ಹೆಂಡತಿಯ ಅಣ್ಣನಾದ ಶಿವಾನಂದ ತಂದೆ ಈರಣ್ಣ ತಳವಾರ, ವಯಸ್ಸು 34 ವರ್ಷ, ಉ: ಅಸಿಸ್ಟಂಟ್ ಮ್ಯಾನೇಜರ್, ಸಿಂಡಿಕೇಟ್ ಬ್ಯಾಂಕ್ - ಕಂಪ್ಲಿ ಸಾ: ಸಾಯಿನಗರ ತಾ: ಗಂಗಾವತಿ  ಈತನು ತನ್ನ ಟಾಟಾ ನ್ಯಾನೋ ಕಾರ್ ನಂಬರ್: ಕೆ.ಎ-37/ ಎಂ-9415 ನೇದ್ದನ್ನು ಗಂಗಾವತಿ ಕಡೆಯಿಂದ ಅದೇ ರೀತಿ ಜಾನಿ ತಂದೆ ಬಾಷಾ, ವಯಸ್ಸು 25 ವರ್ಷ, ಸಾ: ಕಂಪ್ಲಿ ಶುಗರ ಫ್ಯಾಕ್ಟರಿ ತಾ: ಹೊಸಪೇಟೆ ಈತನು ತನ್ನ ಬಜಾಜ ಪಲ್ಸರ್ ಕಂಪನಿ ಮೋಟಾರ ಸೈಕಲ್ ನಂಬರ್: ಕೆ.ಎ-35/ ಇ.ಡಿ-4163 ನೇದ್ದನ್ನು ಚಿಕ್ಕಜಂತಕಲ್ ಕಡೆಯಿಂದ ಇಬ್ಬರೂ ತಮ್ಮ ತಮ್ಮ ವಾಹನಗಳನ್ನು ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ಒಬ್ಬರಿಗೊಬ್ಬರು ಎದುರುಬದುರಾಗಿ ಟಕ್ಕರ್ ಕೊಟ್ಟು ಅಪಘಾತ ಮಾಡಿದ್ದು, ಇದರಿಂದ ಜಾನಿಯ ಬಲಗೈಗೆ ಒಳಪೆಟ್ಟಾಗಿ ಸಣ್ಣ ಪುಟ್ಟ ತೆರೆಚಿದ ಗಾಯಗಳಾಗಿರುತ್ತವೆ. ಈ ಅಪಘಾತಕ್ಕೆ ಇಬ್ಬರೂ ಕಾರಣರಾಗಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 144/2016 ಕಲಂ: 143, 147, 148, 307, 341, 323, 324, 504, 506 ಸಹಿತ 149 ಐ.ಪಿ.ಸಿ:

ದಿ 11-07-16 ರಂದು ಬೆಳಿಗ್ಗೆ 10-15 ಗಂಟೆಗೆ ಕಾರಟಗಿ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ದಾಖಲಾಗಿದ್ದವರ ಪೈಕಿ ಶರಣಪ್ಪ ತಂದಿ ಲಿಂಗಪ್ಪ ಗುಡಿತಾಳ ವಯಾ- 27 ವರ್ಷ ಜಾ. ಲಿಂಗಾಯತರ ರೆಡ್ಡಿ - ಒಕ್ಕಲುತನ ಸಾ. ಮೈಲಾಪೂರ ರವರಿಗೆ ವಿಚಾರಿಸಿದ್ದು ಸದ್ರಿಯವರು ತಾವೆ ಒಂದು ಲಿಖಿತ ದೂರು ಬರೆದುಕೊಟ್ಟಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಮೈಲಾಪೂರ ಸೀಮಾ ಸರ್ವೆ ನಂ 14 ರಲ್ಲಿ ತಮ್ಮದು 7 ಎಕರೆ ಜಮೀನು ಇದ್ದು ಸದ್ರಿ ಜಮೀನನ್ನನು ಚಂದ್ರಯ್ಯ ಸ್ವಾಮಿ ರವರಿಗೆ ಗುತ್ತಿಗೆ ಮಾಡಲು ಕೊಟಿದ್ದು ಇರುತ್ತದೆ. ಮೈಲಾಪೂರ ಗ್ರಾಮದ ಆರೋಪಿತರು ಪಿರ್ಯಾದಿದಾರರಿಗೆ ಸಂಬಂದಿಸಿದ ಹೊಲದಲ್ಲಿ ತಮ್ಮ ಹೊಲಕ್ಕೆ ನೀರು ವಯ್ಯುವ ಪೈಪಲೈನ್ ಹಾಕಿಕೊಳ್ಳುವ ಸಲುವಾಗಿ ಕೇಳಿದಾಗ ಪಿರ್ಯಾದಿದಾರರು ಹೊಲದ ಪಲವತ್ತತೆ ಹಾಳಾಗುತ್ತದೆ ಬೇಡ ಅಂತಾ ಪೈಪಲೈನ್ ಹಾಕಲು ಬಿಡಲಾರದಕ್ಕೆ 1) ತಿರುಪತೆಪ್ಪ ತಂದಿ ಯಮನಪ್ಪ ಗುಡಿತಾಳ 2) ಪಂಪಾಪತಿ ತಂದಿ ಯಮನಪ್ಪ ಗುಡಿತಾಳ 3) ತಿಮ್ಮಣ್ಣ ತಂದಿ ಯಮನಪ್ಪ ಗುಡಿತಾಳ 4) ವೆಂಕಟೇಶ ತಂದಿ ತಿರುಪತೆಪ್ಪ ಗುಡಿತಾಳ 5) ಬಸವರಾಜ ತಂದಿ ಮುದಕಣ್ಣ @ ದೊಡ್ಡಬಸಪ್ಪ ಮುಕುಂದಿ ಎಲ್ಲಾರು ಸಾ ಮೈಲಾಪೂರ ರವರು ಇಂದು ದಿನಾಂಕ:-11-07-2016 ರಂದು ಬೆಳಿಗ್ಗೆ 9-35 ಗಂಟೆಯಿಂದ 9-45 ಗಂಟೆಯ ಅವಧಿಯಲ್ಲಿ ಆರೋಪಿತರು ಅಕ್ರಮ ಕೂಟ ಕಟ್ಟಿಕೊಂಡು ತಮ್ಮ ಕೈಯಲ್ಲಿ ಕಬ್ಬಿಣದ ರಾಡು, ಬಡಿಗೆ, ಸೈಕಲ್ ಚೈನ್ ಹಿಡಿದುಕೊಂಡು ಬಂದು ತಮ್ಮ ಹೊಲಕ್ಕೆ ಮೋಟಾರ್ ಸೈಕಲ್ ಮೇಲೆ ಹೊರಟಿದ್ದ ಪಿರ್ಯಾದಿದಾರರ ತಮ್ಮ ಬಸವರಾಜ ಮತ್ತು ಲಿಂಗಪ್ಪ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಸರಕಾರಿ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿ ಅಸ್ಲೀಲವಾಗಿ ಬೈದು, ಕಬ್ಬಿಣದ ರಾಡು, ಬಡಿಗೆ, ಚೈನಿನಿಂದ ಹೊಡೆದು ಟ್ರ್ಯಾಕ್ಟರಿಯಲ್ಲಿ ಬಂದ ಪಿರ್ಯಾದಿದಾರರಿಗೂ ಬಡಿಗೆಯಿಂದ ಬಡೆದು, ಪಿರ್ಯಾದಿ ತಂದೆ ಲಿಂಗಪ್ಪನಿಗೆ ಹೊಟ್ಟೆಗೆ ಒದ್ದು ಎಲ್ಲರಿಗೂ ಕೊಲೆ ಪ್ರಯತ್ನ ಮಾಡಿ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ದೂರನ್ನು ಸ್ವೀಕರಿಸಿಕೊಂಡು ವಾಪಸ ಠಾಣೆಗೆ ಮದ್ಯಾಹ್ನ 12-35 ಗಂಟೆಗೆ ಠಾಣೆಗೆ ಬಂದು ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ  

0 comments:

 
Will Smith Visitors
Since 01/02/2008