Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Saturday, July 2, 2016

1] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 72/2016 ಕಲಂ: 87 Karnataka Police Act.
ದಿನಾಂಕ: 01-06-2016 ರಂದು ಸಂಜೆ 18: 30 ಗಂಟೆಗೆ ಶ್ರೀ ಅಮರೇಶ ಹುಬ್ಬಳ್ಳಿ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 16 ಜನ ಆರೋಪಿತರನ್ನು ಹಾಜರಪಡಿಸಿದ್ದು, ವರದಿಯಲ್ಲಿ ಎಂ.ಗುಡದೂರ ಗ್ರಾಮದ ಸಭಾಮಂಟಪದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 4600-00, ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ 16 ಜನ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ: 73/2016 ಕಲಂ: 78(3) Karnataka Police Act.
ದಿನಾಂಕ: 01-07-2016 ರಂದು ಸಂಜೆ 7: 15 ಗಂಟೆಗೆ ಶ್ರೀ ಈರಣ್ಣ ಮಾಳವಾಡ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ ಆರೋಪಿನ್ನು ಹಾಜರಪಡಿಸಿದ್ದು, ವರದಿಯಲ್ಲಿ ಜುಮಾಲಪುರಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ನಂಬರ್ಗಳನ್ನು ಬರೆದುಕೊಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿರವರು ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 710=00, ಹಾಗೂ ಒಂದು ಮಟ್ಕಾ ಚೀಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ ಆರೋಪಿ ಮತ್ತು ಮಟ್ಕಾಪಟ್ಟಿಯನ್ನು ತೆಗೆದುಕೊಳ್ಳುವ ಮತ್ತೊಬ್ಬ ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಇರುತ್ತದೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 58/2016 ಕಲಂ: 143, 147, 148, 448, 326, 354, 504, 307 ಸಹಿತ 149 ಐ.ಪಿ.ಸಿ:.
ಫಿರ್ಯಾದಿ ಕಳಸಮ್ಮ ಗಂಡ ಕಾಡಪ್ಪ ದಮ್ಮೂರ ವಯಾ: 35 ವರ್ಷ ಹಾಗೂ ಆರೋಪಿತರ ಹೊಲಗಳು ಆಜು, ಬಾಜು ಇದ್ದು ಫಿರ್ಯಾದಿದಾರರು ಈ ಹಿಂದೆ ಹೊಲವನ್ನು ಅಳತೆ ಮಾಡಿಸಿದ್ದ ಕಲ್ಲನ್ನು ಆರೋಫಿತರು ಕಿತ್ತು ಹಾಕಿದ್ದರಿಂದ ಇಬ್ಬರ ನಡುವೆ ಜಗಳಗಳಾಗಿ ಕೇಸು, ಪ್ರತಿ ಕೇಸುಗಳಾಗಿದ್ದು ಇರುತ್ತದೆ. ಈಗ ಆರೋಫಿತರು ಫಿರ್ಯಾದಿಯ ಹೊಲದ ಹತ್ತಿರ ವಿನಾಃ ಕಾರಣ ಕಂಟಿ ಕಡೆಯುವದು ಮಾಡುತ್ತಿದ್ದರಿಂದ ಇಂದು ದಿನಾಂಕ: 01-07-2016 ರಂದು ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ಆರೋಪಿತರು ಕಂಟಿ ಕಡಿಯುತಿದ್ದು. ಫಿರ್ಯಾದಿ ಹಾಗೂ ಅವರ ಮೆನಯವರು ಯಾಕೆ ಸುಮ್ಮ ಸುಮ್ಮನೆ ಕಂಠಿ ಕಡಿತೀರಿ ಅಂತಾ ಕೇಳಿದ್ದಕ್ಕೆ ಆರೋಪಿ 1 ಈತನು ಫಿರ್ಯಾದಿಗೆ ಕೊಡಲಿಯಿಂದ ಫಿರ್ಯಾದಿಯ ಗಂಡನ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಕಡೆದು ರಕ್ತಗಾಯಮಾಡಿದನು. ಆರೋಪಿ ನಂ: 2 ಈತನು ಫಿರ್ಯಾದಿಯ ಎದೆಯ ಮೇಲಿನ ಸೀರೆ ಸೆರಗು ಹಿಡಿದು ಎಳೆದು ನಿಲಕ್ಕೆ ಕಡವಿದ್ದು.  ಉಳಿದ ರೋಪಿತರು ಫಿರ್ಯಾದಿ ಹಾಗೂ ಅವರ ಮನೆಯವರಿಗೆ ತಲೆಗೆ ಮೈ. ಕೈಯಿಗೆ, ಕಾಲಿಗೆ ಕಣ್ಣಿಗೆ, ಬುಜಕ್ಕೆ, ತೊಡೆಗೆ ಹೊಡೆದು ಬಾರಿ ರಕ್ತಗಾಯಗಳನ್ನು  ಮಾಡಿದ್ದು ಇರುತ್ತೆದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
4] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 59/2016 ಕಲಂ: 143, 147, 148, 326, 504, 506, 307 ಸಹಿತ 149 ಐ.ಪಿ.ಸಿ:.
ಫಿರ್ಯಾದಿ ಹಾಗೂ ಆರೋಪಿತರ ಹೊಲಗಳು ಆಜು, ಬಾಜು ಇದ್ದು ಸದರಿ ಜಮೀನನ್ನು ಸರ್ವೆ ಮಾಡಲು ಬಂದಾಗ ಫಿರ್ಯಾಧಿದಾರರಿಗೆ ಮತ್ತು ಆರೋಪಿತರಿಗೆ ಜಗಳಗಳಾಗಿದ್ದರಿಂದ  ಹಿಂದೆ ಕೇಸು ಪ್ರತಿ ಕೇಸುಗಳಾಗಿದ್ದು ಇರುತ್ತದೆ. ಈಗ ಫಿರ್ಯಾದಿ ಪುನಃ ಸರ್ವೆಯವರಿಗೆ ಅಳತೆ ಮಾಡಲು ಕೊಟ್ಟಿದ್ದು, ಅವರು ಮುಳ್ಳು ಗಿಡ ಗಂಟಿ ಕಡೆಯ ಹೇಳಿದ್ದರಿಂದ ಫಿರ್ಯಾದಿ ಹಾಗೂ ಅವರ ಮನೆಯವರು ಗಿಡ ಕಡೆಯಲು ಹೊಲಕ್ಕೆ ಹೋಗಿ ಗಿಡ ಕಡೆಯುವಾಗ ಆರೋಪಿತರೆಲ್ಲರೂ ಕೈಯಲ್ಲಿ ಕಟ್ಟಿಗೆ, ಕೊಡಲಿ, ರಾಡು ಹಿಡಿದುಕೊಂಡು ಬಂದು ಫಿರ್ಯಾದಿಯ ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಬೈದಾಡಿ ಕೊಲೆ ಮಾಡುವ ಉದ್ದೇಶದಿಂದ ತಲೆಗೆ ಕೈಗೆ, ಮೈಯಿಗೆ, ಕಪಾಳಕ್ಕೆ ಕೊಡಲು, ಬಡಿಗೆ, ರಾಡಿನಿಂದ ಹೊಡೆದು ಬಾರಿ ರಕ್ತಗಾಯಗಳನ್ನು ಉಂಟು ಮಾಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
5] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 131/2016 ಕಲಂ: 279, 338, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದ:.

ದಿನಾಂಕ 01-07-2016 ರಾತ್ರಿ 11-30 ಗಂಟೆಗೆ ಶ್ರೀ ವೆಂಕಟೇಶ ತಂದೆ ಹಿರೇ ದುರಗಪ್ಪ ಕಬ್ಬೇರ್ ವಯಾ 28 ವರ್ಷ ಸಾ : ಕನಕಗಿರಿ ಇವರು ಠಾಣೆಗೆ ಹಾಜರಾಗಿ ತಾವು ಬರೆದುಕೊಂಡ ಬಂದ ಲಿಖಿತ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ,  ಈ ದಿನಾ ದಿನಾಂಕ 01-07-2016 ರಂದು ಶುಕ್ರವಾರ ಸಂಜೆ 6-30ಕ್ಕೆ ನನ್ನ ತಂದೆ ಹಿರೆ ದುರಗಪ್ಪ ತಂದೆ ತಿಮ್ಮಪ್ಪ ಕಬ್ಬೇರ್ ಹಾಗೂ ಆತನ ಸ್ನೇಹೀತನಾದ ಗ್ಯಾನಪ್ಪ  ತಂದೆ ಹಿರೇ ಲೆಂಕೆಪ್ಪ ಇವರು ಬೈಕ್ ಮೇಲೆ ಕನಕಗಿರಿಯಿಂದ ಮುಸಲಾಪುರ ಕಡೆಗೆ ಹೋಗುವಾಗ ಯಾವುದೋ ಒಂದು ಬೈಕ್ ನನ್ನ ತಂದೆ ಹಾಗೂ ಗ್ಯಾನಪ್ಪ ಇವರ ಬೈಯಿಕೆಗೆ ಗುದ್ದಿಕೊಂಡು ಹೋಯಿತು. ನಾನು ಹಾಗೂ ನನ್ನ ಸ್ನೆಹೀತರಾದ ಸಂತೋಷ ತಂದೆ ದುರಗಪ್ಪ ಹಾಗೂ ರಾಮಣ್ಣ ತಂದೆ ಹುಲಗಪ್ಪ ನಾವುಗಳು ಹೊಲದಲ್ಲಿ ಕೆಲಸ ಮಾಡುತ್ತಿದ್ದೇವು.  ಇವರು ಬೈಕ್ ಅಪಘಾತದ್ದನ್ನು  ನೋಡಿ ನಾನು ನನ್ನ ಸ್ನೇಹಿತರಿಗೆ ಹಾಗೂ ಅಂಬೆಲೆನ್ಸ್ ಪೋನ್ ಮಾಡಿ ಕರೆಯಿಸಿದೆವು.  ನಮ್ಮ ತಂದೆಗೆ ತಲೆಗೆ ರಕ್ತ ಹರಿಯಿತು. ಹಾಗೂ ಗ್ಯಾನಪ್ಪನಿಗೆ ತಲೆಗೆ ತೀವ್ರ ಪೆಟ್ಟಾಗಿ ಬಿದ್ದಿದ್ದನು. ಅಂಬೆಲೆನ್ಸ್ ನಲ್ಲಿ ಇಬ್ಬರನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೆವು. ಆಸ್ಪತ್ರೆಯಲ್ಲಿ ನನ್ನ ತಂದೆ  ಹಿರೇ ದುರಗಪ್ಪನು ಮೃತಪಟ್ಟಿರುತ್ತಾನೆ ಅಂತಾ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡೆನು.

0 comments:

 
Will Smith Visitors
Since 01/02/2008