Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, July 5, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 188/2016 ಕಲಂ: 279, 304(ಎ) ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ಫಿರ್ಯಾದಿದಾರರಾದ ಶ್ರೀ ಯಮನಪ್ಪ ದಿನಾಂಕ:-04-07-2016 ರಂದು  ಸಂಜೆ ನಾನು ನನ್ನ ಸ್ವಂತ ಕೆಲಸದ ನಿಮಿತ್ಯ ಗಂಗಾವತಿಗೆ ಬಂದಿದ್ದೆನು.  ಕೆಲಸವನ್ನು ಮುಗಿಸಿಕೊಂಡು ವಾಪಸ್ ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯಲ್ಲಿ ಗಂಗಾವತಿ ಕಡೆಯಿಂದ ನನ್ನ ಮೋಟಾರ ಸೈಕಲ್ ಮೇಲೆ ಹೊರಟಿದ್ದೆನು.  ಆಗ ರಾತ್ರಿ 7:30 ಗಂಟೆಯ ಸುಮಾರಿಗೆ ಬಸಾಪಟ್ಟಣ ಸೀಮಾದಲ್ಲಿ ಮಸ್ಕಿ ರೈಸ್ ಮಿಲ್ ಹತ್ತಿರ ಯಾವುದೋ ಒಂದು ಮೋಟಾರ ಸೈಕಲ್ ಚಾಲಕನು ತನ್ನ ಮೋಟಾರ ಸೈಕಲನ್ನು ಗಂಗಾವತಿ ಕಡೆಯಿಂದ ಅತೀ ಜೋರಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಹೊರಟಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ರಸ್ತೆಯ ಎಡಗಡೆ ಹೊರಟಿದ್ದ ಒಬ್ಬ ಹೆಂಗಸಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ನಿಲ್ಲಿಸದೇ ಹಾಗೆಯೇ ಹೊರಟು ಹೋದನು.  ಕೂಡಲೇ ನಾನು ಮತ್ತು ಅಲ್ಲಿಯೇ ರಸ್ತೆಯಲ್ಲಿ ಹೊರಟಿದ್ದ ಯಾವುದೋ ಒಂದು ಕಾರ ಚಾಲಕ ನಿಲ್ಲಿಸಿ ನೋಡಲಾಗಿ ಸದರಿ ಹೆಂಗಸು ಸುಮಾರು 65 ರಿಂದ 70 ವರ್ಷ ವಯಸ್ಸಿನವಳು ಬಿದ್ದು ಭಿಕ್ಷುಕಳಂತೆ ಕಂಡುಬರುತ್ತಿದ್ದಳು. ಅವಳ ತಲೆಯ ಎಡಭಾಗದಲ್ಲಿ ತೀವ್ರ ಒಳಪೆಟ್ಟಾಗಿ ಎಡಕಿವಿಯಲ್ಲಿ ಮತ್ತು ಮೂಗಿನಲ್ಲಿ ರಕ್ತ ಬರುತ್ತಿದ್ದು, ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.  ನಂತರ ಕಾರನಲ್ಲಿ ಬಂದ ವ್ಯಕ್ತಿಯು 108 ಗೆ ಫೋನ್ ಮಾಡಿ ಅಂಬ್ಯುಲೆನ್ಸ್ ಕರೆಯಿಸಿದ್ದು, ಗಾಯಾಳುವನ್ನು ಅದರಲ್ಲಿ ಹಾಕಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಕಳುಹಿಸಿದ್ದು, ಆದರೆ ಅವಳು ದಾರಿಯಲ್ಲಿ ವಡ್ಡರಹಟ್ಟಿಯ ಹತ್ತಿರ ಮೃತಪಟ್ಟಿರುತ್ತಾಳೆ ಅಂತಾ ತಿಳಿಯಿತು.  
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 45/2016 ಕಲಂ: 87 Karnataka Police Act.

ದಿನಾಂಕ 04.07.2016 ರಂದು ರಾತ್ರಿ 8.00 ಗಂಟೆಗೆ ಪಿಎಸ್ಐ ಬೇವೂರ ರವರು ಠಾಣೆಗೆ ಹಾಜರಾಗಿ ತಮ್ಮ ವರದಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ: 04.07.2016 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ಮಂಗಳೂರು ಗ್ರಾಮದ ಶಿದ್ಲಿಂಗ ನಗರದಲ್ಲಿರುವ ನಿವೇಶನಕ್ಕಾಗಿ ಕಾಯ್ದಿರಿಸಿದ ಬಿಳುಬಿದ್ದ ಗಿಡಗಂಟೆ ಇದ್ದ ಜಾಗೆಯಲ್ಲಿ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ ಕಾಲಕ್ಕೆ ಮಾನ್ಯ ಡಿಎಸ್ಪಿ ಸಾಹೇಬರು ಕೊಪ್ಪಳರವರ ನೇತೃತ್ವದಲ್ಲಿ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ ಹಾಕಿ ದಾಳಿ ಮಾಡಿದಾಗ 9 ಜನರು ಸಿಕ್ಕಿಬಿದ್ದಿದ್ದು ಇನ್ನೂಳಿದ 5 ಜನರು ಓಡಿ ಹೋಗಿದ್ದು ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 26,950/-ರೂ ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಆರೋಪಿತರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಜಪ್ತಿ ಪಂಚನಾಮೆಯೊಂದಿಗೆ ಪಿಎಸ್ಐ ರವರು ತಮ್ಮ ವರದಿ ಸಲ್ಲಿಸಿದ್ದರಿಂದ ಈ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಇಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008